Back
Home » ಆರೋಗ್ಯ
ಆರೋಗ್ಯ ಟಿಪ್ಸ್: ಸೀಗಡಿ ತಿನ್ನಿ, ತೂಕ ಇಳಿಸಿಕೊಳ್ಳಿ!
Boldsky | 6th Jul, 2018 08:05 AM
 • ಸೀಗಡಿಯಲ್ಲಿ ಕೊಬ್ಬು ಕಡಿಮೆ

  ಸೀಗಡಿಯಲ್ಲಿ ಕೊಬ್ಬು ತುಂಬಾ ಕಡಿಮೆ ಇದೆ. ಇದರಲ್ಲಿ ಇರುವುದು ಕೇವಲ 0.16 ಕೊಬ್ಬು ಮಾತ್ರ. ಸೀಗಡಿಯು ಅಪರ್ಯಾಪ್ತ ಕೊಬ್ಬಿನ ಸಮೃದ್ಧ ಮೂಲವಾಗಿದೆ. ಇದು ಸಂಪೂರ್ಣ ಆರೋಗ್ಯ ಕಾಪಾಡುವುದು. ನಿಮಗೆ ತೂಕ ಕಳೆದುಕೊಳ್ಳಬೇಕೆಂದಿದ್ದರೆ ಆಗ ನೀವು ಕೊಬ್ಬು ಕಡಿಮೆ ಇರುವ ಸೀಗಡಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದರೊಂದಿಗೆ ನಿವು ಕಡಿಮೆ ಕ್ಯಾಲರಿ ಇರುವ ತರಕಾರಿಗಳಾದ ಶತಾವರಿ ಮತ್ತು ಗ್ರಿಲ್ಡ್ ಬೀನ್ಸ್ ಸೇವಿಸಬಹುದು.


 • ಸೀಗಡಿಯಲ್ಲಿ ಪ್ರೋಟೀನ್ ಅಧಿಕ

  ಎರಡು ಔನ್ಸ್ ಸೀಗಡಿಯಲ್ಲಿ 10 ಗ್ರಾಂ ಪ್ರೋಟೀನ್ ಇದೆ. ಪ್ರೋಟೀನ್ ಅಧಿಕವಾಗಿರುವ ಆಹಾರ ಸೇವನೆಯಿಂದ ತೂಕ ಕಳೆದುಕೊಳ್ಳಲು ಪರಿಣಾಮಕಾರಿ ಮತ್ತು ಇದು ತೂಕ ಸಮತೋಲನದಲ್ಲಿಡಲು ನೆರವಾಗುವುದು. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಬಿಡುಗಡೆಯಾಗಿರುವ ಅಧ್ಯಯನದ ಪ್ರಕಾರ ಪ್ರೋಟೀನ್ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವುದು, ಇದರಿಂದ ಹೆಚ್ಚಿನ ಕ್ಯಾಲರಿ ದಹಿಸಿ, ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಆಗುವುದು. ಸೀಗಡಿಯು ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ಕೆಲವೊಂದು ಹಾರ್ಮೋನುಗಳಾ ಜಿಎಲ್ ಪಿ-1, ಪಿವೈವೈ ಮತ್ತು ಸಿಸಿಕೆಯು ಹಸಿವನ್ನು ಕುಗ್ಗಿಸುವುದು. ಇದೇ ವೇಳೆ ಹಸಿವು ಉಂಟು ಮಾಡುವ ಹಾರ್ಮೋನು ಗ್ರೇಲಿನ ಮಟ್ಟ ತಗ್ಗಿಸುವುದು. ಇದರಿಂದ ನೀವು ಅನಾರೋಗ್ಯಕರ ಆಹಾರ ತಿನ್ನುವುದು ಕಡಿಮೆಯಾಗುವುದು.


 • ಸೀಗಡಿಯಲ್ಲಿ ಒಮೆಗಾ3 ಕೊಬ್ಬಿನಾಮ್ಲವಿದೆ

  ತೂಕ ಇಳಿಸಲು ಸೀಗಡಿಯು ಒಳ್ಳೆಯದೇ ಎನ್ನುವ ಪ್ರಶ್ನೆ ಬರುವುದು. ಸೀಗಡಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲವಿದೆ. ಒಮೆಗಾ 3 ಕೊಬ್ಬಿನಾಮ್ಲವು ಬಹುಪರ್ಯಾಪ್ತ ಕೊಬ್ಬಿನಾಮ್ಲವಾಗಿದ್ದು, ಇದು ಉರಿಯೂತ ಮತ್ತು ನಿಯಮಿತವಾಗಿ ಸೇವನೆ ಮಾಡಿದಾಗ ದೇಹದ ಕೆಳಭಾಗದ ಕೊಬ್ಬನ್ನು ಕಡಿಮೆ ಮಾಡುವುದು. ಅಧ್ಯಯನಗಳ ಪ್ರಕಾರ ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿನ ಕೊಬ್ಬನ್ನು ಕರಗಿಸುವುದು ಮತ್ತು ಕೊಬ್ಬಿನ ಕೋಶಗಳು ಸಾಯಲು ಪ್ರೋತ್ಸಾಹಿಸುವುದು.


 • ಸೀಗಡಿಯಲ್ಲಿರುವ ಪೋಷಕಾಂಶಗಳು

  ಸೀಗಡಿಯಲ್ಲಿ ಅಪರ್ಯಾಪ್ತ ಕೊಬ್ಬಿದ್ದು, ಇದು ದೇಹದಲ್ಲಿ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವುದು. ಇದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳಾದ ಕ್ಯಾಲ್ಸಿಯಂ ಫೋಸ್ಪರಸ್, ಪೊಟಾಶಿಯಂ, ವಿಟಮಿನ್ ಎ, ವಿಟಮಿನ್ ಇ ಇತ್ಯಾದಿಗಳು ಇವೆ. ಸೀಗಡಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಬಿ12, ಬಿ6 ಮತ್ತು ನಿಯಾಸಿನ್ ಇದ್ದು, ದೇಹವು ಶಕ್ತಿ ಉತ್ಪತ್ತಿ ಮಾಡಲು, ಕೆಂಪುರಕ್ತದ ಕಣಗಳ ಉತ್ಪತ್ತಿ ಮತ್ತು ಸಾಮಾನ್ಯ ನರಗಳ ಕಾರ್ಯಕ್ಕೆ ಇದು ನೆರವಾಗುವುದು. ಈ ಸಮುದ್ರ ಖಾದ್ಯದಲ್ಲಿ ಕಬ್ಬಿನಾಂಶವಿದೆ. ಇದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳು ಬಿಡುಗಡೆಯಾಗಲು ನೆರವಾಗುವುದು. ಸೀಗಡಿಯಲ್ಲಿರುವಂತಹ ಇತರ ಕೆಲವು ಖನಿಜಾಂಶಗಳೆಂದರೆ ಸತು, ಸೆಲೆನಿಯಂ, ತಾಮ್ರ ಮತ್ತು ಮೆಗ್ನಿಶಿಯಂ ಇದೆ. ಸತು ಮತ್ತು ಸೆಲೆನಿಯಂ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುವುದು. ತಾಮ್ರ, ಫೋಸ್ಪರಸ್ ಮತ್ತು ಮೆಗ್ನಿಶಿಯಂ ಚಯಾಪಚಯಾ ಕ್ರಿಯೆ ಮತ್ತು ಮೂಳೆಗಳು ಬಲಿಷ್ಠವಾಗಿರಲು ನೆರವಾಗುವುದು. ಸೀಗಡಿಯಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಮತ್ತು ಸೋಡಿಯಂ ಕೂಡ ಇದೆ. ಸೋಡಿಯಂ ಅಧಿಕವಾಗಿರುವ ಕಾರಣದಿಂದಾಗಿ ಅಸ್ಥಿರಂಧ್ರತೆ, ಹೃದಯಕಾಯಿಲೆ ಮತ್ತು ಅಧಿಕರಕ್ತದೊತ್ತಡ ಸಮಸ್ಯೆ ಕಾಣಿಸಬಹುದು.


 • ಸೀಗಡಿಯನ್ನು ಅಡುಗೆ ಮಾಡಿಕೊಂಡು ತಿನ್ನುವ ವಿಧಾನ

  ಸೀಗಡಿಯನ್ನು ಸುಟ್ಟು(ಗ್ರಿಲ್), ಬೇಯಿಸಿ ಮತ್ತು ಎಣ್ಣೆ ಕಡಿಮೆ ಬಳಸಿ ಫ್ರೈ ಮಾಡಿ ತಿನ್ನಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೀಗಡಿಯು ತಾಜಾ ಮತ್ತು ಸ್ವಚ್ಛ ಮತ್ತು ತೇವಾಂಶದಿಂದ ಇರಬೇಕು. ಒಣಗಿರುವಂತ ಮತ್ತು ಅದರ ಸಿಪ್ಪೆಯು ಹರಿದುಹೋಗಿರುವ ಸೀಗಡಿ ಬಳಸಬೇಡಿ. ಸಿಪ್ಪೆ ಇರುವಂತಹ ಸೀಗಡಿ ಬಳಸಿ ಮತ್ತು ಅಡುಗೆ ಮಾಡುವ ಮೊದಲು ಇದನ್ನು ತೆಗೆಯಿರಿ.


 • ತೂಕ ಕಳೆದುಕೊಳ್ಳಲು ವಿಭಿನ್ನವಾಗಿ ಸಿಗಡಿಯ ಅಡುಗೆ ಮಾಡುವುದು ಹೇಗೆ?

  *ಪೋಚಿಂಗ್(ಬೇಟೆಯಾಡಿ) ಈ ವಿಧಾನದ ಮೂಲಕ ತುಂಬಾ ಕಡಿಮೆ ಬೆಂಕಿಯಲ್ಲಿ ನೀರಿನಲ್ಲಿ ಸೀಗಡಿಯನ್ನು ನಿಧಾನವಾಗಿ ಬೇಯಿಸಬೇಕು ಮತ್ತು ಅದು ಅತಿಯಾಗಿ ಬೇಯುವುದನ್ನು ತಡೆಯಬೇಕು. ತಾಜಾ ಗಿಡಮೂಲಿಕೆ, ಲಿಂಬೆರಸ ಮತ್ತು ಕತ್ತರಿಸಿಕೊಂಡಿರುವ ಈರುಳ್ಳಿಯು ಸೀಗಡಿಗೆ ಒಳ್ಳೆಯ ಸುವಾಸನೆ ನೀಡುವುದು.
  *ಆವಿಯಲ್ಲಿ ಬೇಯಿಸುವುದು: ಆವಿಯಲ್ಲಿ ಬೇಯಿಸುವುದು ಸೀಗಡಿಗೆ ಹೇಳಿ ಮಾಡಿರುವಂತಹ ವಿಧಾನ. ಪಾರ್ಸ್ಲಿಯಂತಹ ಗಿಡಮೂಲಿಕೆಗಳಲ್ಲಿ ಕೊಚ್ಚಿಕೊಂಡಿರುವ ಈರುಳ್ಳಿ ಹಾಕಿಕೊಂಡು ಅಲ್ಯೂಮಿನಿಯಂ ಹಾಳೆಯಲ್ಲಿ ಸುತ್ತಿಟ್ಟು ಸುಮಾರು 300ರಲ್ಲಿ 5ರಿಂದ 10 ನಿಮಿಷ ಕಾಲ ಓವನ್ ನಲ್ಲಿ ಇಡಬೇಕು. ಇನ್ನೊಂದು ವಿಧವೆಂದರೆ ಸೀಗಡಿ, ಲಿಂಬೆರಸ ಮತ್ತು ಒಣಗಿರುವ ಈರುಳ್ಳಿಯನ್ನು ಮೈಕ್ರೋವೇವ್ ಸ್ಟೀಮರ್ ನಲ್ಲಿ ಅಥವಾ ಮೈಕ್ರೋವೇವ್ ಸೇಫ್ ಬೌಲ್ ನಲ್ಲಿ ಇಡಬೇಕು ಮತ್ತು ಸೀಗಡಿಯು ಗುಲಾಬಿ ಬಣ್ಣಕ್ಕೆ ತಿರುಗುವ ತನಕ ಬೇಯಿಸಿ.
  *ತವಾದಲ್ಲಿ: ಸೀಗಡಿಯನ್ನು ಎಣ್ಣೆಯಲ್ಲಿ ಬೇಯಿಸಿದರೆ ಆಗ ಹೆಚ್ಚಿನ ರುಚಿ ಬರುವುದು. ಕಡಿಮೆ ಬೆಂಕಿಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಮತ್ತು ಇದಕ್ಕೆ ಸೀಗಡಿ ಹಾಕಿ. ಇದು ಗಟ್ಟಿಯಾಗುವ ತನಕ ಬೇಯಿಸಿ ಮತ್ತು ಬಳಿಕ ಬೆಂಕಿಯಿಂದ ತೆಗೆಯಿರಿ.
  *ಹುರಿಯುವುದು: ಹಿಟ್ಟು, ತಾಜಾ ಗಿಡಮೂಲಿಕೆಗಳು ಮತ್ತು ಮಸಾಲೆ ಹಾಕಿಕೊಂಡು ಅದನ್ನು ಕಲಸಿಕೊಂಡು ಸೀಗಡಿ ಹಾಕಿ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ಇದು ನೀವು ಮನೆಯಲ್ಲಿ ತಯಾರಿಸಬಹುದಾದ ಸುಲಭ ವಿಧಾನ.

  ಆಹಾ ಅದೇನು ರುಚಿ, ಮಸಾಲೆಯುಕ್ತ ಸೀಗಡಿ ರೆಸಿಪಿ!
ಪ್ರಕೃತಿದತ್ತವಾಗಿ ಸಿಗುವಂತಹ ಪ್ರತಿಯೊಂದು ಆಹಾರವು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಮನುಷ್ಯರು ತಮ್ಮ ದುರ್ಬುದ್ಧಿಯಿಂದಾಗಿ ಇಂದು ನೈಸರ್ಗಿಕವಾಗಿ ಸಿಗುವ ಆಹಾರಗಳಿಗೂ ಕಲಬೆರಕೆ ಆರಂಭಿಸಿದ್ದಾರೆ. ಅದೇನೇ ಇರಲಿ, ನಮಗೆ ಪ್ರಮುಖವಾಗಿ ಸಮುದ್ರದಲ್ಲಿ ಸಿಗುವಂತಹ ಮೀನು, ಸೀಗಡಿ, ಏಡಿ ಇತ್ಯಾದಿಗಳಲ್ಲಿ ಪ್ರಮುಖವಾದ ಪೋಷಕಾಂಶಗಳು ಇವೆ.

ಇವುಗಳ ಸೇವನೆಯಿಂದ ನಮ್ಮ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಸಿಗುವುದು. ಇದರಲ್ಲಿ ಪ್ರಮುಖವಾಗಿ ಸಿಗಡಿಯು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಮತ್ತು ಇದು ತೂಕ ಕಳೆದುಕೊಳ್ಳಲು ಸಹಕಾರಿ. ತುಂಬಾ ರುಚಿಯಾಗಿರುವುದನ್ನು ತಿಂದು ತೂಕ ಕಳೆದುಕೊಂಡರೆ ಅದಕ್ಕಿಂತ ದೊಡ್ಡ ಮದ್ದು ಇನ್ನೇನು ಬೇಕು ಹೇಳಿ? ಸೀಗಡಿಯಲ್ಲಿ ಒಮೆಗಾ3 ಕೊಬ್ಬಿನಾಮ್ಲವಿದೆ ಮತ್ತು ತೂಕ ಕಳೆದುಕೊಳ್ಳಲು ಬೇಕಾಗುವ ಪ್ರೋಟೀನ್ ಇದೆ.

   
 
ಹೆಲ್ತ್