Back
Home » ಆರೋಗ್ಯ
ಭುಜ ನೋವೇ? ಇಲ್ಲಿದೆ ನೋಡಿ ಸರಳ ಪರಿಹಾರಗಳು
Boldsky | 9th Jul, 2018 11:23 AM

ಭುಜದ ನೋವಿಗೆ ಬಿದ್ದು ಆದ ಪೆಟ್ಟು ಅಥವಾ ಯಾವುದೋ ಅಪಘಾತ ಕಾರಣವಾಗಿರಬಹುದು. ಕೆಲವೊಮ್ಮೆ ಸಂಧಿವಾರ ನೊದಲಾದ ಕಾರಣಗಳಿಂದಲೂ ಭುಜದ ನೋವು ಆವರಿಸಬಹುದು. ಇಂದಿನ ಲೇಖನದಲ್ಲಿ ಭುಜನೋವಿನಿಂದ ಬಳಲುತ್ತಿರುವವರು ಮನೆಯಲ್ಲಿಯೇ ಹೇಗೆ ಚಿಕಿತ್ಸೆ ಮಾಡಿಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ.

ಭುಜದ ನೋವಿಗೆ ಭುಜದ ಸ್ನಾಯುಗಳು, ಮೂಳೆಗಳು ಹಾಗೂ ಭುಜವನ್ನು ಮೆದುಳಿನೊಂದಿಗೆ ಸಂಪರ್ಕಿಸುವ ನರಗಳು, ಇವುಗಳಲ್ಲಿ ಯಾವುದೊಂದಕ್ಕೆ ಆಗಿರುವ ಘಾಸಿ ಕಾರಣವಾಗಿರಬಹುದು. ಭುಜದ ನೋವಿಗೆ ಅತಿ ಸಾಮಾನ್ಯವಾದ ಕಾರಣವೆಂದರೆ ಸ್ನಾಯುಗಳು ಮತ್ತು ಮೃದು ಅಂಗಾಂಶಗಳಿಗೆ ಆಗಿರುವ ಪೆಟ್ಟು ಹಾಗೂ ಮೃದ್ವಸ್ಥಿ ಹಾಗೂ ಭುಜದ ಮೂಳೆಗಳ ಮುರಿತ ಇತ್ಯಾದಿಗಳಾಗಿವೆ.

ಸಂಧಿವಾತ, ಮೂಳೆಗಳ ನಡುವಣ ದ್ರವ ಇಲ್ಲವಾಗಿ ಮೂಳೆಗಳ ಚಲಿಸುವ ಭಾಗ ನೇರವಾಗಿ ಮೂಳೆ-ಮೂಳೆಗೆ ತಗಲುವುದು, ಅಸ್ಥಿ ಮಜ್ಜೆಯ ಭಾಗ ಹರಿದಿರುವುದು, ಭುಜದ ಮೂಳೆ ಮುರಿದಿರುವುದು, ಬೆನ್ನು ಹುರಿಗೆ ಅದ ಪೆಟ್ಟು, ಭುಜದ ಮರಗಟ್ಟಿರುವುದು ಇತ್ಯಾದಿಗಳೂ ಭುಜದ ನೋವಿಗೆ ಕಾರಣವಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಕುತ್ತಿಗೆಯಿಂದ ಪ್ರಾರಂಭವಾದ ಬೆನ್ನುಹುರಿ ಯವುದಾದರೊಂದು ಕಾಯಿಲೆಗೆ ಒಳಗಾಗದೆ ಇದರ ಅಡ್ಡಪರಿಣಾಮವಾಗಿಯೂ ಭುಜದ ನೋವು ಕಾಣಿಸಿಕೊಳ್ಳಬಹುದು.

ಬೆನ್ನು ನೋವಿಗೆ ಮನೆಮದ್ದುಗಳು

ಈ ಬೆನ್ನು ನೋವನ್ನು ಮನೆಯಲ್ಲಿಯೇ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ..

1. ಅರಿಶಿನ

2. ಶುಂಠಿ

3. ಸೇಬಿನ ಶಿರ್ಕಾ (Apple Cider Vinegar)

4. ಲ್ಯಾವೆಂಡರ್ ಎಣ್ಣೆ (Lavender Oil)

5. ಭುಜದ ಮಸಾಜ್

6. ಬಿಸಿ ಕಾವು

7. ತಣ್ಣನೆಯ ಭಾರ ಹೇರುವಿಕೆ

8 ಎಪ್ಸಂ ಉಪ್ಪಿನ ನೀರಿನ ಸ್ನಾನ (Epsom Salt Bath)

1. ಅರಿಶಿನ

ಭುಜದ ನೋವಿಗೆ ಅರಿಶಿನ ಅತ್ಯುತ್ತಮವಾದ ಪರಿಹಾರವಾಗಿದೆ. ಅರಿಶಿನದಲ್ಲಿರುವ ಕುರ್ಕುಮಿನ್ ನಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಇದು ಊತ ಮತ್ತು ಭುಜದಲ್ಲಿ ಉಂಟಾಗಿರುವ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದಕ್ಕಾಗಿ ಎರಡು ದೊಡ್ಡ ಚಮಚ ಅರಿಶಿನ ಪುಡಿ ಮತ್ತು ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ನೋವಿಗೊಳಗಾಗಿರುವ ಭಾಗಕ್ಕೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಇದು ಸಾಧ್ಯವಾಗದೇ ಹೋದರೆ, ಒಂದು ಲೋಟ ಹಾಲನ್ನು ಕುದಿಸಿ ಇದಕ್ಕೆ ಒಂದು ಚಿಕ್ಕ ಚಮಚ ಅರಿಶಿನ ಟೀ ಬೆರೆಸಿ ಕುಡಿಯಿರಿ.

2. ಹಸಿಶುಂಠಿ

ಶುಂಠಿಯಲ್ಲಿರುವ ಉರಿಯೂತ ನಿವಾರಕ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಭುಜದಲ್ಲಿರುವ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಅಲ್ಲದೇ ರಕ್ತಪರಿಚನಲೆಯನ್ನೂ ಹೆಚ್ಚಿಸುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚದಷ್ಟು ತೆಳ್ಳಗೆ ಬಿಲ್ಲೆಗಳಂತೆ ಕತ್ತರಿಸಿದ ಹಸಿಶುಂಠಿಯನ್ನು ಸುಮಾರು ಒಂದೂವರೆಯಿಂದ ಎರಡು ಲೋಟದಷ್ಟು ನೀರಿನಲ್ಲಿ ಹತ್ತು ನಿಮಿಷ ಕುದಿಸಿ. ಬಳಿಕ ಈ ನೀರನ್ನು ಸೋಸಿ ಕೊಂಚ ಜೇನು ಬೆರೆಸಿ ದಿನಕ್ಕೆ ಎರಡರಿಂದ ಮೂರು ಕಪ್ ನಷ್ಟು ಪ್ರತಿದಿನವೂ ಸೇವಿಸಿ.

3. ಸೇಬಿನ ಶಿರ್ಕಾ

ಭುಜದ ನೋವು ಕಡಿಮೆ ಮಾಡಲು ಸೇಬಿನ ಶಿರ್ಕಾ ಸಹಾ ಇನ್ನೊಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಕ್ಷಾರೀಯಗೊಳಿಸುವ ಗುಣ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಸೋಸದ ಮತ್ತು ಹಸಿಯಾದ ಸೇಬಿನ ಶಿರ್ಕಾ ಬೆರೆಸಿ. ಇದಕ್ಕೆ ಕೊಂಚ ಜೇನು ಬೆರೆಸಿ ದಿನಕ್ಕೆರಡು ಲೋಟದಂತೆ ಒಂದು ವಾರ ಕಾಲ ಸತತವಾಗಿ ಸೇವಿಸಿ.

4. ಲ್ಯಾವೆಂಡರ್ ಎಣ್ಣೆ

ಇದೊಂದು ಅವಶ್ಯಕ ತೈಲವಾಗಿದ್ದು ಇದು ಬಳಲಿದ ಸ್ನಾಯುಗಳನ್ನು ನಿರಾಳಗೊಳಿಸುತ್ತದೆ ಹಾಗೂ ನೋವು ಮತ್ತು ಉರಿಯೂತದಿಂದ ಪರಿಹಾರ ಒದಗಿಸುತ್ತದೆ.ಇದಕ್ಕಾಗಿ ನೀವು ಸ್ನಾನ ಮಾಡುವ ತೊಟ್ಟಿಯ ನೀರಿಗೆ ಕೆಲವು ತೊಟ್ಟು ಅವಶ್ಯಕ ತೈಲವನ್ನು ಬೆರೆಸಿ ಈ ನೀರಿನಲ್ಲಿ ಸುಮಾರು ಮೂವತ್ತು ನಿಮಿಷಗಳ ಕಾಲ ದೇಹವನ್ನು ಮುಳುಗಿಸಿಡಿ. ಇದು ಸಾಧ್ಯವಾಗದಿದ್ದರೆ ಒಂದರಿಂದ ಎರಡು ದೊಡ್ಡ ಚಮಚ ಉಗುರುಬೆಚ್ಚನೆಯ ಆಲಿವ್ ಎಣ್ಣೆಗೆ ಕೆಲವು ತೊಟ್ಟು ಅವಶ್ಯಕ ತೈಲವನ್ನು ಬೆರೆಸಿ ಈ ಎಣ್ಣೆಯಿಂದ ಭುಜವನ್ನು ಮಸಾಜ್ ಮಾಡಿಸಿಕೊಳ್ಳಿ.

5. ಭುಜದ ಮಸಾಜ್

ಭುಜದ ನೋವಿನಿಂದ ಪರಿಹಾರ ಒದಗಿಸಲು ಮಸಾಜ್ ಸಹಾ ಉತ್ತಮ ವಿಧಾನವಾಗಿದೆ. ಭುಜದಲ್ಲಿ ಹೆಚ್ಚಿನ ಒತ್ತಡವಿಲ್ಲದ ನಯವಾದ ಮಸಾಜ್ ಮಾಡುವ ಮೂಲಕ ಒತ್ತಡವನ್ನು ನಿವಾರಿಸಿ ಸ್ನಾಯುಗಳನ್ನು ನಿರಾಳಗೊಳಿಸಬಹುದು. ಇದರಿಂದ ಭುಜದ ಭಾಗದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಊತವನ್ನೂ ಕಡಿಮೆ ಮಾಡುತ್ತದೆ. ಮಸಾಜ್ ಗಾಗಿ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯೇ ಸೂಕ್ತವಾಗಿದೆ. ರಕ್ತಪರಿಚಲನೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮಸಾಜ್ ಮಾಡುವವರು ಭುಜದ ಭಾಗವನ್ನು ನಯವಾಗಿ ಕಿವುಚಬೇಕಾಗುತ್ತದೆ. ಮಸಾಜ್ ಸುಮಾರು ಹತ್ತು ನಿಮಿಷದ ಅವಧಿಯದ್ದಾಗಿರಲಿ. ಬಳಿಕ ದಪ್ಪ ಟವೆಲ್ಲೊಂದನ್ನು ಭುಜದ ಮೇಲಿರಿಸಿ ವಿಶ್ರಾಂತಿ ಪಡೆಯಿರಿ.

6. ಬಿಸಿ ಕಾವು

ಭುಜದ ನೋವು ಕಡಿಮೆ ಮಾಡಲು ಬಿಸಿಯಾದ ಕಾವು ನೀಡುವುದು ಸಹಾ ಇನ್ನೊಂದು ವಿಧಾನವಾಗಿದೆ. ವಿಶೇಷವಾಗಿ ಬಾವು ಕಂಡು ಬಂದು ಚರ್ಮ ಕೆಂಪಗಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಪೆಟ್ಟು ಬಿದ್ದ ನಲವತ್ತೆಂಟು ಘಂಟೆಗಳ ಬಳಿಕವೇ ಈ ವಿಧಾನವನ್ನು ಅನುಸರಿಸಬೇಕು. ಒಂದು ಬಿಸಿನೀರಿನ ರಬ್ಬರ್ ಚೀಲದಲ್ಲಿ ಅತಿ ಹೆಚ್ಚಲ್ಲದ ಬಿಸಿ ಇರುವ ನೀರನ್ನು ಬೆರೆಸಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಇರಿಸಿ. ಜೊತೆಗೇ ಬಿಸಿನೀರು ನಲ್ಲಿಯಿಂದ ನೇರವಾಗಿ ಭುಜದ ಮೇಲೆ ಬೀಳುವಂತೆ ಮಾಡಿಯೂ ನೋವನ್ನು ಇನ್ನಷ್ಟು ಶೀಘ್ರವಾಗಿ ಕಡಿಮೆಗೊಳಿಸಬಹುದು.

7. ತಣ್ಣನೆಯ ಭಾರ ಹೇರುವಿಕೆ

ಒಂದು ವೇಳೆ ನೋವು ಕೈ ಎತ್ತಲಿಕ್ಕೂ ಸಾಧ್ಯವಿಲ್ಲ ಎನ್ನುವಷ್ಟು ತೀವ್ರವಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಏಕೆಂದರೆ ತಣ್ಣನೆಯ ವಿಧಾನದಿಂದ ಭುಜದ ಭಾಗ ಮರಗಟ್ಟುತ್ತದೆ ಮತ್ತು ಈ ಮೂಲಕ ನೋವು ಮತ್ತು ಉರಿಯನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಕೆಲವು ಮಂಜುಗಡ್ಡೆಯ ತುಣುಕುಗಳನ್ನು ಒಂದು ದಪ್ಪನೆಯ ಟವೆಲ್ಲಿನಲ್ಲಿ ಹಾಕಿ ನೋವಿರುವ ಭಾಗಕ್ಕೆ ತಂಪು ತಗಲುವಂತೆ ಇರಿಸಿ ಸುತ್ತಿ. ಸುಮಾರು ಹತ್ತು ನಿಮಿಷಗಳ ಕಾಲ ಹಾಗೇ ಇರಿಸಿ ಬಳಿಕ ನಿವಾರಿಸಿ. ನೋವು ಕಡಿಮೆಯಾಗುವವರೆಗೂ ಈ ವಿಧಾನವನ್ನು ನಿತ್ಯವೂ ಕೆಲವು ಬಾರಿ ಪುನರಾವರ್ತಿಸಿ.

8 ಎಪ್ಸಂ ಉಪ್ಪಿನ ನೀರಿನ ಸ್ನಾನ (Epsom Salt Bath)

ಎಪ್ಸಂ ಉಪ್ಪು ಅಥವಾ ಮೆಗ್ನೇಶಿಯಂ ಸಲ್ಫೇಟ್ ಲವಣ ಸಹಾ ಭುಜದ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ವಿಶೇಷವಾಗಿ ಸ್ನಾಯುಗಳ ಸೆಳೆತವನ್ನು ಕಡಿಮೆ ಮಾಡಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದಕ್ಕಾಗಿ ಸ್ನಾನದ ತೊಟ್ಟಿಯನ್ನು ಉಗುರುಬೆಚ್ಚನೆಯ ನೀರಿನಿಂದ ತುಂಬಿ ಇದಕ್ಕೆ ಎರಡು ಕಪ್ ನಷ್ಟು ಎಪ್ಸಂ ಉಪ್ಪು ಬೆರೆಸಿ. ಈ ನೀರನ್ನು ಚೆನ್ನಾಗಿ ಕಲಕಿ ಈ ನೀರಿನಲ್ಲಿ ಇಡಿಯ ದೇಹವನ್ನು ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಕಾಲ ಮುಳುಗಿಸಿಡಿ. ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಪುನರಾವರ್ತಿಸಿ (ದಿನ ಬಿಟ್ಟು ದಿನ)

ಒಂದು ವೇಳೆ ಭುಜದಲ್ಲಿ ನೋವಿದ್ದರೆ ಹೇಗೆ ಪವಡಿಸಬೇಕು?

ನೋವಿರದ ಭುಜ ಕೆಳಗೆ ಬರುವ ಮಗ್ಗುಲಲ್ಲಿ ಮಲಗಿ ಕುತ್ತಿಗೆ ಕೆಳಗೆ ದಿಂಬೊಂದನ್ನು ಇರಿಸಿ. ನೋವಿರುವ ಕೈಗೆ ಆಧಾರ ನೀಡಲು ಇನ್ನೊಂದು ತಲೆದಿಂಬನ್ನು ಮಡಚಿ ಇರಿಸಿ. ಇನ್ನೊಂದು ದಿಂಬನ್ನು ಬೆನ್ನಿನ ಕೆಳಗೆ ಇರಿಸುವ ಮೂಲಕ ನಿದ್ದೆ ಬಂದಾಗ ಅತ್ತ ಬದಿ ಹೊರಳದಂತೆ ರಕ್ಷಣೆ ಒದಗಿಸುತ್ತದೆ. ಸಾಧ್ಯವಾದಷ್ಟೂ ಅಲುಗದೇ ಎಂಟರಿಂದ ಒಂಭತ್ತು ಘಂಟೆಗಳಾದರೂ ನಿದ್ರಿಸಿ.

   
 
ಹೆಲ್ತ್