Back
Home » ಗಾಸಿಪ್
ದರ್ಶನ್ ಕುರುಕ್ಷೇತ್ರ ಚಿತ್ರದ ನಿರ್ದೇಶಕರೆಷ್ಟು ?
Oneindia | 1st Jun, 2018 02:31 PM
 • ಮೂರು ನಿರ್ದೇಶಕರ ಚಿತ್ರ ಕುರುಕ್ಷೇತ್ರ

  ಇಷ್ಟು ದಿನಗಳ ಕಾಲ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾಗೆ ನಾಗಣ್ಣ ಒಬ್ಬರೇ ನಿರ್ದೇಶಕರು ಎಂದುಕೊಂಡಿದ್ದರು. ಆದರೆ ಸಿನಿಮಾಗೆ ಇನ್ನು ಇಬ್ಬರು ಡೈರೆಕ್ಟರ್ಸ್ ಕೆಲಸ ಮಾಡಿದ್ದಾರೆ ಎನ್ನುವ ವಿಚಾರಗಳು ಕೇಳಿ ಬರುತ್ತಿವೆ.


 • ಗ್ರಾಫಿಕ್ಸ್ ಹೊಣೆ ಎಸ್.ವಿ.ಪ್ರಸಾದ್

  ನಾಗಣ್ಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರೆ ಚಿತ್ರದ ಗ್ರಾಫಿಕ್ಸ್ ಸಂಪೂರ್ಣ ಜವಾಬ್ದಾರಿಯನ್ನು ಹೈದರಾಬಾದ್‍ ನ ಎಸ್.ವಿ.ಪ್ರಸಾದ್ ವಹಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಹೆಚ್ಚು ಯುದ್ಧದ ಸೀನ್ ಗಳಿದ್ದು ಗ್ರಾಫಿಕ್ಸ್ ಬಳಕೆಯನ್ನು ಚೆನ್ನಾಗಿ ಮಾಡಿಕೊಳ್ಳಲಾಗುತ್ತಿದೆಯಂತೆ.


 • ಸಾಹಿತ್ಯ ಬರವಣಿಗೆ ಜೊತೆ ನಿರ್ದೇಶನ

  ಇನ್ನು ಕನ್ನಡ ಸಿನಿಮಾರಂಗದಲ್ಲಿ ನಿರ್ದೇಶಕ, ನಟ ಹಾಗೂ ಚಿತ್ರ ಸಾಹಿತ್ಯದಲ್ಲಿ ಹೆಸರು ಗಳಿಸಿರುವ ವಿ ನಾಗೇಂದ್ರ ಪ್ರಸಾದ್ ಕೂಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರಂತೆ. ಅಭಿಮನ್ಯು ಪಾತ್ರಧಾರಿ ನಿಖಿಲ್ ದೃಶ್ಯಗಳ ಜೊತೆಯಲ್ಲಿ ದರ್ಶನ್ ಅವರ ಕೆಲ ಸೀನ್ ಗಳನ್ನು ನಾಗೇಂದ್ರ ಪ್ರಸಾದ್ ಡೈರೆಕ್ಟ್ ಮಾಡಿದ್ದಾರಂತೆ.


 • ನಿರ್ದೇಶಕರಾದ ದೇವರಾಜ್ ಪಲಾನ್

  ಕುರುಕ್ಷೇತ್ರ ಸಿನಿಮಾಗೆ ಸಹ ನಿರ್ದೇಶಕರಾಗಿದ್ದ ದೇವರಾಜ್ ಪಲಾನ್ ಕೂಡಾ ಚಿತ್ರಕ್ಕೆ ನಿರ್ದೇಶಕರಂತೆ. ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಈ ನಾಲ್ವರು ನಿರ್ದೇಶಕರಿಗೆ ಚಿತ್ರದಲ್ಲಿ ಕ್ರೆಡಿಟ್ ಕೊಡಲು ತೀರ್ಮಾನಿಸಲಾಗಿದ್ಯಂತೆ.


 • ಡಬ್ಬಿಂಗ್ ಶುರು ಮಾಡಬೇಕಿರುವ ರವಿಚಂದ್ರನ್

  ಸದ್ಯ ದರ್ಶನ್ ಸೇರಿದಂತೆ ಅನೇಕರ ಡಬ್ಬಿಂಗ್ ಕೆಲಸಗಳು ಮುಗಿದಿದ್ದು ರವಿಚಂದ್ರನ್ ಅವರ ಡಬ್ಬಿಂಗ್ ಮಾತ್ರ ಬಾಕಿ ಉಳಿದಿದೆಯಂತೆ. ಗ್ರಾಫಿಕ್ಸ್, ಎಡಿಟಿಂಗ್, ಡಿ ಐ ಎಲ್ಲವೂ ಒಂದೇ ಸಮಯದಲ್ಲಿ ಬೇರೆ ಬೇರೆ ಕಡೆ ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲರೂ ಬೇರೆ ವಿಭಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಚುನಾವಣೆ ಮಗಿಸಿರುವ ನಿರ್ಮಾಪಕ ಮುನಿರತ್ನ ಆದಷ್ಟು ಬೇಗ ಚಿತ್ರ ಬಿಡುಗಡೆ ಆಗುವ ದಿನಾಂಕವನ್ನು ಫಿಕ್ಸ್ ಮಾಡಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡುತ್ತಲೇ ಇದೆ. ಪೌರಾಣಿಕ ಸಿನಿಮಾಗಳು ಕನ್ನಡ ಸಿನಿಮಾರಂಗದಲ್ಲಿ ನಿರ್ಮಾಣವಾಗುವುದೇ ಕಡಿಮೆ ಆದರೆ ಇಂಥದೊಂದು ವಿಭಿನ್ನ ಪ್ರಯತ್ನಕ್ಕೆ ನಿರ್ಮಾಪಕ ಮುನಿರತ್ನ ಕೈ ಹಾಕಿದ್ದಾರೆ.

ಸದ್ಯ ಚಿತ್ರೀಕರಣ ಮುಗಿಸಿ ತೆರೆಗೆ ಬರುವುದಕ್ಕೆ ಸಿದ್ದವಾಗಿರುವ ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದು ಹಳೆಯ ವಿಚಾರ ಆದರೆ ಸದ್ಯ ಹೊಸದೊಂದು ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಕೇಳಿ ಬರುತ್ತಿದೆ.

ಮೈಸೂರು ಮೃಗಾಲಯಕ್ಕೆ 'ದಾಸ' ದರ್ಶನ್ ಬ್ರಾಂಡ್ ಅಂಬಾಸಿಡರ್.!

ದರ್ಶನ್ ಅವರ ಕುರುಕ್ಷೇತ್ರಕ್ಕೆ ನಾಲ್ವರು ನಿರ್ದೇಶಕರಂತೆ. ನಾಗಣ್ಣ ಸೇರಿದಂತೆ ಇನ್ನು ಮೂವರು ನಿರ್ದೇಶಕರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂದು ಸುದ್ದಿ ಆಗಿದೆ. ಹಾಗಾದರೆ ಯಾರು ಆ ನಿರ್ದೇಶಕರು? ಚಿತ್ರದಲ್ಲಿ ಅವರು ಯಾವ ಯಾವ ಕೆಲವನ್ನು ನಿರ್ವಹಿಸಿದ್ದಾರೆ. ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ..

   
 
ಹೆಲ್ತ್