Back
Home » ಬಾಲಿವುಡ್
ಛೇ.. ಕತ್ರಿನಾ ಬಗ್ಗೆ ಅರ್ಜುನ್ ಕಪೂರ್ ಹೀಗಾ ಕಾಮೆಂಟ್ ಮಾಡೋದು.?!
Oneindia | 5th Jul, 2018 05:35 PM
 • ಅರ್ಜುನ್ ಕಪೂರ್ ಮಾಡಿದ ಕಾಮೆಂಟ್ ಏನು.?

  ವಿಡಿಯೋ ನೋಡಿ ''ನಿಮ್ಮ ತಲೆಯಲ್ಲಿ ಹೊಟ್ಟು ಇದೆ'' ಎಂದು ಅರ್ಜುನ್ ಕಪೂರ್ ಕಾಮೆಂಟ್ ಮಾಡಿದರು.

  ಸಲ್ಲು ಮಾಡಿದ ಕೆಲಸದಿಂದ ಕತ್ರಿನಾ ಬಗ್ಗೆ ಗುಲ್ಲೆಬ್ಬಿದೆ ಹೊಸ ಸುದ್ದಿ


 • ಅರ್ಜುನ್ ಕಪೂರ್ ಹೀಗೆ ಕಾಮೆಂಟ್ ಮಾಡಿದ್ಯಾಕೆ.?

  ಕಾಫಿ ವಿತ್ ಕರಣ್ ಐದನೇ ಆವೃತ್ತಿಯಲ್ಲಿ ಸ್ವತಃ ಕತ್ರಿನಾ ಕೈಫ್ ಬಾಯ್ಬಿಟ್ಟ ಹಾಗೆ, 'ಐ ಹೇಟ್ ಕತ್ರಿನಾ ಕ್ಲಬ್' ಶುರು ಮಾಡಿದವರು ವರುಣ್ ಧವನ್ ಹಾಗೂ ಅರ್ಜುನ್ ಕಪೂರ್. ಈಗ ಅರ್ಜುನ್ ಕಪೂರ್ ಮಾಡಿರುವ ಕಾಮೆಂಟ್ ನೋಡಿದ್ಮೇಲೆ, 'ಐ ಹೇಟ್ ಕತ್ರಿನಾ ಕ್ಲಬ್'ಗೆ ಮರಳಿ ಜೀವ ಬಂದಿರುವ ಹಾಗೆ ಕಾಣುತ್ತಿದೆ.


 • 'ಐ ಹೇಟ್ ಕತ್ರಿನಾ ಕ್ಲಬ್' ಶುರುವಾಗಿದ್ದು ಯಾಕೆ.?

  ''ಯಾವುದೋ ಒಂದು ಕಾರಣಕ್ಕಾಗಿ ವರುಣ್ ಹಾಗೂ ಅರ್ಜುನ್ 'ಐ ಹೇಟ್ ಕತ್ರಿನಾ ಕ್ಲಬ್' ಶುರು ಮಾಡಿದರು. ವರುಣ್ ಶುರು ಮಾಡಿದ್ದು ಯಾಕೆ ಅಂತ ನನಗೆ ಗೊತ್ತು. ಆದ್ರೆ, ಅದಕ್ಕೆ ಅರ್ಜುನ್ ಕಪೂರ್ ಕೈಜೋಡಿಸಿದ್ದು ಯಾಕೆ ಅನ್ನೋದೇ ಗೊತ್ತಾಗಲಿಲ್ಲ'' ಎಂದು ಕಾಫಿ ವಿತ್ ಕರಣ್ ಐದನೇ ಆವೃತ್ತಿಯಲ್ಲಿ ಕತ್ರಿನಾ ಹೇಳಿದ್ದರು. ಈಗ ನೋಡಿದ್ರೆ, ವರುಣ್ ಸೈಲೆಂಟ್ ಆಗಿದ್ದಾರೆ. ಆದ್ರೆ, ಅರ್ಜುನ್ ಕಪೂರ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಕತ್ರಿನಾ ಕಾಲೆಳೆಯುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಗೆ ಕಾಲಿಟ್ಟಾಗಿನಿಂದಲೂ ಬಾಲಿವುಡ್ ನಟಿ ಕತ್ರಿನಾ ಕೈಫ್ ಪ್ರತಿದಿನ ಒಂದಲ್ಲ ಒಂದು ಫೋಟೋ ಅಥವಾ ವಿಡಿಯೋನ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಗಟ್ಟಲೆ ಫಾಲೋವರ್ಸ್ ಹೊಂದಿರುವ ಬಾಲಿವುಡ್ ಬೆಳ್ಳಿ ಬೊಂಬೆ ಕತ್ರಿನಾ ನಿನ್ನೆಯಷ್ಟೇ ಒಂದು ವಿಡಿಯೋನ ಅಭಿಮಾನಿಗಳಿಗಾಗಿ ಶೇರ್ ಮಾಡಿದ್ದರು.

ಆ ವಿಡಿಯೋ ನೋಡಿ ಎಲ್ಲರೂ ಕಣ್ಣರಳಿಸುತ್ತಿದ್ದರೆ, ಅರ್ಜುನ್ ಕಪೂರ್ ಮಾತ್ರ ಕತ್ರಿನಾ ಕೈಫ್ ಕಾಲೆಳೆದಿದ್ದಾರೆ. ಅರೇ.. ಅರ್ಜುನ್ ಕಪೂರ್ ಯಾಕ್ಹಾಗ್ ಮಾಡಿದ್ರು ಅಂತೀರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

   
 
ಹೆಲ್ತ್