Back
Home » ಇತ್ತೀಚಿನ
ರೂ.5ಕ್ಕೆ 80KM ಮೈಲೆಜ್ ನೀಡುವ ಸ್ಮಾರ್ಟ್ ಬೈಕ್ ಬಿಡುಗಡೆ ಮಾಡಿದ ಇಂಡಿಯನ್ ಕಂಪನಿ..!
Gizbot | 12th Jul, 2018 10:01 AM
  • ಕೃತಕ ಬುದ್ದಿ ಮತ್ತೆ:

    ಟ್ರಾನೆಕ್ಸ್ ಒನ್ ಬೈಕ್ ನಲ್ಲಿ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಇದರೊಂದಿಗೆ ಆಟೋ ಮೋಷನ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದಲ್ಲದೇ LoT ವಿಷಯಗಳನ್ನು ಬಳಕೆ ಮಾಡಿಕೊಂಡು ವಿನ್ಯಾಸ ಮಾಡಲಾಗಿದ್ದು, ಹೊಸ ತಲೆಮಾರಿನ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ಇದಾಗಲಿದೆ. ಇದೊಂದು ಹೊಸ ಮೈಲಿಗಲ್ಲನ್ನು ಸ್ಥಾಪನೆ ಮಾಡಲಿದೆ ಎನ್ನಲಾಗಿದೆ.


  • ಬೈಸಿಕಲ್ ಮಾದರಿ:

    ಟ್ರಾನೆಕ್ಸ್ ಒನ್ ಬೈಕ್ ಕಂಪನಿಯೂ ವಿನ್ಯಾಸ ಮಾಡಿರುವ ಟ್ರಾನೆಕ್ಸ್ಟಿಮ್ ಎಕೋಸಿಸ್ಟಮ್ ನಲ್ಲಿ ಕಾರ್ಯನಿರ್ಹಿಸಲಿದೆ ಎನ್ನಲಾಗಿದ್ದು, ಬಳಕೆದಾರರಿಗೆ ಸಾಕಷ್ಟು ಸಹಾಯವಾಗವ ನಿಟ್ಟಿನಲ್ಲಿ ಬೈಸಿಕ್ ಮಾದರಿಯಲ್ಲಿ ನಿರ್ಮಾನಿಸಲಾಗಿದೆ. ಬ್ಯಾಟರಿ ಖಾಲಿಯಾದರೆ ತುಳಿದುಕೊಂಡು ಹೊಗಲು ಸಹಾಯವಾಗುಂತೆ ವಿನ್ಯಾಸ ಮಾಡಲಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಸಹಾಯವಾಗಲಿದೆ.


  • 6 ಸ್ಪೀಡ್ ಕಂಟ್ರೋಲ್:

    ಟ್ರಾನೆಕ್ಸ್ ಒನ್ ಬೈಕ್ ನಲ್ಲಿ ಒಟ್ಟು 6 ಸ್ಪೀಡ್ ಕಂಟ್ರೋಲ್ ಅನ್ನು ಕಾಣಬಹುದಾಗಿದ್ದು, ಇದು ವೇಗವಾಗಿ ಚಲಿಸುವುದನ್ನು ಕಂಟ್ರೋಲ್ ಮಾಡುವ ಸಲುವಾಗಿ ಬಳಕೆ ಮಾಡಬಹುದಾಗಿದೆ. ಅಲ್ಲದೇ ಇದಕ್ಕಾಗಿ ಕಂಟ್ರೋಲರ್ ಅನ್ನು ನೀಡಲಾಗಿದೆ. 500W ಲಿಥಿಯಮ್ ಬ್ಯಾಟರಿಯನ್ನು ಇದರಲ್ಲಿ ನಿಡಲಾಗಿದೆ. ಇದು ಒಂದು ಚಾರ್ಜ್ ನಲ್ಲಿ 80 ಕಿಮಿ ಮೈಲೆಜ್ ನೀಡಲಿದೆ ಎಂದು ಕಂಪನಿಯೂ ತಿಳಿಸಿದೆ. ಒಂದು ಬಾರಿಗೆ ಒಂದು ಯೂನಿಟ್ ವಿದ್ಯುತ್ ಅನ್ನು ಪಡೆದುಕೊಳ್ಳಲಿದೆ. ಇದಕ್ಕೆ ರೂ.5 ಖರ್ಚಾದರೆ ಹೆಚ್ಚು.


  • ಎರಡು ಬಣ್ಣದಲ್ಲಿ ಲಭ್ಯ:

    ಟ್ರಾನೆಕ್ಸ್ ಒನ್ ಇ ಬೈಕ್ ಎರಡು ಬಣ್ಣಗಳ್ಲಲಿ ದೊರೆಯಲಿದ್ದು, ಜುಲೈ 16 ರಿಂದ ಪ್ರೀ ಬುಕಿಂಗ್ ಮಾಡಬಹುದಾಗಿದೆ. ಮೊದಲಿಗೆ ಕೆಲವೇ ಕೆಲವು ಸಂಖ್ಯೆಯಲ್ಲಿ ಮಾರಾಟವಾಗಲಿದ್ದು, ಇದಾದ ನಂತರದಲ್ಲಿ ಮುಂದಿನ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.


  • ಬೆಲೆ:

    ಟ್ರಾನೆಕ್ಸ್ ಒನ್ ಬೈಕ್ ರೂ.49999ಕ್ಕೆ ಮಾರಾಟವಾಗಲಿದ್ದು, ಮಾರುಕಟ್ಟೆಯಲ್ಲಿ ದೊರೆಯುವ ಬೈಕ್ ಗಳಿಗಿಂತ ಕಡಿಮೆ ಬೆಲೆ ದೊರೆಯುತ್ತಿದ್ದು, ಮಹಾ ನಗರಗಳಲ್ಲಿ ಸಂಚರಿಸಲು ಹೇಳಿ ಮಾಡಿಸಿದಂತೆ ಇದೆ. ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು ಇದು ಹೇಳಿ ಮಾಡಿಸಿದ ಪರಿಹಾರವಾಗಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಸ್ತುಗಳ ಹಾವಳಿಯೂ ಹೆಚ್ಚಾಗುತ್ತಿದೆ. ಇದೇ ಸಾಲಿನಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿಕೊಳ್ಳುತ್ತಿವೆ. ಸದ್ಯ ಮಾರುಕಟ್ಟೆಗೆ ಭಾರತದ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ವೊಂದು ಬಿಡುಗಡೆಯಾಗಿದ್ದು, ಬಳಕೆದಾರರಿಗೆ ಅಂತರಾಷ್ಟ್ರಿಯ ಮಟ್ಟದ ಗುಣಮಟ್ಟದ ಬೈಕ್ ವೊಂದನ್ನು ಟ್ರಾನೆಕ್ಸ್ ಮೋಟರ್ಸ್ ಸಂಸ್ಥೆಯೂ ವಿನ್ಯಾಸ ಮಾಡಿದ್ದು, ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನೂತನ ಮಾದರಿಯಲ್ಲಿ ಟ್ರಾನೆಕ್ಸ್ ಒನ್ ಬೈಕ್ ಅನ್ನು ಲಾಂಚ್ ಮಾಡಿದೆ.

ಇದು ಎಲೆಕ್ಟ್ರಿಕ್ ಬೈಕ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಲಿದೆ ಎನ್ನಲಾಗಿದ್ದು, ಹೊಸ ಮಾದರಿಯ ಇಕೋ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ನೋಡಲು ಸುಂದರವಾಗಿದ್ದು, ಉತ್ತಮ ವಿನ್ಯಾಸದಿಂದ ಕೂಡಿದೆ. ಈ ಹಿನ್ನಲೆಯಲ್ಲಿ ಮಾರುಟಕ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ನಿರ್ಮಾಣ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಮಾರುಕಟ್ಟೆಗೆ ಭಾರತದ್ದೇ ಕಂಪನಿ ಲಾಂಚ್ ಮಾಡಿರುವ ಮೊದಲ ಸ್ಮಾರ್ಟ್ ಬೈಕ್ ಕುರಿತ ಮಾಹಿತಿಯೂ ಮುಂದಿನಂತೆ ಇದೆ.

   
 
ಹೆಲ್ತ್