Back
Home » ಇತ್ತೀಚಿನ
ಶಿಯೋಮಿ ಇತಿಹಾಸದಲ್ಲಿಯೇ ಅತೀ ದೊಡ್ಡ ಬ್ಯಾಟರಿ ಫೋನ್: ಒಂದು ಚಾರ್ಜ್ ಗೆ 4 ದಿನ ಬಾಳಿಕೆ..!
Gizbot | 12th Jul, 2018 12:05 PM
 • 5400mAh ಬ್ಯಾಟರಿ ಈ ಫೋನಿನಲ್ಲಿದೆ:

  ಇದೇ ಮೊದಲ ಬಾರಿಗೆ ಶಿಯೋಮಿ ತನ್ನ ಸ್ಮಾರ್ಟ್ ಫೋನಿನಲ್ಲಿ ಅತೀ ದೊಡ್ಡ ಪ್ರಮಾಣದ ಬ್ಯಾಟರಿಯನ್ನು ಅಳವಡಿಸಲು ಮುಂದಾಗಿದೆ. ಇದು ಟಾಪ್ ಎಂಡ್ ಸ್ಮಾರ್ಟ್ ಫೋನ್ ವೊಂದರಲ್ಲಿ ನೀಡಲಾಗಿರುವ ಹೆಚ್ಚಿನ ಪ್ರಮಾಣದ ಬ್ಯಾಟರಿಯಾಗಿದ್ದು, ಅತೀ ಹೆಚ್ಚಿನ ಪ್ರಮಾಣದ ಬ್ಯಾಕಪ್ ಅನ್ನು ನೀಡಲಾಗಿದ್ದು, ವೇಗವಾಗಿ ಚಾರ್ಜ್ ಆಗುವ ಆಯ್ಕೆಯನ್ನು ನೀಡಲಾಗಿದೆ. ಇದಕ್ಕಾಗಿ ಕ್ವೀಕ್ ಚಾರ್ಜರ್ 3.0ವನ್ನು ಕಾಣಬಹುದಾಗಿದೆ.


 • Mi ಮ್ಯಾಕ್ಸ್ 3 ನಲ್ಲಿ 6 GB RAM:

  Mi ಮ್ಯಾಕ್ಸ್ 3 ಸ್ಮಾರ್ಟ್ ಫೋನಿನಲ್ಲಿ 6GB RAM ಅನ್ನು ನೋಡಲಾಗಿದ್ದು, ಇದು ವೇಗದ ಕಾರ್ಯಚರಣೆಗೆ ಸಹಾಯವನ್ನು ಮಾಡಲಿದೆ. ಇದಲ್ಲದೇ 128 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು ಹೆಚ್ಚಿನ ಪ್ರಮಾದ ಸ್ಟೋರೆಜ್ ಗೆ ಅವಕಾಶವನ್ನು ಮಾಡಲಾಗಿದೆ. ಇದರೊಂದಿಗೆ ಸ್ನಾಪ್ ಡ್ರಾಗನ್ 710 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ.


 • ಡಿಸ್ ಪ್ಲೇ:

  Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ನಲ್ಲಿ 6.9 ಇಂಚಿನ ಡಿಸ್ ಪ್ಲೇ ನಿಡಲಾಗಿದ್ದು, ಇದು 18:9 ಅನುಪಾತದಿಂದ ಕೂಡಿರಲಿದ್ದು, ಸಾಮಾನ್ಯ ಫೋನ್ ಗಿಂತಲೂ ದೊಡ್ಡದಾಗಿರಲಿದೆ. ಆದರೆ ಈ ಸ್ಮಾರ್ಟ್ ಫೋನ್ ನಲ್ಲಿ ನೋಚ್ ಅನ್ನು ನೀಡಲಾಗಿಲ್ಲ. ಈ ಸ್ಮಾರ್ಟ ಫೋನಿನಲ್ಲಿ ವಿಡಿಯೋ ನೋಡುವ ಅನುಭವ ಉತ್ತಮವಾಗಿರಲಿದೆ ಮತ್ತು ಗೇಮ್ ಆಡುವ ಅನುಭವು ಸಹ ಉತ್ತಮವಾಗಿರಲಿದೆ.


 • ಉತ್ತಮ ಕ್ಯಾಮೆರಾ ಇದೆ:

  Mi ಮ್ಯಾಕ್ಸ್ 3 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಹಿಂಭಾಗದಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಬಳಕೆದಾರರಿಗೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.


 • Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್:

  Mi ಮ್ಯಾಕ್ಸ್ 3 ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 636 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. 6GB RAM/ 128 GB ಮೊಮೊರಿಯೊಂದಿಗೆ, 4 GB RAM/64 GB ಮೆಮೊರಿಯೊಂದಿಗೆ ಮತ್ತು 3GB RAM / 32 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ.
ಶಿಯೋಮಿ ಮಾರುಕಟ್ಟೆಗೆ ಮತ್ತೊಂದು ಬೊಂಬಾಟ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಹಲವು ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿರುವ ಶಿಯೋಮಿ, ಈ ಬಾರಿ ಮಧ್ಯಮ ಸರಣಿಯಲ್ಲಿ ಬೆಸ್ಟ್ ಎನ್ನಬಹುದಾಗಿರುವ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದ್ದು, ಇದು ಸ್ಯಾಮ್ ಸಂಗ್ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ಕಂಪನಿಗಳಿಗೆ ಮಾರಕವಾಗಲಿದೆ.

ಈಗಾಗಲೇ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗಳಲ್ಲಿ ಸ್ಪರ್ಧೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಇದೇ ತಿಂಗಳ ಅಂದರೆ ಜುಲೈ 19 ರಂದು ಮಾರುಕಟ್ಟೆಗೆ ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ. ಈ ಮೂಲಕ ಮತ್ತೊಂದು ಸುತ್ತಿನಲ್ಲಿ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಆರಂಭಿಸಲು ಮುಂದಾಗಿದೆ. ಇದರಿಂದಾಗಿ ಅನೇಕ ಸ್ಮಾರ್ಟ್ ಫೋನ್ ಗಳು ಬೇಡಿಕೆಯನ್ನು ಕಳೆದುಕೊಳ್ಳಲಿವೆ ಎನ್ನುವ ಲೆಕ್ಕಚಾರ ಶುರುವಾಗಿದೆ.

   
 
ಹೆಲ್ತ್