Back
Home » ಆರೋಗ್ಯ
ದಿನಾ ಒಂದೊಂದು ಸೌತೆಕಾಯಿ ತಿಂದರೂ ಸಾಕು! ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು
Boldsky | 10th Jul, 2018 12:11 PM
 • 1. ಮೆದುಳಿಗೆ ಸೌತೆಕಾಯಿ ತುಂಬಾ ಒಳ್ಳೆಯದು

  ಸೌತೆಕಾಯಿಯಲ್ಲಿ ಉರಿಯೂತ ಶಮನಕಾರಿ ಫ್ಲಾವೊನೊಲ್ ಇದ್ದು, ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನರಕೋಶಗಳ ಸಂರ್ಪಕವನ್ನು ಹೆಚ್ಚಿಸುವುದು. ಇದೇ ಕಾರಣಕ್ಕಾಗಿ ಪ್ರತಿನಿತ್ಯ ಸೌತೆಕಾಯಿ ಸೇವಿಸಿ. ಇದು ಕೇವಲ ನೆನಪಿನ ಶಕ್ತಿಯ ಬಗ್ಗೆ ಕಾಳಜಿ ವಹಿಸುವುದು ಮಾತ್ರವಲ್ಲದೆ ನರಕೋಶಗಳಿಗೆ ವಯಸ್ಸಾಗುವುದುನ್ನು ತಡೆಯುವುದು.


 • 2. ಒತ್ತಡದ ಮಟ್ಟ ಕಡಿಮೆ ಮಾಡುವುದು

  ಸೌತೆಕಾಯಿಯಲ್ಲಿ ವಿಟಮಿನ್ ಬಿ ಸಂಕೀರ್ಣದ ಸಹಿತ ಹಲವಾರು ವಿಟಮಿನ್ ಗಳು ಇವೆ. ವಿಟಮಿನ್ ಬಿ1, ವಿಟಮಿನ್ ಬಿ5 ಮತ್ತು ವಿಟಮಿನ್ ಬಿ7. ವಿಟಮಿನ್ ಬಿ7 ಎನ್ನು ಬಿಯೊಟಿನ್ ಎಂದು ಕರೆಯುವರು. ಇದು ನರಕೋಶದ ವ್ಯವಸ್ಥೆಗೆ ಆರಾಮ ನೀಡುವುದು ಮತ್ತು ಒತ್ತಡ ಹಾಗೂ ಆತಂಕದಿಂದ ಶಮನ ನೀಡುವುದು.


 • 3. ತೂಕ ನಿಯಂತ್ರಣದಲ್ಲಿಡಲು ಸಹಕಾರಿ

  ಸೌತೆಕಾಯಿಯು ತೂಕ ಇಳಿಸಲು ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಸೌತೆಕಾಯಿಯನ್ನು ತೂಕ ಕಳೆದುಕೊಳ್ಳುವ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಕೇವಲ ಸೌತೆಕಾಯಿ ತಿನ್ನುವುದರಿಂದ ತೂಕ ಕಳೆದಕೊಳ್ಳಲು ಆಗಲ್ಲ. ಇದರೊಂದಿಗೆ ಸಮತೋಲಿತ ಆಹಾರ ಸೇವಿಸಬೇಕು.


 • 4. ನೈಸರ್ಗಿಕ ಉರಿಯೂತ ಗುಣಗಳು

  ಸೌತೆಕಾಯಿಯಲ್ಲಿ ಇರುವಂತಹ ಶೇ.95ರಷ್ಟು ನೀರಿನಾಂಶವು ದೇಹವನ್ನು ತೇವಾಂಶದಿಂದ ಇಡುತ್ತದೆ. ಇದು ಕೋಶಗಳಿಗೆ ಪೋಷಣೆ ನೀಡುವುದು ಮತ್ತು ಒಳಗಿನ ಕ್ರಿಯೆಗಳಿಗೆ ತುಂಬಾ ನೆರವಾಗುವುದು. ನೋವು ಹಾಗೂ ಸೋಂಕು ನಿವಾರಣೆಗೆ ಸೌತೆಕಾಯಿ ಜ್ಯೂಸ್ ತುಂಬಾ ಪರಿಣಾಮಕಾರಿ. ದೇಹದೊಳಗಡೆ ಉರಿಯೂತ ಉಂಟಾದಾಗ ಸೌತೆಕಾಯಿಯಲ್ಲಿರುವ ಉರಿಯೂತ ಶಮನಕಾರಿ ಗುಣವು ಕಿಣ್ವಗಳನ್ನು ಬಿಡುಗಡೆ ಮಾಡಿ ಉರಿಯೂತ ಕಡಿಮೆ ಮಾಡುವುದು.


 • 5. ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ

  ಸೌತೆಕಾಯಿಯಲ್ಲಿ ಹೀರಿಕೊಳ್ಳುವ ನಾರಿನಾಂಶ ಮತ್ತು ನೀರು ಅಧಿಕ ಮಟ್ಟದಲ್ಲಿದೆ. ಆಹಾರ ಕ್ರಮದಲ್ಲಿ ಸೌತೆಕಾಯಿ ಸಲಾಡ್ ಗೆ ಎಳ್ಳು ಮತ್ತು ಆ್ಯಪಲ್ ಸೀಡರ್ ವಿನೇಗರ್ ನ್ನು ಸೇರಿಸಿಕೊಂಡು ಸೇವಿಸಿ. ಆಮ್ಲೀಯ ಹಿಮ್ಮುಖ ಹರಿವಿನಿಂದ ಬಳಲುತ್ತಿರುವವರಿಗೆ ಇದು ತುಂಬಾ ಪರಿಣಾಮಕಾರಿ. ಸೌತೆಕಾಯಿಯು ಹೊಟ್ಟೆಯಲ್ಲಿ ಪಿಎಚ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವುದು ಮತ್ತು ಇದರಿಂದ ಮಲಬದ್ಧತೆ ನಿವಾರಣೆಯಾಗುವುದು.


 • 6. ಹೃದಯಕ್ಕೆ ಒಳ್ಳೆಯದು

  ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಇದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ತುಂಬಾ ಪರಿಣಾಮಕಾರಿ. ಪೊಟಾಶಿಯಂ ವಿದ್ಯುದ್ವಿಚ್ಛೇಧಕಗಳಂತೆ ಕೆಲಸ ಮಾಡಿ ನರಗಳ ಕಾರ್ಯನಿರ್ವಹಣೆಗೆ ನೆರವಾಗುವುದು. ನರ ವ್ಯವಸ್ಥೆ ಬಗ್ಗೆ ಕಾಳಜಿ, ಸ್ನಾಯುಗಳ ಸಂಕೋಚನ ಮತ್ತು ಹೃದಯದ ಕಾರ್ಯನಿರ್ವಹಣೆಗೆ ನೆರವಾಗುವುದು. ಸೌತೆಕಾಯಿಯಲ್ಲಿ ನಾರಿನಾಂಶವಿದ್ದು, ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುವುದು ಮತ್ತು ಹೃದಯದ ತಡೆ ನಿವಾರಿಸುವುದು.


 • 7. ನಿಶ್ಯಕ್ತಿ ನಿವಾರಣೆ

  ಸೌತೆಕಾಯಿಯು ನಿಶ್ಯಕ್ತಿ ನಿವಾರಣೆ ಮಾಡುವುದು. ಉದ್ಯೋಗದಲ್ಲಿ ಹೆಚ್ಚಿನ ಒತ್ತಡವಿದ್ದಾಗ ಒತ್ತಡದಿಂದ ಕಾಣಿಸಿಕೊಳ್ಳುವಂತಹ ತಲೆನೋವು ಸಾಮಾನ್ಯ. ಇದನ್ನು ತಡೆಯುವ ಸಲುವಾಗಿ ನೀವು ಮನೆಯಲ್ಲೇ ತಯಾರಿಸಿರುವಂತಹ ಸೌತೆಕಾಯಿ ಖಾದ್ಯ ಸೇವಿಸಿ. ಸಲಾಡ್, ಜ್ಯೂಸ್ ಅಥವಾ ಸ್ಮೂಥಿ ಮಾಡಿಯೂ ಇದನ್ನು ಬಳಸಬಹುದು. ಪಾಲಿಫಿನಾಲ್ ಗಳು ಮತ್ತು ಫೈಟೋನ್ಯೂಟ್ರಿಯಂಟ್ ಗಳು ಇದರಲ್ಲಿರುವ ಕಾರಣದಿಂದ ಇದು ಒತ್ತಡ ನಿವಾರಿಸುವುದು.


 • 8. ಆ್ಯಂಟಿಆಕ್ಸಿಡೆಂಟ್

  ದೇಹದಲ್ಲಿ ವಿಷಕಾರಿ ಅಂಶಗಳು ಜಮೆಯಾದರೆ ಅದರಿಂದ ಫ್ರೀ ರ್ಯಾಡಿಕಲ್ ಉಂಟಾಗಿ ಸಾಮಾನ್ಯವಾಗಿ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಫ್ರಿ ರ್ಯಾಡಿಕಲ್ ನಿಂದಾಗಿ ಕ್ಯಾನ್ಸರ್, ಹೃದಯ, ಶ್ವಾಸಕೋಶ ಮತ್ತು ಪ್ರತಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಅನಾರೋಗ್ಯ ಕಾಣಿಸುವುದು. ಸೌತೆಕಾಯಿಯು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದ್ದು, ಇದು ರೋಗಗಳ ಅಪಾಯ ಕಡಿಮೆ ಮಾಡುವುದು.


 • 9. ಕರುಳಿನ ಕ್ರಿಯೆ ಸರಾಗವಾಗಿರಲು ಸಹಕಾರಿ

  ಸೌತೆಕಾಯಿ ದಿನನಿತ್ಯ ಸೇವನೆ ಮಾಡಿದರೆ ಅದರಿಂದ ಕರುಳಿನ ಕ್ರಿಯೆಯು ಸರಾಗವಾಗಿ ಆಗುವುದು. ಸೌತೆಕಾಯಿಯಲ್ಲಿ ಉನ್ನತ ಮಟ್ಟದ ನೀರು ಮತ್ತು ಹೀರಿಕೊಳ್ಳುವ ನಾರಿನಾಂಶವಿದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು ಮತ್ತು ನಿಯಮಿತವಾಗಿ ಮಲ ವಿಸರ್ಜನೆಯಾಗುವುದು. ಹೊಟ್ಟೆಯ ಕೆಲವು ಲಾಭಕಾರಿ ಬ್ಯಾಕ್ಟೀರಿಯಾಗಳಿಗೆ ಪೋಷಣೆ ನೀಡಿ, ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುವುದು.


 • 10. ಸೌತೆಕಾಯಿಯು ನಂಜುನಿವಾರಕವಾಗಿದೆ

  ಸೌತೆಕಾಯಿಯಲ್ಲಿರಬಹುದಾದ ಯಾವತ್ತೂ ಜಲವು ಒಂದು ಕಸಬರಿಕೆಯಂತೆ ವರ್ತಿಸಿ, ನಿಮ್ಮ ಶರೀರದ ತ್ಯಾಜ್ಯವನ್ನು ಗುಡಿಸಿ ನಿವಾರಿಸಿಬಿಡುತ್ತದೆ. ನಿಯಮಿತವಾದ ಸೌತೆಕಾಯಿಗಳ ಸೇವನೆಯು, ಮೂತ್ರಪಿಂಡದ ಕಲ್ಲುಗಳನ್ನೂ ಸಹ ಕರಗಿಸಿ ಬಿಡುತ್ತದೆ ಎಂದು ತಿಳಿದು ಬಂದಿದೆ.


 • 11. ಜೀರ್ಣಕಾರ್ಯಕ್ಕೆ ಮತ್ತು ತೂಕಇಳಿಸಲು ಸಹಕಾರಿ

  ಸೌತೆಕಾಯಿಯಲ್ಲಿ ಅಧಿಕ ಜಲಾಂಶವಿದ್ದು, ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟವನ್ನು ಹೊಂದಲು ಬಯಸುವವರಿಗೆ ಸೌತೆಕಾಯಿಯು ವರದಾನವಾಗಿದೆ. ಸೌತೆಕಾಯಿಗಳನ್ನು ಸೂಪುಗಳಲ್ಲಿ ಮತ್ತು ಸಲಾಡ್ ಗಳಲ್ಲಿ ಬಳಸಿರಿ. ಒಂದು ವೇಳೆ ಸೌತೆಕಾಯಿಯು ನಿಮ್ಮ ಇಷ್ಟದ ತಿನಿಸು ಅಲ್ಲವಾದರೆ, ನೀವು ನೀವು ಸೌತೆಕಾಯಿಯ ತುಣುಕುಗಳನ್ನು ಕಡ್ಡಿಯೊಂದಕ್ಕೆ ಸಿಕ್ಕಿಸಿ, ಅವುಗಳನ್ನು ಕಡಿಮೆ ಕೊಬ್ಬಿನಾಂಶವುಳ್ಳ, ಕೆನೆಯುಳ್ಳ ಮೊಸರಿನಲ್ಲಿ ಅದ್ದಿಯೂ ಸಹ ಸೇವಿಸಬಹುದು. ಸೌತೆಕಾಯಿಯ ತುಣುಕುಗಳನ್ನು ಜಗಿಯುವುದರಿಂದ ದವಡೆಗಳಿಗೆ ಉತ್ತಮ ವ್ಯಾಯಾಮವಾದಂತಾಗುತ್ತದೆ, ಜೊತೆಗೆ ಅದರ ನಾರಿನಂಶವು ಜೀರ್ಣಕ್ರಿಯೆಯಲ್ಲಿ ಬಹುವಾಗಿ ಸಹಕರಿಸುತ್ತದೆ. ಸೌತೆಕಾಯಿಯ ಪ್ರತಿದಿನದ ಬಳಕೆಯು ಬಹುಕಾಲದ ಮಲಬದ್ಧತೆಗೆ ಒಂದು ಸಾಧನ ಎಂದು ಪರಿಗಣಿಸಬಹುದು.


 • 12. ನಿಮ್ಮ ಕಣ್ಣುಗಳಿಗೆ ಪುನಶ್ಚೇತನವನ್ನು ನೀಡುತ್ತದೆ

  ತಂಪಾದ ಸೌತೆಯೊಂದರ ತುಣುಕನ್ನು ನಿಮ್ಮ ಊದಿಕೊಂಡ ಕಣ್ಣಿನ ಮೇಲಿರಿಸಿದರೆ, ಅದು ಹೊರನೋಟಕ್ಕೆ ಸೌಂದರ್ಯದ ಚಿಕಿತ್ಸೆಗೆ ಎಂದು ಅನಿಸಿದರೂ ಕೂಡ, ಸೌತೆಕಾಯಿಯು ತನ್ನ ಉರಿ ಪ್ರತಿಬಂಧಕ (anti-inflammatory) ಗುಣಗಳಿಂದಾಗಿ, ನಿಮ್ಮ ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಬಲ್ಲುದಾಗಿದೆ.


 • 13.. ಮಧುಮೇಹ, ಕೊಲೆಸ್ಟ್ರಾಲ್ ದೂರವಿಡುತ್ತದೆ

  ಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೌತೆಕಾಯಿಯು, ಮೇದೋಜೀರಕ ಗ್ರಂಥಿಯ ಕೋಶಗಳು ಇನ್ಸುಲಿನ್ ಅನ್ನು ಉತ್ಪಾದಿಸಲು ಅಗತ್ಯವಾದ ಹಾರ್ಮೋನ್ ಅನ್ನು ಹೊಂದಿದ್ದು, ಈ ಇನ್ಸುಲಿನ್, ಮಧುಮೇಹ ರೋಗಿಗಳಿಗೆ ಲಾಭದಾಯಕವೆಂದು ಜನಜನಿತವಾಗಿದೆ. ಸೌತೆಕಾಯಿಯಲ್ಲಿ ಸ್ಟೀರೋಲ್ಸ್ (sterols)ಎಂಬ ಸಂಯುಕ್ತ ವಸ್ತುವೊಂದಿದ್ದು, ಇದು ಶರೀರದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿಯಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸೌತೆಕಾಯಿಗಳು ಬಹಳಷ್ಟು ನಾರು, ಪೊಟ್ಯಾಸಿಯಂ, ಮತ್ತು ಮೆಗ್ನೀಷಿಯಂ ಅನ್ನು ಒಳಗೊಂಡಿವೆ. ಈ ಪೋಷಕಾಂಶಗಳು ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವತ್ತ ಕಾರ್ಯನಿರ್ವಹಿಸುತ್ತವೆ. ಈ ಕಾರಣದಿಂದಲೇ, ಸೌತೆಕಾಯಿಯು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಇವೆರಡಕ್ಕೂ ಚಿಕಿತ್ಸೆ ನೀಡಲು ಉತ್ತಮವಾಗಿದೆ.


 • 14. ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ

  ಸೌತೆಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ. ಸೌತೆಕಾಯಿಯು ಸಿಲಿಕಾದ ಒಂದು ಉತ್ತಮ ಮೂಲವಾಗಿರುವುದರಿಂದ, ಇದು ಕೀಲುಗಳ ಅಂಗಾಂಶಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ಸಂದುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಇದರ ರಸವನ್ನು ಕ್ಯಾರೆಟ್ ರಸದೊಂದಿಗೆ ಸೇರಿಸಿ ಸೇವಿಸಿದರೆ, ಅದು ಶರೀರದ ಯುರಿಕ್ ಆಮ್ಲಗಳ ಮಟ್ಟವನ್ನು ತಗ್ಗಿಸುವುದರ ಮೂಲಕ ಸಂದುಗಳು (ಕಾಲುಗಳ) ಮತ್ತು ಕೀಲುಗಳ ಉರಿಯೂತ ಮತ್ತು ನೋವಿನಿಂದ ವಿಮುಕ್ತಿಗೊಳಿಸುತ್ತದೆ.
ಸೌತೆಕಾಯಿಯಲ್ಲಿ ಹಲವಾರು ರೀತಿ ಪೋಷಕಾಂಶಗಳಿದ್ದು, ಇದನ್ನು ವಿವಿಧ ರೀತಿಯಿಂದ ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಸಲಾಡ್, ಸ್ಯಾಂಡ್ ವಿಚ್ ಮತ್ತು ಸ್ಮೂಥಿಗಳಲ್ಲಿ ಸೌತೆಕಾಯಿ ಬಳಸಬಹುದು. ಇದರಲ್ಲಿ ನೀರಿನಾಂಶವು ಅಧಿಕವಾಗಿರುವ ಕಾರಣದಿಂದಾಗಿ ತೂಕ ಕಳೆದುಕೊಳ್ಳಲು ಬಯಸುವವರು ತಮ್ಮ ಆಹಾರ ಕ್ರಮದಲ್ಲಿ ಇದನ್ನು ತಪ್ಪದೇ ಬಳಸಬಹುದು. ಸೌತೆಕಾಯಿ ನಿಜವಾಗಿಯೂ ಒಂದು ಹಣ್ಣು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಇದ್ದು, ಇದರಲ್ಲಿ ಪ್ರಮುಖವಾದ ಆ್ಯಂಟಿಆಕ್ಸಿಡೆಂಟ್ ಇದೆ.

ಸೌತೆಕಾಯಿ ದಿನನಿತ್ಯ ಸೇವಿಸಿದರೆ ಸಿಗುವ ಪ್ರಯೋಜನಗಳು

ಕೆಲವೊಂದು ಕಾಯಿಲೆಗಳ ತಡೆಯಲು ಹಾಗೂ ಅದನ್ನು ನಿವಾರಿಸಲು ಇದು ತುಂಬಾ ಪರಿಣಾಮಕಾರಿ. ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೀರಿಕೊಳ್ಳುವ ನಾರಿನಾಂಶ ಹೆಚ್ಚಿದ್ದು, ಇದು ತೂಕ ಇಳಿಸುವವರಿಗೆ ತುಂಬಾ ಪರಿಣಾಮಕಾರಿ. ಸೌತೆಕಾಯಿಯಲ್ಲಿ 45 ಕ್ಯಾಲರಿ, 11 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 2 ಗ್ರಾಂ ಪ್ರೋಟೀನ್, 2 ಗ್ರಾಂ ನಾರಿನಾಂಶ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ಮ್ಯಾಂಗನೀಸ್ ಇದೆ. ಸೌತೆಕಾಯಿ ದಿನನಿತ್ಯ ಸೇವಿಸಿದರೆ ಅದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಯಿರಿ.

   
 
ಹೆಲ್ತ್