Back
Home » ಬಾಲಿವುಡ್
ಕರಾವಳಿ ಕುವರಿ ಶಿಲ್ಪಾ ಶೆಟ್ಟಿ ಅರಮನೆ 'ಕಿನಾರೆ'ಯ ಅಂದ-ಚೆಂದ ನೋಡಿದ್ದೀರಾ.?
Oneindia | 9th Jul, 2018 02:40 PM
 • 'ಕಿನಾರಾ' ವೈಭೋಗ ಹೀಗಿದೆ...

  ಶಿಲ್ಪಾ ಶೆಟ್ಟಿಯ ನಿವಾಸ 'ಕಿನಾರಾ' ಒಳಾಂಗಣ ಇರುವುದು ಹೀಗೆ... ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಒಡೆತನದ ಈ ಮನೆ ಯಾವ ಅರಮನೆಗೆ ತಾನೇ ಕಮ್ಮಿ ಇದೆ ಹೇಳಿ...

  ಈ 'ಚಿನ್ನ'ದಂಥ ಬಂಗಲೆ ಯಾರದ್ದು ಅಂತ ಗೊತ್ತಾದ್ರೆ ಸರ್ಪ್ರೈಸ್ ಆಗ್ತೀರಾ.!


 • ಡೈನಿಂಗ್ ಹಾಲ್

  ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಮನೆಯ ಈ ಡೈನಿಂಗ್ ಹಾಲ್ ಹೋಟೆಲ್ ಅಡುಗೆಯನ್ನೇ ಮೀರಿಸುತ್ತೆ.

  ಚಿತ್ರಗಳು: ಹೀಗಿದೆ ನೋಡಿ ನಟ ಜಾನ್ ಅಬ್ರಹಾಂ ರವರ ವಿಲಾಸಿ ನಿವಾಸ.!


 • ಲಿವಿಂಗ್ ಏರಿಯಾ

  'ಕಿನಾರಾ' ಒಳಗೆ ಲಿವಿಂಗ್ ಏರಿಯಾ ವಿಶಾಲವಾಗಿದೆ. ಐಷಾರಾಮಿ ಪೀಠೋಪಕರಣಗಳನ್ನಿಡಲಾಗಿದೆ.


 • ಕಣ್ಣಿಗೆ ಮುದ ನೀಡುವ ಕಲರ್ ಕಾಂಬಿನೇಶನ್

  'ಕಿನಾರಾ' ಮನೆಯ ಒಳಾಂಗಣ ವಿನ್ಯಾಸವನ್ನ ಅತ್ಯಂತ ಜಾಗರೂಕತೆಯಿಂದ ಮಾಡಲಾಗಿದೆ. ಪೀಠೋಪಕರಣಗಳು ಹಾಗೂ ಗೋಡೆಗಳಿಗೆ ಕಣ್ಣಿಗೆ ಮುದ ನೀಡುವ ಕಲರ್ ಕಾಂಬಿನೇಶನ್ ಬಳಸಲಾಗಿದೆ.


 • ಮನೆಯೊಳಗೆ ಆಟ-ಪಾಠ

  'ಕಿನಾರಾ' ಬೃಹತ್ ಆಗಿದೆ. ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಪುತ್ರ ವಿಯಾನ್ ತನ್ನ ಮುದ್ದಿನ ನಾಯಿ ಮರಿ ಜೊತೆಗೆ ಮನೆಯಲ್ಲೇ ಆಟ ಆಡುತ್ತಾನೆ.


 • ಹೊರಗೆ ಬಂದರೆ ಸಾಗರ

  ಶಿಲ್ಪಾ ಶೆಟ್ಟಿ ಕುಟುಂಬ ಮನೆಯಿಂದ ಹೊರಗೆ ಬಂದರೆ ಸಾಗರದ ಅಲೆಗಳು ಆಹ್ವಾನ ನೀಡುತ್ತವೆ.


 • ಹೊರಾಂಗಣ ಹೀಗಿದೆ ನೋಡಿ...

  ಸುತ್ತಲು ಹಸಿರು.. ಮಧ್ಯದಲ್ಲಿ ಗಾಜಿನ ಮನೆ.. ಪರಿಸರದ ಸೊಬಗನ್ನು ಸವಿಯಲು ಇದಕ್ಕಿಂತ ಬೇರೇನು ಬೇಕು ಹೇಳಿ...


 • ಇಷ್ಟದ ಮನೆ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿದ್ದೇನು.?

  ''ಸೀ ವ್ಯೂ ಹೊಂದಿರುವ 'ಕಿನಾರೆ' ನನಗ್ಯಾಕೆ ಇಷ್ಟ ಅಂದ್ರೆ, ಸಾಗರದ ಅಲೆಗಳ ಸದ್ದನ್ನ ಕೇಳುತ್ತಲೇ ನಾನು ನಿದ್ದೆಗೆ ಜಾರುತ್ತೇನೆ'' ಎಂದು ಸಂದರ್ಶನವೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದರು.


 • ಮನೆ ಮೇನ್ಟೇನ್ ಮಾಡುವುದು ಕಷ್ಟ

  'ಕಿನಾರಾ' ನೋಡಲು ಎಷ್ಟು ಚೆನ್ನಾಗಿದ್ಯೋ, ಅದನ್ನ ಮೇನ್ಟೇನ್ ಮಾಡುವುದು ಅಷ್ಟೇ ಕಷ್ಟ ಎನ್ನುತ್ತಾರೆ ನಟಿ ಶಿಲ್ಪಾ ಶೆಟ್ಟಿ


 • ಹ್ಯಾಪಿ ಫ್ಯಾಮಿಲಿ

  2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ರನ್ನ ನಟಿ ಶಿಲ್ಪಾ ಶೆಟ್ಟಿ ಮದುವೆ ಆದರು. ಈ ದಂಪತಿಗೆ ವಿಯಾನ್ ಎಂಬ ಪುತ್ರನಿದ್ದಾನೆ.
ಒಂದ್ಕಾಲದಲ್ಲಿ ಅವಕಾಶಗಳಿಗಾಗಿ ತಿಣುಕಾಡುತ್ತಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ಅಕ್ಷರಶಃ ರಾಣಿ. ಕರ್ನಾಟಕದ ಕರಾವಳಿ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿಲ್ಪಾ ಶೆಟ್ಟಿ ಸದ್ಯ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನ 'ರಾಜಸ್ಥಾನ ರಾಯಲ್ಸ್' ಕ್ರಿಕೆಟ್ ಟೀಮ್ ನ ಒಡತಿ ಕೂಡ ಆಗಿರುವ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಅತ್ಯಂತ ವಿಲಾಸಿ ಬಂಗಲೆ ಹೊಂದಿದ್ದಾರೆ. ತಮ್ಮ ಅರಮನೆಗೆ 'ಕಿನಾರಾ' ಅಂತ ಹೆಸರಿಟ್ಟಿದ್ದಾರೆ.

ಮುಂಬೈನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಕೆಲವೇ ಕೆಲವು ನಟ-ನಟಿಯರ ಪೈಕಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಹಾಗಾದ್ರೆ, ಮುಂಬೈನ ಕಡಲತಡಿಯಲ್ಲಿರುವ ಶಿಲ್ಪಾ ಶೆಟ್ಟಿಯ 'ಕಿನಾರಾ' ಹೇಗಿದೆ ಅಂತ ನೀವೇ ಕಣ್ತುಂಬಿಕೊಳ್ಳಿ...

   
 
ಹೆಲ್ತ್