Back
Home » ಸೌಂದರ್ಯ
ಗ್ರೀನ್ ಟೀ ಐಸ್ ಕ್ಯೂಬ್ ಬಳಕೆಯಿಂದ 8 ಸೌಂದರ್ಯ ಲಾಭಗಳು
Boldsky | 9th Jul, 2018 12:02 PM

ಗ್ರೀನ್ ಟೀ ಕೇವಲ ಸೇವಿಸುವುದಕ್ಕೆ ಮಾತ್ರವಲ್ಲ ಬದಲಾಗಿ ಸೌಂದರ್ಯದ ಕಾಳಜಿಗೂ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಶ್ರೀಮಂತವಾಗಿದ್ದು, ಸೌಂದರ್ಯವನ್ನ ಹೆಚ್ಚಿಸುವ ಅದ್ಭುತ ವಸ್ತುವಾಗಿದೆ. ಚರ್ಮದ ಒಟ್ಟು ಆರೋಗ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಹಲವಾರು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಹೆಚ್ಚಿನ ಎಫರ್ಟ್ ಇಲ್ಲದೆ, ಗ್ರೀನ್ ಟೀಯನ್ನ ಚರ್ಮಕ್ಕೆ ಬಳಕೆ ಮಾಡ ಬಹುದು ಎಂಬುದು ಇದರ ಹಿಂದಿನ ಒಂದು ಕಾರಣವೂ ಆಗಿರಬಹುದು.

ಎನ್ಜೈಮ್ಸ್, ಫೋಟೋ ಕೆಮಿಕಲ್ಸ್ ಮತ್ತು ಅಮೈನೋ ಆಸಿಡ್ ಗಳಿಂದ ಭರ್ತಿಯಾಗಿರುವ ಈ ಗ್ರೀನ್ ಟೀ ಚರ್ಮದ ಒಟ್ಟು ಸೌಂದರ್ಯವನ್ನು ಅಧಿಕಗೊಳಿಸುವುದಕ್ಕೆ ನೆರವಾಗುತ್ತದೆ. ಇದೆಲ್ಲವೂ ಕೂಡ ಚರ್ಮದ ಕಾಳಜಿಯನ್ನು ಮಾಡುವುದಕ್ಕೆ ಅತ್ಯುತ್ತಮ ಮನೆಮದ್ದು ಮತ್ತು ಸುಲಭದಲ್ಲಿ ತಯಾರಿಸಿಕೊಳ್ಳಬಹುದಾದ ಮದ್ದು ಎಂದರೆ ಅತಿಶಯೋಕ್ತಿ ಆಗಲಾರದು.

ನಿಮ್ಮ ಚರ್ಮದ ಕಾಳಜಿಗೆ ಇದನ್ನು ಹಲವಾರು ರೀತಿಯಲ್ಲಿ ಬಳಕೆ ಮಾಡಬಹುದು. ಅದರಲ್ಲಿ ಒಂದು ವಿಧಾನವನ್ನು ನಾವಿವತ್ತು ನಿಮಗೆ ಇಲ್ಲಿ ತಿಳಿಸುತ್ತಿದ್ದೇವೆ. ಅದುವೇ ಗ್ರೀನ್ ಟೀ ಐಸ್ ಕ್ಯೂಬ್ಸ್.. ಸುಲಭದಲ್ಲಿ ತಯಾರಿಸಬಹುದು, ದಿನದ ಯಾವುದೇ ಸಂದರ್ಬದಲ್ಲೂ ಬೇಕಿದ್ದರೆ ಬಳಕೆ ಮಾಡಬಹುದು ಮತ್ತು ಪ್ರತಿದಿನದ ನಿಮ್ಮ ಸೌಂದರ್ಯ ವರ್ಧಕಗಳಲ್ಲಿ ಇದು ನೀಡುವ ಕೊಡುಗೆ ಎಲ್ಲಾ ವಸ್ತುಗಳಿಗಿಂತ ಅಧಿಕವಾಗಿರುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾವಿಲ್ಲಿ ಕೆಲವು ಪ್ರಮುಖ ಗ್ರೀನ್ ಟೀ ಐಸ್ ಕ್ಯೂಬ್ ಗಳ ಸೌಂದರ್ಯದ ಉಪಯೋಗಗಳನ್ನು ಪಟ್ಟಿಮಾಡಿದ್ದೇವೆ. ಅವುಗಳನ್ನು ತಿಳಿದುಕೊಳ್ಳುವ ಕೂತೂಹಲ ನಿಮಗೂ ಇದ್ದರೆ ಖಂಡಿತ ನೀವು ಟ್ರೈ ಮಾಡಬಹುದು.

1. ಆಯಾಸವಾದಂತೆ ಕಾಣುವ ಚರ್ಮವನ್ನು ರಿಫ್ರೆಶ್ ಮಾಡುತ್ತದೆ

ನಿಮ್ಮ ಚರ್ಮಕ್ಕೆ ಬಹಳ ಆಯಾಸವಾಗಿದೆಯಾ? ಹಾಗಾದರೆ ಇನ್ನು ಯೋಚಿಸುವ ಅಗತ್ಯವಿಲ್ಲ. ಬೇರೆ ಯಾವುದೇ ಪರಿಹಾರಕ್ಕಿಂತಲೂ ಅಧ್ಬುತ ಪರಿಹಾರವಾಗಬಲ್ಲದು ಈ ಗ್ರೀನ್ ಟೀ ಐಸ್ ಕ್ಯೂಬ್. ಇದು ಕೇವಲ ನಿಮ್ಮ ಚರ್ಮಕ್ಕೆ ರಿಫ್ರೆಶಿಂಗ್ ಚರ್ಮವನ್ನು ಮಾತ್ರ ಕೊಡುವುದಿಲ್ಲ ಬದಲಾಗಿ ಹೊಳಪನ್ನೂ ದಯಪಾಲಿಸುತ್ತದೆ. ಬಳಲಿದ ಚರ್ಮಕ್ಕೆ ಗ್ರೀನ್ ಟೀ ಐಸ್ ಕ್ಯೂಬ್ ಬಳಸಿ ತಿಕ್ಕಿಕೊಳ್ಳಿ .

2. ಮುಖದ ಫಫಿನೆಸ್ ನ್ನು ಕಡಿಮೆ ಮಾಡುತ್ತೆ

ತಮ್ಮ ಜೀವನದಲ್ಲಿ ಒಂದು ಹಂತಕ್ಕೆ ತಲುಪಿದಾಗ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಯ ತಮ್ಮ ಮುಖದಲ್ಲಿ ಫಫಿನೆಸ್ ನ್ನು ಅನುಭವಿಸಿಯೇ ಅನುಭವಿಸುತ್ತಾರೆ. ಇದು ನಿಮ್ಮ ಚರ್ಮದ ಸೌಂದರ್ಯಕ್ಕೆ ಕಳಂಕವಿದ್ದಂತೆ ನಿಮಗೆ ಭಾಸವಾಗುತ್ತಿರಬಹುದು.ಆದರೆ, ಗ್ರೀನ್ ಟೀ ಐಸ್ ಕ್ಯೂಬ್ ಸಹಾಯದಿಂದ ನೀವು ಕೂಡಲೇ ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದು ನಿಮಗೆ ಪರಿಣಾಮಕಾರಿಯಾಗಿ ವರ್ತಿಸುತ್ತೆ ಮತ್ತು ಆಗಾಗ ಬಳಕೆ ಮಾಡುತ್ತಲೇ ಇರುವುದರಿಂದಾಗಿ ಸಮಸ್ಯೆ ಆಗದಂತೆ ಕೂಡ ತಡೆಯುತ್ತದೆ.

3. ಕಣ್ಣಿನ ಕೆಳಭಾಗದ ಚರ್ಮ ಜೋತುಬೀಳುವುದನ್ನು ತಡೆಯುತ್ತದೆ.

ಗ್ರೀನ್ ಟೀ ಐಸ್ ಕ್ಯೂಬ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮವು ಜೋತುಬೀಳುವಂತೆ ಆಗುವ ಸಮಸ್ಯೆಯನ್ನು ಅದರಲ್ಲೂ ಪ್ರಮುಖವಾಗಿ ವಯಸ್ಸಾದಂತೆ ಇಲ್ಲವೇ ಒತ್ತಡದ ಕಾರಣದಿಂದ ಕಣ್ಣಿನ ಕೆಳಭಾಗದಲ್ಲಿ ಚರ್ಮವು ಜೋತುಬಿದ್ದಂತೆ ಆಗುವ ಸಮಸ್ಯೆಯನ್ನ ನಿವಾರಣೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಒಂದು ವೇಳೆ ನೀವು ಬೆಳಿಗ್ಗೆ ಏಳುವಾಗ ಕಣ್ಣಿನ ಕೆಳಭಾಗದ ಚರ್ಮವು ಹಿಡಿದಂತೆ ಭಾಸವಾಗುತ್ತಿದ್ದರೆ, ಎರಡು ತುಂಡು ಗ್ರೀನ್ ಟೀ ಐಸ್ ಕ್ಯೂಬ್ ಗಳನ್ನು ಕೆಲವು ಕ್ಷಣ ಕಣ್ಣಿನ ಕೆಳಭಾಗದಲ್ಲಿ ಇಟ್ಟುಕೊಂಡು ನೋಡಿ.. ಅದು ನಿಮಗೆ ನೀಡುವ ರಿಲ್ಯಾಕ್ಸ್ ಖಂಡಿತ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

4. ಮುಖದ ಮೊಡವೆಗಳ ನಿವಾರಣೆಗೆ ಸಹಕಾರಿ

ಗ್ರೀನ್ ಟೀಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ನಿಮ್ಮ ಮುಖದ ಮೊಡವೆಗಳನ್ನು ನಿಯಂತ್ರಿಸುವುದಕ್ಕೆ ಸಹಾಯ ಮಾಡುತ್ತದೆ. ಮೊಡವೆಗಳು ಕೀವು ಆಗಿ, ಸಣ್ಣಸಣ್ಣ ರಂಧ್ರಗಳಾಗಿ ಕೆಲವೊಮ್ಮೆ ನೋವನ್ನುಂಟು ಮಾಡುತ್ತದೆ ಜೊತೆಗೆ ಸೋಂಕಿಗೂ ಕಾರಣವಾಗುತ್ತದೆ. ಅಂತಹ ಸಂದರ್ಬದಲ್ಲಿ ಗ್ರೀನ್ ಟೀ ಐಸ್ ಕ್ಯೂಬ್ ಗಳನ್ನು ಪ್ರಯೋಗ ಮಾಡಿದರೆ ನಿಮ್ಮ ಸಮಸ್ಯೆ ಕೂಡಲೇ ಪರಿಹಾರವಾಗುತ್ತದೆ. ಕೆಲವು ಐಸ್ ಕ್ಯೂಬ್ ಗಳನ್ನು ತೆಗೆದುಕೊಂಡು ನಿಮಗೆ ಸಮಸ್ಯೆ ಇರುವ ಜಾಗದಲ್ಲಿ ಉಜ್ಜಿಕೊಳ್ಳಿ. ಉರಿಯೂತ ಮತ್ತು ಕೆಂಪಗಾಗಿರುವುದನ್ನು ಇದು ತಡೆಗಟ್ಟುತ್ತದೆ.

5. ಚರ್ಮದ ತೆರೆದ ರಂಧ್ರಗಳನ್ನು ಕಡಿಮೆ ಮಾಡುತ್ತೆ

ಕಾಸ್ಮೆಟಿಕ್ ಗಳ ಪ್ರಯೋಗದಿಂದ ಕೂಡ ಚರ್ಮದ ತೆರೆದ ರಂಧ್ರಗಳನ್ನು ಕಡಿಮೆ ಮಾಡುವುದು ಬಹಳ ಕಷ್ಟಕರವಾದ ವಿಚಾರವಾಗಿದೆ.ಆದರೆ, ಗ್ರೀನ್ ಟೀ ಐಸ್ ಬ್ಯಾಗ್ ಗಳ ಸಹಾಯದಿಂದ ತೆರೆದ ರಂಧ್ರಗಳನ್ನು ಕುಗ್ಗಿಸಿ, ಚರ್ಮದ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ ಮತ್ತು ಕೊಳೆಯನ್ನು ಕೂಡ ತೆಗೆದುಹಾಕುತ್ತದೆ.

6. ಚರ್ಮದ ಬಣ್ಣವನ್ನು ಹೊಳಪು ಮಾಡುತ್ತದೆ

ನಿಮ್ಮ ಚರ್ಮದ ಬಣ್ಣವು ಬದಲಾಗುವುದಕ್ಕೆ ಹಲವಾರು ಕಾರಣಗಳಿರುತ್ತದೆ. ಮೇಕಪ್ ನಿಂದ ಬ್ರೈಟ್ ಲುಕ್ ಪಡೆಯಬಹುದು ಎಂಬುದೇನೋ ನಿಜವಾದ ಸಂಗತಿಯೇ ಆಗಿದ್ದರೂ ಕೂಡ, ಅದು ನೈಸರ್ಗಿಕವಾಗಿರುವುದಲ್ಲ. ಆದರೆ ಗ್ರೀನ್ ಟೀ ಐಸ್ ಕ್ಯೂಬ್ ಗಳನ್ನು ಬಳಕೆ ಮಾಡುವುದರಿಂದಾಗಿ ನಿಮ್ಮ ಚರ್ಮವು ಕಳೆದುಕೊಂಡಿರುವ ಹೊಳಪು ಪುನಶ್ಚೇತನಗೊಳ್ಳುವುದಕ್ಕೆ ನೆರವಾಗುತ್ತದೆ.ಅದೂ ಕೂಡ ನೈಸರ್ಗಿಕವಾಗಿ ನೀವು ನಿಮ್ಮ ಚರ್ಮದ ಹೊಳಪನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪಡೆದುಕೊಳ್ಳಬಹುದು. ಯಾಕೆಂದರೆ ಗ್ರೀನ್ ಟೀ ಐಸ್ ಕ್ಯೂಬ್ ಗಳು ಚರ್ಮದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದಲ್ಲಿ ಹೊಳಪು ಬರುವಂತೆ ಮಾಡುತ್ತದೆ

7. ಆಕ್ನೆ ಸಮಸ್ಯೆಗೆ ಪರಿಹಾರ

ಒಂದು ವೇಳೆ ನಿಮ್ಮ ಚರ್ಮದಲ್ಲಿ ಆಕ್ನೆ ಕಾಣಿಸಿಕೊಂಡಿದ್ದರೆ. ಅದು ನಿಮಗೆ ದೊಡ್ಡ ಹಾನಿಯನ್ನು ಉಂಟು ಮಾಡುತ್ತದೆ. ಆಂಟಿ ಆಕ್ನೆ ಪ್ರೊಡಕ್ಟ್ ಗಳನ್ನು ಬಳಕೆ ಮಾಡಿ ನಿಮ್ಮ ತ್ವಚೆಯನ್ನು ಮತ್ತಷ್ಟು ಹಾಳು ಮಾಡಿಕೊಳ್ಳುವ ಬದಲಾಗಿ ಗ್ರೀನ್ ಟೀ ಐಸ್ ಕ್ಯೂಬ್ ಗಳನ್ನು ಪ್ರಯತ್ನಿಸಿ ನೋಡಿ. ಈ ಐಸ್ ಕ್ಯೂಬ್ ಗಳು ಆಂಟಿ ಆಕ್ಸಿಡೆಂಟ್ ಗಳಾಗಿರುವುದರಿಂದಾಗಿ ಆಕ್ನೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ಹೊಡೆದೋಡಿಸುತ್ತದೆ ಮತ್ತು ಆಕ್ನೆ ಸಮಸ್ಯೆ ನಿವಾರಣೆಯಾಗುತ್ತದೆ.

8. ಕಪ್ಪು ವರ್ತುಲವನ್ನು ಕಡಿಮೆ ಮಾಡುತ್ತೆ

ವಿಶ್ವದಲ್ಲಿ ಹಲವಾರು ಮಹಿಳೆಯರ ಸೌಂದರ್ಯ ದೊಡ್ಡ ಸಮಸ್ಯೆ ಎಂದರೆ ಅದು ಕಣ್ಣಿನ ಸುತ್ತ ಕಪ್ಪು ವರ್ತುಲ ಕಾಣಿಸಿಕೊಳ್ಳುವುದು. ಸರಿಯಾದ ನಿದ್ದೆ ಇಲ್ಲದಿರುವುದರ ಕಾರಣದಿಂದ ಸರಿಯಾಗಿ ಫ್ಲೂಯಿಡ್ ರಿಟೆನ್ಶನ್ ಆಗುವುದಿಲ್ಲ ಮತ್ತು ಇದು ಕಪ್ಪು ವರ್ತುಲದ ಸೃಷ್ಟಿಗೆ ಕಾರಣವಾಗುತ್ತದೆ. ಆದರೆ ನಿಯಮಿತವಾಗಿ ಗ್ರೀನ್ ಟೀ ಐಸ್ ಕ್ಯೂಬ್ ಗಳನ್ನು ಬಳಕೆ ಮಾಡುವುದರಿಂದಾಗಿ ಡಾರ್ಕ್ ಸರ್ಕಲ್ ನಿಂದ ಮುಕ್ತಿ ಪಡೆಯಬಹುದು. ಇದು ಕಣ್ಣಿನ ಸುತ್ತಲಿನ ಜಾಗದ ರಕ್ತ ಸಂಚಾರವನ್ನು ಹೆಚ್ಚಿಸುತ್ತಾ ಸಾಗುತ್ತೆ ಮತ್ತು ಆ ಭಾಗದ ಕಪ್ಪು ಚರ್ಮವು ಬಿಳಿಯಾಗಲು ನೆರವಾಗುತ್ತದೆ .

ಈಗ ನೀವು ಗ್ರೀನ್ ಟೀ ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಂಡಿರೆ. ಆದರೆ ಅದನ್ನು ಪ್ರಯೋಗ ಮಾಡಿಕೊಳ್ಳುವುದು ಹೇಗೆ? ಪ್ರತಿ ದಿನ ಯಾವ ರೀತಿ ಗ್ರೀನ್ ಟೀ ಐಸ್ ಕ್ಯೂಬ್ ಗಳನ್ನು ತಯಾರಿಸಬೇಕು ಮತ್ತು ಅದನ್ನು ಬಳಕೆ ಮಾಡಬೇಕು ಎಂಬುದನ್ನು ಕೂಡ ತಿಳಿಯಬೇಕಲ್ಲವೇ.. ಆ ಮಾಹಿತಿ ಈ ಕೆಳಗಿದೆ ಗಮನಿಸಿ.

ತಯಾರಿಸುವ ವಿಧಾನ ಹೇಗೆ ?

- ಸಕ್ಕರೆ ಅಂಶವಿರದ ಗ್ರೀನ್ ಟೀಯನ್ನು ತಯಾರಿಸಿ

- ತಣ್ಣಗಾಗಲು ಫ್ಯಾನ್ ಕೆಳಗೆ ಇಡಿ, ಅಥವಾ ಸಮಯವಿದ್ದರೆ ಪ್ರಾಕೃತಿಕ ತಾಪಮಾನಕ್ಕೆ ಬರುವ ವರೆಗೂ ಕಾಯಿರಿ .

- ಐಸ್ ಟ್ರೇಗೆ ಆ ಟೀಯನ್ನು ಹಾಕಿ ಫ್ರಿಡ್ಜ್ ನಲ್ಲಿ ಐಸ್ ಆಗಲು ಇಡಿ.

ಬಳಕೆ ಮಾಡುವ ವಿಧಾನ ಹೇಗೆ?:

- ನಿಮ್ಮ ಮುಖವನ್ನು ತಿಳಿಯಾದ ಕ್ಲೆನ್ಸರ್ ಬಳಸಿ ಮತ್ತು ಹದವಾಗಿ ಬೆಚ್ಚಗಿರುವ ನೀರನ್ನು ಬಳಸಿ ತೊಳೆಯಿರಿ

- ಅದನ್ನು ಒಣಗಲು ಬಿಡಿ ಮತ್ತು ನಂತರ ಗ್ರೀನ್ ಟೀ ಐಸ್ ಕ್ಯೂಬ್ ಬಳಸಿ ಮುಖವನ್ನು ರಬ್ ಮಾಡಿ.

- ಒಮ್ಮೆ ಮುಗಿದ ನಂತರ ಆರಾಮಾಗಿ ಕುಳಿತುಕೊಳ್ಳಿ ಮತ್ತು ಚರ್ಮವು ಅದನ್ನು ಹೀರಿಕೊಳ್ಳಲು ಅವಕಾಶ ನೀಡಿ.

- ಹದವಾಗಿ ಬೆಚ್ಚಗಿರುವ ನೀರಿನಲ್ಲಿ ತೊಳೆಯಿರಿ

- ನಂತರ ತಿಳಿಯಾದ ಟೋನರ್ ಬಳಸಿ ಅಥವಾ ನಿಮ್ಮ ಚರ್ಮಕ್ಕೆ ಸಿಕ್ಕಿದ ಫಲಿತಾಂಶವು ಎಲ್ಲರಿಗೂ ಇನ್ನಷ್ಟು ಅದ್ಭುತವಾಗಿ ಗೋಚರಿಸಬೇಕು ಎಂದರೆ ಮಾಯ್ಚರೈಸರ್ ಬಳಸಿ.

- ಹಾಗಾಗಿ ಹೊಳಪಿನ ತ್ವಚೆಯನ್ನ ಪಡೆಯುವ ನಿಟ್ಟಿನಲ್ಲಿ ನಿಮ್ಮ ನಿತ್ಯದ ಸೌಂದರ್ಯವರ್ಧಕ ಚಟುವಟಿಕೆಗಳಲ್ಲಿ ಗ್ರೀನ್ ಟೀ ಐಸ್ ಕ್ಯೂಬ್ ಬಳಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

   
 
ಹೆಲ್ತ್