Back
Home » ಆರೋಗ್ಯ
ಕಹಿಯಾದರೂ ಮೆಂತೆಯಲ್ಲಿದೆ ಹಲವಾರು ಆರೋಗ್ಯ ಗುಣಗಳು
Boldsky | 4th Jul, 2018 05:47 PM

ಕಹಿಯಾಗಿರುವ ತಿನ್ನಲು ಹೆಚ್ಚಿನವರು ಇಷ್ಟಪಡದೇ ಇರುವ ಸಾಂಬಾರ ಪದಾರ್ಥದಲ್ಲಿ ಮೆಂತೆ ಕಾಳು ಒಂದು. ಇದು ಬಾಯಿರುಚಿಗೆ ಕಹಿಯಾಗಿದ್ದರೂ ಇದು ತುಂಬಾ ಆರೋಗ್ಯಕಾರಿ ಮತ್ತು ಇದನ್ನು ಭಾರತೀಯ ಹಲವಾರು ರೀತಿಯಿಂದ ವಿವಿಧ ರೀತಿಯ ಖಾದ್ಯಗಳಿಗೆ ಬಳಸಿಕೊಳ್ಳುವರು. ಕಹಿಯಾಗಿರುವ ಕಾರಣದಿಂದಾಗಿ ಸ್ವಲ್ಪ ಮಟ್ಟಿಗೆ ಕಡೆಗಣಿ ಸಲ್ಪಟ್ಟಿದ್ದರೂ ಇದರಲ್ಲಿರುವ ಆರೋಗ್ಯ ಗುಣಗಳು ಅದ್ಭುವಾಗಿದೆ. ಮೆಂತೆ ಯ ಗಿಡವನ್ನು ವೈಜ್ಞಾನಿಕವಾಗಿ ಟ್ರೈಗೊನೆಲ್ಲಾ ಫೋನಮ್ ಗ್ರಾಯಿಕಮ್ ಎಂದು ಕರೆಯಲಾಗುತ್ತದೆ.

ಟ್ರೈಗೊನೆಲ್ಲಾ ಎಂದರೆ ಅದರ ಹೂವಿನಿಂದ ಬಂದಿರುವ ಹೆಸರಾಗಿದೆ. ಇದರ ಹೂವು ಒಂದು ತ್ರಿಕೋನ ಆಕೃತಿಯಲ್ಲಿದೆ. ಇದರ ಗಿಡ ಹಾಗೂ ಕಾಳನ್ನು ಖಾದ್ಯಗಳಲ್ಲಿ ಬಳಸಿಕೊಳ್ಳುವರು. ಮಾತ್ರವಲ್ಲದೆ ಇದರ ಕಾಳನ್ನು ನೆನೆಸಿಟ್ಟಾಗ ಅದರಿಂದ ಸಿಗುವಂತಹ ಲಾಭಗಳು ಹಲವಾರು. ರಾತ್ರಿ ಮಲಗುವ ಮೊದಲು ಮೂರು ಚಮಚ ಮೆಂತೆ ಕಾಳನ್ನು ಅರ್ಧ ಲೋಟ ನೀರಿನಲ್ಲಿ ಹಾಕಿ ನೆನೆಸಿಟ್ಟುಕೊಳ್ಳಿ.

ಬೆಳಗ್ಗೆ ಎದ್ದ ಬಳಿಕ ಈ ಕಾಳುಗಳನ್ನು ನೀವು ಜಗಿಯಿರಿ ಅಥವಾ ನೀರಿನೊಂದಿಗೆ ಕುಡಿಯಿರಿ. ನೆನೆಸಿಟ್ಟ ನೀರನ್ನು ನೀವು ಚೆಲ್ಲಬೇಡಿ. ನೀರನ್ನು ಕುಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ. ರಾತ್ರಿ ನಿಮಗೆ ಮೆಂತೆ ಕಾಳುಗಳನ್ನು ನೆನೆಸಿಡಲು ನೆನಪಿಲ್ಲವೆಂದಾದರೆ ಆಗ ನೀವು ಬೆಳಗ್ಗೆ ಎದ್ದ ಬಳಿಕ ಕುದಿಯು ನೀರಿಗೆ ಅದನ್ನು ಹಾಕಿ ಐದು ನಿಮಿಷ ಬಳಿಕ ತೆಗೆದು ಸೇವಿಸಿ. ಮೆಂತೆ ಕಾಳುಗಳನ್ನು ನೆನೆಸಲು ಹಾಕಿದಾಗ ಅದು ತುಂಬಾ ಮೆತ್ತಗೆ ಆಗುವುದು ಮತ್ತು ಜೀರ್ಣವಾಗಲು ಸುಲಭ. ಇದರಲ್ಲಿ ಇರುವಂತಹ ಕೆಲವೊಂದು ಲಾಭಗಳನ್ನು ನೀವು ತಿಳಿಯಿರಿ.

ಜೀರ್ಣಕ್ರಿಯೆ

ನಿಮಗೆ ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಆಗ ಮೆಂತೆ ಕಾಳುಗಳು ಇದಕ್ಕೆ ರಾಮಬಾಣ. ಮೆಂತೆ ಕಾಳುಗಳು ಜೀರ್ಣಕ್ರಿಯೆಗೆ ಆಲ್ ರೌಂಡ್ ಪರಿಹಾರ ನೀಡುವುದು. ಇದು ನಿಮ್ಮ ಹಸಿವು ಹೆಚ್ಚಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಬಲಗೊಳಿಸುವುದು. ಇದರಲ್ಲಿರುವ ನಾರಿನಾಂಶವು ಮಲಬದ್ಧತೆ ನಿವಾರಣೆ ಮಾಡುವುದು ಮತ್ತು ಭೇದಿಗೂ ಇದು ಒಳ್ಳೆಯದು. ಯಾಕೆಂದರೆ ಇದರ ಹೊಟ್ಟು ಮಲದಲ್ಲಿರುವ ಹೆಚ್ಚುವರಿ ನೀರು ತೆಗೆಯುವುದು. ಕರುಳಿನ ಗೋಡೆಗಳಲ್ಲಿ ನಾರಿನಾಂಶವು ರಕ್ಷಣಾತ್ಮಕವಾದ ಪದರ ನಿರ್ಮಾಣ ಮಾಡುವುದು. ಇದರು ಅಲ್ಸರ್, ಉರಿಯೂತ ಮತ್ತು ಎದೆಯುರಿ ಸಮಸ್ಯೆ ನಿವಾರಣೆ ಮಾಡುವುದು.

ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ

ಮೆಂತೆ ಕಾಳುಗಳಲ್ಲಿನ ಮತ್ತೊಂದು ಪ್ರಮುಖ ಆರೋಗ್ಯ ಗುಣವೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು. ಮಧ್ಯಮ ಹಂತದ ಮಧುಮೇಹ ಇರುವವರಿಗೆ ಇದು ತುಂಬಾ ಪರಿಣಾಮಕಾರಿ. ಇದು ಇನ್ಸುಲಿನ್ ಪ್ರತಿರೋಧಕವಾಗಿ ಕೆಲಸ ಮಾಡುವುದು ಮತ್ತು ಇತರ ಕೆಲವೊಂದು ಆಹಾರದ ಜತೆಗೆ ಸೇವನೆ ಮಾಡಿದರೆ ಪರಿಣಾಮಕಾರಿ. ಇದರ ಸೇವನೆ ಬಗ್ಗೆ ವೈದ್ಯರ ಸಲಹೆ ಪಡೆಯಿರಿ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಮೆಂತೆ ಕಾಳಿನಲ್ಲಿ ಇರುವಂತಹ ಚೊಲೈನ್ ಎನ್ನುವ ಅಂಶವು ಅಪಧಮನಿಗಳಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ತೆಗೆಯುವುದು.

ತೂಕ ಕಳೆದುಕೊಳ್ಳಲು

ಜೀರ್ಣಕ್ರಿಯೆ ಉತ್ತಮಪಡಿಸುವುದು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಕಾರಣದಿಂದಾಗಿ ನಿಮ್ಮ ದೇಹದ ಹೆಚ್ಚುವರಿ ತೂಕ ಇಳಿಸುವುದು. ಮೆಂತೆ ಕಾಳಿನಲ್ಲಿ ಉಷ್ಣ ಗುಣವಿದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದರಿಂದ ತೂಕ ಕಾಪಾಡಲು ಮತ್ತು ಕಳೆದುಕೊಳ್ಳಲು ಇದು ಸಹಕಾರಿ.

ವಯಸ್ಸಾಗುವ ಲಕ್ಷಣಗಳು

ಮೆಂತೆ ಕಾಳುಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಕೋಶಗಳು ಮತ್ತು ಪದರಗಳು ಆಕ್ಸಿಡೇಟಿವ್ ನಿಂದ ಹಾನಿಯಾಗದಂತೆ ತಡೆಯುತ್ತದೆ ಮತ್ತು ವಯಸ್ಸಾಗುವ ಲಕ್ಷಣಗಳನ್ನು ಮುಂದೂಡುತ್ತದೆ.

ಸಂತಾನೋತ್ಪತ್ತಿ ಆರೋಗ್ಯ

ಮೆಂತೆ ಕಾಳು ಪುರುಷರು ಹಾಗೂ ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸುವುದು ಎಂದು ಹೇಳಲಾಗುತ್ತದೆ. ಪುರುಷರಲ್ಲಿ ಕಾಣಿಸಿಕೊಳ್ಳುವ ಶೀಘ್ರ ವೀರ್ಯ ಸ್ಖಲನ ಮತ್ತು ಲೈಂಗಿಕಾಸಕ್ತಿ ಕಡಿಮೆ ಇರುವುದಕ್ಕೆ ಇದನ್ನು ಬಳಸಬಹುದು. ಮಹಿಳೆಯರಿಗೆ ಔಷಧಿ ಕಂಪೆನಿಗಳು ಮೆಂತೆ ಕಾಳನ್ನು ಗರ್ಭನಿರೋಧಕದಲ್ಲಿ ಬಳಸುತ್ತಿದೆ. ಮಹಿಳೆಯ ದೇಹದಲ್ಲಿ ಇರುವಂತಹ ಈಸ್ಟ್ರೋಜನ್ ನಂತೆಯೇ ಇರುವ ಡೈಸ್ಜೆಜಿನ್ ಎನ್ನುವ ಅಂಶವು ಮೆಂತೆ ಕಾಳಿನಲ್ಲಿದ್ದು, ಇದು ಸ್ತನಗಳನ್ನು ಹಿಗ್ಗಿಸಲು ನೆರವಾಗುವುದು ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ಸಾಕ್ಷ್ಯಗಳಿಲ್ಲ. ಹಾಲನ್ನು ಉತ್ಪತ್ತಿ ಮಾಡಲು ಬಾಣಂತಿ ಮಹಿಳೆಯರಿಗೆ ಮೆಂತೆ ನೀಡಲಾಗುತ್ತದೆ. ನೆನೆಸಲು ಹಾಕಿರುವ ಮೆಂತೆ ಯನ್ನು ಸಕ್ಕರೆ ಮತ್ತು ಹಾಲಿನೊಂದಿಗೆ ಸೇವನೆ ಮಾಡಿದರೆ ಆಗ ಋತುಚಕ್ರದ ಮೊದಲು ಆಗುವಂತಹ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡುವುದು ಎಂದು ಆಯುರ್ವೇದವು ಹೇಳುತ್ತದೆ. ಋತುಚಕ್ರದ ವೇಲೆ ಇದು ರಕ್ತ ಪರಿಚಲನೆ ಹೆಚ್ಚಿಸುವುದು ಮತ್ತು ಮೂತ್ರನಾಳದ ಸಮಸ್ಯೆ ಬಗೆಹರಿಸುವುದು.

ತ್ವಚೆ ಮತ್ತು ಕೂದಲಿಗೆ

ನೆನೆಸಿಟ್ಟ ಮೆಂತೆ ಕಾಳುಗಳನ್ನು ರುಬ್ಬಿಕೊಂಡು ಅದರ ಪೇಸ್ಟ್ ನ್ನು ಕೂದಲು ಹಾಗೂ ಮುಖಕ್ಕೆ ಹಚ್ಚಿಕೊಳ್ಳಬೇಕು. ಮೆಂತೆ ಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ತಲೆಬುರುಡೆ ಶುದ್ಧೀಕರಿಸಿ, ಸ್ವಚ್ಛ ಚರ್ಮ ನೀಡುವುದು. ಊತ, ಬಿಸಿಯಿಂದ ಆಗಿರುವ ಕಲೆಗಳು, ಚರ್ಮದ ಅಲ್ಸರ್, ಬೊಕ್ಕೆಗಳು ಮತ್ತು ಉರಿಯೂತದ ಸಮಸ್ಯೆಗಳಿಗೆ ಇದನ್ನು ಕ್ರೀಮ್ ನಂತೆ ಹಚ್ಚಿಕೊಂಡು ಬ್ಯಾಂಡೇಜ್ ಹಾಕಿ. ಮೊಡವೆಗಳ ನಿವಾರಣೆಗೂ ಇದು ತುಂಬಾ ಸಹಕಾರಿ. ಚರ್ಮದ ರಂಧ್ರಗಳು ಎಣ್ಣೆ ಮತ್ತು ಧೂಳಿನಿಂದ ತುಂಬಿರುವಾಗ ಮೊಡವೆಗಳು ಮೂಡುವುದು. ಮೆಂತೆ ಕಾಳುಗಳಲ್ಲಿ ಸ್ಯಾಲಿಸಿಲಿಕ್ ಆಮ್ಲವಿದೆ ಮತ್ತು ಇದು ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ಶಮನಕಾರಿ ಗುಣದಿಂದಾಗಿ ಸತ್ತ ಚರ್ಮವನ್ನು ತೆಗೆದು ಯಾವುದೇ ಹಾನಿಉಂಟು ಮಾಡದು. ಮೆಂತೆ ಯ ಪೇಸ್ಟ್ ನ್ನು ಸೇವಿಸಿದಾಗ ಅದು ಕೂದಲಿಗೆ ತುಂಬಾ ಪರಿಣಾಮಕಾರಿ ಮೆಂತೆ ಪೇಸ್ಟ್ ನ ಜತೆಗೆ ಶಿಕಾಕಾಯಿ ಹುಡಿ ಹಾಕಿ ತಲೆಬುರುಡೆಗೆ ಹಚ್ಚಿಕೊಂಡರೆ ಇದು ತುಂಬಾ ಪರಿಣಾಮಕಾರಿ. ಇದು ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ನಿವಾರಣೆ ಮಾಡುವುದು. ಇದನ್ನು ಹೇರ್ ಮಾಸ್ಕ್ ಆಗಿ ಬಳಸಿದರೆ ತುಂಬಾ ಲಾಭವಿದೆ. ಮೆಂತೆ ಕಾಳುಗಳು ನಿಮ್ಮ ದೇಹವನ್ನು ಒಳಗಿನಿಂದ ಬಲಿಷ್ಠಗೊಳಿಸಿ ಹೊರಗಿನಿಂದ ಸೌಂದರ್ಯ ನೀಡುವುದು.

ಇತರ ಲಾಭಗಳು

ವಯಸ್ಸಾಗುವ ಲಕ್ಷಣಗಳನ್ನು ವಿಳಂಬಗೊಳಿಸುವ ಮೆಂತೆ ಕಾಳು ನೆನೆಪಿನ ಶಕ್ತಿ ಹೆಚ್ಚಿಸಲು ಪರಿಣಾಮಕಾರಿ. ಇದು ಒತ್ತಡ ಮತ್ತು ಆತಂಕ ಕಡಿಮೆ ಮಾಡುವುದು. ಇದನ್ನು ಜೇನುತುಪ್ಪ, ಪುದೀನಾ, ತುಳಸಿ ಮತ್ತು ಲಿಂಬೆರಸದೊಂದಿಗೆ ಚಹಾದಂತೆ ಸೇವನೆ ಮಾಡಬೇಕು. ಇದು ಊತ ಮತ್ತು ಗಂಟಲಿನ ಕಿರಿಕಿರಿಗೆ ಒಳ್ಳೆಯ ಔಷಧಿ.

ಸೂಚನೆ: ಮೆಂತೆ ಕಾಳಿನಲ್ಲಿ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದೆ. ಇದು ನೀರನ್ನು ಹೀರಿಕೊಳ್ಳುವ ಗುಣ ಹೊಂದಿರುವ ಕಾರಣದಿಂದಾಗಿ ನೀವು ಹೆಚ್ಚಿನ ನೀರು ಕುಡಿಯಬೇಕು. ಇದು ಕಬ್ಬಿನಾಂಶ ಹೀರಿಕೊಳ್ಳುವ ಗುಣ ಹೊಂದಿದೆ. ಇದರಿಂದ ರಕ್ತಹೀನತೆ ಸಮಸ್ಯೆ ಇರುವವರು ಇದರ ಸೇವನೆಯಿಂದ ದೂರವಿರಿ.

   
 
ಹೆಲ್ತ್