Back
Home » ಬಾಲಿವುಡ್
'ತಾರಕ್ ಮೆಹ್ತಾ'ದ ಜನಪ್ರಿಯ ನಟ ಡಾ. ಹಾಥಿ ವಿಧಿವಶ
Oneindia | 9th Jul, 2018 06:12 PM

ಹೆಸರಾಂತ ಹಾಸ್ಯ ನಟ ಕವಿ ಕುಮಾರ್ ಆಜಾದ್ ಇಂದು (ಸೋಮವಾರ) ನಿಧನ ಹೊಂದಿದ್ದಾರೆ. ಹೃದಯಘಾತದಿಂದ ಇಂದು ಬೆಳ್ಳಗೆ 12 ಗಂಟೆ ಸುಮಾರಿಗೆ ಅವರು ಕೊನೆ ಉಸಿರೇಳೆದಿದ್ದಾರೆ.

ನಟ ಕವಿ ಕುಮಾರ್ ಆಜಾದ್ 'Taarak Mehta Ka Ooltah Chashmah' ಎಂಬ ಶೋ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಡಾ. ಹನ್ಸರಾಜ್ ಹಾಥಿಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಪಾತ್ರದ ಮೂಲಕ ದೊಡ್ಡ ಮಟ್ಟದ ಹೆಸರು ಅವರಿಗೆ ಸಿಕ್ಕಿತ್ತು.

'ವಠಾರ' ಧಾರಾವಾಹಿ ಖ್ಯಾತಿಯ ಹಾಸ್ಯನಟ ಮಲ್ಲೇಶ್ ಇನ್ನಿಲ್ಲ

ಈ ಹಿಂದೆ ಅನಾರೋಗ್ಯ ಇದ್ದರೂ ಕೂಡ ಈ ಕಾರ್ಯಕ್ರಮದ ಶೂಟಿಂಗ್ ನಲ್ಲಿ ಕವಿ ಕುಮಾರ್ ಆಜಾದ್ ಭಾಗಿಯಾಗುತ್ತಿದ್ದರಂತೆ. ಆದರೆ, ಇಂದು ತುಂಬ ಹುಷಾರಿಲ್ಲ ಎಂದು ಕಾರ್ಯಕ್ರಮದ ನಿರ್ಮಾಪಕರಿಗೆ ಹೇಳಿ ಶೋ ಶೂಟಿಂಗ್ ನಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದು ತಿಳಿಸಿದ್ದರಂತೆ.

ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ಒಂದು ದಶಕದಿಂದ ಹಿಂದಿ ಧಾರಾವಾಹಿ ಪ್ರಿಯರನ್ನು ರಂಜಿಸುತ್ತಿದೆ. ಗುಜರಾತಿ ನಾಟಕಕಾರ ತಾರಕ್ ಮೆಹ್ತಾ ಅವರ ವಾರದ ಅಂಕಣ 'ದುನಿಯಾ ನೇ ಉಂದಾ ಚಷ್ಮಾ' ಆಧಾರಿಸಿ ಈ ಹಾಸ್ಯ ಧಾರಾವಾಹಿಯನ್ನು ನಿರ್ಮಿಸಲಾಗಿದೆ. ಈ ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರಗಳು, ಅವುಗಳ ಹೆಸರುಗಳು, ಅವರ ವಿಚಿತ್ರ ವಿಶಿಷ್ಟ ಮ್ಯಾನರಿಸಂಗಳು ನೋಡುಗರ ಮನಸ್ಸನ್ನು ಹಿಡಿದಿಟ್ಟಿವೆ. ಅಷ್ಟೊಂದು ಜನಪ್ರಿಯತೆ ಗಳಿಸಿರಿದಿದ್ದರೆ ಸತತವಾಗಿ 10 ವರ್ಷ ಈ ಧಾರಾವಾಹಿ ನಡೆಯುತ್ತಿರಲಿಲ್ಲ.

ಕವಿ ಕುಮಾರ್ ಆಜಾದ್ ಪಾಸಿಟಿವ್ ವ್ಯಕ್ತಿ ಆಗಿದ್ದು, ಒಬ್ಬ ಒಳ್ಳೆಯ ನಟ ಆಗಿದ್ದರು. ಬಹುಮುಖ್ಯವಾಗಿ ಅವರು 'Taarak Mehta Ka Ooltah Chashmah' ಕಾರ್ಯಕ್ರಮವನ್ನು ಹೆಚ್ಚು ಇಷ್ಟ ಪಟ್ಟಿದ್ದರು. ಈ ಕಾರ್ಯಕ್ರಮದ 2500 ಸಂಚಿಕೆಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

   
 
ಹೆಲ್ತ್