Back
Home » ಗಾಸಿಪ್
ದಿಢೀರ್ ಅಂತ ಪಾತಳಕ್ಕೆ ಕುಸಿಯಿತು 'ಬ್ರಹ್ಮಾನಂದಂ' ಸಂಭಾವನೆ.!
Oneindia | 3rd Jul, 2018 02:04 PM
 • ಬ್ರಹ್ಮಾನಂದಂ ಸಂಭಾವನೆ ಎಷ್ಟಿತ್ತು.?

  ಮೂಲಗಳ ಪ್ರಕಾರ, ಈ ಹಿಂದೆ ಹಾಸ್ಯ ನಟ ಬ್ರಹ್ಮಾನಂದ ಅವರು ಒಂದು ಚಿತ್ರಕ್ಕೆ ಬರೋಬ್ಬರಿ 1 ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಆದ್ರೀಗ, ಇದು ದಿಢೀರ್ ಅಂತ ಕುಸಿತ ಕಂಡಿದೆ.


 • ಈಗ ಅವರ ಸಂಭಾವನೆ ಎಷ್ಟಿದೆ.?

  ಈ ಹಿಂದೆ ಒಂದು ಚಿತ್ರಕ್ಕೆ ಒಂದು ಕೋಟಿ ಪಡೆಯುತ್ತಿದ್ದ ಹಾಸ್ಯ ನಟ, ಈಗ ದಿಢೀರ್ ಅಂತ ಅರ್ಧದಷ್ಟು ಮೊತ್ತವನ್ನ ಇಳಿಸಿಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬ್ರಹ್ಮಾನಂದಂ ಅವರು ಒಂದು ಚಿತ್ರಕ್ಕೆ ಕೇವಲ 50 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

  ಹಾಸ್ಯನಟ ಬ್ರಹ್ಮಾನಂದಂ ಸಂಭಾವನೆಗೂ, ಆಸ್ತಿಗೂ ಅಜಗಜಾಂತರ ವ್ಯತ್ಯಾಸ.!


 • ಕಾರಣವೇನು ಗೊತ್ತಾ.?

  ಸುಮಾರು ಮೂರು ದಶಕಗಳಿಂದ ಕಾಮಿಡಿ ಮಾಡುತ್ತಾ ಬರುತ್ತಿರುವ ಬ್ರಹ್ಮಾನಂದಂ ಅವರ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಹೊಸ ಜನರೇಷನ್ ನ ಹಾಸ್ಯ ಕಲಾವಿದರು ಹೆಚ್ಚಾಗ್ತಿದ್ದಾರೆ. ಇದರಿಂದ ಬ್ರಹ್ಮಾನಂದಂ ಅವರ ಬೇಡಿಕೆಗೆ ಪೆಟ್ಟು ನೀಡಿದೆ.


 • ಇದಕ್ಕೆ ಇವರೇ ಕಾರಣ

  ಹೊಸ ಜನರೇಷನ್ ಕಲಾವಿದರ ಮಧ್ಯೆ ಬ್ರಹ್ಮಾನಂದಂ ಅವರ ಬೇಡಿಕೆ ಕಡಿಮೆಯಾಗಿರಬಹುದು. ಇದರ ಜೊತೆಗೆ ನಿರ್ದೇಶಕರು, ಕತೆಗಾರರು ಕೂಡ ಕಾರಣವಾಗಿದ್ದಾರೆ. ಯಾಕಂದ್ರೆ, ಬ್ರಹ್ಮಾನಂದಂ ಅವರನ್ನ ಹೊಸ ರೀತಿಯಲ್ಲಿ ತೋರಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಮತ್ತೆ ಅದೇ ರೀತಿಯ ಪಾತ್ರಗಳಲ್ಲಿ ನೋಡುತ್ತಿದ್ದಾರೆ. ಇದು ಸಹಜವಾಗಿ ಬ್ರಹ್ಮಾನಂದಂ ಅವರ ಬೇಡಿಕೆ ಕುಸಿಯಲು ಕಾರಣವಾಗಿರಬಹುದು.


 • ಚಿತ್ರಗಳ ಸಂಖ್ಯೆಯೂ ಕಮ್ಮಿಯಾಗಿದೆ

  ವರ್ಷಕ್ಕೆ 20 ರಿಂದ 30 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಬ್ರಹ್ಮಾನಂದಂ ಅವರು ಈಗ ಕಡಿಮೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬ್ರಹ್ಮಾನಂದಂ ಅಭಿನಯಿಸುತ್ತಿರುವ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2017 ರಲ್ಲಿ ನಾಲ್ಕು ಸಿನಿಮಾ, 2018 ರಲ್ಲಿ 10 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  ಪುನೀತ್ 'ನಿನ್ನಿಂದಲೇ' ಚಿತ್ರದಲ್ಲಿ ಗಿನ್ನಿಸ್ ದಾಖಲೆಯ ಹಾಸ್ಯನಟ


 • 1986ರಲ್ಲಿ ಸಿನಿಮಾಗೆ ಎಂಟ್ರಿ

  1986ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದಲ್ಲಿ ಮೂಡಿ ಬಂದಿದ್ದ 'ಚಂಟಬ್ಬಾಯಿ' ಚಿತ್ರದ ಮೂಲಕ ಬ್ರಹ್ಮಾನಂದಂ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಇಲ್ಲಿಯವರೆಗೂ ಸುಮಾರು 1000 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸುವುದರ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಚಿತ್ರರಂಗದಲ್ಲಿ ನಾಯಕ ನಟರಿಗಿಂತ ಹಾಸ್ಯನಟರೇ ಹೆಚ್ಚು ಶ್ರೀಮಂತರು ಎಂಬ ಮಾತಿದೆ. ಅದು ಬಹುಶಃ ನಿಜಾನು ಇರಬಹುದು. ಯಾಕಂದ್ರೆ, ಸ್ಟಾರ್ ನಟರು ವರ್ಷವೆಲ್ಲಾ ಒಂದು ಅಥವಾ ಎರಡು ಚಿತ್ರಗಳನ್ನ ಮಾಡಿ ಒಂದಿಷ್ಟು ಅಂತ ಸಂಭಾವನೆ ಪಡೆಯುತ್ತಾರೆ. ಆದ್ರೆ, ಹಾಸ್ಯ ನಟರು ವರ್ಷ ಪೂರ್ತಿ ಸುಮಾರು 15 ರಿಂದ 20 ಸಿನಿಮಾಗಳಲ್ಲಿ ನಟಿಸುತ್ತಾರೆ. ಅವರಿಗೆ ಸಿಗುವ ಸಂಭಾವನೆ ಕೂಡ ದೊಡ್ಡ ಮೊತ್ತವೇ. ಹೀಗೆ, ನಟರಿಗೆ ಹೋಲಿಸಿಕೊಂಡರೇ, ಹಾಸ್ಯನಟರೇ ಶ್ರೀಮಂತರು ಎನ್ನುವುದರಲ್ಲಿ ಅನುಮಾನವಿಲ್ಲ.

ಕನ್ನಡದಲ್ಲಿ ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು ಅಂತಹ ಕಲಾವಿದರು ಸದ್ಯ ಬೇಡಿಕೆ ಹೊಂದಿರುವ ಹಾಸ್ಯ ನಟರು. ಕಲೆವೊಮ್ಮೆ ಪರಭಾಷೆಯ ಹಾಸ್ಯ ನಟರು ಕೂಡ ಸ್ಯಾಂಡಲ್ ವುಡ್ ಗೆ ಬಂದಿರುವುದಂಟು. ಬ್ರಹ್ಮಾನಂದಂ, ಅಲಿ, ಮತ್ತಿತರು.

ದಕ್ಷಿಣ ಭಾರತದಲ್ಲೇ ಬ್ರಹ್ಮಾನಂದಂ ಅವರು ಒಂದು ಚಿತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟ. ಆದ್ರೀಗ, ಈ ನಟನ ಸಂಭಾವನೆ ದೀಢರ್ ಅಂತ ಪಾತಳಕ್ಕೆ ಬಿದ್ದಿದೆ. ಹಾಗಿದ್ರೆ, ಬ್ರಹ್ಮಾನಂದಂ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು, ಈಗ ಎಷ್ಟು ಕುಸಿತವಾಗಿದೆ ಎಂದು ತಿಳಿಯಲು ಮುಂದೆ ಓದಿ...

   
 
ಹೆಲ್ತ್