Back
Home » ಸಮ್ಮಿಲನ
ಸೂರ್ಯಾಸ್ತ ಬಳಿಕ ಈ ಕೋಟೆಗೆ ಹೋದವರು ಯಾರೂ ವಾಪಸ್ಸು ಬಂದಿಲ್ಲವಂತೆ!!
Boldsky | 11th Jul, 2018 12:42 PM
 • ಭಾಂಗಾರ್ ಪ್ರದೇಶ

  ಭಾಂಗಾರ್ ಪ್ರದೇಶವು ರಾಜಸ್ಥಾನದ ಜೈಪುರ ಮತ್ತು ಅಲ್ವರ್ ನ ಮಧ್ಯಭಾಗದಲ್ಲಿದೆ. ಇಲ್ಲಿದ್ದ ಕೋಟೆಯು ನಾಶವಾಗಿದ್ದರೂ ಶಾಂತ ಹಾಗೂ ಹಸಿರಿನಿಂದ ಕಂಗೊಳಿಸುವ ಪ್ರದೇಶವು ತುಂಬಾ ಸುಂದರವಾಗಿ ಕಾಣಿಸುವುದು. ಅಂಬಾರ್ ನ ಮುಘಲ್ ಅಧಿಪತಿ ಮನ್ ಸಿಂಗ್ ನ ಕಿರಿಯ ಸೋದರ ಮಧೋ ಸಿಂಗ್ ರಚಿಸಿದ್ದ ಸುಂದರ ರಾಜ್ಯ ಇದಾಗಿದ್ದು, ಈಗ ಅವಶೇಷಗಳು ಮಾತ್ರ ಉಳಿದುಕೊಂಡಿದೆ.


 • ಭಾಂಗಾರ್ ಪ್ರದೇಶ

  ಮೊದಲ ಸಲ ಭಾಂಗಾರ್ ಗೆ ಭೇಟಿ ನೀಡಿದಾಗ ತುಂಬಾ ಕುತೂಹಲ ಹಾಗೂ ಆತಂಕವು ಮನೆಮಾಡಿತ್ತು. ನಾವು ಹತ್ತಿರವಾಗುತ್ತಿದ್ದಂತೆ ನಮ್ಮಲ್ಲಿ ಕುತೂಹಲವು ಮತ್ತಷ್ಟು ಹೆಚ್ಚಾಗಲು ಆರಂಭವಾಯಿತು. ಯಾಕೆಂದರೆ ನಮಗೆ ಈ ಪ್ರದೇಶದ ಬಗ್ಗೆ ಅಂತಹ ಕಥೆ ಹೇಳಲಾಗಿತ್ತು... ಎಂದು ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗೊಬ್ಬರು ಹೇಳುತ್ತಾರೆ.


 • ಕೋಟೆಗೆ ಬಂದ ಜನರು ಕಾಣೆಯಾಗುತ್ತಿದ್ದರಂತೆ!

  ದೆವ್ವಗಳೊಂದಿಗೆ ನಮ್ಮ ಮುಖಾಮುಖಿಯಾಗಿಲ್ಲ. ಆದರೆ ಕೆಲವೊಂದು ಅಸಾಮಾನ್ಯ ಚಟುವಟಿಕೆಗಳು ನಡೆದವು. ಇದನ್ನು ಅನುಭವಿಸಲು ಮಾತ್ರ ಸಾಧ್ಯ, ವ್ಯಕ್ತಪಡಿಸಲು ಆಗಲ್ಲ. ಈ ಕೋಟೆಯಲ್ಲಿ ಇರುವಂತಹ ದೆವ್ವಗಳ ಬಗ್ಗೆ ಸ್ಥಳೀಯರು ಹಾಗೂ ಇಲ್ಲಿಗೆ ಯಾವಾಗಲೂ ಭೇಟಿ ನೀಡುವವರು ಮಾತನಾಡುತ್ತಲಿದ್ದರು. ಈ ಕೋಟೆಗೆ ಬಂದ ಜನರು ಹೇಗೆ ಕಾಣೆಯಾದರು ಮತ್ತು ಕೆಲವೊಂದು ವಿಚಿತ್ರವಾದ ಶಬ್ಧಗಳು ಬರುವುದರ ಬಗ್ಗೆ ಸ್ಥಳೀಯರು ಹೇಳಿದ ಕಥೆಗಳನ್ನು ನಾವು ತುಂಬಾ ಕುತೂಹಲದಿಂದ ಕೇಳಿದೆವು.


 • ಸೂರ್ಯಾಸ್ತ ಮತ್ತು ಸೂರ್ಯೋದಯದ ಮೊದಲು ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ

  ಈ ಕೋಟೆಯ ಹೊರಗಡೆ ಪುರಾತತ್ವ ಇಲಾಖೆಯು ಒಂದು ಸೂಚನಾ ಫಲಕವನ್ನು ಹಾಕಿತ್ತು. ಅದರಲ್ಲಿ ಕೋಟೆಯೊಳಗಡೆ ಸೂರ್ಯಾಸ್ತ ಮತ್ತು ಸೂರ್ಯೋದಯದ ಮೊದಲು ಪವೇಶಿಸುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಬರೆಯಲಾಗಿತ್ತು. ಇದನ್ನು ನೋಡಿ ನಾವು ವಾಹನದಲ್ಲಿ ನೇರವಾಗಿ ನಗರಕ್ಕೆ ಹಿಂತಿರುಗಿದೆವು. ದೆವ್ವವಿರುವ ಕೋಟೆಯ ಬಗ್ಗೆ ಹಲವಾರು ರೀತಿಯ ಕಥೆಗಳು ಇವೆ. ಈ ಕೋಟೆಯೊಳಗಡೆ ಮಾಂತ್ರಿಕನೊಬ್ಬ ನೆಲೆಸಿದ್ದ. ಕೋಟೆಯೊಳಗಿನ ಮನೆಗಳು ತನ್ನ ಮನೆಗಿಂತ ಕೆಳಮಟ್ಟದಲ್ಲಿರಬೇಕೆಂದು ಆತ ಆದೇಶಿಸಿದ್ದ. ಮಾಂತ್ರಿಕನ ಮನೆಗಿಂತ ಎತ್ತರದ ಮನೆಯ ನೆರಳು ಆತನ ಮನೆ ಮೇಲೆ ಬಿದ್ದಾಗ ಸಂಪೂರ್ಣ ನಗರವು ನಾಶವಾಗಲಿದೆ ಎಂದು ಹೇಳಿದ್ದ. ಮಾಧೋ ಸಿಂಗ್ ನ ಮೊಮ್ಮಗ ಅಜಬ್ ಸಿಂಗ್ ಈ ಎಚ್ಚರಿಕೆಯನ್ನು ಕಡೆಗಣಿಸಿದ ಮತ್ತು ಕೋಟೆಯನ್ನು ಎತ್ತರಿಸಿದ. ಅದರ ನೆರಳು ಮಾಂತ್ರಿಕನ ಮನೆ ಮೇಲೆ ಬಿದ್ದು ನಗರವು ನಾಶವಾಗಿದೆ ಎಂದು ಒಂದು ಕಥೆಯು ಹೇಳುತ್ತದೆ.


 • ಇನ್ನೊಂದು ಕಥೆಯ ಪ್ರಕಾರ

  ಇನ್ನೊಂದು ಕಥೆಯ ಪ್ರಕಾರ, ಮಾಂತ್ರಿಕನು ರಾಣಿ ರತ್ನಾವತಿಯ ಪ್ರೇಮದಲ್ಲಿ ಮುಳುಗಿದ. ಒಂದು ದಿನ ಈ ಮಾಂತ್ರಿಕ ರಾಣಿ ಬಳಸುತ್ತಿದ್ದ ಸುಗಂಧ ದ್ರವ್ಯದ ಬದಲಿಗೆ ಮೋಹಗೊಳಿಸುವ ದ್ರವ್ಯ ಹಾಕಿದ. ಆದರೆ ರತ್ನಾವತಿಗೆ ಇದು ತಿಳಿದು ಅದನ್ನು ದೊಡ್ಡ ಬಂಡೆ ಮೇಲೆ ಎಸೆದಳು. ಇದರಿಂದ ಮಾಂತ್ರಿಕ ಸಾವನ್ನಪ್ಪಿದ. ಆದರೆ ಸಾಯುವ ಮೊದಲು ಭಾಂಗಾರ ಧ್ವಂಸವಾಗಬೇಕು ಮತ್ತು ಇಲ್ಲಿ ಯಾರೂ ಬದುಕಬಾರದು ಎಂದು ಶಾಪ ನೀಡಿದ ಎಂದು ಹೇಳಲಾಗುತ್ತದೆ.


 • ಈ ಪ್ರದೇಶಕ್ಕೆ ಭೇಟಿ ನೀಡುವ ಕುತೂಹಲ ಹೆಚ್ಚಿಸುತ್ತದೆ!

  ಕಥೆಗಳು ಈ ಪ್ರದೇಶಕ್ಕೆ ಭೇಟಿ ನೀಡಬೇಕು ಎನ್ನುವ ಕುತೂಹಲ ಹೆಚ್ಚಿಸುತ್ತದೆ. ಇಲ್ಲಿನ ಮುಖ್ಯದ್ವಾರದೊಳಗೆ ಪ್ರವೇಶ ಮಾಡಿದಾಗ ನಗರದ ಅವಶೇಷಗಳು ಕಂಡುಬರುವುದು ಮತ್ತು ತುಂಬಾ ವಿಚಿತ್ರ ಭಾವನೆ ಬರುವುದು. ಕೋಟೆಯ ಒಳಗಡೆ ಹಲವಾರು ಹವೇಲಿಗಳು, ಮಂದಿರಗಳು ಮತ್ತು ಮಾರುಕಟ್ಟೆಗಳಿವೆ.


 • ಸಾಕ್ಷ್ಯಚಿತ್ರಗಳನ್ನು ಮಾಡಲಾಗಿದೆ

  ಕೋಟೆಯ ಒಳಗಡೆ ವಿಚಿತ್ರ ಭಾವನೆ ಮತ್ತು ಅಸಾಮಾನ್ಯ ಶಕ್ತಿಯು ಇರುವ ಅನುಭವವಾಗಿದೆ ಎಂದು ಹಲವಾರು ಮಂದಿ ಪ್ರವಾಸಿಗಳು ಹಾಗೂ ಜನರು ಹೇಳಿದ್ದಾರೆ. ರಾಜಸ್ಥಾನದ ಈ ವಿಚಿತ್ರ ಕೋಟೆಯ ಬಗ್ಗೆ ಹಲವಾರು ಸಾಕ್ಷ್ಯಚಿತ್ರಗಳನ್ನು ಮಾಡಲಾಗಿದೆ.


 • ದೆವ್ವಪೀಡಿತ ಪ್ರದೇಶವೆಂದು ಪರಿಗಣಿಸಿರುವ ಏಕೈಕ ಸ್ಥಳ

  ಭಾಂಗಾರ್ ಭಾರತದಲ್ಲಿ ಕಾನೂನು ಬದ್ಧವಾಗಿ ದೆವ್ವಪೀಡಿತ ಪ್ರದೇಶವೆಂದು ಪರಿಗಣಿಸಿರುವ ಏಕೈಕ ಸ್ಥಳ. ಸೂರ್ಯಾಸ್ತ ಮತ್ತು ಸೂರ್ಯೋದಯದ ಮೊದಲು ಕೋಟೆಗೆ ಪ್ರವೇಶ ಮಾಡಬೇಕಿದ್ದರೆ ಸರ್ಕಾರದ ಅನುಮತಿ ಪಡೆಯಬೇಕು. ಕೋಟೆಯೊಳಗಡೆ ಸೂರ್ಯಾಸ್ತ ಬಳಿಕ ಪ್ರವೇಶ ಮಾಡಿರುವ ಯಾರು ಕೂಡ ಇದುವರೆಗೆ ಪತ್ತೆಯಾಗಿಲ್ಲವೆಂದು ಸ್ಥಳೀಯರು ನಂಬಿದ್ದಾರೆ.


 • ದೆವ್ವಪೀಡಿತ ಪ್ರದೇಶವೆಂದು ಪರಿಗಣಿಸಿರುವ ಏಕೈಕ ಸ್ಥಳ

  ಭಾಂಗಾರ್ ಜೈಪುರದಿಂದ ಸುಮಾರು 78 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಪ್ರಯಾಣಿಸಲು ಬಾಡಿಗೆ ಕಾರನ್ನು ಗೊತ್ತು ಮಾಡಬಹುದು ಮತ್ತು ಪಂಕ್ಚರ್ ಆಗುವ ಸಾಧ್ಯತೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟಯರ್ ಹೆಚ್ಚುವರಿಯಾಗಿ ಇಟ್ಟುಕೊಳ್ಳಿ. ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ಸುಮಾರು 88 ಕಿ.ಮೀ. ದೂರವಿದೆ. ಹತ್ತಿರ ಬಸ್ ಹಾಗೂ ರೈಲು ನಿಲ್ದಾಣಗಳು ಇರುವುದು ಕೂಡ ಜೈಪುರದಲ್ಲಿ. ಇಂತಹ ವಿಚಿತ್ರ ಹಾಗೂ ಅಸಾಮಾನ್ಯ ಕಥೆಗಳನ್ನು ಇನ್ನಷ್ಟು ಓದಬೇಕಿದ್ದರೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.
ಕಥೆ ಕೇಳುವುದರಲ್ಲಿ ತುಂಬಾ ಖುಷಿ ನೀಡುವ ಹಾಗೂ ರೋಮಾಂಚನಗೊಳಿಸುವ ಕಥೆಯೆಂದರೆ ಅದು ಭಯಾನಕ ಕಥೆಗಳು! ಇದನ್ನು ಕೇಳುವಾಗ ನಾವು ಭಯಭೀತರಾದರೂ ಕೇಳುವುದನ್ನು ಮಾತ್ರ ಬಿಡಲ್ಲ.

ಇಂತಹ ಕಥೆಗಳೇ ತುಂಬಾ ಆಸಕ್ತಿ ಮೂಡಿಸುವುದು. ಕೆಲವು ಅತಿಮಾನುಷ ಚಟುವಟಿಕೆಗಳು ಗಮನ ಸೆಳೆಯುವುದು ಮತ್ತು ಜೀವನದಲ್ಲಿ ಒಂದು ಸಲವಾದರೂ ಇಂತಹ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಬಯಸುತ್ತೀರಿ. ಕಥೆ ಕೇಳಿ ಭಯಗೊಂಡರೂ ಆ ಸ್ಥಳವನ್ನು ನೋಡುವಂತಹ ಆಸಕ್ತಿ ಮಾತ್ರ ಕಡಿಮೆಯಾಗಲ್ಲ.

ಭಾರತದಲ್ಲಿ ಇಂತಹ ಕಥೆಗಳಿಗೆ ಏನು ಬರವಿಲ್ಲ. ನಮಲ್ಲಿ ಹಲವಾರು ರೀತಿಯ ಕಥೆಗಳು ಹಾಗೂ ಪುರಾಣಗಳು ಇದ್ದೇ ಇರುತ್ತದೆ. ಕೆಲವೊಂದು ಕಥೆಗಳಿಂದಾಗಿಯೇ ಇಂತಹ ಪ್ರದೇಶಗಳು ಗುರುತಿಸಲ್ಪಟ್ಟಿವೆ. ಭಾರತದಲ್ಲಿ ಇಂತಹ ಪಿಶಾಚಿಗ್ರಸ್ತ ಸ್ಥಳವೇ ಭಾಂಗಾರ್. ಈ ಪ್ರದೇಶದಲ್ಲಿ ಸೂರ್ಯಾಸ್ತದ ಬಳಿಕ ಪಿಶಾಚಿಗಳಿಗೆ ವಾಸಸ್ಥಾನವಾಗುವ ಕಾರಣದಿಂದ ಯಾರೂ ಕೂಡ ಇಲ್ಲಿಗೆ ಪ್ರವೇಶಿಸಲ್ಲ ಎಂದು ಹೇಳಲಾಗುತ್ತದೆ....

   
 
ಹೆಲ್ತ್