Back
Home » ಬಾಲಿವುಡ್
ಬಾಲಿವುಡ್ ನಟಿ ಆಯೇಷಾ ಟಾಕಿಯಾಗೆ ಬೆದರಿಕೆ: ಪೊಲೀಸ್ ಮೊರೆ ಹೋದ ಪತಿ
Oneindia | 4th Jul, 2018 06:44 PM

'ಟಾರ್ಝನ್.. ದಿ ವಂಡರ್ ಕಾರ್', 'ಸೂಪರ್', 'ಸಲಾಂ ಎ ಇಶ್ಕ್'... ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ಆಯೇಷಾ ಟಾಕಿಯಾಗೆ ಬೆದರಿಕೆ ಕರೆಗಳು ಬರುತ್ತಿವೆ. ಸಾಲದಕ್ಕೆ ಆಯೇಷಾ ಅತ್ತೆ ಹಾಗೂ ನಾದಿನಿಗೂ ಮಾನಸಿಕ ಕಿರುಕುಳ ಉಂಟಾದ ಕಾರಣ ಆಯೇಷಾ ಪತಿ ಫರ್ಹಾನ್ ಅಝ್ಮಿ ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ.

ಬೆದರಿಕೆ ಕರೆ ಬರುತ್ತಿದೆ ಎಂದು ಫರ್ಹಾನ್ ಅಝ್ಮಿ ಮೊದಲು ಡಿ.ಸಿ.ಪಿ ದಾಹಿಯಾಗೆ ದೂರವಾಣಿ ಕರೆ ಮಾಡಿದರು. ಆದ್ರೆ ಡಿಸಿಪಿ ಸಾಹೇಬ್ರು ಫರ್ಹಾನ್ ಅಝ್ಮಿಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಹೀಗಾಗಿ, ಬೇಸರಗೊಂಡ ಫರ್ಹಾನ್ ಅಝ್ಮಿ ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದರು.

ಫರ್ಹಾನ್ ಅಝ್ಮಿ ಮಾಡಿದ ಟ್ವೀಟ್ ನೋಡಿ ಮುಂಬೈ ಪೊಲೀಸರು ಸ್ಪಂದಿಸಿದರು.

ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂಬೈ ಪೊಲೀಸರು ಭರವಸೆ ಕೊಟ್ಮೇಲೆ, ಮುಂಬೈ ಪೊಲೀಸರಿಗೆ ಫರ್ಹಾನ್ ಅಝ್ಮಿ ಧನ್ಯವಾದ ಅರ್ಪಿಸಿದರು.

ಬೆದರಿಕೆ ಕರೆ ಯಾಕೆ: ಹಣದ ವ್ಯವಹಾರದಲ್ಲಿ ತಮಗೆ ಮೋಸ ಆಗಿದೆ ಎಂದು ಫರ್ಹಾನ್ ಅಝ್ಮಿಯ ಮಾಜಿ ಬಿಸಿನೆಸ್ ಪಾರ್ಟ್ನರ್ ಆರೋಪಿಸಿದ್ದರು. ಫರ್ಹಾನ್ ಅಝ್ಮಿ ವಿರುದ್ಧ ಎಫ್.ಐ.ಆರ್ ಕೂಡ ದಾಖಲಾಗಿತ್ತು. ಈ ನಡುವೆ ಫರ್ಹಾನ್ ಅಝ್ಮಿಯ ಮಾಜಿ ಬಿಸಿನೆಸ್ ಪಾರ್ಟ್ನರ್ ಆಯೇಷಾ ಟಾಕಿಯಾ ಅವರ ಫೋನ್ ನಂಬರ್ ಪಡೆದು, ''ನಿನ್ನ ಪತಿಯನ್ನ ಜೈಲಿಗೆ ಕಳುಹಿಸುವೆ'' ಎಂದು ಬೆದರಿಕೆ ಹಾಕುತ್ತಿದ್ದರಂತೆ. ಸಾಲದಕ್ಕೆ ಆಯೇಷಾ ಅತ್ತೆ ಹಾಗೂ ನಾದಿನಿಗೂ ಫೋನ್ ಕರೆ ಬಂದ್ಮೇಲೆ, ಪೊಲೀಸ್ ಮೊರೆ ಹೋದರು ಫರ್ಹಾನ್ ಅಝ್ಮಿ.

   
 
ಹೆಲ್ತ್