Back
Home » ಪ್ರವಾಸ
ದಟ್ಟವಾದ ಅರಣ್ಯದಲ್ಲಿ ನೆಲೆಸಿದ್ದಾನೆ ಪರಮೇಶ್ವರನು.....
Native Planet | 10th Jul, 2018 11:31 AM
 • 1. ಹೂವಿನ ಮಾಲೆಯ ಆಕಾರದಲ್ಲಿರುವುದರಿಂದ

  PC:YOUTUBE

  ಮಲ್ಲೆ ಕೊಂಡ ಶಿಖರವು ಹೂವಿನ ಮಾಲೆಯ ಆಕಾರದಲ್ಲಿದೆ. ಆದ್ದರಿಂದಲೇ ಈ ಶಿಖರವನ್ನು "ಮಲ್ಯಾದ್ರಿ "ಎಂದು ಕರೆಯುತ್ತಾರೆ. bvv ಈ ಶಿಖರದ ಮೇಲೆ ಕಾಶಿವಿಶ್ವೇಶ್ವರ, ಮಲ್ಲೆಂ ಕೊಂಡೇಶ್ವರರ ದೇವಾಲಯಗಳು ಕಾಣಿಸುತ್ತವೆ. ಅಷ್ಟೇ ಅಲ್ಲದೆ, ಮಲ್ಯ ನ್ ಕೊಂಡೇಶ್ವರ ದೇವಾಲಯದಿಂದ ಕೇವಲ ಎರಡು ಕಿಲೋ ಮೀಟರ್ ದೂರ ಕಾಲ್ನಡಿಗೆಯ ಮೂಲಕ ತೆರಳಿದರೆ ರಾಮಸರಿ ಜಲಪಾತವು ಪ್ರವಾಸಿಗರಿಗೆ ಆಕರ್ಷಿಸುತ್ತದೆ.


 • 2. ಶಿವನ ಪ್ರತಿರೂಪ

  PC:YOUTUBE

  ಇಲ್ಲಿ ಕಾಶಿವಿಶ್ವೇಶ್ವರನ ಜೊತೆ ಇರುವ ಮಲ್ಯ ಕೊಂಡಯ್ಯ ಶಿವನ ಪ್ರತಿರೂಪ ಎಂದು ಭಕ್ತರು ಭಾವಿಸುತ್ತಾರೆ. ಬೆಟ್ಟದ ಮೇಲೆ ನೆಲೆಸಿರುವ ಮಲ್ಲೇಶ್ ಕೊಂಡಯ್ಯನಿಗೆ ದೇವಾಲಯವಿದೆಯಾದರೂ ಮೇಲ್ಛಾವಣಿ ಮಾತ್ರ ಇಲ್ಲ. ಕೆಲವು ಶತಮಾನಗಳ ಹಿಂದೆ ಆ ಪ್ರದೇಶಕ್ಕೆ ಸೇರಿದ ಗ್ರಾಮಸ್ಥರೆಲ್ಲಾ ಸೇರಿ ದೇವಾಲಯಕ್ಕೆ ಮೇಲ್ಚಾವಣಿ ನಿರ್ಮಾಣ ಮಾಡಬೇಕು ಎಂದು ಕೆಲಸವನ್ನು ಪ್ರಾರಂಭಿಸಿದರು. ಆದರೆ ಮೇಲ್ಛಾವಣಿ ನಿರ್ಮಾಣ ಪೂರ್ತಿಯಾದ ರಾತ್ರಿಯೇ ನಾಶವಾಗುತ್ತಿತ್ತು. ಇದರಿಂದಾಗಿ ಗ್ರಾಮಸ್ಥರು ಒಂದು ದಿನ ಅರ್ಧ ರಾತ್ರಿಯಂದು ಅಲ್ಲಿಯೇ ಕಾವಲು ಕಾಯುತ್ತಾರೆ.


 • 3. ರಾತ್ರಿಯ ಸಮಯದಲ್ಲಿ ಯುವಕ

  PC:YOUTUBE

  ಅರ್ಧರಾತ್ರಿ ಸಮಯದಲ್ಲಿ ಓರ್ವ ಯುವಕ ಕುದುರೆಯ ಮೇಲೆ ಆ ದೇವಾಲಯದ ಬಳಿ ಬಂದು ಮೇಲ್ಛಾವಣಿಯನ್ನು ನಾಶಗೊಳಿಸಿದನಂತೆ. ಇದರಿಂದಾಗಿ ಕೋಪಗೊಂಡ ಗ್ರಾಮಸ್ಥರು ಆ ಯುವಕನನ್ನು ಮರಕ್ಕೆ ಕಟ್ಟಿ ಹಾಕುತ್ತಾರೆ. ಅದೇ ಸಮಯದಲ್ಲಿ ಒಂದು ಕಾಗೆಯೂ ಆ ಯುವಕನ ಕಣ್ಣನ್ನು ಕುಕ್ಕುವುದಕ್ಕೆ ಹೋಗುತ್ತದೆ. ಇದರಿಂದಾಗಿ ಯುವಕನು ತಾನೇ ಮಲ್ಲೆಂ ಕೊಂಡೇಶ್ವರ ಎಂದು ತನಗೆ ಹಚ್ಚಹಸಿರಿನ ಪ್ರಕೃತಿಯ ಮಧ್ಯೆ ಆಕಾಶವನ್ನು ನೋಡುತ್ತಾ ಸಮಯವನ್ನು ಕಳೆಯುವುದು ಇಷ್ಟವೆಂದು ಹೇಳುತ್ತಾನೆ. ಆದ್ದರಿಂದಲೇ ಮೇಲ್ಛಾವಣಿಯನ್ನು ನಾಶಗೊಳಿಸುತ್ತಿದೆ ಎಂದು ಗ್ರಾಮಸ್ಥರಿಗೆ ವಿವರಿಸುತ್ತಾನೆ.


 • 4.ಅದ್ದರಿಂದಲೇ ಕಾಗೆ, ಹುಲಿ ಕಾಣಿಸುವುದಿಲ್ಲ..

  PC:YOUTUBE

  ಇನ್ನು ತನ್ನ ಕಣ್ಣನ್ನು ಕುಕ್ಕಲು ಬಂದ ಕಾಗೆಯನ್ನು ಉದ್ದೇಶಿಸಿ ಇನ್ನು ಮುಂದೆ ಈ ಅರಣ್ಯದಲ್ಲಿ ನಿಮಗೆ ಸ್ಥಳವಿಲ್ಲ ಎಂದು ಶಪಿಸುತ್ತಾನೆ. ಅದ್ದರಿಂದಲೇ ಇಲ್ಲಿ ಕಾಗೆಗಳು ಕಾಣಿಸುವುದಿಲ್ಲ. ಅದೇ ವಿಧವಾಗಿ ಇಲ್ಲಿ ಹಸುವನ್ನು ತಿನ್ನುವ ಸಲುವಾಗಿ ನಿತ್ಯವು ಒಂದು ಹುಲಿ ಬರುತ್ತಿತ್ತಂತೆ. ಇದರಿಂದಾಗಿ ಆ ಹಸುವು ಮಲ್ಲೆಂಕೊಂಡೇಶ್ವರನಲ್ಲಿ ತಮ್ಮ ಬಾಧೆಯನ್ನು ಹೇಳಿಕೊಂಡಿತು. ಹಾಗಾಗಿಯೇ ಆ ಹುಲಿಗು ಕೂಡ ಈ ಅರಣ್ಯದಲ್ಲಿ ಸ್ಥಾನವಿಲ್ಲ ಎಂದು ಹೇಳುತ್ತಾರೆ. ಈ ಕಾರಣದಿಂದಲೇ ಈ ಅರಣ್ಯದಲ್ಲಿ ಕಾಗೆ ಹಾಗು ಹುಲಿಗಳು ಕಾಣಿಸುವುದಿಲ್ಲ.


 • 5.ಹೇಗೆ ತೆರಳಬೇಕು?

  PC:YOUTUBE

  ಬೆಟ್ಟದ ಮೇಲೆ ಮಲ್ಲೆಂಕೊಂಡೇಶ್ವರನ ದೇವಾಲಯಕ್ಕೆ ಸೇರಿಕೊಳ್ಳಬೇಕೆಂದರೆ ಸುಮಾರು 10 ಕಿ.ಮೀ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬೆಟ್ಟಗಳನ್ನು ದಾಟುತ್ತಾ ಸಾಗಬೇಕು. ಕಡಪ ಜಿಲ್ಲೆ ಬದ್ವೇಲ್‍ನಿಂದ ಕೇವಲ 25 ಕಿ.ಮೀ ದೂರದಲ್ಲಿ ಬ್ರಾಹ್ಮಣಪಲ್ಲೆ ಇದೆ. ಇಲ್ಲಿಯವರೆಗೆ ಬಸ್ಸುಗಳ ಸೌಕರ್ಯವಿದೆ. ಈ ಗ್ರಾಮದಿಂದ ಬೆಟ್ಟದ ಮೇಲೆ ಕಾಲ್ನಡಿಗೆಯ ಮೂಲಕವೇ ಸಾಗಬೇಕು.
ದಟ್ಟವಾದ ಅರಣ್ಯ ಪ್ರದೇಶ, ಪಕ್ಷಿಗಳ ಕಲರವ, ಆಕಾಶದಿಂದ ಹಾಲ್ನೊರೆಯಂತೆ ಭೂಮಿಗೆ ಧುಮುಕುತ್ತಿರುವ ಜಲಪಾತಗಳು ಆಹಾ.... ಕೇಳಲು ಎಷ್ಟು ಚೆನ್ನಾಗಿದೆ ಅಲ್ಲವೇ? ಕಣ್ಣಾರೆ ಕಂಡರೆ ಮತ್ತೆಷ್ಟು ಅದ್ಭುತವಾಗಿರಬಹುದು?. ಇಂತಹ ಸುಂದರವಾದ ಅರಣ್ಯದಲ್ಲಿ ಒಂದು ಆಧ್ಯಾತ್ಮಿಕ ತಾಣವಿದೆ. ಆ ತಾಣದಲ್ಲಿ ಪರಮೇಶ್ವರನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಅಷ್ಟೇ ಅಲ್ಲದೆ ಇಲ್ಲಿನ ದೇವಾಲಯಕ್ಕೆ ಯಾವುದೇ ರೀತಿಯ ಮೇಲ್ಛಾವಣಿ ಇಲ್ಲದಿರುವುದು ವಿಶೇಷ. ಇಲ್ಲಿನ ಬೆಟ್ಟದ ಮೇಲಿರುವ ಕೊಳದಲ್ಲಿ ಸ್ನಾನವನ್ನು ಆಚರಿಸಿದರೆ ಸಕಲ ರೋಗಗಳು ಗುಣವಾಗುತ್ತದೆ ಎಂಬುದು ಭಕ್ತರ ಪ್ರಬಲವಾದ ವಿಶ್ವಾಸ. ಸಂತಾನ ಇಲ್ಲದೆ ಇರುವವರು ಈ ಬೆಟ್ಟದ ಮೇಲೆ ನೆಲೆಸಿರುವ ಸ್ವಾಮಿಯನ್ನು ಆರಾಧಿಸಿದರೆ ಮಕ್ಕಳಾಗುತ್ತದೆ ಎಂಬ ವಿಶ್ವಾಸವಿದೆ. ಈ ಮಹಿಮಾನ್ವಿತ ಸ್ಥಳವು ವೈಎಸ್ಆರ್ ಜಿಲ್ಲೆಯ ಗೋಪವರಂ ಮಂಡಲದ ಮೆಲ್ಲಂಕೊಂಡಅರಣ್ಯ ಪ್ರದೇಶದಲ್ಲಿ ಇದೆ. ನೆಲ್ಲೂರು ಜಿಲ್ಲೆಯ ರಹದಾರಿಯಲ್ಲಿರುವ ಈ ದೇವಾಲಯವು ಅನೇಕ ವಿಶೇಷತೆಗಳನ್ನು ಹೊಂದಿದೆ.

ಈ ದೇವಾಲಯದ ಕುರಿತು ನೇಟಿವ್ ಪ್ಲಾನೆಟ್ ನ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ.

   
 
ಹೆಲ್ತ್