Back
Home » ಇತ್ತೀಚಿನ
ಶಿಯೋಮಿ ಬೇಡವೇ ಬೇಡ: ಇನ್ಫಿನಿಕ್ಸ್ ಹಾಟ್ S3 ರೂ.7999ಕ್ಕೆ, ಡ್ಯುಯಲ್ ಕ್ಯಾಮೆರಾ, ಫೇಸ್ ಆನ್ ಲಾಕ್..!
Gizbot | 11th Jul, 2018 07:49 PM
 • ಫೇಸ್ ಅನ್ ಲಾಕ್:

  ಇನ್ಫಿನಿಕ್ಸ್ ಹಾಟ್ S3 ಸ್ಮಾರ್ಟ್ ಫೋನಿನಲ್ಲಿ ಫೇಸ್ ಆನ್ ಲಾಕ್ ವ್ಯವಸ್ಥೆಯನ್ನು ಕಾಣಬಹುದಾಗಿದ್ದು, ಬೆಜೆಟ್ ಬೆಲೆಯ ಸ್ಮಾರ್ಟ್ ಪೋನ್ ಗಳಲ್ಲಿ ಇದೇ ಬೆಸ್ಟ್ ಅನ್ನಲಾಗಿದೆ. ಇದಕ್ಕಾಗಿಯೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಫೋಟೋ ತೆಗೆಯಲು ಮತ್ತು ಫೇಸ್ ಅನ್ ಲಾಕ್ ಮಾಡಲು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಕಡಿಮೆ ಬೆಲೆಗೆ ದೊರೆಯುವ ಬೆಸ್ಟ್ ಆಯ್ಕೆಯೂ ಇದಾಗಿದೆ.


 • ಡ್ಯುಯಲ್ ಕ್ಯಾಮೆರಾ:

  ಇನ್ಫಿನಿಕ್ಸ್ ಹಾಟ್ S3 ಸ್ಮಾರ್ಟ್ ಫೋನ್ ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 13 MP + 2 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದ್ದು, ಇದು ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯುವುದಲ್ಲದೇ, ವಿಡಿಯೋ ರೆಕಾರ್ಡಿಂಗ್ ಮಾಡಲು ಸಹ ಸಹಾಯಮಾಡಲಿದೆ ಎನ್ನಲಾಗಿದೆ. ಬೆಜಟ್ ಸ್ಮಾರ್ಟ್ ಫೋನ್ ವೊಂದರಲ್ಲಿ ಡ್ಯುಯಲ್ ಕ್ಯಾಮೆರಾ ನೀಡಿರುವುದು ಇದೇ ಮೊದಲು.


 • ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ:

  ಇನ್ಫಿನಿಕ್ಸ್ ಹಾಟ್ S3 ಸ್ಮಾರ್ಟ್ ಫೋನ್ ಸದ್ಯದ ಮಾರುಕಟ್ಟೆಯಲ್ಲಿ ಲೆಟೆಸ್ಟ್ ಎನ್ನುವ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರೊಂದಿಗೆ XOS 3.2 ವನ್ನು ನೀಡಲಾಗಿದೆ. ಇದು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಾಗಿದೆ ಎನ್ನಲಾಗಿದೆ.


 • 3GB RAM:

  ಇನ್ಫಿನಿಕ್ಸ್ ಹಾಟ್ S3 ಸ್ಮಾರ್ಟ್ ಫೋನ್ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ 3GB RAM ಅನ್ನು ಹೊಂದಿದೆ ಎನ್ನಲಾಗಿದ್ದು, ಇದರೊಂದಿಗೆ ಸ್ನಾಪ್ ಡ್ರಾಗನ್ 425 ಪ್ರೋಸೆಸರ್ ಅನ್ನು ನೀಡಲಾಗಿದೆ. ಇದು ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದ ಹಾಗಿದೆ. ಇದಲ್ಲದೇ ಹೆಚ್ಚಿನ ಸ್ಟೋರೆಜ್ ಆನ್ನು ಕಾಣಬಹುದಾಗಿದೆ.


 • ದೊಡ್ಡ ಡಿಸ್ ಪ್ಲೇ:

  ಇನ್ಫಿನಿಕ್ಸ್ ಹಾಟ್ S3 ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ ಡಿಸ್ ಪ್ಲೇಯನ್ನು ನೀಡಲಾಗಿದೆ. ಇದು 18:9 ಅನುಪಾತದಾಗಿದ್ದು, ಬಳಕೆದಾರರಿಗೆ ದೊಡ್ಡದಾದ ಡಿಸ್ ಪ್ಲೇಯನ್ನು ನೀಡಲಾಗಿದೆ. ಇದು ಹೆಚ್ಚಿನ ಸಮಯ ವಿಡಿಯೋವನ್ನು ನೋಡಲು ಸಹಾಯ ಮಾಡಲಿದೆ. ಅಲ್ಲದೇ ಇದರಲ್ಲಿ ಗೇಮ್ ಆಡುವ ಅನುಭವು ಉತ್ತಮವಾಗಿಯೇ ಇರಲಿದೆ ಎನ್ನುವ ಮಾಹಿತಿಯೂ ಇದೆ.
ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಇನ್ಫಿನಿಕ್ಸ್ ಹೊಸದೊಂದು ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದ್ದು, ಬಜೆಟ್ ಸ್ಮಾರ್ಟ್ ಫೋನ್ ಸಾಲಿನಲ್ಲಿ ಹೊಸ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಈಗಾಗಲೇ ಬೆಜೆಟ್ ಸ್ಮಾರ್ಟ್ ಫೋನಿನ ಸಾಲಿನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಈ ಸ್ಮಾರ್ಟ್ ಫೋನ್ ಶಿಯೋಮಿ ಸ್ಮಾರ್ಟ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ.

ಇನ್ಫಿನಿಕ್ಸ್ ಹಾಟ್ S3 ಸ್ಮಾರ್ಟ್ ಫೋನ್ ರೂ. 7999ಕ್ಕೆ ಮಾರಾಟವಾಗಲಿದ್ದು, ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಉತ್ತಮವಾದ ಸ್ಮಾರ್ಟ್ ಫೋನ್ ಒಂದನ್ನು ಬಳಕೆಗೆ ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಬೆಜೆಟ್ ಫೋನ್ ಗಳಲ್ಲಿ ಬೆಸ್ಟ್ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲಿದೆ. ಅಲ್ಲದೇ ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಗಳನ್ನು ನೀಡಲಿದೆ ಎನ್ನಲಾಗಿದ್ದು, ಈ ಕುರಿತು ಸಾಕಷ್ಟು ಮಾಹಿತಿಯೂ ಮುಂದಿದೆ.

   
 
ಹೆಲ್ತ್