Back
Home » ಇತ್ತೀಚಿನ
ಸ್ಮಾರ್ಟ್ ಫೋನಿಗಿಂತ ಕಮ್ಮಿ ಇಲ್ಲ ‘ಜಿಯೋ ಫೋನ್’.! ಇಲ್ಲಿದೇ ಹೊಸ ಗೂಗಲ್ ಆಯ್ಕೆ...!
Gizbot | 11th Jul, 2018 12:00 PM
 • ಜಿಯೋ ಸ್ಟೋರಿನಲ್ಲಿದೆ:

  ಜಿಯೋ ಫೋನ್ ಬಳಕೆದಾರರು ತಮ್ಮ ಫೋನಿನಲ್ಲಿರುವ ಜಿಯೋ ಸ್ಟೋರಿನಲ್ಲಿ ಗೂಗಲ್ ಮ್ಯಾಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದ್ದು, ಗೂಗಲ್ ಮ್ಯಾಪ್ ಬಳಕೆಗಾಗಿ ಬೇರೊಂದು ಸ್ಮಾರ್ಟ್ ಫೋನ್ ಅನ್ನು ಬಳಸುವ ಅಗತ್ಯತೆ ಇರುವುದಿಲ್ಲ ಎನ್ನಲಾಗಿದೆ.


 • KaiOS ಆಪ್ ಡೇಟ್:

  ಜಿಯೋ ಫೋನಿನಲ್ಲಿ ಬಳಕೆ ಮಾಡಿಕೊಳ್ಳಲಾಗಿರುವಂತಹ KaiOS ಹೆಚ್ಚಿನ ಆಪ್ ಡೇಟ್ ಅನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವು ಇದರಲ್ಲಿ. ಅಲ್ಲದೇ ಬಳಕೆದಾರರು ಇನ್ನು ಹೆಚ್ಚಿನ ಅವಕಾಶಗಳನ್ನು ಮುಂದಿನ ದಿನದಲ್ಲಿ ಪಡೆಯಬಹುದಾಗಿದೆ.


 • ಕಡಿಮೆ ಫೀಚರ್ ಗಳು:

  ಸಾಮಾನ್ಯ ಸ್ಮಾರ್ಟ್ ಫೋನಿಗೆ ಹೋಲಿಕೆ ಮಾಡಿಕೊಂಡಲ್ಲಿ ಜಿಯೋ ಫೋನಿನಲ್ಲಿ ನೀಡಲಾಗಿರುವ ಗೂಗಲ್ ಮ್ಯಾಪ್ ಕಡಿಮೆ ಆಯ್ಕೆಗಳನ್ನು ಒಳಗೊಂಡಿದೆ ಎನ್ನಲಾಹಿದೆ. ಇದರಿಂದಾಗಿ ಜಿಯೋ ಫೋನ್ ಬಳಕೆದಾರರು ಅವಶ್ಯವಾಗಿರುವ ಕೆಲವು ಆಯ್ಕೆಗಳನ್ನು ಮಾತ್ರವೇ ಬಳಸಬಹುದಾಗಿದ್ದು, ಹೆಚ್ಚುವರಿ ಆಯ್ಕೆಗಳಿಂದ ವಂಚಿತರಾಗಿದ್ದಾರೆ.


 • ಎರಡು ಫೋನಿನಲ್ಲಿಯೂ ಲಭ್ಯ:

  ಸದ್ಯ ಹೊಸದಾಗಿ ನೀಡಲಾಗಿರುವ ಆಯ್ಕೆಯೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಯೋ ಫೋನ್ ಮತ್ತು ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಜಿಯೋ ಫೋನ್ 2 ಎರಡರಲ್ಲಿಯೂ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲ ಲಭ್ಯವಿರುವ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಹೊಡೆತ ಬೀಳಲಿದೆ ಎನ್ನಲಾಗಿದೆ.


 • ಜಿಯೋ ಫೋನ್ 2:

  ಜಿಯೋ ಫೋನ್ ಅನ್ನು ಜಿರೋ ಬೆಲೆಗೆ ಮಾರಾಟ ಮಾಡಿತ್ತು. ಇದೇ ಮಾದರಿಯಲ್ಲಿ ಜಿಯೋ ಫೋನ್ 2 ಅನ್ನು ರೂ.2999ಕ್ಕೆ ಮಾರಾಟ ಮಾಡಲು ಮುಂದಾಗಿದೆ. ಜಿಯೋ ಫೋನ್ ಗಿಂತಲೂ ಭಿನ್ನವಾಗಿರುವ ಕ್ವರ್ಟಿ ಕಿಪ್ಯಾಡ್ ಅನ್ನು ಜಿಯೋ ಫೋನ್ 2 ನಲ್ಲಿ ಕಾಣಬಹುದಾಗಿದೆ. ಇದು ಈ ಫೋನಿಗೆ ಹೊಸ ಲುಕ್ ಅನ್ನು ನೀಡಿದೆ.


 • ಸೋಶಿಯಲ್ ಮೀಡಿಯಾ:

  ಜಿಯೋ ಪೋನ್ 2 ನಲ್ಲಿ ಈ ಹಿಂದಿನ ಫೋನಿನಲ್ಲಿ 512MB RAM ಅನ್ನು ನೀಡಲಾಗಿದ್ದ ಮಾದರಿಯಲ್ಲಿಯೇ ಇದರಲ್ಲಿಯೂ ಅದೇ ಮಾದರಿಯ RAM ಇದೆ. ಇದಲ್ಲದೇ KaiOS ಅನ್ನು ಇದರಲ್ಲಿ ನೀಡಲಾಗಿದೆ. ಇದು ಗುಣಮಟ್ಟ ಸಾಫ್ಟ್ ವೇರ್ ಆಗಿದ್ದು, ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.
ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಮೂಲಕ, ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇಲ್ ಆದ ಫೀಚರ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಜಿಯೋ ಫೋನ್, ಸದ್ಯ ಸ್ಮಾರ್ಟ್ ಫೋನಿನಲ್ಲಿ ಇರುವ ಆಯ್ಕೆಗಳನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಸ್ಮಾರ್ಟ್ ಫೀಚರ್ ಫೋನ್ ಎನ್ನುವ ಹಣೆಪಟ್ಟಿಯನ್ನು ಪಡೆದುಕೊಳ್ಳುತ್ತಿದೆ. ಸದ್ಯ ಮಾರುಕಟ್ಟೆಗೆ ಜಿಯೋ ಫೋನ್ 2 ಆಗಮಿಸುತ್ತಿದ್ದರೂ ಸಹ ಜಿಯೋ ಫೋನ್ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಿಲ್ಲ, ಅದರಲ್ಲಿ ಇರುವ ಆಯ್ಕೆಗಳು ಆಪ್ ಡೇಟ್ ಆಗುತ್ತಿದೆ.

ಇದೇ ಕೆಲವು ದಿನಗಳ ಹಿಂದೆ ಜಿಯೋ ಫೋನ್ ವಾಟ್ಸ್ಆಪ್ ಸಪೋರ್ಟ್ ಮಾಡಲಿದೆ ಎನ್ನುವ ಸುದ್ದಿಯನ್ನು ತಿಳಿಸಲಾಗಿತ್ತು, ಸದ್ಯ ಇದೇ ಮಾದರಿಯ ಮಾಹಿತಿಯೊಂದು ಲೀಕ್ ಆಗಿದ್ದು, ಇನ್ನು ಮುಂದೇ ಜಿಯೋ ಫೋನಿನಲ್ಲಿ ಬಳಕೆದಾರರು ಗೂಗಲ್ ಮ್ಯಾಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಜಿಯೋ ಫೋನಿನಲ್ಲಿ ರೂಟ್ ಮ್ಯಾಪ್ ಅನ್ನು ಬಳಕೆ ಮಾಡಿಕೊಂಡು ಸಾಗಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ.

   
 
ಹೆಲ್ತ್