Back
Home » ಗಾಸಿಪ್
'ಡಾಲಿ' ಧನಂಜಯ್ ಗೆ ವರ್ಮಾ ಕೊಟ್ರು ಬಂಪರ್ ಆಫರ್.!
Oneindia | 21st May, 2018 01:36 PM
 • ಡಾಲಿಗೆ ಆಕ್ಷನ್ ಕಟ್ ಹೇಳ್ತಾರೆ ಆರ್.ಜಿ.ವಿ.!

  ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕನ್ನಡ ನಟ ಧನಂಜಯ್ ಗೆ ಆಕ್ಷನ್ ಕಟ್ ಹೇಳ್ತಾರಂತೆ. ವರ್ಮಾ ನಿರ್ದೇಶನ ಮಾಡಲಿರುವ ತೆಲುಗು ಸಿನಿಮಾದಲ್ಲಿ ಅಭಿನಯಿಸುವಂತೆ ಧನಂಜಯ್ ಗೆ ಆಫರ್ ಮಾಡಿದ್ದಾರಂತೆ. ಬಹುಶಃ ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧವಾಗಬಹುದು ಎನ್ನಲಾಗುತ್ತಿದೆ.

  ಆರ್.ಜಿ.ವಿ ಚಿತ್ರದಲ್ಲಿ ಮಾನ್ವಿತಾ ನಾಯಕಿ: ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಸುಸ್ತಾಗ್ತೀರಾ!


 • ಭೇಟಿಯಾಗಿ ಚರ್ಚೆಯಾಗಿದೆ.!

  ಈ ಚಿತ್ರದ ಬಗ್ಗೆ ಮತ್ತು ಧನಂಜಯ್ ಅವರ ಪಾತ್ರದ ಬಗ್ಗೆ ಚರ್ಚಿಸಲು ವರ್ಮಾ ಮತ್ತು ಧನಂಜಯ್ ಭೇಟಿಯಾಗಿದ್ದರಂತೆ. ಈ ಸಂಬಂಧ ಹೈದ್ರಾಬಾದ್ ನಲ್ಲಿ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರಂತೆ.


 • ಧನಂಜಯ್ ಪಾತ್ರವೇನು.?

  ಈ ಚಿತ್ರದಲ್ಲಿ ಧನಂಜಯ್ ಅವರ ಪಾತ್ರದ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, ದನಂಜಯ್ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಳ್ಳಬಹುದು. ಈ ಪಾತ್ರಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಈ ಸಿನಿಮಾ ಓಕೆ ಆಗಿದ್ದೇ ಆದ್ರೆ, ತೆಲುಗು ಸಿನಿಲೋಕದಲ್ಲಿ ಕನ್ನಡದ ಸ್ಪೆಷಲ್ ಹುಡುಗನ ಜರ್ನಿ ಆರಂಭವಾಗಲಿದೆ.

  'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್


 • ಸೂರಿ ನಿರ್ದೇಶನದಲ್ಲಿ ಡಾಲಿ

  ಸದ್ಯ, 'ಟಗರು' ಚಿತ್ರದ ಯಶಸ್ಸಿನಲ್ಲಿರುವ ಧನಂಜಯ್ ತಮ್ಮ ಮುಂದಿನ ಚಿತ್ರವನ್ನ ನಿರ್ದೇಶಕ ಸೂರಿ ಅವರ ಜೊತೆಯೇ ಮಾಡಲಿದ್ದಾರೆ. ಸೂರಿ, ಧನಂಜಯ್ ಗಾಗಿ ಸ್ಕ್ರಿಪ್ಟ್ ಮಾಡಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.


 • 'ಆಫೀಸರ್' ಆಗಮನದಲ್ಲಿ ಆರ್.ಜಿ.ವಿ

  ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ನಾಗಾರ್ಜುನ ಅಭಿನಯದ 'ಆಫೀಸರ್' ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಾದ ನಂತರ 'ನ್ಯೂಕ್ಲಿಯರ್' ಎಂಬ ಇಂಗ್ಲಿಷ್ ಸಿನಿಮಾ ಕೂಡ ಮಾಡಲಿದ್ದಾರೆ ಎನ್ನಲಾಗಿದೆ. ಈ ಚಿತ್ರಗಳ ಮಧ್ಯೆ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಧನಂಜಯ್ ಅವರನ್ನ ನೋಡಬಹುದು.
'ಟಗರು' ಚಿತ್ರದ 'ಡಾಲಿ' ಪಾತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಧನಂಜಯ್, ಕೇವಲ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನ ಮಾತ್ರವಲ್ಲದೇ ಗಡಿಯಾಚೆಯೂ ಮೋಡಿ ಮಾಡಿದ್ದಾರೆ.

ಈ ಹಿಂದೆ 'ಟಗರು' ಸಿನಿಮಾವನ್ನ ನೋಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಧನಂಜಯ್, ಮಾನ್ವಿತಾ ಹರೀಶ್, ಶಿವರಾಜ್ ಕುಮಾರ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

ಕರ್ನಾಟಕಕ್ಕೆ ಹೆಮ್ಮೆ ತಂದ ರಾಮ್ ಗೋಪಾಲ್ ವರ್ಮಾ

ಅದರಲ್ಲೂ, ಡಾಲಿ ಪಾತ್ರ ವರ್ಮಾಗೆ ಜಾಸ್ತಿನೇ ಇಷ್ಟವಾಗಿತ್ತು. ಅಂದು ಡಾಲಿಯನ್ನ ನೋಡಿ ಫಿದಾ ಆಗಿದ್ದ ವರ್ಮಾ, ಈಗ ಅದೇ ಡಾಲಿಯ ಜೊತೆ ಸಿನಿಮಾ ಮಾಡಲು ಚಿಂತಿಸಿದ್ದಾರೆ. ಹಾಗಿದ್ರೆ, ರಾಮ್ ಗೋಪಾಲ್ ವರ್ಮಾ ಮತ್ತು ಧನಂಜಯ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಆ ಸಿನಿಮಾ ಯಾವುದು.? ಯಾವಾಗ ಆರಂಭ ಎಂದು ತಿಳಿಯಲು ಮುಂದೆ ಓದಿ,,,,,

   
 
ಹೆಲ್ತ್