ಈ ವರ್ಷನ್ 2.0 ನಲ್ಲಿ ಯುಪಿಐ ಒಂದಷ್ಟು ಹೊಸ ವೈಶಿಷ್ಟ್ಯತೆಗಳನ್ನು ಸೇರಿಸಲಿದೆ. ಅವುಗಳೆಂದರೆ ವಹಿವಾಟಿನ ಮಿತಿಯನ್ನು ದುಪ್ಪಟ್ಟು ಮಾಡಿ 2 ಲಕ್ಷ ರುಪಾಯಿಗೆ ಹೆಚ್ಚಿಸುವುದು ಮತ್ತು ಯುಪಿಐ ಗೆ ಓಡಿ(ಓವರ್ ಡ್ರಾಫ್ಟ್) ಅಕೌಂಟನ್ನು ಲಿಂಕ್ ಮಾಡುವ ಸಾಮರ್ಥ್ಯ ಇತ್ಯಾದಿ. ಆಧಾರ್ ಆಧಾರಿತ ಪೇಮೆಂಟ್ ವೈಶಿಷ್ಟ್ಯವು ಕೆಲವು ಗೌಪ್ಯತೆಯ ಹಿತದೃಷ್ಟಿಯಿಂದ ಹಿಂತೆಗೆದುಕೊಳ್ಳುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಒಟ್ಟಾರೆ, ಯುಪಿಐ 2.0 ತನ್ನ ಮೊದಲ ವರ್ಷನ್ ಗಿಂತ ಹೆಚ್ಚು ಗಮನಾರ್ಹ ಬದಲಾವಣೆಗಳನ್ನು ಹೊಂದಿರುತ್ತದೆ ಮತ್ತು ಪಿ2ಎಮ್ ವಹಿವಾಟು ಅಂದರೆ ವ್ಯಕ್ತಿ ಮತ್ತು ವ್ಯಾಪಾರಿ ವಹಿವಾಹಿನ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ನಿರೀಕ್ಷೆ ಇದೆ. ಯುವರ್ ಸ್ಟೋರಿ ವರದಿಯೂ ಕೂಡ ಇದನ್ನೇ ಉಲ್ಲೇಖಿಸಿದೆ.
ಯುಪಿಐ ನ ಹೊಸ ಆವೃತ್ತಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯತೆಯೆಂದರೆ ಗ್ರಾಹಕರ ಖಾತೆಯಲ್ಲಿ ಎಸ್ಕ್ರೋ ಖಾತೆಯಲ್ಲಿ ಭದ್ರತೆ ಇರುವಂತೆ, ಗ್ರಾಹಕರು ಹಾಗು ಸೇವಾ ಪೂರೈಕೆದಾರರ ಮೊತ್ತವನ್ನು ನಿರ್ಭಂಧಿಸಲು ಅವಕಾಶವಿರುತ್ತದೆ. ಉತ್ತಮ ಸರಕು ಮತ್ತು ಸೇವೆ ಕಲ್ಪಿಸಿದಾಗ ಮಾತ್ರ ವ್ಯವಹಾರ ನಡೆಸಲು ಅನುವು ಮಾಡಿ ಕೊಡುತ್ತದೆ.
ಇದುವರೆಗೆ ಯುಪಿಎ ನಲ್ಲಿ ಕೇವಲ ಬ್ಯಾಂಕ್ ನ ಕರೆಂಟ್ ಅಕೌಂಟ್ ಗಳನ್ನು ಮಾತ್ರ ವ್ಯವಹಾರಕ್ಕೆ ಬಳಸುವ ಅವಕಾಶವಿರುತ್ತಿತ್ತು. ಆದರೆ ಓವರ್ ಡ್ರಾಫ್ಟ್ ಅಕೌಂಟ್ ಗಳನ್ನು ಬಳಸಲು ಅನುಮತಿ ಇರಲಿಲ್ಲ. ಯುಪಿಎ 2.0 ಅದಕ್ಕೂ ಅನುಮತಿ ನೀಡಲಿದ್ದು, ಬಳಕೆದಾರರು ತಮ್ಮ ಓಡಿ ಅಕೌಂಟ್ ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗುತ್ತೆ. ಇದು ನಿಜಕ್ಕೂ ಸ್ವಾಗತಾರ್ಹ ಅವಕಾಶವಿದ್ದು, ಗ್ರಾಹಕ ಮತ್ತು ವ್ಯವಹಾರಸ್ಥರ ನಡುವಿನ ಹಣಕಾಸು ವಹಿವಾಹಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ.
ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಈ ಬಾರಿ ಇಲ್ಲದೇ ಇರುವ ಸಾಧ್ಯತೆಗಳಿದೆ. ಮುಂದಿನ ದಿನಗಳಲ್ಲಿ ಪುನಃ ಬಿಡುಗಡೆಗೊಳಿಸಲೂ ಬಹುದು.ವರದಿಯ ಪ್ರಕಾರ ಯುಪಿಐ 2 ಬಿಡುಗಡೆಗೆ ಇಷ್ಟು ದಿನ ತಡವಾಗಿರುವುದಕ್ಕೆ ಪ್ರಮುಖ ಕಾರಣವೇ ಈ ವೈಶಿಷ್ಟ್ಯವನ್ನು ಸೇರಿಸುವ ಮತ್ತು ತೆಗೆದುಹಾಕುವ ಬಗೆಗಿನ ಗೊಂದಲಗಳು. ಆದರೆ ಎನ್ಸಿಪಿಐ ಇದೊಂದು ಕಾರಣದಿಂದ ಯುಪಿಐ 2 ಬಿಡುಗಡೆಯನ್ನು ಮುಂದೂಡಲು ಇಚ್ಛಿಸುತ್ತಿಲ್ಲವಂತೆ.
ಸ್ಟ್ರ್ಯಾಡಿಂಗ್ ಇನ್ಸ್ಟ್ರಕ್ಷನ್ ವೈಶಿಷ್ಟ್ಯದ ಬಗ್ಗೆ ನಿಮಗೆ ಇದುವರೆಗೂ ತಿಳಿದಿಲ್ಲವೆಂದರೆ, ಇದು ಬಳಕೆದಾರರಿಗೆ ಯುಪಿಐ ಮುಖಾಂತರ ಸ್ವಯಂಚಾಲಿತ ಪಾವತಿ ಆದೇಶಕ್ಕೆ ಅವಕಾಶ ನೀಡುತ್ತದೆ, ಇದು ಮಾಸಿಕ ಚಂದಾದಾರಿಕೆಯ ಸೇವೆಗಳು ಮತ್ತು ಇತರ ಸೇವೆಗಳನ್ನು ಏಕಕಾಲದ ದೃಢೀಕರಣದ ಮೂಲಕ ಮಾಡಬಹುದಾಗಿದೆ. ಆರ್ ಬಿ ಐ ಆದೇಶದ ಮೇರೆಗೆ ಈ ಸೇವೆಯನ್ನು ಈ ಬಾರಿ ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಹಣದ ವಹಿವಾಟು ಇನ್ನು ಮುಂದೆ ಮತ್ತಷ್ಟು ಸರಾಗಗೊಳ್ಳುವ ಸಾಧ್ಯತೆಗಳಿದೆ. ಯಾಕೆಂದರೆ ಯುಪಿಐ 2.0 ಬಿಡುಗಡೆಗೆ ಸನ್ನದ್ದಾಗಿದ್ದು ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಮತ್ತು ಅವರ ಅನುಕೂಲಕ್ಕೆ ತಕ್ಕಂತ ಕೆಲವು ಮಹತ್ವದ ಬದಲಾವಣೆಗಳನ್ನು ಇದು ಒಳಗೊಂಡಿದೆ. ಬ್ಯಾಂಕ್ ಗೆ ತೆರಳಿಯೇ ಮಾಡಬೇಕಾಗಿದ್ದ ವಹಿವಾಟು ಕೇವಲ ಮೊಬೈಲ್ ಮೂಲಕವೇ ನಡೆಯಲು ಇದು ಇನ್ನಷ್ಟು ಬೆಂಬಲವನ್ನು ನೀಡುತ್ತದೆ.
ದೊಡ್ಡ ವಹಿವಾಟುದಾರರಿಗೆ ಖಂಡಿತ ಯುಪಿಎ 2.0 ಬಹಳ ಸಹಕಾರವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ನ ಹೊಸ ಮತ್ತು ಸುಧಾರಿತ ಆವೃತ್ತಿ ಅಂತಿಮವಾಗಿ ಬಿಡುಗಡೆಯಾಗಲಿದೆ, ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (ಎನ್ಪಿಸಿಐ) ಯುಪಿಐ 2.0 ಅನ್ನು ಈ ವಾರ ನಂತರ ಹೊರತರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.