Back
Home » ಇತ್ತೀಚಿನ
ಶಿಯೋಮಿಗೆ ಸೆಡ್ಡು: ರೂ.8500ಕ್ಕೆ ನೋಕಿಯಾ X5, ನೋಚ್ ಡಿಸ್ ಪ್ಲೇ - ಡ್ಯುಯಲ್ ಕ್ಯಾಮೆರಾ...!
Gizbot | 11th Jul, 2018 05:01 PM
 • ರೂ.8500ಕ್ಕೆ ಮಾರಾಟ:

  ಚೀನಾದಲ್ಲಿ ಲಾಂಚ್ ಆಗಲಿರುವ ನೋಕಿಯಾ X5 ಸ್ಮಾರ್ಟ್ ಫೋನ್ ರೂ.8500ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ. ಬಜೆಟ್ ಬೆಲೆಯಲ್ಲಿ ದೊರೆಯುತ್ತಿದ್ದರೂ ಸಹ ಉತ್ತಮ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಈ ಸ್ಮಾರ್ಟ್ ಫೋನ್ ಶಿಯೋಮಿಗೆ ದೊಡ್ಡ ಹೊಡೆತವನ್ನು ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.


 • ನೋಕಿಯಾ X5 ಸ್ಮಾರ್ಟ್ ಫೋನ್ ಡಿಸ್ ಪ್ಲೇ:

  ನೋಕಿಯಾ X5 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದ್ದು, 5.86 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, IPS HD+ ಗುಣಮಟ್ಟದಿಂದ ಕೂಡಿರುವ ಈ ಡಿಸ್ ಪ್ಲೇ ಐಪೋನ್ X ಮಾದರಿಯ ಡಿಸ್ ಪ್ಲೇ ನೋಚ್ ಅನ್ನು ಒಳಗೊಂಡಿದೆ. ಅಲ್ಲದೇ ಇದು 19:9 ಅನುಪಾತರಿಂದ ಕೂಡಿದ್ದು, ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತೆ ಇದೆ.


 • ವೇಗದ ಪ್ರೋಸೆಸರ್:

  ನೋಕಿಯಾ X5 ಸ್ಮಾರ್ಟ್ ಫೋನಿನಲ್ಲಿ ಮೀಡಿಯಾ ಟೆಕ್ ಹೆಲಿಯೋ P60 ಪ್ರೋಸೆಸರ್ ಅನ್ನು ಒಳಗೊಂಡಿದ್ದು, ಇದು ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದಂತಿದೆ. ಇದರಿಂದಾಗಿ ಬಳಕೆದಾರರಿಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಫೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ GPU ಸಹ ಉತ್ತಮವಾಗಿದೆ. ಇದರಿಂದಾಗಿ ಉತ್ತಮ ಗೇಮ್ ಗಳನ್ನು ಆಡಬಹುದಾಗಿದೆ.


 • 4GB RAM & 32 GB ROM:

  ನೋಕಿಯಾ X5 ಸ್ಮಾರ್ಟ್ ಫೋನ್ 4 GB RAM ಅನ್ನು ಒಳಗೊಂಡಿದ್ದು, ಇದರೊಂದಿಗೆ 32GB ಇಂಟರ್ನಲ್ ಮೆಮೊರಿಯನ್ನು ಒಳಗೊಂಡಿರಲಿದೆ. ಇದರೊಂದಿಗೆ 6GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ದೊರೆಯಲಿದೆ. ಇಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.


 • ಡ್ಯುಯಲ್ ಕ್ಯಾಮೆರಾ:

  ನೋಕಿಯಾ X5 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 13 MP + 5 MP ಕ್ಯಾಮೆರಾವನ್ನು ಅಳಡಿಸಲಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ. ಅಲ್ಲದೇ ಎರಡು ಕಡೆಗಳಲ್ಲಿ LED ಪ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಇದರಿಂದಾಗಿ ಉತ್ತಮ ಚಿತ್ರಗಳನ್ನು ಸೆರೆಹಿಡಯಬಹುದು.
ಮಾರುಕಟ್ಟೆಯಲ್ಲಿ ನೋಕಿಯಾ ಹೊಸದಾಗಿ ಬಿಡುಗಡೆ ಮಾಡಿರುವ X ಸರಣಿಯ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ. ಇದರಲ್ಲಿ ಮೊದನೆಯದಾಗಿ ಕಾಣಿಸಿಕೊಂಡ ನೋಕಿಯಾ X6 ಸ್ಮಾರ್ಟ್ ಫೋನ್ ಚೀನಾ ಸೇರಿದಂತೆ ಹಲವು ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದೆ. ಅಲ್ಲದೇ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಇದೇ ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ನೋಕಿಯಾ ತಯಾರಿಯನ್ನು ನಡೆಸಿದ್ದು, ಈ ಕುರಿತು ಮಾಹಿತಿಯನ್ನು ಲೀಕ್ ಮಾಡಿದೆ.

ನೋಕಿಯಾ X6 ಸ್ಮಾರ್ಟ್ ಫೋನ್ ಯಶಸಿನ ನಂತರದಲ್ಲಿ ನೋಕಿಯಾ X5 ಸ್ಮಾರ್ಟ್ ಫೋನ್ ಅನ್ನು ನೋಕಿಯಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವಿಶ್ವದ ಅತೀ ದೊಡ್ಡ ಸ್ಮಾರ್ಟ್ ಫೋನ್ ಮಾರುಕಟ್ಟೆಯಾದ ಚೀನಾದಲ್ಲಿ ಮೊದಲಿಗೆ ಈ ಸ್ಮಾರ್ಟ್ ಪೋನ್ ಲಾಂಚ್ ಆಗಲಿದ್ದು, ಇದಾದ ನಂತರದಲ್ಲಿ ಭಾರತೀಯ ಮಾರುಟಕ್ಟೆಯಲ್ಲಿಯೂ ಲಾಂಚ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ನೋಕಿಯಾ X5 ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಮುಂದಿದೆ.

   
 
ಹೆಲ್ತ್