Back
Home » ಪ್ರವಾಸ
ಈ ವೀಕೆಂಡ್‌ನಲ್ಲಿ ಇಂದ್ರಾಯಿ ಕೋಟೆಗೆ ಟ್ರಕ್ಕಿಂಗ್ ಹೋಗಿ
Native Planet | 11th Jul, 2018 03:30 PM
 • ಇಂದ್ರಾಯಿ ಕೋಟೆ

  Ccmarathe

  ಇಂದು ಇದು ಸಾವಿರಾರು ಪ್ರವಾಸಿಗರಿಂದ ಪ್ರತೀ ತಿಂಗಳು ಭೇಟಿ ಕೊಡಲ್ಪಡುತ್ತದೆ. ಇಂತಹ ನೈಸರ್ಗಿಕ ಪರಿಸರವನ್ನು ಹೊಂದಿರುವ ಈ ಪ್ರಾಚೀನ ಅದ್ಬುತಗಳ ಅನ್ವೇಷಣೆ ನಡೆಸಿದರೆ ಹೇಗೆ? ನೀವು ಟ್ರಕ್ಕಿಂಗ್ ಇಷ್ಟ ಪಡುವವರಾಗಿದ್ದಲ್ಲಿ, ನೀವು ಈ ಅದ್ಬುತವಾದ ತಾಣವನ್ನು ಭೇಟಿ ಕೊಡುವುದನ್ನು ತಪ್ಪಿಸಿಕೊಳ್ಳಲೇ ಬಾರದು. ನಿಸ್ಸಂಶಯವಾಗಿಯೂ ಇದು ನಿಮಗೆ ಒಂದು ಆಹ್ಲಾದಕರ ಅನುಭವ ನೀಡುವುದು. ಇಂದ್ರಾಯಿ ಕೋಟೆಯ ಬಗ್ಗೆ ಮತ್ತು ಅಲ್ಲಿಗೆ ತಲುಪುವ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ.


 • ಇಂದ್ರಾಯಿ ಕೋಟೆಗೆ ಭೇಟಿ ಕೊಡಲು ಸೂಕ್ತ ಸಮಯ

  Ccmarathe

  ಇದೊಂದು ಬೆಟ್ಟದ ಮೇಲಿರುವ ಕೋಟೆಯಾಗಿರುವ ಕಾರಣ ಇದು ವರ್ಷವಿಡೀ ಭೇಟಿ ನೀಡಬಹುದಾದಂತಹ ತಾಣವಾಗಿದೆ. ಅದರಲ್ಲೂ ಚಾರುಣಿಗರು ಈ ಬೆಟ್ಟವನ್ನು ಜುಲೈ ತಿಂಗಳಿಂದ ಸೆಪ್ಟಂಬರ್ ತಿಂಗಳುಗಳ ಮಧ್ಯದ ಅವಧಿಯಾದ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಭೇಟಿ ಕೊಡಲು ಹೆಚ್ಚು ಇಷ್ಟ ಪಡುತ್ತಾರೆ. ಈ ಸಮಯದಲ್ಲಿ ಇಲ್ಲಿಯ ವಾತಾವರಣವು ತಂಪಾದ ಗಾಳಿಯಿಂದ ಕೂಡಿರುತ್ತದೆ ಮತ್ತು ಇದರ ಸುತ್ತಮುತ್ತಲಿನ ಸೌಂದರ್ಯತೆಯು ಉತ್ತುಂಗದಲ್ಲಿರುತ್ತದೆ. ಇದೊಂದು ಬೇಸಿಗೆಯಲ್ಲಿ ಭೇಟಿಕೊಡಬಹುದಾದ ತಾಣವಾಗಿದ್ದು ಅನೇಕ ಸ್ಥಳೀಯ ಪ್ರವಾಸಿಗರು ನಗರದ ಬಿಸಿಲಿನ ಬೇಗೆಯಿಂದ ತಪ್ಪಿಸಿ ಈ ಪ್ರಕೃತಿಯ ಪ್ರಶಾಂತ ಮಡಿಲಿನಲ್ಲಿ ಕಳೆಯಲು ಬಯಸುತ್ತಾರೆ.


 • ಇಂದ್ರಾಯಿ ಕೋಟೆಯನ್ನು ತಲುಪುವುದು ಹೇಗೆ?

  Ccmarathe

  ವಾಯು ಮಾರ್ಗದ ಮೂಲಕ : ಇಂದ್ರಾಯಿ ಕೋಟೆಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು 65 ಕಿ.ಮೀ ದೂರದಲ್ಲಿರುವ ನಾಸಿಕ್ ವಿಮಾನ ನಿಲ್ದಾಣ. ನೀವು ಒಮ್ಮೆ ವಿಮಾನ ನಿಲ್ದಾಣ ತಲುಪಿದ ಕೂಡಲೆ ಅಲ್ಲಿಂದ ಇಂದ್ರಾಯಿ ಕೋಟೆಯ ತಪ್ಪಲಿಗೆ ಬಾಡಿಗೆ ವಾಹನವನ್ನು ಪಡೆದು ನೇರವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೂ ನೀವು ಈ ಕೋಟೆಗೆ ತಲುಪ ಬೇಕಾದಲ್ಲಿ ನೀವು ಬೆಟ್ಟಗಳಲ್ಲಿ ಚಾರಣ ಮಾಡಬೇಕಾಗುತ್ತದೆ.

  ರೈಲು ಮಾರ್ಗ : ನಾಸಿಕ್ ಉತ್ತಮ ರೈಲ್ವೇ ಸಂಪರ್ಕವನ್ನು ಹೊಂದಿದೆ. ಆದುದರಿಂದ ನೀವು ನಾಸಿಕ್ ಜಂಕ್ಷನ್ ಗೆ ರೈಲನ್ನು ಪಡೆಯಬಹುದಾಗಿದೆ. ಅಲ್ಲಿಂದ ಇಂದ್ರಾಯಿ ಕೋಟೆಗೆ ನೀವು ಬಾಡಿಗೆ ಕ್ಯಾಬ್ ಮೂಲಕ ಪ್ರಯಾಣಿಸ ಬಹುದಾಗಿದೆ. ಕೋಟೆಯ ತಪ್ಪಲಿಗೆ ತಲುಪಲು ಇದು ನಿಮಗೆ ಸರಿ ಸುಮಾರು 1 ಗಂಟೆ 30 ನಿಮಿಷಗಳ ಕಾಲವನ್ನು ತೆಗೆದುಕೊಳ್ಳುವುದು.

  ರಸ್ತೆ ಮೂಲಕ : ರಸ್ತೆ ಮೂಲಕ ಇಂದ್ರಾಯಿ ಕೋಟೆಯನ್ನು ನೀವು ಸುಲಭವಾಗಿ ತಲುಪಬಹುದು ಮತ್ತು ಕೋಟೆಯ ಶಿಖರವನ್ನು ತಲುಪಲು ಚಾರಣ ಮಾಡಬೇಕಾಗುತ್ತದೆ.


 • ಕೋಟೆಯ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು

  Ccmarathe

  ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಇಂದ್ರಾಯಿ ಕೋಟೆಯು 15 ಮತ್ತು 16ನೇ ಶತಮಾನಗಳ ಮಧ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ಆದರೂ ಇದರ ರಚನೆಯ ಬಗ್ಗೆ ಯಾವುದೇ ಬಲವಾದ ಪುರಾವೆಗಳು ಇನ್ನೂ ದೊರೆತಿಲ್ಲ. ಆದುದರಿಂದ ಇದು ಇತಿಹಾಸಕಾರರು ಮತ್ತು ಇತಿಹಾಸಪ್ರಿಯರಿಂದ ಅಪರೂಪವಾಗಿ ಭೇಟಿ ಕೊಡಲ್ಪಡುತ್ತದೆ.


 • 4500 ಅಡಿ ಎತ್ತರ

  ಕೆಲವು ದಾಖಲೆಗಳ ಪ್ರಕಾರ ಈ ಕೋಟೆಯನ್ನು 19ನೇ ಶತಮಾನದಲ್ಲಿ ಬ್ರಿಟಿಷ್ ಸೇನೆಯಿಂದ ಸೆರೆಹಿಡಿಯಲಾಯಿತು ಎಂದು ಹೇಳಲಾಗುತ್ತದೆ. ಇಂದು ಈ ಕೋಟೆಯು ಕೇವಲ ಚಾರಣಕ್ಕೆ ಮತ್ತು ಕ್ಯಾಂಪಿಂಗ್ ಮಾಡುವ ತಾಣವಾಗಿದ್ದು ಅನೇಕ ಚಾರುಣಿಗರಿಂದ ವಾರಾಂತ್ಯಗಳಲ್ಲಿ ಭೇಟಿಕೊಡಲ್ಪಡುತ್ತದೆ.

  ನೀವು ಈ ಕೋಟೆಯ ಕೆಲವು ಅವಶೇಷಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ದೇವಾಲಯಗಳು ಗುಹೆಗಳು ಮತ್ತು ಶಾಸನಗಳೂ ಸೇರಿವೆ. ಸುಮಾರು 4500 ಅಡಿಗಳಷ್ಟು ಎತ್ತರದಲ್ಲಿರುವ ಈ ಭವ್ಯ ಕೋಟೆಯ ಅಜ್ಞಾತ ಇತಿಹಾಸವನ್ನು ಅನ್ವೇಷಿಸುವ ಈ ಬೆಟ್ಟವನ್ನು ಚಾರಣ ಮಾಡಲು ನೀವು ಇಷ್ಟಪಡುವುದಿಲ್ಲವೇ? ಈ ಕೋಟೆಯ ತುದಿಯಲ್ಲಿ ನೀವು ಸುತ್ತಮುತ್ತಲಿನ ಬೆಟ್ಟಗಳು ಮತ್ತು ಹಳ್ಳಿಗಳ ನಯನ ಮನೋಹರ ದೃಶ್ಯವನ್ನೂ ವೀಕ್ಷಿಸಬಹುದಾಗಿದೆ.


 • ನೀವು ಇಂದ್ರಾಯಿ ಕೋಟೆಯನ್ನು ಏಕೆ ಭೇಟಿ ಕೊಡಬೇಕು?

  Ccmarathe

  ನೀವು ಚಾರಣ ಮಾಡುವಿರಾದಲ್ಲಿ ನೀವು ಇಂದ್ರಾಯಿ ಕೋಟೆಗೆ ಖಂಡಿತವಾಗಿಯೂ ಭೇಟಿ ಕೊಡುವುದನ್ನು ಆಯೋಜಿಸಬೇಕು. ನೀವೇನಾದರೂ ಚಾರಣ ಮಾಡಲು ಇಚ್ಚಿಸದಿದ್ದಲ್ಲಿ, ಇಂದ್ರಾಯಿ ಕೋಟೆಯನ್ನು ಭೇಟಿ ಕೊಡುವ ಮುಖ್ಯವಾದ ಕಾರಣವೆಂದರೆ ಇಲ್ಲಿ ಅಧಃಪತನಗೊಂಡಿರುವ ಕೆಲವು ರಚನೆಗಳನ್ನು ಕಾಣಬಹುದು.ಇವು ನಿಮಗೆ ಇನ್ನೂ ಕೂಡಾ ಇದರ ರಚನೆಯ ದಂತಕಥೆಗಳನ್ನು ಬಣ್ಣಿಸುತ್ತವೆ. ಇಲ್ಲಿ ಶಿವದೇವರಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ದೇವಾಲಯವಿದೆ ಮತ್ತು ಕಲ್ಲು ಬಂಡೆಗಳಿಂದ ಆವೃತವಾದ ಗುಹೆಗಳು ಇವೆಲ್ಲವೂ ನಿಮ್ಮ ಆಸಕ್ತಿಯನ್ನು ಕೆರಳಿಸುತ್ತವೆ.


 • ಸುಂದರವಾದ ಕೊಳ

  ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಇದರ ವಿಶಾಲವಾದ ಪ್ರದೇಶದಲ್ಲಿ ಮಳೆಯನೀರಿನಿಂದ ಒಳಗೊಂಡ ಒಂದು ಸುಂದರವಾದ ಕೊಳವನ್ನು ಸೃಷ್ಟಿಸುತ್ತದೆ. ಹೀಗಾಗಿ ಇದು ಪಿಕ್ನಿಕ್ ಹೋಗುವವರಿಗೂ ಕೂಡ ಒಂದು ಸೂಕ್ತವಾದ ಸ್ಥಳವೆನಿಸುವಂತೆ ಮಾಡುತ್ತದೆ. ಇಲ್ಲಿಯ ಸುಂದರವಾದ ಸಣ್ಣ ಕೊಳದಲ್ಲಿ ವಿಶ್ರಾಂತಿ ಪಡೆದರೆ ಹೇಗಿರಬಹುದು? ನೀವು ಇಲ್ಲಿಯ ಸೊಂಪಾದ ಹಸಿರುಮಯ ವಾತಾವರಣದಲ್ಲಿ ಫೋಟೋವನ್ನೂ ಕ್ಲಿಕ್ಕಿಸಬಹುದು.
ಮಹಾರಾಷ್ಟ್ರವು ಅನೇಕ ಬೆಟ್ಟಗಳು ಹಾಗೂ ಕೋಟೆಗಳನ್ನು ಹೊಂದಿದ್ದು ಇವುಗಳು ಚಾರಣ ಮಾಡುವುದಕ್ಕೆ ಅನೇಕ ವರ್ಷಗಳಿಂದಲೂ ಹೆಸರುವಾಸಿಯಾಗಿದೆ. ಇಂದಿಗೂ ಕೂಡಾ ಇದು ಅನೇಕ ಚಾರುಣಿಗರು, ಶಿಬಿರಾರ್ಥಿಗಳು ಮತ್ತು ಇತಿಹಾಸ ಪ್ರಿಯರನ್ನು ಸೆಳೆಯುತ್ತದೆ.

ಅಂತಹುದೇ ಒಂದು ಬೆಟ್ಟಗಳ ಕೋಟೆಗಳಲ್ಲಿ ಇಂದ್ರಾಯಿ ಕೋಟೆ ಕೂಡಾ ಈ ಸುಂದರ ರಾಜ್ಯದಲ್ಲಿ ಇದೆ. ಕಳೆದ 5 ವರ್ಷಗಳಿಂದ ಚಾರುಣಿಗರಲ್ಲಿ ಅತ್ಯಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.

   
 
ಹೆಲ್ತ್