ಮಹಿಳೆಯರು ಸೊಂಟದ ಸುತ್ತ ಕಾಣುವ ಗುರುತುಗಳು (ಸ್ಟ್ರೆಚ್ ಮಾರ್ಕ್ ) ಕೆಟ್ಟ ಕನಸಿನಂತೆ ಎಂಬುದು ಸೌಂದರ್ಯ ಲೋಕದ ಅಭಿಪ್ರಾಯವಾಗಿದೆ. ಇದನ್ನು ಅವರು ವಯಸ್ಸಾಗುವಿಕೆಯ ಆರಂಭ ಹಂತ ಎಂದು ಪರಿಗಣಿಸುತ್ತಾರೆ.
ನಿಮಗೆ ವಯಸ್ಸಾದ ಸಂದರ್ಭದಲ್ಲಿ ಮಾತ್ರವೇ ಈ ಗುರುತುಗಳು ಕಾಣಬೇಕೆಂದಿಲ್ಲ. ತ್ವಚೆಯು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ವಿಸ್ತಾರವಾದಾಗ ಈ ಗುರುತುಗಳು ಕಾಣಿಸಿಕೊಳ್ಳುತ್ತವೆ. ಗರ್ಭಾವಸ್ಥೆ, ಹೆಚ್ಚಿನ ತೂಕ ಅಥವಾ ತೂಕ ಇಳಿಕೆಯ ಸಮಯದಲ್ಲಿ ಈ ಗುರುತು ಕಂಡುಬರುತ್ತದೆ. ಗುಲಾಬಿ ಬಣ್ಣದ ರೇಖೆಗಳಾಗಿ ಇದು ತ್ವಚೆಯಲ್ಲಿ ಕಂಡುಬರುತ್ತದೆ. ನಂತರ ಇದು ನಮ್ಮ ತ್ವಚೆಯ ಬಣ್ಣಕ್ಕೆ ಸರಿಹೊಂದುತ್ತದೆ. ನಿಮ್ಮ ತ್ವಚೆಯಲ್ಲಿ ಈ ಗುರುತು ಕಂಡುಬಂದಿದೆ ಎಂದಾದಲ್ಲಿ ನೀವು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು.
ನಂತರ ಅವುಗಳನ್ನು ಹೋಗಲಾಡಿಸುವುದು ಕಷ್ಟವಾಗುತ್ತದೆ. ಇವುಗಳನ್ನು ನಿವಾರಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ? ಗಾಬರಿ ಪಡಬೇಡಿ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಕ್ರೀಮ್ ದೊರೆತರೂ ಆ ಕಲೆ ಮಾಯವಾಗದೇ ಹಾಗೆಯೇ ಉಳಿಯಲೂ ಬಹುದು. ಅದಾಗ್ಯೂ ಮನೆ ಮದ್ದುಗಳನ್ನು ಬಳಸಿ ಈ ಕಲೆಗಳ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ.
ಕಾಫಿ ಮತ್ತು ತೆಂಗಿನೆಣ್ಣೆಯನ್ನು ಬಳಸಿಕೊಂಡು ಈ ಕಲೆಗಳನ್ನು ಹೋಗಲಾಡಿಸಬಹುದಾಗಿದೆ. ಈ ಗುರುತುಗಳ ನಿವಾರಣೆಗೆ ಈ ವಿಧಾನವನ್ನು ನೀವು ಅನುಸರಿಸಬಹುದು. ಹಾಗಿದ್ದರೆ ಈ ಸ್ಕ್ರಬ್ ಅನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ...
ಸಾಮಾಗ್ರಿಗಳು
*5 ಚಮಚ ಕಾಫಿ ಹುಡಿ
*3 ಚಮಚ ತೆಂಗಿನೆಣ್ಣೆ
*1 ಚಮಚ ಅಲೊವೇರಾ ಜೆಲ್
ನೀರು
ಸಿದ್ಧಪಡಿಸುವುದು ಹೇಗೆ?*ನಿಮ್ಮ ಮುಂದಿನ ಬಳಕೆಗೆ ಅಗತ್ಯವಾಗಿರುವ ಜಾರ್ ತೆಗೆದುಕೊಳ್ಳಿ ಮುಂದಕ್ಕೆ ಸ್ಕ್ರಬ್ ಅನ್ನು ಇದರಲ್ಲಿಯೇ ನೀವು ತಯಾರಿಸಿಕೊಳ್ಳಬಹುದು
*5 ಚಮಚ ಕಾಫಿ ಹುಡಿಯನ್ನು ಇದಕ್ಕೆ ಸೇರಿಸಿ ಮತ್ತು 3 ಚಮಚ ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ
*ತೆಂಗಿನೆಣ್ಣೆ ಗಟ್ಟಿಯಾಗಿದ್ದರೆ ಅದನ್ನು ಬಿಸಿ ಮಾಡಿಕೊಂಡು ಬಳಸಿ
*ಅಲೊವೇರಾ ಅನ್ನು ತುಂಡು ಮಾಡಿ ಮತ್ತು ಚಮಚದ ಸಹಾಯದಿಂದ ಅದರ ಜೆಲ್ ಹೊರತೆಗೆಯಿರಿ. *ಅದನ್ನು ಕಾಫಿ ಮಿಶ್ರಣಕ್ಕೆ ಸೇರಿಸಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಅದಕ್ಕೆ ಕೆಲವು ಹನಿ ನೀರು ಸೇರಿಸಿ ಮತ್ತು ಮಿಶ್ರಣವನ್ನು ನಿರಾಳಗೊಳಿಸಿ
*ಮರದ ಚಮಚ ಬಳಸಿ ಅವುಗಳನ್ನು ಮಿಶ್ರ ಮಾಡಿ ನಂತರ ಮೃದು ಪೇಸ್ಟ್ ತಯಾರಿಸಿ.
ಪಾತ್ರೆಯ ಮುಚ್ಚಳವನ್ನು ಮುಚ್ಚಿ ನಂತರ ತಂಪಾದ ಸ್ಥಳದಲ್ಲಿ ಅದನ್ನು ಇರಿಸಿ.
ಬಳಸುವ ವಿಧಾನಕಾಫಿ ತೆಂಗಿನೆಣ್ಣೆಯ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಗುರುತಿರುವ ಜಾಗಕ್ಕೆ ಹಚ್ಚಿ
ವೃತ್ತಾಕಾರವಾಗಿ 5 ನಿಮಿಷ ಅದನ್ನು ಮಸಾಜ್ ಮಾಡಿ
20 ನಿಮಿಷ ಈ ಮಿಶ್ರಣವನ್ನು ಹಾಗೆಯೇ ಬಿಡಿ
ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆಯಿರಿ
ನಂತರ ನಿಮ್ಮ ದೈನಂದಿನ ಮಾಯಿಶ್ಚರೈಸರ್ ಅನ್ನು ಹಚ್ಚಿ.
ವಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು 2-3 ಬಾರಿ ಈ ಕ್ರಿಯೆಯನ್ನು ಪುನರಾವರ್ತಿಸಿ.
ಕಾಫಿಯ ಪ್ರಯೋಜನಗಳುಕಾಫಿಯಲ್ಲಿರುವ ನ್ಯೂಟ್ರಿನ್ ಅಂಶಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ. ಕಾಫಿಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ತ್ವಚೆಯನ್ನು ಬಿಗಿಯಾಗಿಸುತ್ತವೆ ಮತ್ತು ತ್ವಚೆಯನ್ನು ಗಟ್ಟಿಗೊಳಿಸುತ್ತವೆ. ರಕ್ತದ ಹರಿವನ್ನು ಇದು ಸುಧಾರಿಸುತ್ತದೆ ಮತ್ತು ತ್ವಚೆಯಲ್ಲಿರುವ ಮೃತಕೋಶಗಳ ನಿವಾರಣೆಯನ್ನು ಮಾಡುತ್ತದೆ. ಇದಲ್ಲದೆ ಕಾಫಿಯು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಮಾಯಿಶ್ಚರೈಸ್ ಮಾಡುತ್ತದೆ. ಹಾಗೂ ತ್ವಚೆಯನ್ನು ಪೋಷಣೆ ಮಾಡುತ್ತದೆ.
ತೆಂಗಿನೆಣ್ಣೆಯ ಪ್ರಯೋಜನಗಳುನಾವು ಬಳಸುವ ಪ್ರತಿಯೊಂದು ಸೌಂದರ್ಯ ಉತ್ಪನ್ನಗಳಲ್ಲಿ ತೆಂಗಿನೆಣ್ಣೆಯ ಅಂಶವನ್ನು ನಾವು ಕಾಣಬಹುದಾಗಿದೆ. ತ್ವಚೆಯನ್ನು ಮೃದುವಾಗಿಸುವಲ್ಲಿ ಮತ್ತು ಹೈಡ್ರೇಟ್ ಮಾಡುವಲ್ಲಿ ತೆಂಗಿನೆಣ್ಣೆ ಪ್ರಮುಖವಾದುದು. ವಿಟಮಿನ್ ಇ ಮತ್ತು ಕೆ ಇದರಲ್ಲಿದ್ದು ಬೇಗನೇ ವಯಸ್ಸಾಗುವುದನ್ನು ಇದು ತಡೆಯುತ್ತದೆ. ಅಮಿನೊ ಆಸಿಡ್ ಗುರುತನ್ನು ಅಳಿಸಿ ಹಾಕುತ್ತದೆ. ತನ್ನ ಕೊಬ್ಬಿನ ಅಂಶಗಳಿಂದ ತ್ವಚೆಯ ಮಾಯಿಶ್ಚರೈಸ್ ಅನ್ನು ಇದು ಮಾಡುತ್ತದೆ.
ಅಲೊವೇರಾದ ಪ್ರಯೋಜನಗಳುಹೆಚ್ಚಿನ ತ್ವಚೆ ಸಂಬಂಧಿ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಲ್ಲಿ ಅಲೊವೇರಾ ಎತ್ತಿದ ಕೈಯಾಗಿದೆ. ಇದು ವಿಟಮಿನ್ಗಳನ್ನು ಹೊಂದಿದ್ದು ಇದರಲ್ಲಿರುವ ನೀರಿನ ಅಂಶ ತ್ವಚೆಯ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಾಯಿಶ್ಚರೈಸಿಂಗ್ ಮಾಡುವುದಲ್ಲದೆ, ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ತ್ವಚೆಯ ಕಿರಿಕಿರಿಯನ್ನು ನಿವಾರಿಸುತ್ತದೆ. ಇದು ಕೊಲೆಜನ್ ಅನ್ನು ಒಳಗೊಂಡಿದ್ದು ತ್ವಚೆಯ ಇಲಾಸ್ಟಿಸಿಟಿಯನ್ನು ಸುಧಾರಿಸುತ್ತದೆ.
ಸ್ಟ್ರೆಚ್ ಮಾರ್ಕ್ ಗಳನ್ನು ಬೇಗನೆ ಗುಣಪಡಿಸಲು ಇನ್ನೊಂದಿಷ್ಟು ಸರಳ ಟಿಪ್ಸ್
ಹರಳೆಣ್ಣೆಹರಳೆಣ್ಣೆಯು ನಿಮ್ಮ ಸ್ಟ್ರೆಚ್ ಮಾರ್ಕ್ ಗಳನ್ನು ಬೇಗನೆ ಗುಣಪಡಿಸುವ ಮತ್ತು ಪರಿಣಾಮಕಾರಿಯಾಗಿ ನಿವಾರಿಸುವ ತಾಕತ್ತನ್ನು ಹೊಂದಿದೆ. ಸ್ವಲ್ಪ ಹರಳೆಣ್ಣೆಯನ್ನು ಬಿಸಿ ಮಾಡಿ ಮತ್ತು ನಿಮ್ಮ ಸ್ಟ್ರೆಚ್ ಮಾರ್ಕ್ ನ ಮೇಲೆ ಅಪ್ಲೈ ಮಾಡಿ. ಇದನ್ನು 20 ನಿಮಿಷ ಹಾಗೆಯೇ ಬಿಡಿ ನಂತರ ಹದವಾಗಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ನೀವು ಮಲಗಲು ತೆರಳುವ ಮುನ್ನ ಪ್ರತಿದಿನ ಹೀಗೆ ಮಾಡಿದರೆ ಉತ್ತಮವಾದ, ವೇಗವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಿದೆ.
ಬಾದಾಮಿ ಎಣ್ಣೆವಿಟಮಿನ್ ಇ ಅಂಶವು ಬಾದಾಮಿ ಎಣ್ಣೆಯಲ್ಲಿದ್ದು, ಇದು ನಿಮ್ಮ ಚರ್ಮವನ್ನು ಅಂದಗಾಣಿಸಿ, ಚರ್ಮವನ್ನು ಹೊಳೆಯುವಂತೆ ಮಾಡಲು ನೆರವಾಗುತ್ತದೆ. ಇದು ನಿಮ್ಮ ಸ್ಟ್ರೆಚ್ ಮಾರ್ಕ್ ಗಳನ್ನು ತಿಳಿಗೊಳಿಸಲು ಮಾತ್ರವಲ್ಲ, ನಿಮ್ಮ ಸ್ಕಿನ್ ಟೋನ್ ನ್ನು ಹೆಚ್ಚಿಸಲು ಕೂಡ ನೆರವಿಗೆ ಬರುತ್ತದೆ.. ನಿಮ್ಮ ಇಷ್ಟದ ಎಸೆನ್ಶಿಯಲ್ ಎಣ್ಣೆಯೊಂದಿಗೆ ಬಾದಾಮಿ ಎಣ್ಣೆಯನ್ನು ಮಿಶ್ರಣಗೊಳಿಸಿ ಮತ್ತು ಅದನ್ನು ಎಫೆಕ್ಟ್ ಆದ ಜಾಗದಲ್ಲಿ ಅಪ್ಲೈ ಮಾಡಿ ಸುಮಾರು 5-10 ನಿಮಿಷ ಮಸಾಜ್ ಮಾಡಿ. ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ವಾಷ್ ಮಾಡಿ. ಪ್ರತಿದಿನ ಎರಡು ಬಾರಿ ನೀವು ಈ ರೆಮಿಡಿಯನ್ನು ಬಳಕೆ ಮಾಡಬಹುದು.
ಟೀ ಟ್ರೀ ಆಯಿಲ್ಟೀ ಟ್ರೀ ಆಯಿಲ್ ನಲ್ಲಿ ಆಂಟಿ- ಇನ್ಫ್ಲಮೇಟರಿ ಗುಣಗಳಿವೆ. ಈ ಎಣ್ಣೆಯ ಲಾಭಗಳಲ್ಲಿ ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡುವ ಗುಣವೂ ಒಂದಾಗಿದೆ. ಯಾವುದಾದರೂ ಎಸೆನ್ಶಿಯಲ್ ಎಣ್ಣೆಯನ್ನು ಕೊಬ್ಬರಿ ಎಣ್ಣೆ/ಆಲಿವ್ ಆಯಿಲ್ ಜೊತೆಗೆ ಸೇರಿಸಿ ಸ್ಟ್ರೆಚ್ ಮಾರ್ಕ್ ಗಳ ಮೇಲೆ ಮಸಾಜ್ ಮಾಡಿ. ಇದನ್ನು ಚರ್ಮವು ಹೀರಿಕೊಳ್ಳಲು ಹಾಗೆಯೇ ಬಿಟ್ಟು ಬಿಡಿ.
ಸಕ್ಕರೆ ಸ್ಕ್ರಬ್ಸಕ್ಕರೆಯು ನಿಮ್ಮ ಚರ್ಮವನ್ನು ಪುನರ್ ಭರ್ತಿ ಮಾಡಲು ನೆರವಾಗುತ್ತದೆ ಮತ್ತು ಚರ್ಮದ ಸತ್ತ ಜೀವಕೋಶಗಳನ್ನು ತೆಗೆಯಲು ನೆರವಾಗುತ್ತದೆ. ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಸ್ಟ್ರೆಚ್ ಮಾರ್ಕ್ ಗಳ ನಿವಾರಣೆಗೆ ಸಹಕಾರಿಯಾಗಿದೆ. ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಎರಡು ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯೊಂದಿಗೆ ಸೇರಿಸಿ. ಇದರಿಂದ ಸ್ಟ್ರೆಚ್ ಮಾರ್ಕ್ ಗಳ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ತಣ್ಣನೆಯ ನೀರಿನಿಂದ ತೊಳೆಯಿರಿ.. ವಾರಕ್ಕೆ ಒಮ್ಮೆಯಾದರೂ ಇದನ್ನು ಬಳಸಿ ನೋಡಿ.
ಬೇಕಿಂಗ್ ಸೋಡಾಬೇಕಿಂಗ್ ಸೋಡಾ ಕೂಡ ತುಂಬಾ ಹಳೆಯ ಕಾಲದಿಂದ ಬಳಸುತ್ತಿರುವ ಒಂದು ಮದ್ದಾಗಿದೆ.ಇದು ಚರ್ಮದ ಡೆಡ್ ಸೆಲ್ ಗಳನ್ನು ತೆಗೆಯಲು ಮತ್ತು ಸ್ಟ್ರೆಚ್ ಮಾರ್ಕ್ ಗಳನ್ನು ತೆಗೆಯಲು ಸಹಕಾರಿಯಾಗಿದೆ.. 1 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾಕ್ಕೆ ತಾಜಾವಾಗಿರುವ ನಿಂಬೆ ರಸವನ್ನು ಸೇರಿಸಿ. ಇದನ್ನು ಸ್ಟ್ರೆಚ್ ಮಾರ್ಕ್ ಗಳ ಮೇಲೆ ಅಪ್ಲೈ ಮಾಡಿ ಮತ್ತು 20-30 ನಿಮಿಷ ಹಾಗೆಯೇ ಬಿಡಿ.30 ನಿಮಿಷದ ನಂತರ, ಉಗುರು ಬೆಚ್ಚಗಿನ ಬಿಸಿಯಾದ ನೀರಿನಿಂದ ತೊಳೆಯಿರಿ. ಪ್ರತಿದಿನವೂ ನೀವು ಈ ರೆಮಿಡಿಯನ್ನು ಟ್ರೈ ಮಾಡಬಹುದು...