ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳನ್ನು ಕಾಣಬಹುದಾಗಿದ್ದು, ಚೀನಾ ಮೂಲದ ವಿವೋ ಕಂಪನಿಯೂ ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ಹಲವು ಹೊಸ ಸಂಶೋಧನೆಗಳನ್ನು ನಡೆಸುವ ಮೂಲಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಭವಿಷ್ಯದ ತಲೆ ಮಾರಿನ ತಂತ್ರಜ್ಞಾನವನ್ನು ಬಳಕೆದಾರರಿಗೆ ನೀಡುತ್ತಿದೆ. ಈ ಹಿಂದೆ ಹಲವು ಬಾರಿ ಮಾರುಕಟ್ಟೆಗೆ ಹೊಸ ವಿಷಯಗಳನ್ನು ಪರಿಯಚ ಮಾಡಿದ್ದ ವಿವೋ, ಈ ಬಾರಿ ಮತ್ತೊಂದು ಕ್ರಾಂತಿಕಾರಕ ಬದಲಾವಣೆಯನ್ನು ತನ್ನ ಸ್ಮಾರ್ಟ್ ಫೋನಿನಲ್ಲಿ ಮಾಡಿದೆ. ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ. ಈ ಮೂಲಕ ಸ್ಮಾರ್ಟ್ ಫೋನ್ ಅನ್ನು ಇನಷ್ಟು ಕಾಂಪಾಕ್ಟ್ ಮಾಡಲು ಮುಂದಾಗಿದೆ.
ಮೊದಲ ಬಾರಿಗೆ ತನ್ನ ಸ್ಮಾರ್ಟ್ ಫೋನ್ ನಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಿದ ವಿವೋ ಕಂಪನಿಯೂ, ವಿವೋ X21 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿ ಸ್ಮಾರ್ಟ್ ಫೋನ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲಿ ನಿರ್ಮಿಸಿತ್ತು, ಇದಾದ ನಂತರದಲ್ಲಿ ಈಗ ಮತ್ತೊಂದು ಹೊಸ ಆಯ್ಕೆಯನ್ನು ಸ್ಮಾರ್ಟ್ ಫೋನಿನಲ್ಲಿ ನೀಡಲು ಮುಂದಾಗಿದೆ. ಸ್ಮಾರ್ಟ್ ಫೋನಿನಲ್ಲಿ ಕ್ಯಾಮೆರಾವನ್ನು ಪಾಪ್ ಆಪ್ ಮಾದರಿಯಲ್ಲಿ ನೀಡುವ ಮೂಲಕ ಸ್ಮಾರ್ಟ್ ಫೋನ್ ಮುಂಭಾಗದ ಡಿಸ್ ಪ್ಲೇ ಸಂಪೂರ್ಣವಾಗಿ ಆವರಿಸುವಂತಹ ವಿನ್ಯಾಸವನ್ನು ಮಾಡಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಪ್ರಯೋಗ ಎನ್ನಲಾಗಿದೆ.
ಬಳಕೆದಾರರಿಗೆ ಬ್ರೆಜಿಲ್ ಫ್ರಿ ವಿನ್ಯಾಸವನ್ನು ನೀಡಲು ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಯತ್ನಿಸುತ್ತಿದೆ. ಇದೇ ಮಾದರಿಯಲ್ಲಿ ಯಶಸ್ಸು ಕಂಡಿರುವ ವಿವೋ, ಮುಂಭಾಗದ ಕ್ಯಾಮೆರಾವನ್ನು ಆಡಗಿಸಿ ಇಟ್ಟಿದ್ದು, ಬೇಕೆಂದಾಗ ಮಾತ್ರವೇ ಪಾಪ್ ಆಪ್ ಆಗುವಂತೆ ಮಾಡಿದೆ. ಇದರಿಂದಾಗಿ ಬಳಕೆದಾರರಿಗೆ ಸೆಲ್ಫಿ ತೆಗೆಯುವ ಅನುಭವವು ಹೊಸ ತನದಿಂದ ಕೂಡಿರಲಿದೆ. ಈ ಹೊಸ ತಂತ್ರಜ್ಞಾನವನ್ನು ವಿವೋ NEX ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ಇದು ಜುಲೈ 19 ರಂದು ಮಾರುಕಟ್ಟೆಗೆ ಕಾಲಿಡಲಿದೆ ಎನ್ನಲಾಗಿದೆ.