Back
Home » ಚಿತ್ರವಿಮರ್ಶೆ
ವಿಮರ್ಶೆ: 'ಸಂಜು' ಒಂದು ಉತ್ತಮ ಚಿತ್ರ ಎಂಬುದರಲ್ಲಿ ಅನುಮಾನವಿಲ್ಲ.!
Oneindia | 1st Jul, 2018 03:14 PM
 • 'ನಾಯಕ ಪ್ರಧಾನ' ಮನೋರಂಜನಾತ್ಮಕ ಸಿನಿಮಾ

  ಸಂಜು ತಾನು 350 ಹೆಣ್ಣುಗಳೊಂದಿಗೆ ಮಲಗಿದ್ದೆ ಎಂದಾಗಲೂ ಆತನ ಎದುರಿಗೆ ಕೂತ ಹೆಣ್ಣಿಗೆ ಸಂಜು ಮೇಲೆ ಸಿಟ್ಟಾಗಲಿ, ಆತನ ಆ ವರ್ತನೆಯ ಬಗ್ಗೆ ಅಸಹ್ಯವಾಗಲಿ ಆಗುವುದಿಲ್ಲ. ಬದಲಿಗೆ ಆಕೆ ನಗುತ್ತಾಳೆ ಅದು ಪ್ರೇಕ್ಷಕನ ಮನದಲ್ಲೂ ಪ್ರತಿಫಲನವಾಗುತ್ತದೆ. ನಾಯಕ ಹೀನಾಯವಾಗಿ ತನ್ನ ಪ್ರೇಯಿಸಿಗೆ ಕೈ ಕೊಟ್ಟರೂ ಸಹಿತ ಆಕೆಯ ಬಗ್ಗೆ ಮರುಕ ಹುಟ್ಟದೆ ಸಂಜು ಬಗ್ಗೆ ಮರುಕಹುಟ್ಟುವಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಇವೆಲ್ಲಾ 'ನಾಯಕ ಪ್ರಧಾನ' ಮನೋರಂಜನಾತ್ಮಕ ಸಿನಿಮಾದ ಮಿತಿಗಳಿರಬಹುದೇನೋ. ಸಂಜುವನ್ನು ನಾಯಕನ್ನಾಗಿಯೇ ಉಳಿಸಿಕೊಳ್ಳಲು ಸಿನಿಮಾದ ಪೂರಾ ಈ ಪ್ರಯತ್ನಗಳು ಸಾಕಷ್ಟಿವೆ.

  'ಸಂಜು' ಚಿತ್ರಕ್ಕೆ ವಿಮರ್ಶಕರು ಕೊಟ್ಟಿದ್ದು ಮಿಶ್ರ ಪ್ರತಿಕ್ರಿಯೆ.!


 • ಮಾಧ್ಯಮಗಳ ಪಾತ್ರ...

  ಸಂಜಯ್ ದತ್ ವಿಲನ್ ನಂತೆ ಕಾಣುವುದರಲ್ಲಿ ಮಾಧ್ಯಮಗಳ ಪಾತ್ರವೂ ಸಾಕಷ್ಟಿತ್ತು ಎಂಬುದನ್ನು ನಿರ್ದೇಶಕ ಒತ್ತಿ ಹೇಳುವ ಪ್ರಯತ್ನ ಮಾಡಿದ್ದಾರೆ. ಮಾಧ್ಯಮಗಳ ಜವಾಬ್ದಾರಿಯ ಕುರಿತು ಸಂಜಯ್ ದತ್ ಪಾತ್ರಧಾರಿಯ ಬಾಯಿಂದ ನುಡಿ ಮುತ್ತುಗಳನ್ನೂ ಉದುರಿಸಿದ್ದಾರೆ. ಅದೂ ಆತ ಜೈಲಿನಲ್ಲಿ ಕುಳಿತು ಮಾಧ್ಯಮಗಳ ವರ್ತನೆಯನ್ನು ಟೀಕಿಸಿ ಬುದ್ಧಿವಾದವನ್ನೂ ಹೇಳುತ್ತಾನೆ!

  ಟ್ವಿಟ್ಟರ್ ವಿಮರ್ಶೆ: 'ಸಂಜು' ಚಿತ್ರವನ್ನ ಇಡೀ ವರ್ಷ ಹೊಗಳಿದರೂ ಸಾಲಲ್ಲ.!


 • ಒಳ್ಳೆಯ ಅನುಭವ ನೀಡುತ್ತದೆ

  ಒಂದು ಸಿನಿಮಾವಾಗಿ 'ಸಂಜು' ಒಳ್ಳೆಯ ಅನುಭವ ನೀಡುತ್ತದೆ. ಅಪ್ಪ-ಮಗನ ನಡುವಿನ ದೃಶ್ಯಗಳು ನೆನಪಿನಲ್ಲಿ ಉಳಿಯುವ ಗುಣ ಹೊಂದಿವೆ. ಸಿನಿಮಾದಲ್ಲಿ ಅಪ್ಪ ಹಾಗೂ ಸ್ನೇಹಿತನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಪ್ಪನಾಗಿ ಪರೇಶ್ ರಾವಲ್ ಉತ್ತಮವಾಗಿ ನಟಿಸಿದ್ದಾರೆ. ಗೆಳೆಯನಾಗಿ ವಿಕ್ಕಿ ಕೌಶಲ್ ನಟನೆ ಸಹ ಚೇತೋಹಾರಿ. ನಟಿ ಅನುಷ್ಕಾ ಶರ್ಮಾ, ದಿಯಾ ಮಿರ್ಜಾ ಆಗಾಗ ಕಾಣಿಸಿಕೊಳ್ಳುತ್ತಾರಷ್ಟೆ ಅವರಿಗೆ ಹೆಚ್ಚಿನ ಕೆಲಸವೇನೂ ಇಲ್ಲ.

  'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!


 • ತಾಂತ್ರಿಕವಾಗಿ ಸಿನಿಮಾ ಹೇಗಿದೆ.?

  ತಾಂತ್ರಿಕವಾಗಿ ಸಿನಿಮಾ ಅತ್ಯುತ್ತಮವಾಗಿದೆ. ರೆಹಮಾನ್ ಸಂಗೀತದಲ್ಲಿ ಹಾಡುಗಳು ಕೇಳುವಂತಿವೆ. ಆದರೆ ಅವರು ಹಿಂದಿನ ಮ್ಯಾಜಿಕ್ ಕಳೆದುಕೊಳ್ಳುತ್ತಿದ್ದಾರೆನೋ ಎಂಬ ಅನುಮಾನವೂ ಮೂಡುತ್ತದೆ. ಗಂಭೀರ ವಿಷಯಗಳನ್ನು ಹಾಸ್ಯದ ಧಾಟಿಯಲ್ಲಿಯೇ ದಾಟಿಸುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಒಬ್ಬ ಶಕ್ತ ನಿರ್ದೇಶಕ. 3 ಇಡಿಯಟ್ಸ್, ಲಗೆ ರಹೊ ಮುನ್ನಾಭಾಯಿ, ಪಿಕೆಗೆ ಈ ಸಿನಿಮಾವನ್ನು ಹೋಲಿಸಲು ಆಗದಿದ್ದರೂ ಸಹ ಸಂಜು ಒಂದು ಉತ್ತಮ ಚಿತ್ರ ಎಂಬುದರಲ್ಲಿ ಅನುಮಾನವಿಲ್ಲ.
ಸಂಜಯ್ ದತ್ ಜೀವನ ಆಧರಿಸಿದ 'ಸಂಜು' ಸಿನಿಮಾದಲ್ಲಿ ಸ್ವತಃ ಸಂಜಯ್ ದತ್ ನಟಿಸಿದ್ದರೂ ರಣಬೀರ್ ಕಪೂರ್ ನಷ್ಟು ಉತ್ತಮವಾಗಿ ನಟಿಸಲು ಸಾಧ್ಯವೇ ಇರಲಿಲ್ಲ. ಅಷ್ಟು ಅದ್ಭುತವಾಗಿ ರಣಬೀರ್ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದಾರೆ.

ಸಂಜಯ್ ದತ್ ಎಡೆಗೆ ಸಹಾನುಭೂತಿ ದೃಷ್ಠಿಕೋನ ಇಟ್ಟುಕೊಂಡೇ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕರು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಆತ ಮಾಡಿರುವ ತಪ್ಪನ್ನು ಸರಿ ಎಂದು ಕಾಣಿಸುವ ಪ್ರಯತ್ನವೇನೂ ಸಿನಿಮಾದಲ್ಲಿ ಕಾಣುವುದಿಲ್ಲ. ಆದರೆ ಸಾಫ್ಟ್ ಕಾರ್ನರ್ ಖಂಡಿತ ಇದೆ.

ಸಂಜಯ್ ದತ್ ಜೀವನ ಅಸ್ಥಿರತೆಯಿಂದ ಕೂಡಿದ್ದು, ಆತನ ತಪ್ಪುಗಳು ಸ್ವಯಂಕೃತವೇ. ಆದರೆ ಸಿನಿಮಾದಲ್ಲಿ, ಆತನ ತಪ್ಪುಗಳು ಅಮಾಯಕತೆಯ ಗುಣದಿಂದಾದದ್ದು ಎಂತಲೂ ಅಥವಾ ಪರಿಸ್ಥಿತಿಯ ಒತ್ತಡದಿಂದ ಆದದ್ದು ಎಂಬಂತೆ ಚಿತ್ರಿಸಿದ್ದಾರೆ ನಿರ್ದೇಶಕ ರಾಜಕುಮಾರ್ ಹಿರಾನಿ.

ಡ್ರಗ್ಸ್ ತೆಗೆದುಕೊಂಡ ಸಂಜು 'ನನಗೆ ಅಪ್ಪನ ಮೇಲೆ ಮುನಿಸಾಗಿತ್ತು' ಎನ್ನುವುದು ಕೇವಲ ನೆವವಷ್ಟೆ. ಆದರೆ ಚಿತ್ರದಲ್ಲಿ ಸಂಜು ನ ಆ ಕೃತ್ಯಕ್ಕೆ ಅಪ್ಪನ ಮೇಲಿನ ಮುನಿಸೆ ಕಾರಣ ಎಂದು ತೋರಿಸುವಲ್ಲಿ ನಾಯಕನೆಡೆಗೆ ನಿರ್ದೇಶಕರ ಸಾಫ್ಟ್ ಕಾರ್ನರ್ ಎದ್ದು ಕಾಣುತ್ತದೆ. ಮುಂದೆ ಓದಿರಿ...

   
 
ಹೆಲ್ತ್