Back
Home » ಗಾಸಿಪ್
ಪ್ರಭುದೇವಾರನ್ನ ಮದುವೆ ಆಗುತ್ತಾರಂತೆ ನಿಖಿಶಾ ಪಟೇಲ್ !
Oneindia | 14th May, 2018 05:54 PM
 • ಪ್ರಭುದೇವಾ ಅವರನ್ನ ಮದ್ವೆ ಆಗ್ತಾರಂತೆ ನಿಖಿಶಾ

  ನಟಿ ನಿಖಿಶಾ ಪಾಟೇಲ್ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವಾ ಅವರನ್ನು ಮದುವೆ ಆಗುತ್ತಾರಂತೆ. ಹಾಗಂತ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


 • ವೈರಲ್ ಆಗುತ್ತಿದ್ದಂತೆ ಉಲ್ಟಾ ಹೊಡೆದ ನಟಿ

  ನಿಖಿಶಾ ಕೊಟ್ಟ ಹೇಳಿಕೆ ವೈರಲ್ ಆಗುತ್ತಿದ್ದಂತೆ ನಾನು ಹೇಳಿದ್ದು ಆ ರೀತಿ ಅಲ್ಲ ಅಂತ ಉಲ್ಟಾ ಹೊಡೆದಿದ್ದಾರೆ ನಟಿ ನಿಖಿಶಾ. ನಾನು ಹೇಳಿದ್ದು ಪ್ರಭುದೇವಾ ರೀತಿಯ ಮನಸ್ಸುಳ್ಳ ವ್ಯಕ್ತಿಯನ್ನು ಮದುವೆ ಆಗುತ್ತೇನೆ ಎಂದಿದ್ದು ಹೇಳಿಕೆ ನೀಡಿದ್ದಾರೆ.


 • ನೀನೇ ನನ್ನ ಪ್ರಪಂಚ ಎಂದ ನಟಿ

  ನಿಖಿಶಾ ಇತ್ತೀಚಿಗಷ್ಟೆ ಪ್ರಭುದೇವಾ ಹುಟ್ಟುಹಬ್ಬಕ್ಕೆ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಶುಭಾಶಯ ಕೋರಿದ್ದರು. ನೀನೇ ನನ್ನ ಪ್ರಪಂಚ, ನೀನೇ ನನ್ನ ಕುಟುಂಬ, ನಿಮ್ಮನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ ಎಂದು ಬರೆದುಕೊಂಡಿದ್ದರು.


 • ಮದುವೆ ಬಗ್ಗೆ ಕುತೂಹಲ

  ನಿಖಿಶಾ ಪ್ರಭುದೇವಾ ಜೊತೆ ಮದುವೆ ಆಗುವ ಬಗ್ಗೆ ಹೇಳಿಕೆ ಕೊಟ್ಟ ನಂತರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈಗಾಗಲೇ ನಯನತಾರ ಗೆ ಕೈಕೊಟ್ಟ ಪ್ರಭುದೇವಾ ನಿಖಿಶಾ ಪಾಟೀಲ್ ನ ಮದುವೆ ಆಗುತ್ತಾರಾ? ಎನ್ನುವ ಕುತೂಹಲ ಹೆಚ್ಚಾಗಿದೆ.

  'ದಬ್ಬಂಗ್ 3'ಗೆ ನಿರ್ದೇಶನ ಮಾಡ್ತಾರೆ ಪ್ರಭುದೇವ!
ನರಸಿಂಹ, ಡಕೋಟ ಪಿಚ್ಚರ್, ವರದನಾಯಕ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ನಿಖಿಶಾ ಪಟೇಶ್ ಸದ್ಯ ಗಾಸಿಪ್ ಗೆ ತುತ್ತಾಗಿದ್ದಾರೆ, ಮದುವೆ ಬಗ್ಗೆ ಕೊಟ್ಟ ಒಂದು ಸಣ್ಣ ಹೇಳಿಕೆ ನಿಖಿಶಾ ಅವರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗ್ಲಾಮರಸ್ ಫೋಟೋಗಳನ್ನ ಅಪ್ಲೋಡ್ ಮಾಡುವ ಮೂಲಕವೇ ಬಾರಿ ಸುದ್ದಿ ಮಾಡಿದ್ದ ನಿಖಿಶಾ ಸದ್ಯ ಮದುವೆ ವಿಚಾರದಲ್ಲಿ ಸುದ್ದಿ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ.

ನಾಳೆ ಎರಡು ಕನ್ನಡ ಸಿನಿಮಾಗಳ ಬಿಡುಗಡೆ : ನಿಮ್ಮ ಆಯ್ಕೆ ಯಾವುದು?

ನಟಿ ನಿಖಿಶಾ ಪಟೇಲ್ ನಟ, ನೃತ್ಯ ನಿರ್ದೇಶಕ ಪ್ರಭುದೇವಾ ಅವರನ್ನು ಮದುವೆ ಆಗುತ್ತಾರಂತೆ. ಹೀಗಂತ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ಹಾಗಾದರೆ ಈ ರೀತಿಯಲ್ಲಿ ಸುದ್ದಿ ಹರಡಲು ಕಾರಣವೇನು? ನಿಖಿಶಾ ಪ್ರಭುದೇವಾ ಬರ್ತಡೇಗೆ ಶುಭಾಶಯ ಕೋರಿದ್ದು ಹೇಗೆ? ನಿಜವಾಗಿಯೂ ಪ್ರಭುದೇವಾ, ನಿಖಿಶಾ ಮದುವೆ ನಡೆಯುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ

   
 
ಹೆಲ್ತ್