Back
Home » ಸಮ್ಮಿಲನ
ಹುಟ್ಟಿದ ದಿನಾಂಕದ ಅನುಸಾರ ನಿಮ್ಮ ಅದೃಷ್ಟ ತಿಳಿಯಿರಿ
Boldsky | 10th Jul, 2018 12:00 PM
 • 4ನೇ ತಾರೀಖು

  ಇಲಿ ವರ್ಷದ ಯಾವುದೇ ತಿಂಗಳಲ್ಲಿ 4ನೇ ತಾರೀಖಿನಂದು ಜನಿಸಿದ ಜನರು ಬುದ್ಧಿವಂತರು ಹಾಗೂ ಅಧ್ಯಯನವನ್ನು ಇಷ್ಟಪಡುವವರು ಆಗಿರುತ್ತಾರೆ. ಅಲ್ಲದೆ ಅತ್ಯುತ್ತಮ ಪತಿ/ಪತ್ನಿಯನ್ನು ಹೊಂದುತ್ತಾರೆ. ತಮ್ಮ ಯೌವನದಲ್ಲಿ ಸ್ಥಿರವಾದ ಜೀವನವನ್ನು ನಡೆಸುತ್ತಾರೆ ಎನ್ನಲಾಗುವುದು. ಮಧ್ಯಮ ವಯಸ್ಸಿನಲ್ಲಿ ಹೇರಳವಾದ ಸಂಪತ್ತನ್ನು ಹೊಂದಿರುತ್ತಾರೆ. ವೃದ್ಧಾಪ್ಯದಲ್ಲೂ ಸಂತೋಷದ ಜೀವನವನ್ನು ನಡೆಸುವರು.


 • 13ನೇ ತಾರೀಖು

  ಇಲಿ ವರ್ಷದ ಯಾವುದೇ ತಿಂಗಳಲ್ಲಿ 13ನೇ ತಾರೀಖಿನಂದು ಜನಿಸಿದ ಜನರು ಅಪಾರವಾದ ಆಶೀರ್ವಾದವನ್ನು ಮತ್ತು ಅದೃಷ್ಟವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ವೃತ್ತಿ ಜೀವನದಲ್ಲಿ ಇವರು ಯಶಸ್ವಿಯಾಗುವರು. ಉತ್ತಮ ಸಂಪತ್ತುಗಳೊಂದಿಗೆ ದೀರ್ಘಕಾಲ ಬದುಕುತ್ತಾರೆ.


 • 30ನೇ ತಾರೀಖು

  ಇಲಿ ವರ್ಷದ ಯಾವುದೇ ತಿಂಗಳಲ್ಲಿ 30ನೇ ತಾರೀಖಿನಂದು ಜನಿಸಿದ ಜನರು ಉತ್ಸಾಹ ಭರಿತ ವ್ಯಕ್ತಿಗಳಾಗಿರುತ್ತಾರೆ. ನ್ಯಾಯಯುತವಾದ ವ್ಯಕ್ತಿಗಳು ಹಾಗೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಇಷ್ಟಪಡುವರು. ಆಹಾರ ಮತ್ತು ಬಟ್ಟೆಯ ಬಗ್ಗೆ ಯಾವುದೇ ಚಿಂತೆಯನ್ನು ಹೊಂದಿರುವುದಿಲ್ಲ. ಮಧ್ಯಮ ಜೀವನದ ಅವಧಿಯಲ್ಲಿ ಶ್ರೀಮಂತ ಜೀವನವನ್ನು ನಡೆಸುತ್ತಾರೆ. ತಮ್ಮ ವೃದ್ಧಾಪ್ಯದಲ್ಲಿ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದರ ಮೂಲಕ ಸ್ವರ್ಗದ ಅನುಭವವನ್ನು ಅನುಭವಿಸುತ್ತಾರೆ.


 • ಎತ್ತಿನ ವರ್ಷ

  13ನೇ ತಾರೀಖು:
  ಎತ್ತಿನ ವರ್ಷದ ಯಾವುದೇ ತಿಂಗಳಲ್ಲಿ 13ನೇ ತಾರೀಖಿನಂದು ಜನಿಸಿದ ಜನರು ಭರವಸೆಯುಳ್ಳ ವ್ಯಕ್ತಿಗಳು ಹಾಗೂ ಗೌರವಾನ್ವಿತರಾಗಿ ಬದುಕುತ್ತಾರೆ. ಇವರಿಗೆ ಹಾಗೂ ಇವರ ಮಕ್ಕಳಿಗೆ ಆಹಾರ ಮತ್ತು ಬಟ್ಟೆಯ ಬಗ್ಗೆ ಯಾವುದೇ ಚಿಂತೆಗಳಿರುವುದಿಲ್ಲ. ಇವರು ಇತರರಿಗೆ ಉತ್ತಮ ಸಹಾಯ ಮಾಡುತ್ತಾರೆ.


 • 27ನೇ ತಾರೀಖು

  ಎತ್ತಿನ ವರ್ಷದ ಯಾವುದೇ ತಿಂಗಳ 27ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ಅದೃಷ್ಟವಂತರು. ಪುರುಷರು ಪ್ರಾಮಾಣಿಕ ಹಾಗೂ ನೇರ ಸ್ವಭಾವದವರಾಗಿರುತ್ತಾರೆ. ಉದಾರ ಗುಣದವರಾದ ಇವರು ಸದಾ ಸತ್ಯವನ್ನೇ ಹೇಳುವರು. ಇವರು ಶ್ರೀಮಂತರು ಹಾಗೂ ಉತ್ತಮ ಪತ್ನಿಯನ್ನು ಹೊಂದಿರುತ್ತಾರೆ. ಈ ದಿನಾಂಕದಲ್ಲಿ ಜನಿಸಿದ ಸ್ತ್ರೀಯರು ಸೊಗಸಾದ ಹಾಗೂ ಸಂತೋಷ ಭರಿತವಾದ ಸುದೀರ್ಘ ಜೀವನ ನಡೆಸುವರು.


 • ಹುಲಿ ವರ್ಷ

  16ನೇ ತಾರೀಖು
  ಹುಲಿ ವರ್ಷದ ಯಾವುದೇ ತಿಂಗಳ 16ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ಚೈನೀಸ್ ಜ್ಯೋತಿಷ್ಯದ ಪ್ರಕಾರ ಅತ್ಯುತ್ತಮ ಶ್ರೀಮಂತಿಕೆ ಹಾಗೂ ವರ್ಣಮಯ ಜೀವನವನ್ನು ನಡೆಸುತ್ತಾರೆ. ಖ್ಯಾತಿ ಮತ್ತು ಸಂಪತ್ತು ಎರಡನ್ನು ಗಳಿಸುವರು. ಇವರಿಗೆ ಹೆಚ್ಚು ಪ್ರಣಯ ಸಂಬಂಧಗಳಿರುತ್ತವೆ ಎಂದು ಹೇಳಲಾಗುವುದು.


 • 18ನೇ ತಾರೀಖು

  ಹುಲಿ ವರ್ಷದ ಯಾವುದೇ ತಿಂಗಳ 18ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ತಮ್ಮ ವೃತ್ತಿ ಜೀವನದಲ್ಲಿ ಬಡ್ತಿಯನ್ನು ಪಡೆದುಕೊಳ್ಳುವರು. ಉತ್ತಮ ವೈವಾಹಿಕ ಜೀವನ ಹಾಗೂ ಮೊಮ್ಮಕ್ಕಳೊಂದಿಗೆ ಸಮಯವನ್ನು ಕಳೆಯುವರು.


 • ಮೊಲದ ವರ್ಷ

  26ರ ದಿನಾಂಕ
  ಮೊಲದ ವರ್ಷದ ಯಾವುದೇ ತಿಂಗಳ 26ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ಬುದ್ಧಿವಂತರು ಹಾಗೂ ಗೌರವಾನ್ವಿತರು ಆಗಿರುತ್ತಾರೆ. ಇವರ ವೃತ್ತಿಪರ ಕೌಶಲ್ಯವು ಹೆಚ್ಚಿನ ಸಾಮಾಜಿಕ ಸ್ಥಾನಮಾನವನ್ನು ತಂದುಕೊಡುವುದು. ಜೊತೆಗೆ ಆದಾಯವನ್ನು ಹೆಚ್ಚಿಸುವುದು. ಇವರ ದೀರ್ಘ ಜೀವನವು ಶಾಂತಿಯಿಂದ ಕೂಡಿರುತ್ತದೆ.


 • 29ರ ದಿನಾಂಕ

  ಮೊಲದ ವರ್ಷದ ಯಾವುದೇ ತಿಂಗಳ 29ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ಅದೃಷ್ಟವಂತರು, ಪುರುಷರು ವ್ಯಾಪಾರದಲ್ಲಿ ಶ್ರೀಮಂತರಾಗಿರುತ್ತಾರೆ. ಹೆಣ್ಣು ಮಕ್ಕಳು ಸ್ಮಾರ್ಟ್ ಮತ್ತು ಮನಮೋಹಕರಾಗಿರುತ್ತಾರೆ. ಇವರು ಕುಟುಂಬದ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಾರೆ.


 • ಪ್ರಾಣಿ ಡ್ರ್ಯಾಗನ್

  1ನೇ ತಾರೀಖು
  ಡ್ರ್ಯಾಗನ್ ವರ್ಷದ ಯಾವುದೇ ತಿಂಗಳ 1ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ಜೀವನದಲ್ಲಿ ನಯವಾದ ವೃತ್ತಿ ಹೊಂದಿರುತ್ತಾರೆ. ಜೊತೆಗೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲು ಹಂಬಲಿಸುವರು.


 • 16ನೇ ತಾರೀಖು

  ಡ್ರ್ಯಾಗನ್ ವರ್ಷದ ಯಾವುದೇ ತಿಂಗಳ 16ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ತೀಕ್ಷ್ಣ ಗುಣದವ ರಾಗಿರುತ್ತಾರೆ. ಇವರು ಯಶಸ್ವಿಯುತವಾದ ವೃತ್ತಿ ಜೀವನವನ್ನು ಅನುಭವಿಸುತ್ತಾರೆ. ಹೊಸ ಜ್ಞಾನವನ್ನು ತಿಳಿದುಕೊಳ್ಳುವ ಕುತೂಹಲದಿಂದಾಗಿ ಖ್ಯಾತಿ ಮತ್ತು ಸಂಪತ್ತನ್ನು ಪಡೆದುಕೊಂಡಿರುತ್ತಾರೆ.


 • ಹಾವಿನ ವರ್ಷ

  1ನೇ ತಾರೀಖು
  ಹಾವಿನ ವರ್ಷದ 1ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳು ಜೀವನದಲ್ಲಿ ಹೆಚ್ಚು ಸಂತೋಷದ ಘಟನೆಯನ್ನು ಅನುಭವಿಸುತ್ತಾರೆ. ಜೊತೆಗೆ ಎಲ್ಲಾ ವಿಚಾರದಲ್ಲೂ ಅವರು ಹೆಚ್ಚಿನ ಸಂಗತಿಯನ್ನು ಪಡೆದುಕೊಳ್ಳುವರು.


 • 23ನೇ ತಾರೀಖು

  ಹಾವಿನ ವರ್ಷದ 23ನೇ ತಾರೀಖಿನಲ್ಲಿ ಜನಿಸಿದ ವ್ಯಕ್ತಿಗಳು ಶೌರ್ಯ ಮತ್ತು ಜ್ಞಾನವನ್ನು ಹೊಂದಿರುತ್ತಾರೆ. ಇವರು ಹೆಚ್ಚು ಗೌರವಾನ್ವಿತರು ಮತ್ತು ಮೃದು ವೃತ್ತಿ ಸ್ವಭಾವದವರಾಗಿರುತ್ತಾರೆ. ಸಾಮರಸ್ಯ ಹೊಂದಿರುವ ಮದುವೆಯ ಜೀವನವನ್ನು ಹೊಂದಿರುತ್ತಾರೆ.


 • ಹುಂಜ/ಕೋಳಿಯ ವರ್ಷ

  4ನೇ ತಾರೀಖು
  ಕೋಳಿಯ ವರ್ಷದ 4ನೇ ತಾರೀಖಿನಲ್ಲಿ ಜನಿಸಿದವರು ಜೀವನದಲ್ಲಿ ನೇರ ಮತ್ತು ಪ್ರಾಮಾಣಿಕ ಗುಣವನ್ನು ಹೊಂದಿರುತ್ತಾರೆ. ತಮ್ಮ ಯೌವನದಲ್ಲಿ ಖ್ಯಾತಿಯನ್ನು ಪಡೆದುಕೊಳ್ಳುತ್ತಾರೆ. ಮಧ್ಯಮ ವಯಸ್ಸಿನಲ್ಲಿ ಮೃದು ಮತ್ತು ಶ್ರೀಮಂತ ಜೀವನವನ್ನು ನಡೆಸುತ್ತಾರೆ.


 • 26ನೇ ತಾರೀಖು

  ಕೋಳಿಯ ವರ್ಷದ ಯಾವುದೇ ತಿಂಗಳ 26ನೇ ತಾರೀಖಿಗೆ ಜನಿಸಿದರೆ ವ್ಯಾಪಾರದ ಗುಣವು ಉಡುಗೊರೆಯಾಗಿರುತ್ತದೆ. ಹಾಗಾಗಿ ಇವರಿಗೆ ಜೀವನದ ಹಾದಿ ಕಂಡುಕೊಳ್ಳಲು ಸುಲಭವಾಗುವುದು. ಇವರು ತಮ್ಮ ಆಹಾರ ಮತ್ತು ಬಟ್ಟೆಗಾಗಿ ಯಾವುದೇ ಚಿಂತನೆ ನಡೆಸುವುದಿಲ್ಲ.


 • ನಾಯಿ ವರ್ಷ

  7ನೇ ತಾರೀಖು
  ನಾಯಿ ವರ್ಷದ ಯಾವುದೇ ತಿಂಗಳಿನ 7ನೇ ತಾರೀಖಿಗೆ ಜನಿಸಿದವರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಆರೋಗ್ಯಯುತವಾದ ಜೀವನದಿಂದ ಸಮೃದ್ಧಿಯನ್ನು ಪಡೆದುಕೊಳ್ಳುವರು.


 • 28ನೇ ತಾರೀಖು

  ನಾಯಿ ವರ್ಷದ ಯಾವುದೇ ತಿಂಗಳಿನ 28ನೇ ತಾರೀಖಿಗೆ ಜನಿಸಿದವರು ಬುದ್ಧಿವಂತರು ಹಾಗೂ ಗೌರವಾನ್ವಿತರಾಗಿರುತ್ತಾರೆ. ದೊಡ್ಡ ಕುಟುಂಬವನ್ನು ಹೊಂದುವುದರೊಂದಿಗೆ ಸಾಮಾಜಿಕ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾರೆ.


 • ಹಂದಿ ವರ್ಷ

  17ನೇ ತಾರೀಖು
  ಹಂದಿ ವರ್ಷದ ಯಾವುದೇ ತಿಂಗಳ 17ನೇ ತಾರೀಖಿಗೆ ಜನಿಸಿದವರು ಸಾಮಾನ್ಯ ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಹೊಂದಿರುತ್ತಾರೆ. ಇವರ ಉದಾತ್ತವಾದ ಗುಣ ಹಾಗೂ ಉನ್ನತ ಪ್ರತಿಷ್ಠೆಯನ್ನು ಹೊಂದುವುದರ ಮೂಲಕ ಖ್ಯಾತಿಯನ್ನು ಅನುಭವಿಸುತ್ತಾರೆ.


 • 24ನೇ ತಾರೀಖು

  ಹಂದಿ ವರ್ಷದ ಯಾವುದೇ ತಿಂಗಳ 24ನೇ ತಾರೀಖಿಗೆ ಜನಿಸಿದವರು ಉತ್ತಮ ನಡತೆ ಮತ್ತು ವೃತ್ತಿಪರ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ಜೀವನದಲ್ಲಿ ಎಲ್ಲರನ್ನೂ ಗೌರವಿಸುತ್ತಾರೆ. ಇವರು ಜೀವನದ ಉದ್ದಕ್ಕೂ ಖ್ಯಾತಿ ಮತ್ತು ಸಂಪತ್ತನ್ನು ಅನುಭವಿಸುವರು
ಜ್ಯೋತಿಷ್ಯ ಎನ್ನುವುದು ಒಂದು ವಿಸ್ತಾರವಾದ ವಿಚಾರ. ಅದರಲ್ಲಿ ತಿಳಿದುಕೊಳ್ಳುವುದು ಸಾಕಷ್ಟು ಸಂಗತಿಗಳಿರುತ್ತವೆ. ಎಷ್ಟೇ ವಿಚಾರವನ್ನು ತಿಳಿದರೂ ಇನ್ನೂ ತಿಳಿದುಕೊಳ್ಳುವ ವಿಷಯಗಳಿರುತ್ತವೆ. ನಮ್ಮ ಬದುಕು ಅಥವಾ ಚಿಂತನೆಗಳು ನಾವು ಅಂದುಕೊಂಡಂತೆ ಇರುತ್ತದೆ ಎಂದು ಭಾವಿಸುವುದು ಸಹಜ. ಆದರೆ ನಮ್ಮ ಭವಿಷ್ಯ ಅದೃಷ್ಟಗಳು ನಾವು ಹುಟ್ಟಿದ ಘಳಿಗೆಯಿಂದಲೇ ಆರಂಭವಾಗಿರುತ್ತದೆ ಎನ್ನಲಾಗುವುದು. ಚೀನೀಯರ ಪ್ರಕಾರ 12 ಪ್ರಾಣಿಗಳು ಹುಟ್ಟಿದ ದಿನಾಂಕಗಳನ್ನು ಆಳುತ್ತವೆ. ಆ ದಿನಾಂಕದಲ್ಲಿ ನಾವು ಹುಟ್ಟಿದ್ದರೆ ನಮ್ಮ ಬದುಕಿನಲ್ಲಿ ಕೆಲವು ಅದೃಷ್ಟಗಳು ಹಾಗೂ ಬದಲಾವಣೆಯನ್ನು ಕಾಣುತ್ತೇವೆ ಎಂದು ಹೇಳಲಾಗುವುದು.

ಸಂಖ್ಯಾ ಶಾಸ್ತ್ರ, ಹಸ್ತ ಮುದ್ರಿಕೆ, ಜಾತಕ, ಕಾಲ ಸೇರಿದಂತೆ ಇನ್ನಿತರ ಪ್ರಾಣಿ ಮತ್ತು ಪಕ್ಷಿಗಳ ಶಕುನದ ಮೂಲಕವೂ ಭವಿಷ್ಯವನ್ನು ಹೇಳಲಾಗುತ್ತದೆ. ಅಂತೆಯೇ ಚೈನೀಯರ ಜ್ಯೋತಿಷ್ಯವು ಸಹ ಪ್ರಮುಖ ಪಾತ್ರವನ್ನು ಪಡೆದುಕೊಂಡಿದೆ. ಚೈನೀಸ್ ಜ್ಯೋತಿಷ್ಯದ ಪ್ರಕಾರ ನಿಮ್ಮ ಹುಟ್ಟಿದ ದಿನಾಂಕ ಮತ್ತು ಪ್ರಾಣಿಗಳ ಸಂಕೇತದ ಮೂಲಕ ಯಾವ ಬಗೆಯ ಭವಿಷ್ಯವನ್ನು ಹೊಂದಿರುತ್ತೀರಿ ಎನ್ನುವುದನ್ನು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸುವುದರ ಮೂಲಕ ಅರಿಯಿರಿ.

ಚೈನೀಸ್ ಪಂಚಾಂಗದ ಪ್ರಕಾರ ವರ್ಷಗಳನ್ನು ಕೆಲವು ಪ್ರಾಣಿಗಳಿಗೆ ಹೋಲಿಸಲಾಗಿದೆ. ಆ ಪ್ರಾಣಿ ವರ್ಷದ ಅಡಿಯಲ್ಲಿ ಬರುವ ಯಾವುದೇ ತಿಂಗಳಾಗಿರಬಹುದು, ಕೆಲವು ಸೂಕ್ತ ದಿನಾಂಕದಂದು ಜನಿಸಿದವರಿಗೆ ಅದೃಷ್ಟವಿರುತ್ತದೆ. ಹಾಗಾದರೆ ಆ ನಿಗದಿತ ದಿನಾಂಕದಲ್ಲಿ ಜನಿಸಿದವರ ಭವಿಷ್ಯವು ಹೇಗೆ ಇರುತ್ತದೆ? ಎನ್ನುವುದನ್ನು ಈ ಮುಂದೆ ವಿವರಿಸಲಾಗಿದೆ...

   
 
ಹೆಲ್ತ್