Back
Home » ಸಮ್ಮಿಲನ
ಗುರು ಮತ್ತು ಬುಧನ ಪ್ರಭಾವದಿಂದ ಮುಂದಿನ ಭವಿಷ್ಯ ಹೇಗಿರುತ್ತದೆ ನೋಡಿ..
Boldsky | 11th Jul, 2018 07:02 AM
 • ಮೇಷ

  ಬುಧ ಮತ್ತು ಗುರುವಿನ ಬದಲಾವಣೆಯ ಪ್ರಭಾವದಿಂದ ಈ ರಾಶಿಯವರು ತಮ್ಮ ಅಭಿಪ್ರಾಯಗಳನ್ನು ನಿರಾತಂಕವಾಗಿ ಹೇಳಲು ಉತ್ತಮ ಸಮಯ. ಗುರಿಯನ್ನು ಪೂರ್ಣಗೊಳಿಸಬಹುದು. ಜೊತೆಗೆ ಸ್ಫೂರ್ತಿದಾಯಕ ಸುದ್ದಿಯನ್ನು ನಿರೀಕ್ಷಿಸಬಹುದು. ಹಣಕಾಸು ಹಾಗೂ ಸಂಬಂಧಗಳ ಜೀವನದಲ್ಲಿ ಕೆಲವು ಅಭಿಪ್ರಾಯಗಳನ್ನು ಬದಲಿಸಿಕೊಳ್ಳಬೇಕಾಗುವುದು. ಕೆಲವು ವಿಚಾರದಲ್ಲಿ ನಿಮ್ಮ ದೃಷ್ಟಿಕೋನವು ಬದಲಾಗುವುದು.


 • ವೃಷಭ

  ಮುಂಬರುವ ದಿನದಲ್ಲಿ ಗಮನಾರ್ಹ ಬದಲಾವಣೆಯನ್ನು ನೀವು ಕಾಣಬಹುದು. ಅವಿವಾಹಿತರಾಗಿದ್ದರೆ ಹೊಸ ಸಂಬಂಧವು ನಿಮ್ಮನ್ನು ಹುಡುಕಿ ಬರುವ ಸಾಧ್ಯತೆಗಳಿವೆ. ವಿವಾಹಿತರು ಕುಟುಂಬದಲ್ಲಿ ಹೊಸ ಬದಲಾವಣೆಯನ್ನು ಕಾಣುವರು. ಈ ಗ್ರಹಗಳ ಬದಲಾವಣೆಯಿಂದ ನಕಾರಾತ್ಮಕ ವಿಷಯವೆಂದರೆ ವ್ಯವಹಾರಗಳ ಮೇಲೆ ಹಾಗೂ ಪಾಲುದಾರರ ಮೇಲೆ ಗಮನಾರ್ಹ ಬದಲಾವಣೆ ಉಂಟಾಗುವುದು.


 • ಮಿಥುನ

  ಕೆಲಸ ಮತ್ತು ಆರೋಗ್ಯದಲ್ಲಿ ಬೃಹತ್ ಬದಲಾವಣೆಯನ್ನು ಈ ಹೊಸ ಬದಲಾವಣೆಯಿಂದ ಅನುಭವಿಸಲಿದ್ದೀರಿ. ಪ್ರೇರಣೆ ಮತ್ತು ಉತ್ಸಾಹದಲ್ಲಿ ಹೆಚ್ಚಳವಾಗುವುದರಿಂದ ನಿಮ್ಮ ದಿನಚರಿಯು ಬದಲಾಗಬಹುದು. ಈ ಹಂತವು ಹೆಚ್ಚುವರಿ ಕೆಲಸವನ್ನು ಕೂಡಾ ತಂದುಕೊಡುವುದು. ನಿಮ್ಮ ಸಹೋದ್ಯೋಗಿಗಳ ಕಡೆಗೆ ನಿಮ್ಮ ದೃಷ್ಟಿಕೋನವು ಬದಲಾಗುವುದು.


 • ಕರ್ಕ

  ಈ ರಾಶಿಯವರು ಗ್ರಹಗತಿಗಳ ಬದಲಾವಣೆಯಿಂದ ಆದಾಯದಲ್ಲಿ ಹೊಸ ಮೂಲವನ್ನು ಕಂಡುಹಿಡಿಯಲು ಒಂದು ಉತ್ತಮ ಹಂತವಾಗಿದೆ. ಸಂಬಂಧಗಳಲ್ಲಿ ಜನರು ದೊಡ್ಡ ಹೆಜ್ಜೆಯನ್ನು ತೆಗೆದುಕೊಳ್ಳುವರು. ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣುವಿರಿ. ಸಂಬಂಧಗಳಲ್ಲಿ ಸೂಕ್ತ ಮೌಲ್ಯಮಾಪನ ನಡೆಸುವಿರಿ. ನಿಮ್ಮ ಭವಿಷ್ಯವನ್ನು ಯೋಜಿಸಲು ಇದೊಂದು ಸೂಕ್ತ ಸಮಯ ಎಂದು ಹೇಳಬಹುದು.


 • ಸಿಂಹ

  ವಿಶ್ವಾಸ ಮತ್ತು ಸೃಜನಶೀಲತೆಯು ನಿಮ್ಮ ಗಮನಕ್ಕೆಬರುವುದು. ಇದು ನಿಮಗೆ ಒಂದು ಮಹಾನ್ ಬದಲಾವಣೆಯಾಗಿ ಕಾಣಿಸಿಕೊಳ್ಳುವುದು. ವೈಯಕ್ತಿಕ ಸಂಬಂಧಲ್ಲಿ ಬೆಳವಣಿಗೆ ಉಂಟಾಗುವುದು. ನಿರ್ದಿಷ್ಟವಾದ ನಿಮ್ಮ ಯೋಜನೆಯು ವಿವಿಧ ಬಗೆಯ ತಿರುವನ್ನು ತೆಗೆದು ಕೊಳ್ಳಬಹುದು.


 • ಕನ್ಯಾ

  ನಿಮ್ಮ ಆಲೋಚನೆಗಳು ಮತ್ತು ಸಾಮರ್ಥ್ಯವು ಬೆಳವಣಿಗೆಯನ್ನು ನೋಡುವುದು. ನಿಮ್ಮ ಯಶಸ್ಸಿಗಾಗಿ ನೀವು ಹೆಚ್ಚಿನ ಸವಾರಿಯನ್ನು ಅನುಭವಿಸಬಹುದು. ಅನೇಕ ಅವಕಾಶಗಳು ನಿಮ್ಮ ಕಡೆಗೆ ಹುಡುಕಿ ಬರಬಹುದು. ಸಂಬಂಧಗಳಲ್ಲಿ ನೀವು ಗಮನವನ್ನು ಕೇಂದ್ರೀಕರಿಸಬೇಕು.


 • ತುಲಾ

  ಗ್ರಹಗಳ ಬದಲಾವಣೆಯು ನಿಮಗೊಂದು ಪ್ರಕಾಶಮಾನವಾದ ಭವಿಷ್ಯದ ಅಡಿಪಾಯವನ್ನು ತಂದುಕೊಡುವುದು. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ತೊಡಗಿ ಕೊಳ್ಳುವಿರಿ. ದೊಡ್ಡ ಖರೀದಿ ಹಾಗೂ ಆದಾಯದ ಹೊಸ ಮೂಲಗಳು ನಿಮಗೆ ಒಂದಿಷ್ಟು ಆನಂದವನ್ನು ತಂದುಕೊಡುವುದು. ನಿಮ್ಮ ಸುತ್ತಲು ಉಂಟಾಗುವ ಧನಾತ್ಮಕ ಬದಲಾವಣೆಯು ಒಂದಷ್ಟು ಚೇತರಿಕೆಯನ್ನುಂಟುಮಾಡುವುದು.


 • ವೃಶ್ಚಿಕ

  ವೃತ್ತಿ ಜೀವನದಲ್ಲಿ ಗಮನಾರ್ಹ ಉಲ್ಬಣವುಂಟಾಗುವ ಸಾಧ್ಯತೆಗಳಿವೆ. ನಿಮ್ಮ ಸಂವಹನ ಕೌಶಲ್ಯದಿಂದ ಜನರ ಮನಸ್ಸನ್ನು ಗೆಲ್ಲುವಿರಿ. ಉತ್ತಮ ಭವಿಷ್ಯಕ್ಕಾಗಿ ಒಂದಿಷ್ಟು ಯೋಜನೆಗೆ ಅಡಿಪಾಯ ಹಾಕಬಹುದು. ಜೀವನದಲ್ಲಿ ಹೊಸ ಪಾಲುದಾರಿಕೆ ಮತ್ತು ಸಂಬಂಧಗಳನ್ನು ಖಚಿತಪಡಿಸುತ್ತದೆ. ಶಿಕ್ಷಣವನ್ನು ಪಡೆಯಲು ನೀವು ಪ್ರೇರೇಪಿತರಾಗುವಿರಿ.


 • ಧನು

  ನಿಮ್ಮ ವಿಕಸನ ಮನಸ್ಸಿನಿಂದ ಹೊಸ ಆಲೋಚನೆಗಳನ್ನು ಹೊರಹೊಮ್ಮುವಂತೆ ಮಾಡುವುದು. ಇದು ನಿಮ್ಮ ವೃತ್ತಿ ಜೀವನಕ್ಕೆ ಸಾಕಷ್ಟು ಸಹಾಯ ಮಾಡುವುದು. ದೀರ್ಘಕಾಲಿನ ಗುರಿಯನ್ನು ಯೋಜಿಸಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಅಡಕವಾದ ಪ್ರತಿಭೆಯು ಜಗತ್ತಿಗೆ ಪ್ರದರ್ಶಿಸಲು ಪ್ರೋತ್ಸಾಹ ದೊರೆಯುವುದು.


 • ಮಕರ

  ಗ್ರಹಗತಿಗಳ ಬದಲಾವಣೆಯು ಸಕಾರಾತ್ಮಕ ಹಾಗೂ ಹಾನಿಕಾರಕ ಬದಲಾವಣೆಯನ್ನು ಉಂಟುಮಾಡುವುದು. ನಿಮ್ಮ ಪ್ರೀತಿ ಮತ್ತು ಆಸಕ್ತಿಯ ಬಗ್ಗೆ ಹೊಸ ವಿಷಯಗಳನ್ನು ಕಂಡುಕೊಳ್ಳುವಿರಿ. ಇದು ನಿಮಗೆ ಹೊಸ ಹೆಜ್ಜೆ ಇಡಲು ಹಾಗೂ ಸಂಬಂಧ ಹೊಂದಲು ಪ್ರೇರಣೆಯಾಗುವುದು. ಸಾಕಷ್ಟು ವಿಚಾರಗಳಿಗೆ ಹೊಸ ಪ್ರಾರಂಭವನ್ನು ಹೊಂದಲು ಸೂಕ್ತ ಸಮಯ.


 • ಕುಂಭ

  ಈ ಸಮಯವು ನಿಮಗೆ ಪ್ರಮುಖ ಬದಲಾವಣೆಯನ್ನು ತಂದುಕೊಡುವ ಸಮಯ ಎಂದು ಊಹಿಸಲಾಗುವುದು. ವೃತ್ತಿ ಜೀವನ ಅಥವಾ ಉದ್ಯೋಗದ ಬದಲಾವಣೆಯ ಪ್ರಯೋಜನವನ್ನು ಪಡೆದುಕೊಳ್ಳಲು ಇದೊಂದು ಸೂಕ್ತ ಸಮಯ ಎಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಮಹತ್ತರವಾದ ಪ್ರಗತಿಯನ್ನು ನೀವು ಸಾಧಿಸುವಿರಿ. ಕುಟುಂಬದವರೊಂದಿಗೂ ಗಮನಾರ್ಹ ಬದಲಾವಣೆಯನ್ನು ಕಾಣುವಿರಿ.


 • ಮೀನ

  ಹೊಸ ಪರಿಕಲ್ಪನೆಗೆ ಇದೊಂದು ಉತ್ತಮವಾದ ಸಮಯ. ಸಾರ್ವಜನಿಕರಲ್ಲಿ ನಿಮ್ಮ ಬಗ್ಗೆ ಒಂದು ಬಗೆಯ ವಿಶ್ವಾಸ ಮೂಡುವುದು. ಸಾಕಷ್ಟು ವಿಚಾರದಲ್ಲಿ ಒಂದಿಷ್ಟು ಅಭಿನಂದನೆಗಳು ಲಭ್ಯವಾಗುವುದು. ನಿಮ್ಮ ಸಂಬಂಧ ಮುಂದಿನ ಹಂತಕ್ಕೆ ಹೋಗಬಹುದು. ನಿಮ್ಮ ಪಾಲುದಾರರ ಒಪ್ಪಿಗೆ ಪಡೆದುಕೊಳ್ಳುವುದನ್ನು ಮರೆಯದಿರಿ.
ಸಾಮಾನ್ಯವಾಗಿ ಎಲ್ಲರೂ ಹೊಸದನ್ನು ಅನುಭವಿಸಲು ಅಥವಾ ಪಡೆಯಲು ಎದುರು ನೋಡುತ್ತಿರುತ್ತೇವೆ. ಜೀವನದಲ್ಲಿ ಗೆಲುವಿನ ಶಿಖರವನ್ನು ಏರಬೇಕೆನ್ನುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದಕ್ಕಾಗಿ ಸಾಕಷ್ಟು ಭರವಸೆಗಳನ್ನು ನಮ್ಮಲ್ಲಿ ಇಟ್ಟುಕೊಂಡಿರುತ್ತೇವೆ. ನಿಮಗೂ ಈ ಬಗೆಯ ಆಸೆ ಆಕಾಂಕ್ಷೆಗಳಿದ್ದರೆ ಅವುಗಳನ್ನು ಈಡೇರಿಸಿಕೊಳ್ಳಲು ಇದೀಗ ನಿಮಗೊಂದು ಸುವರ್ಣಾವಕಾಶ ಎಂದು ಹೇಳಬಹುದು.

ಜುಲೈ 9ರ ತಾರೀಖಿನ ನಂತರ ಬುಧ ಮತ್ತು ಗುರು ಗ್ರಹವು ಸಿಂಹ ಮತ್ತು ವೃಶ್ಚಿಕ ರಾಶಿಯಲ್ಲಿ ಒಂದು ಚದರವನ್ನು ರೂಪಿಸುತ್ತವೆ. ಅಂದರೆ ಈ ಎರಡು ಗ್ರಹಗಳು 90 ಡಿಗ್ರಿ ಕೋನದಲ್ಲಿ ಬರುತ್ತವೆ. ಅದರ ಪರಿಣಾಮವಾಗಿ ಒಂದು ಚದರ ಅಥವಾ ಚೌಕ ಸೃಷ್ಟಿಯಾಗುವುದು ಎಂದು ಹೇಳಲಾಗುತ್ತದೆ. ಈ ಪರಿವರ್ತನೆಯು ಹನ್ನೆರಡು ರಾಶಿಚಕ್ರಗಳ ಮೇಲೆ ವಿಶೇಷ ಪ್ರಭಾವವನ್ನು ಬೀರುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಈ ಗ್ರಹಗಳ ಪ್ರಭಾವದಿಂದ ನಿಮ್ಮ ರಾಶಿಚಕ್ರದ ಮೇಲೆ ಯಾವ ರೀತಿಯ ಪ್ರಭಾವವನ್ನು ಅನುಭವಿಸುವಿರಿ? ಅದರಿಂದ ಜೀವನದಲ್ಲಿ ಯಾವ ಬದಲಾವಣೆಯನ್ನು ಕಾಣುವಿರಿ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....

   
 
ಹೆಲ್ತ್