Back
Home » ಆರೋಗ್ಯ
ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮೊಳಕೆ ಬರಿಸಿದ ಕಾಳುಗಳ ಆರೋಗ್ಯಕರ ಪ್ರಯೋಜನಗಳು
Boldsky | 4th Jul, 2018 02:30 PM
 • ನೆನೆಸಿಟ್ಟ ಧಾನ್ಯಕ್ಕೂ, ಮೊಳಕೆಯೊಡೆದ ಧಾನ್ಯಕ್ಕೂ ಏನು ವ್ಯತ್ಯಾಸ?

  ಸಾಮಾನ್ಯವಾಗಿ ಒಣಧಾನ್ಯ, ಕಾಳುಗಳು ಬೇಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇವನ್ನು ನೀರು, ಮೊಸರು ಅಥವಾ ಸೇಬಿನ ಶಿರ್ಕಾದಲ್ಲಿ ಸುಮಾರು ಹನ್ನೆರಡರಿಂದ ಇಪ್ಪತ್ತನಾಲ್ಕು ಘಂಟೆ ಕಾಲ ನೆನೆಸಿಟ್ಟರೆ ಕಾಳು ಮೆತ್ತಗಾಗಿ ಸುಲಭವಾಗಿ ಬೇಯುತ್ತದೆ. ಈ ಅವಧಿಯಲ್ಲಿ ಧಾನ್ಯದಲ್ಲಿದ್ದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುವ ಆಮ್ಲಗಳು ವಿಭಜನೆಗೊಂಡು ಪೋಷಕಾಂಶಗಳು ಮಾನವರ ಸೇವನೆಗೆ ಸೂಕ್ತವಾಗುವಂತೆ ಮಾಡುತ್ತವೆ.


 • ಹುಳಿಯಾದ ಧಾನ್ಯಗಳು

  ಧಾನ್ಯಗಳು ಹುಳಿಯಾಗುವುದೆಂದರೆ ಇವು ಮೊಳಕೆಯೊಡೆದ ಬಳಿಕ ಕೊಂಚ ಹೆಚ್ಚೇ ಕಾಲ ನೀರಿನ ವಾತಾವರಣ ದಲ್ಲಿದ್ದು ಹುದುಗು ಬರುವುದಾಗಿದೆ. ಸಾಮಾನ್ಯವಾಗಿ ಹುಳಿಬ್ರೆಡ್ ಮಾಡುವಾಗ ಈ ಹುಳಿಬಂದ ಮೊಳಕೆಯೊಡೆದ ಧಾನ್ಯಗಳನ್ನು ಬಳಸಲಾಗುತ್ತದೆ. ಈ ಬ್ರೆಡ್ ತಯಾರಿಸಲು ಹಿಟ್ಟನ್ನು ಕಲಕಿ ಕೃತಕ ಶಿಲೀಂಧ್ರ ಅಥವಾ ಯೀಸ್ಟ್ ಅನ್ನು ಬೆರೆಸಿ ಕೊಂಚ ನೀರಿನ ಅಂಶ ಹಾಗೇ ಇರುವಂತೆ ಬಿಡಲಾಗುತ್ತದೆ. ಕೊಂಚ ಹೊತ್ತಿನ ಬಳಿಕ ಈ ಯೀಸ್ಟ್ ಹುದುಗು ಬರುವ ಮೂಲಕ ಬ್ರೆಡ್ ಅನ್ನು ಒಳಗಿನಿಂದ ಉಬ್ಬಿಸುತ್ತದೆ.


 • ಮೊಳಕೆಬಂದ ಧಾನ್ಯಗಳು

  ಯಾವುದೇ ಧಾನ್ಯವನ್ನು ಇಡಿಯಾಗಿ ಅಥವಾ ಒಡೆದು ಬೇಳೆಯಾಗಿಸಿ ಅಥವಾ ಅರೆದು ಹಿಟ್ಟಾಗಿಸಿ ಇದಕ್ಕೆ ನೀರು ಬೆರೆಸಿ ನೆನೆಸಿಟ್ಟು ಬೇಯಿಸಬಹುದು. ಆದರೆ ಮೊಳಕೆ ಬರಿಸಲು ಇಡಿಯ ಧಾನ್ಯಗಳೇ ಆಗಬೇಕು. ಇಡಿಯ ಧಾನ್ಯಗಳನ್ನು ಮುಳುಗುವಷ್ಟು ತಣ್ಣೀರಿನಲ್ಲಿ ಮುಳುಗಿಸಿ ದಿನಕ್ಕೆರಡು ಅಥವಾ ಮೂರು ಬಾರಿ ನೀರನ್ನು ಬದಲಿಸುತ್ತಾ ಆರ್ದ್ರತೆಯಿಂದಿರುವಂತೆ ನೋಡಿಕೊಳ್ಳುವ ಮೂಲಕ ಮೊಳಕೆ ಬರಿಸಬಹುದು ಹಾಗೂ ಮೊಳಕೆ ಸಾಕಷ್ಟು ಉದ್ದವಾಗುವವರೆಗೂ ಹೀಗೇ ಮುಂದುವರೆಸಬೇಕು.


 • ನೆನೆಸಿಟ್ಟ ಧಾನ್ಯಗಳ ಆರೋಗ್ಯಕರ ಪ್ರಯೋಜನಗಳು

  1. ಕಿಣ್ವ ನಿರೋಧಕಗಳನ್ನು ತಟಸ್ಥಗೊಳಿಸುತ್ತದೆ
  ಆಹಾರ ತಜ್ಞರ ಪ್ರಕಾರ, ಇಡಿಯ ಕಾಳುಗಳಲ್ಲಿ ರಕ್ಷಣೆಯನ್ನು ಒದಗಿಸಲು ಒಂದು ಕಿಣ್ವನಿರೋಧಕ ಕವಚವಿದೆ. ಇವು ಕಾಳನ್ನು ಅರಗಿಸಿಕೊಳ್ಳಲು ಬಿಡುವುದಿಲ್ಲ. ಹಾಗಾಗಿ ಕಾಳುಗಳನ್ನು ಸೇವಿಸಿದರೆ ನಮ್ಮ ಜೀರ್ಣರಸಗಳು ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ ಹಾಗೂ ಜೀರ್ಣಕಾರಿ ಕಿಣ್ವಗಳ ಜೀವ ರಾಸಾಯನಿಕ ಕ್ರಿಯೆಗೆ ಅಡ್ಡಿಯಾಗುತ್ತವೆ. ನೆನೆಸಿಡುವ ಮೂಲಕ ಈ ಕವಚ ತಟಸ್ಥಗೊಂಡು ಜೀರ್ಣಕ್ರಿಯೆ ಸುಲಭವಾಗುತ್ತದೆ.


 • 2. ಫೈಟಿಕ್ ಆಮ್ಲ ಕಡಿಮೆಯಾಗುತ್ತದೆ

  ಧಾನ್ಯಗಳ ಹೊರಕವಚದಲ್ಲಿ ಫೈಟಿಕ್ ಆಮ್ಲವಿದ್ದು ಇವುಗಳು ಧಾನ್ಯಗಳಲ್ಲಿರುವ ಖನಿಜಗಳಾದ ಕ್ಯಾಲ್ಸಿಯಂ ಮೆಗ್ನೇಶಿಯಂ ಮೊದಲಾದವುಗಳನ್ನು ದೇಹ ಹೀರಿಕೊಳ್ಳುವುದಕ್ಕೆ ತಡೆಯೊಡ್ಡುತ್ತದೆ. ನೆನೆಸಿಟ್ಟ ಧಾನ್ಯಗಳಲ್ಲಿ ಪ್ರಮುಖ ಕಿಣ್ವ ಮತ್ತು ಕೆಲವು ಬ್ಯಾಕ್ಟೀರಿಯಾಗಳು ಬಿಡುಗಡೆಗೊಂಡು ಈ ಫೈಟಿಕ್ ಆಮ್ಲ ವಿಭಜನೆಗೊಳ್ಳುವುದಕ್ಕೆ ನೆರವಾಗುತ್ತದೆ.


 • 3. ವಿಟಮಿನ್ನುಗಳ ಪ್ರಮಾಣ ಹೆಚ್ಚುತ್ತದೆ

  ನೆನೆಸಿಡುವ ಮೂಲಕ ಧಾನ್ಯದಲ್ಲಿದ್ದ ವಿಟಮಿನ್ನುಗಳು ನೀರಿನಲ್ಲಿ ಸಂಗ್ರಹಗೊಳ್ಳಲು ನೆರವಾಗುತ್ತದೆ. ಆದ್ದರಿಂದ ಅಡುಗೆಗೆ ಕಾಳುಗಳನ್ನು ನೆನೆಸಿಟ್ಟ ನೀರನ್ನೇ ಬಳಸುವುದು ಅಗತ್ಯವಾಗಿದೆ.


 • 4. ಆರೋಗ್ಯವನ್ನು ಕಾಪಾಡುತ್ತದೆ

  ಇಡಿಯ ರಾತ್ರಿ ನೆನೆಸಿಟ್ಟ ಧಾನ್ಯಗಳು ಸುಲಭವಾಗಿ ಜೀರ್ಣಗೊಳ್ಳುತ್ತವೆ. ಇವುಗಳಲ್ಲಿರುವ ಪೋಷಕಾಂಶಗಳು ದೇಹವನ್ನು ಬಲಪಡಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಏಕೆಂದರೆ ನೆನೆಸಿಟ್ಟ ಕಾಳುಗಳಲ್ಲಿ ಫೈಟಿಕ್ ಆಮ್ಲ ಕನಿಷ್ಠ ಪ್ರಮಾಣಕ್ಕಿರುವುದರಿಂದ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುವುದರಿಂದ ಯಾವುದೇ ತಡೆ ಇರುವುದಿಲ್ಲ.


 • 5. ಜೀರ್ಣಕ್ರಿಯೆಗೆ ಸಹಕರಿಸುತ್ತದೆ

  ಧಾನ್ಯಗಳನ್ನು ಇಡಿಯ ರಾತ್ರಿ ನೆನೆಸಿಟ್ಟು ಬೇಯಿಸಿ ಸೇವಿಸುವ ಮೂಲಕ ಕಿಣ್ವ ಪ್ರತಿರೋಧಕಗಳ ಚಟುವಟಿಕೆಯನ್ನು ನಿಯಂತ್ರಿಸಿದಂತಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸಲು ನೆರವಾಗುತ್ತದೆ.


 • ಧಾನ್ಯಗಳನ್ನು ಮೊಳಕೆ ಬರಿಸುವುದರ ಆರೋಗ್ಯಕರ ಪ್ರಯೋಜನಗಳು

  1. ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ:
  ಧಾನ್ಯಗಳಲ್ಲಿ ಸಮೃದ್ದವಾಗಿರುವ ಖನಿಜಗಳಾದ ಕಬ್ಬಿಣ ಮತ್ತು ತಾಮ್ರಗಳು ರಕ್ತದಲ್ಲಿ ಕೆಂಪುರಕ್ತಕಣಗಳ ಸಂಖ್ಯೆ ಉತ್ತಮವಾಗಿರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಇವು ಹೆಚ್ಚು ಹೆಚ್ಚು ಆಮ್ಲಜನಕವನ್ನು ರಕ್ತದ ಮೂಲಕ ದೇಹದ ವಿವಿಧ ಅಂಗಗಳಿಗೆ ಮತ್ತು ಜೀವಕೋಶಗಳಿಗೆ ತಲುಪಿಸಲು ನೆರವಾಗುತ್ತದೆ ಹಾಗೂ ಇವು ತಮ್ಮ ಪೂರ್ಣ ಕ್ಷಮತೆಯೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಲ್ಲದೇ ಮೊಳಕೆಯೊಡೆದ ಕಾಳುಗಳ ಸೇವನೆಯಿಂದ ಹೊಸ ನರಗಳು ಬೇಗನೇ ಬೆಳವಣಿಗೆ ಪಡೆಯುತ್ತವೆ ಹಾಗೂ ಕೂದಲ ಬೆಳವಣಿಗೆಯಲ್ಲಿಯೂ ಸಹಕರಿಸುತ್ತದೆ.


 • 2. ತೂಕ ಇಳಿಸಲೂ ನೆರವಾಗುತ್ತದೆ

  ಮೊಳಕೆಬಂದ ಕಾಳುಗಳ ಇನ್ನೊಂದು ಪ್ರಮುಖವಾದ ಪ್ರಯೋಜನವೆಂದರೆ ತೂಕ ಇಳಿಕೆಗೆ ನೆರವಾಗುವುದು. ಮೊಳಕೆಬಂದ ಧಾನ್ಯಗಳಲ್ಲಿ ಪೋಷಕಾಂಶಗಳು ಸಮೃದ್ದವಾಗಿವೆ ಮತ್ತು ಕ್ಯಾಲೋರಿರಹಿತವೂ ಆಗಿವೆ. ಹಾಗಾಗಿ ಇವುಗಳ ಸೇವನೆಯಿಂದ ಆರೋಗ್ಯ ಹೆಚ್ಚುತ್ತದೆಯೇ ವಿನಃ ತೂಕವಲ್ಲ! ಜೊತೆಯಲ್ಲಿ ಮೊಳಕೆಯೊಡೆದ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ಹೊಟ್ಟೆ ಹೆಚ್ಚು ಹೊತ್ತು ತುಂಬಿರುವ ಅನುಭವ ನೀಡುತ್ತದೆ. ಪರಿಣಾಮವಾಗಿ ಹೊಟ್ಟೆ ಖಾಲಿಯಿದ್ದಾಗ ಹಸಿವನ್ನು ಪ್ರಚೋದಿಸುವ ರಸದೂತವಾದ ಘ್ರೆಲಿನ್ ಎಂಬ ಪೋಷಕಾಂಶ ಉತ್ಪಾದನೆಯಾಗುವ ಅವಶ್ಯವೇ ಇಲ್ಲವಾಗಿ ಮೆದುಳು ಹಸಿವಿನ ಸಂದೇಶವನ್ನು ಕಳುಹಿಸುವುದಿಲ್ಲ. ತನ್ಮೂಲಕ ಅನಗತ್ಯ ಆಹಾರ ಸೇವನೆಯಿಂದ ತಡೆದಂತಾಗುತ್ತದೆ.


 • 3. ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ:

  ಮೊಳಕೆಯೊಡೆದ ಧಾನ್ಯಗಳು ವಿಟಮಿನ್ ಎ ನಿಂದ ಸಮೃದ್ದವಾಗಿದ್ದು ಕಣ್ಣಿನ ದೃಷ್ಟಿ ಮತ್ತು ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಮೊಳಕೆಯೊಡೆದ ಧಾನ್ಯಗಳಲ್ಲಿರುವ ಕೆಲವು ಆಂಟಿ ಆಕ್ಸಿಡೆಂಟುಗಳು ಕಣ್ಣಿನ ಜೀವಕೋಶಗಳಿಗೆ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ಎದುರಾಗುವ ಅಪಾಯವನ್ನು ತಪ್ಪಿಸುತ್ತದೆ.


 • 4. ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ

  ಮೊಳಕೆಯೊಡೆದ ಧಾನ್ಯಗಳ ಸೇವನೆಯಿಂದ ದೇಹದಲ್ಲಿ ಪಿ ಎಚ್ ಮಟ್ಟ ಸಂತುಲತೆಯಲ್ಲಿರಲು ಸಾಧ್ಯವಾಗುತ್ತದೆ. ಈ ಧಾನ್ಯಗಳು ಕೊಂಚ ಕ್ಷಾರೀಯವಾಗಿದ್ದು ದೇಹದ ಆಮ್ಲೀಯತೆಯನ್ನು ಕಡಿಮೆಗೊಳಿಸಿ ತಟಸ್ಥಗೊಳಿಸುತ್ತದೆ. ಆದ್ದರಿಂದ ನಿಮ್ಮ ನಿತ್ಯದ ಆಹಾರದೊಂದಿಗೆ ಮೊಳಕೆಯೊಡೆದ ಧಾನ್ಯಗಳಿರುವ ಸಾಲಾಡ್ ಗಳನ್ನು ಸೇವಿಸಿ. ಇನ್ನೂ ಉತ್ತಮವೆಂದರೆ ಊಟದ ಬಳಿಕ ಕೊಂಚ ಮೊಳಕೆಯೊಡೆದ ಧಾನ್ಯಗಳನ್ನು ಸೇವಿಸಿವುದು, ಇದರಿಂದಲೂ ಆಮ್ಲೆಯತೆಯಾಗುವುದರಿಂದ ರಕ್ಷಣೆ ಪಡೆಯಬಹುದು.


 • 5. ಹೃದಯದ ಆರೋಗ್ಯಕ್ಕೂ ಉತ್ತಮ

  ಮೊಳಕೆಯೊಡೆದ ಧಾನ್ಯಗಳಲ್ಲಿ ಒಮೆಗಾ ೩ ಕೊಬ್ಬಿನ ಆಮ್ಲಗಳಿದ್ದು ಇವು ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಒಮೆಗಾ ೩ ಕೊಬ್ಬಿನ ಆಮ್ಲಗಳು ಅರಿಯೂತ ನಿರೋಧಕ ಗುಣವನ್ನು ಪಡೆದಿದ್ದು ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳದಂತೆ ತಡೆಯುತ್ತದೆ. ತನ್ಮೂಲಕ ಹೃದಯ ಆರೋಗ್ಯವೂ ಉತ್ತಮವಾಗಿರಲು ಸಾಧ್ಯವಾಗುತ್ತದೆ.


 • 6. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

  ಮೊಳಕೆಯೊಡೆದ ಧಾನ್ಯಗಳಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇದೆ. ಇವು ದೇಹದ ರಕ್ಷಕರಾದ ಬಿಳಿರಕ್ತಕಣಗಳನ್ನು ಹೆಚ್ಚಾಗಿ ಪ್ರಚೋದಿಸುತ್ತವೆ. ದೇಹವನ್ನು ಆವರಿಸುವ ಸೋಂಕುಕಾರಕ ಕಣಗಳನ್ನು ಬಿಳಿರಕ್ತಕಣಗಳು ಎದುರಿಸಿ ಹಿಮ್ಮೆಟ್ಟಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೇ ಮೊಳಕೆಯೊಡೆದ ಧಾನ್ಯಗಳಲ್ಲಿರುವ ವಿಟಮಿನ್ ಎ ಸಹಾ ಉತ್ತಮ ಆಂಟಿ ಆಕ್ಸಿಡೆಂಟ್ ಗುಣ ಹೊಂದಿದ್ದು ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.


 • 7. ಅವಧಿಗೂ ಮುನ್ನ ಆವರಿಸುವ ವೃದ್ದಾಪ್ಯದಿಂದ ರಕ್ಷಿಸುತ್ತದೆ

  ಮೊಳಕೆಯೊಡೆದ ಧಾನ್ಯಗಳಲ್ಲಿ ಆಂಟಿ ಆಕ್ಸಿಡೆಂಟುಗಳು ವಿಫುಲವಾಗಿದ್ದು ಇವು ಅವಧಿಗೂ ಮುನ್ನ ವೃದ್ದಾಪ್ಯ ಆವರಿಸುವುದರಿಂದ ತಡೆಯೊಡ್ಡುತ್ತದೆ. ಅಲ್ಲದೇ ವಿಶೇಷವಾಗಿ ಜೀವಕೋಶಗಳಲ್ಲಿರುವ ಡಿ ಎನ್ ಎ ಗಳು ಹಾನಿ ಗೊಳಗಾಗು ವುದರಿಂದ ತಡೆದು ವೃದ್ದಾಪ್ಯ ಆವರಿಸುವುದರಿಂದ ತಡೆಯುಡ್ಡುತ್ತದೆ. ಅಲ್ಲದೇ, ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳು ಜೀವಕೋಶಗಳಿಗೆ ಹಾನಿ ಎಸಗುವುದರಿಂದಲೂ ತಡೆಯೊಡ್ಡಿ ವೃದ್ದಾಪ್ಯವನ್ನು ದೂರವಿರಿಸುತ್ತದೆ.


 • ಅತ್ಯುತ್ತಮ ಮೊಳಕೆಯೊಡೆದ ಧಾನ್ಯಗಳ ಆಯ್ಕೆ ಹೇಗೆ?

  ಮೊಳಕೆಯೊಡೆಸಿ ಸೇವಿಸಲು ಉತ್ತಮವಾದ ಧಾನ್ಯಗಳೆಂದರೆ ಹುರುಳಿ, ಹೆಸರು ಕಾಳು, ಬೀನ್, ಕಪ್ಪು ಬೀನ್ಸ್, ಅವದೆ ಧಾನ್ಯ, ಬಾರಿ, ಕ್ವಿನೋವಾ, ಕಡ್ಲೆಕಾಳು, ಸೋಯಾ ಅವರೆ ಹಾಗೂ ರಾಗಿ ಉತ್ತಮವಾಗಿವೆ.


 • ಮೊಳಕೆ ಬರಿಸುವುದು ಹೇಗೆ?

  ಮೊದಲು ಕಾಳು ಅಥವಾ ಧಾನ್ಯವನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ತಣ್ಣೀರಿನಲ್ಲಿ ಮುಳುಗಿಸಿಡಿ.ನೀರಿನ ಮಟ್ಟ ಎಷ್ಟಿರಬೇಕು ಎಂದರೆ ಕಾಳುಗಳ ಮಟ್ಟಕ್ಕಿಂತ ಕೊಂಚವೇ ಮೇಲಿರಬೇಕು ಅಷ್ಟೇ, ತೀರಾ ಹೆಚ್ಚಾದರೆ ಕಾಳುಗಳು ಮೊಳಕೆಯೊಡೆಯುವುದಿಲ್ಲ. ನೀರಿನಲ್ಲಿ ತೇಲುವ ಕಾಳುಗಳು ನಿಷ್ಪ್ರಯೋಜಕ ವಾಗಿದ್ದು ಇವುಗಳನ್ನು ನಿವಾರಿಸಿ ಎಸೆದುಬಿಡಿ. ಈಗ ಇಡಿಯ ಪಾತ್ರೆಯನ್ನು ತೆಳ್ಳಗಿನ ಬಟ್ಟೆಯಿಂದ ಆವರಿಸಿ ಸಾಮಾನ್ಯ ತಾಪಮಾನದಲ್ಲಿ ಸುಮಾರು 3-12 ಘಂಟೆ ಕಾಲ ಹಾಗೇ ಬಿಡಿ.ಬಳಿಕ ಪಾತ್ರೆಯನ್ನು ಬಗ್ಗಿಸಿ ಬಟ್ಟೆಯಿಂದ ನೀರನ್ನು ಹೊರಚೆಲ್ಲಿ, ಬಳಿಕ ಒಂದೆರಡು ಬಾರಿ ನೀರನ್ನು ಹಾಕಿ ಕಾಳುಗಳನ್ನು ಸ್ವಚ್ಛಗೊಳಿಸಿ, ಕಾಳು ಮುಳುಗುವಷ್ಟು ನೀರು ಹಾಕಿ ಮೊದಲಿನಂತೆಯೇ ಬಟ್ಟೆಕಟ್ಟಿ ತಣ್ಣನೆಯ ಸ್ಥಳದಲ್ಲಿಡಿ. ದಿನಕ್ಕೆರಡು ಬಾರಿ ನೀರನ್ನು ಹೀಗೆ ಬದಲಿಸಬೇಕು ಒಂದರಿಂದ ಎರಡು ದಿನಗಳಲ್ಲಿಯೇ ಧಾನ್ಯಗಳು ಮೊಳಕೆ ಒಡೆದಿರುತ್ತವೆ.
ಧಾನ್ಯ ಯಾವುದೇ ಆಗಿರಲಿ, ಇವು ಆರೋಗ್ಯಕರವೇ ಆಗಿವೆ, ಆದರೆ ಇವನ್ನು ಸರಿಯಾಗಿ ತಯಾರಿಸಿ ಸೇವಿಸಿದರೆ ಮಾತ್ರ! ಇದಕ್ಕೆ ಕಾರಣವೇನೆಂದರೆ ಪ್ರತಿ ಧಾನ್ಯದಲ್ಲಿಯೂ ಫೈಟಿಕ್ ಆಮ್ಲ ಎಂಬ ರಾಸಾಯನಿಕವಿದೆ, ಇದು ವಾಸ್ತವವಾಗಿ ದೇಹದಿಂದ ಪೌಷ್ಟಿಕಾಂಶವನ್ನು ಕಸಿದುಕೊಳ್ಳುವ ರಾಸಾಯನಿಕವಾಗಿದೆ. ಇದರ ಪರಿಣಾಮವನ್ನು ನಮ್ಮ ಆರೋಗ್ಯಕ್ಕೆ ಪೂರಕವಾಗಿ ಬದಲಿಸಿಕೊಳ್ಳಲು ಒಂದು ಉತ್ತಮ ವಿಧಾನವಿದೆ, ಅದೆಂದರೆ ಧಾನ್ಯಗಳನ್ನು ಮೊಳಕೆ ಬರಿಸಿ ಸೇವಿಸುವುದು. ಬನ್ನಿ, ಕೊಂಚಕಾಲ ನೀರಿನಲ್ಲಿ ನೆನೆಸಿಟ್ಟ ಬಳಿಕ ಮೊಳಕೆಯೊಡೆದು ಕೊಂಚ ಹುಳಿಯಾಗಿರುವ ಧಾನ್ಯಗಳ ಸೇವನೆಯ ಆರೋಗ್ಯಕರ ಪ್ರಯೋಜನಗಳೇನು ಎಂಬುದನ್ನು ಅರಿಯೋಣ:

ಅಧ್ಯಯನಗಳಲ್ಲಿ ಕಂಡುಕೊಂಡಂತೆ ಧಾನ್ಯದಲ್ಲಿರುವ ಹಲವು ಪೋಷಕಾಂಶಗಳನ್ನು ದೇಹ ಹೀರಿಕೊಳ್ಳದೇ ಇರಲು ಈ ಫೈಟಿಕ್ ಆಮ್ಲ ತಡೆಯೊಡ್ಡುತ್ತದೆ. ವಾಸ್ತವವಾಗಿ ಕಾಳನ್ನು ಹಲವು ಕಾಲದವರೆಗೆ (ಅಂದರೆ ನೀರು ಸಿಗುವವರೆಗೂ) ಧಾನ್ಯವನ್ನು ಕಾಪಾಡಿಕೊಂಡಿರಲು ಮತ್ತು ಸೂಕ್ತ ನೆಲೆ ಸಿಕ್ಕಿದ ಬಳಿಕ ಮೊಳಕೆಯೊಡೆದು ಹೊಸ ಸಸ್ಯ ಅಂಕುರಿಸಲು ನಿಸರ್ಗವೇ ಮಾಡಿದ ವ್ಯವಸ್ಥೆ ಇದು! ಹಾಗಾಗಿ ಧಾನ್ಯಗಳನ್ನು ಮೊಳಕೆಯೊಡೆಯುವ ಮುನ್ನವೇ ಸೇವಿಸಿದರೆ ಇದರಲ್ಲಿರುವ ಬಹುತೇಕ ಪೋಷಕಾಂಶಗಳು ನಮಗೆ ಲಭಿಸುವುದಿಲ್ಲ. ನೆನೆಸಿಡುವ ಮೂಲಕ ನೀರಿನ ಸೆಲೆಯ ಸೂಚನೆಯನ್ನು ನೀಡಿ ಮೊಳಕೆಯೊಡೆದು ಧಾನ್ಯದಲ್ಲಿದ್ದ ಪೋಷಕಾಂಶಗಳು ಬಿಡುಗಡೆಗೊಂಡು ಈಗ ಸೇವನೆಗೆ ಲಭ್ಯವಾಗುತ್ತವೆ....

   
 
ಹೆಲ್ತ್