Back
Home » ಸಮ್ಮಿಲನ
23ನೇ ವಯಸ್ಸಿಗೆ ಒಂದೇ ವಾರದಲ್ಲಿ ತಂದೆ ಹಾಗೂ ಅಜ್ಜನಾದ ಯುವಕ!
Boldsky | 11th Jul, 2018 02:45 PM
 • ಫ್ರೆಂಡ್ಸ್ ರಿಕ್ವೆಸ್ಟ್ ಮೂಲಕ ಆರಂಭವಾಯಿತು!

  ಕಳೆದ ಹತ್ತು ವರ್ಷಗಳಿಂದ ತನ್ನ ಸಂಪರ್ಕದಲ್ಲೇ ಇಲ್ಲದ ಸೋದರ ಸಂಬಂಧಿಯೊಬ್ಬಳು ಕಳುಹಿಸಿದ ಫ್ರೆಂಡ್ಸ್ ರಿಕ್ವೆಸ್ಟ್ ಈ ರೀತಿ ಬದುಕನ್ನೇ ಬದಲಾಯಿಸಲಿದೆ ಎಂದು ಕೊನೊಲ್ಲಿ ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಇಲ್ಲಿ ಬಾಲಕಿಯ ಗುರುತನ್ನು ಗೌಪ್ಯವಾಗಿಡಲಾಗಿದೆ. 17 ವರ್ಷದ ಬಾಲಕಿಯು ಗರ್ಭಿಣಿಯಾಗಿದ್ದಳು.


 • ಆಕೆ ಜೀವನ ದುರಂತಮಯ!

  ಟಾಮಿಯನ್ನು ಸಂಪರ್ಕಿಸಿದ ಬಾಲಕಿಯ ಜೀವನ ದುರಂತಮಯವಾಗಿತ್ತು. ಆಕೆ ಅವಿದ್ಯಾವಂತೆಯಾಗಿದ್ದು ಮಾತ್ರವಲ್ಲದೆ ಹದಿಹರೆಯದಲ್ಲೇ ಮಾದಕದ್ರವ್ಯ ವ್ಯಸನಿಯಾಗಿದ್ದಳು. 15ರ ಹರೆಯದಲ್ಲಿ ಮಾದಕದ್ರವ್ಯ ಸೇವನೆ ನಿಲ್ಲಿಸಿದ್ದೇನೆಂದು ಆಕೆ ಟಾಮಿಗೆ ಹೇಳಿದ್ದಳು. ಆದರೆ 16ರ ಹರೆಯದಲ್ಲಿ ಆಕೆ ಗರ್ಭಿಣಿಯಾದಳು.


 • ಆಕೆಗೆ ಮನೆಯೂ ಇರಲಿಲ್ಲ

  ಆಕೆ ಗರ್ಭಿಣಿ ಮಾತ್ರವಲ್ಲದೆ, ಮನೆಯೂ ಇರಲಿಲ್ಲ. ಸಂಪರ್ಕಿಸಲು ಒಂದು ಮೊಬೈಲ್ ಕೂಡ ಆಕೆ ಬಳಿಯಿರಲಿಲ್ಲ. ಸಣ್ಣ ಬ್ಯಾಗ್ ನಲ್ಲಿ ತುಂಬಿಸಿಡಬಹುದಾದಷ್ಟು ಸಾಮಾನುಗಳು ಮಾತ್ರ ಆಕೆಯಲ್ಲಿದ್ದವು. ಇನ್ನೊಂದೆಡೆಯಲ್ಲಿ ಅಧಿಕಾರಿಗಳು ಕೂಡ ಆಕೆಯ ಮೇಲೆ ಒಂದು ಕಣ್ಣಿಟ್ಟಿದ್ದರು. ಆಕೆಯ ಹರಿಗೆಯಾದ ಕೂಡಲೇ ಅದನ್ನು ದತ್ತು ನೀಡಲು ಅವರು ತುದಿಗಾಲಿನಲ್ಲಿ ನಿಂತಿದ್ದರು.


 • ಆಕೆ ಆತನ ಮನೆಗೆ ಹೋದಳು

  ನಿರಾಶ್ರಿತರ ಶಿಬಿರದಿಂದ ಆಕೆಯನ್ನು ಕರೆದುಕೊಂಡು ಬಂದ ಟಾಮಿ ತನ್ನ ಮನೆಯಲ್ಲಿ ಜಾಗ ನೀಡಿದ. ತನ್ನ ಮನೆಗೆ ಕರೆದುಕೊಂಡು ಬಂದ ಆತ ಗರ್ಭಧಾರಣೆಯ ಅಂತಿಮ ಹಂತದಲ್ಲಿದ್ದ ಆಕೆಯ ಆರೈಕೆ ಮಾಡಿದ.


 • ಆಕೆಯ ಮಗುವಿನ ತಂದೆ ಆರೈಕೆಗೆ ಅಲ್ಲಿರಲಿಲ್ಲ!

  ಆರು ವರ್ಷದವಳಿದ್ದಾಗ ಹುಡುಗಿ ತನ್ನ ಶಾಲೆ ಪೂರ್ತಿಗೊಳಿಸಿದಳು. ತನ್ನ ತಂದೆ ಜೈಲಿಗೆ ಹೋದ ಕಾರಣದಿಂದಾಗಿ ಆತನಿಗೆ ತನ್ನನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ಆಕೆ ಟಾಮಿಗೆ ತಿಳಿಸಿದಳು.


 • ದತ್ತು ಪಡೆಯಲು ನಿರ್ಧರಿಸಿದ

  ಬಾಲ್ಯದಲ್ಲಿ ಅವರಿಬ್ಬರು ಜತೆಯಾಗಿ ಬೆಳೆದವರು. ಇದರಿಂದ ಮರುಯೋಚಿಸದೆ ಆಕೆಯನ್ನು ಮತ್ತು ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ. ಕಾನೂನು ಬದ್ಧವಾಗಿ ಎಲ್ಲಾ ರೀತಿಯ ದಾಖಲೆಗಳನ್ನು ತಯಾರಿಸಿಕೊಂಡು ಆತ ದತ್ತು ಸ್ವೀಕಾರ ಮಾಡಿದ.


 • 23ನೇ ವಯಸ್ಸಿಗೆ ಆತ ತಂದೆಯಾದ!

  ತನ್ನ ಸೋದರ ಸಂಬಂಧಿಗೆ ಭಾವನಾತ್ಮಕವಾಗಿ ಚೇತರಿಸಿಕೊಳ್ಳಲು ಸಮಯ ಬೇಕಾಗಿರುವ ಕಾರಣದಿಂದಾಗಿ ಆತ ದತ್ತು ತಂದೆಯೆಂದು ಹೇಳಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಇದರಿಂದ ಆತ ಗಾಢ್ ಫಾದರ್ ರೀತಿಯಲ್ಲಿ ಆಕೆ ಮತ್ತು ಮಗುವಿನ ಆರೈಕೆ ಮಾಡಿದ.


 • ಒಂದೇ ವಾರದಲ್ಲಿ ಆಕೆ ಮಗುವಿಗೆ ಜನ್ಮ ನೀಡಿದಳು!

  ದತ್ತು ಸ್ವೀಕರಿಸಿದ ಒಂದೇ ವಾರದಲ್ಲಿ ಹುಡುಗಿ ಮಗುವಿಗೆ ಜನ್ಮ ನೀಡಿದಳು ಮತ್ತು ಟಾಮಿ 23ನೇ ವಯಸ್ಸಿನಲ್ಲಿ ಅಜ್ಜನಾದ. ಒಂದೇ ಸಲ ತಂದೆ ಹಾಗೂ ಅಜ್ಜನಾದ ಮೊದಲ ಪುರುಷ!


 • ನೆರವು ಹರಿದು ಬಂತು

  ಈ ಕಥೆಯು ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಒಂದು ಪೇಜ್ ತೆರೆದು ನೆರವು ಕೇಳಲಾಯಿತು. ಟಾಮಿಗೆ ಬಾಲಕಿ ಮತ್ತು ಮಗುವನ್ನು ಸಾಕಲು ನೆರವು ಹರಿದುಬಂತು.


 • ನೆರವು ಹರಿದು ಬಂತು ಹಿಂತುರಿಗಿ ನೋಡುವ ಪ್ರಶ್ನೆಯೇ ಇಲ್ಲ!

  ಜವಾಬ್ದಾರಿಯಿಂದ ಹೆಚ್ಚು ಹೊರಯಾಗಿದೆಯಾ ಎಂದು ಟಾಮಿಯಲ್ಲಿ ಕೇಳಿದಾಗ, ಎಷ್ಟು ನೆರವು ಹರಿದುಬಂದಿದೆ ಎನ್ನುವುದರ ಬಗ್ಗೆ ನನಗೆ ಚಿಂತಿಯಿಲ್ಲ. ತಂದೆ ಹಾಗೂ ಅಜ್ಜನಾಗಿರುವ ಕಾರಣದಿಂದ ನಾನು ಮುಂದೆ ತನ್ನದೇ ಆಗಿರುವ ಕುಟುಂಬವನ್ನು ಪಡೆಯಲು ಯಾವುದೇ ತೊಂದರೆಯಿಲ್ಲ. ಜೀವನದಲ್ಲಿ ಸ್ಪೂರ್ತಿಯಾಗುವ ಇಂತಹ ಜನರ ಬಗ್ಗೆ ಓದಲು ನೀವು ತಯಾರಾಗಿದ್ದೀರಾ? ಹಾಗಾದರೆ ಇದೇ ವಿಭಾಗದಲ್ಲಿ ಓದುತ್ತಲಿರಿ.
ಏನೇ ನೋಡಿದರೂ ನಮಗೆ ಕಾಣುವುದು ಕೆಲವೊಂದು ನಕಾರಾತ್ಮಕವಾಗಿರುವಂತಹ ಸುದ್ದಿಗಳೇ. ಆದರೆ ಒಳ್ಳೆಯ ಹಾಗೂ ಮಾನವೀಯತೆ ಇರುವ ಸುದ್ದಿಗಳು ಕೂಡ ಇದೆ. ಜಗತ್ತಿನಲ್ಲಿ ಕೆಲವೊಂದು ಸಲ ಧನಾತ್ಮಕ ಹಾಗೂ ಮಾನವೀಯತೆಗೆ ಹತ್ತಿರವಾಗಿರುವ ಸುದ್ದಿಗಳು ಬೆಳಕಿಗೆ ಬರುವುದು ವಿಳಂಬವಾಗುವುದು.

ಇಂತಹದರಲ್ಲಿ ಯುವಕನೊಬ್ಬನ ಧನಾತ್ಮಕ ಕಥೆಯ ಬಗ್ಗೆ ತಿಳಿಸಲಿದ್ದೇವೆ. ಇದು ಆತನ ನಿಷ್ಕಲ್ಮಶ ಪ್ರೀತಿಗೆ ಸಾಕ್ಷಿಯಾಗಿದೆ. ಇದು ಟಾಮಿ ಕೊನೊಲ್ಲಿಯ ಕಥೆ. ಕೊನೊಲ್ಲಿ ತನ್ನ ಸೋದರ ಸಂಬಂಧಿ ಮತ್ತು ಆಕೆಯ ಮಗುವನ್ನು ದತ್ತು ಪಡೆದುಕೊಂಡ. ಇದೇ ವೇಳೆ ಆತ ಒಂದೇ ವಾರದಲ್ಲಿ ತಂದೆ ಹಾಗೂ ಅಜ್ಜನಾದ ಸಾಧನೆ ಮಾಡಿದ್ದಾನೆ. ಕೊನೊಲ್ಲಿ ಕಥೆಯ ಬಗ್ಗೆ ತಿಳಿಯಲು ಓದುತ್ತಾ ಹೋಗಿ...

   
 
ಹೆಲ್ತ್