Back
Home » ಸಿನಿ ಸಮಾಚಾರ
ಈ ವಾರ ತೆರೆಕಾಣುತ್ತಿರುವ 'ಏಳು' ಚಿತ್ರಗಳ ಸುತ್ತ ಒಂದು ನೋಟ
Oneindia | 12th Jul, 2018 02:44 PM
 • ಸ್ಟಾರ್ಸ್ ಮಕ್ಕಳ 'ಎಂ.ಎಂ.ಸಿ.ಹೆಚ್'

  ಮುಸ್ಸಂಜೆ ಮಹೇಶ್ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ 'ಎಂ.ಎಂ.ಸಿ.ಹೆಚ್' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟಿಯರ ಮಕ್ಕಳು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಮೇಘನರಾಜ್, ರಾಗಿಣಿ, ದೀಪ್ತಿ ಡಿ.ಬಾಬು, ಪ್ರಥಮ ಪ್ರಸಾದ್, ಸಂಯುಕ್ತ ಹೊರನಾಡು ಆ ನಟಿಯರು. ವಿಶೇಷ ಪಾತ್ರದಲ್ಲಿ ರಾಗಿಣಿ ಕೂಡ ಕಾಣಿಸಿಕೊಂಡಿದ್ದಾರೆ.


 • ಡಬಲ್ ಇಂಜಿನ್

  ಟ್ರೈಲರ್ ಮೂಲಕ ಸದ್ದು ಮಾಡಿರುವ 'ಡಬಲ್ ಇಂಜಿನ್' ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಬಾಂಬೆ ಮಿಠಾಯಿ' ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸುಮನ್ ರಂಗನಾಥ್, ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕ ಮಲ್ನಾಡ್, ಸಾಧು ಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ಸುಚೀಂದ್ರ ಪ್ರಸಾದ್ ತಾರಾಗಣದ ಈ ಚಿತ್ರ ಮೂವರು ಯುವಕರು ಹಳ್ಳಿಯಲ್ಲಿ ವ್ಯವಸಾಯವನ್ನು ಬಿಟ್ಟು ಬಹುಬೇಗ ಶ್ರೀಮಂತರಾಗಲು ಹೊರಟು ಅನುಭವಿಸುವ ಸಂದರ್ಭಗಳು ಪ್ರಮುಖವಾದವು.


 • ಇದೇ ವಾರ 'ಅಥರ್ವ' ಬರುತ್ತಿದ್ದಾನೆ

  'ಅಥರ್ವ' ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದ ಕುಡಿ ಪವನ್ ತೇಜ ಅಭಿನಯದ ಚೊಚ್ಚಲ ಸಿನಿಮಾ ಇದೇ ವಾರ ಬರ್ತಿದೆ. ಅರುಣ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚಿಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.


 • ಈ ವಾರ ತೆರೆಗೆ 'ಆ ಕರಾಳ ರಾತ್ರಿ'

  ದಯಾಳ್ ಪದ್ಮನಾಭನ್ ನಿರ್ದೇಶಿಸಿ, ನಿರ್ಮಿಸಿರುವ 'ಆ ಕರಾಳ ರಾತ್ರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾರ್ತಿಕ್ ಜಯರಾಂ(ಜೆ ಕೆ), ಅನುಪಮ ಗೌಡ, ನವೀನ್ ಕೃಷ್ಣ, ರಂಗಾಯಣ ರಘು, ವೀಣಾಸುಂದರ್, ಸಿಹಿಕಹಿ ಚಂದ್ರು, ಜಯ್ ಶ್ರೀನಿವಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋ ಆಗಿದ್ದು, ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ.


 • ಈ ವಾರ ತೆರೆಗೆ 'ಹಸಿರು ರಿಬ್ಬನ್'

  ಖ್ಯಾತ ಸಾಹಿತಿ ಡಾ||ಎಚ್.ಎಸ್.ವೆಂಕಟೇಶಮೂರ್ತಿ ಕಥೆ, ಚಿತ್ರಕಥೆ, ಹಾಡು ಬರೆದು ನಿರ್ದೇಶಿಸಿರುವ 'ಹಸಿರು ರಿಬ್ಬನ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಉಪಾಸನ ಮೋಹನ್ ಸಂಗೀತ ನೀಡಿದ್ದಾರೆ. ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಹಾಗೂ ನರಸಿಂಹ ಪ್ರಸಾದ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ನಿಖಿಲ್ ಮಂಜು, ಚೈತ್ರ, ಸುಪ್ರಿಯ ರಾವ್, ಗಿರಿಜಾ ಲೋಕೇಶ್, ಬಿ.ಜಯಶ್ರೀ ಮುಂತಾದವರಿದ್ದಾರೆ.


 • ಹಾರರ್ 'ಟ್ರಂಕ್'

  ರಾಜೇಶ್ ಭಟ್ ನಿರ್ಮಿಸಿರುವ 'ಟ್ರಂಕ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಿಷಿಕಾ ಶರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಿಹಾಲ್, ವೈಶಾಲಿ ದೀಪಕ್, ಅರುಣ ಬಾಲರಾಜ್, ಸುಂದರಶ್ರೀ ಗುಬ್ಬಿ ಅಭಿನಯಿಸಿದ್ದಾರೆ. ಕಾರ್ತಿಕ್, ಪ್ರದೀಪ್, ಗಣೇಶನ್ ಸಂಗೀತ ನೀಡಿದ್ದಾರೆ. ಅಲ್ವಿನ್ ಡೊಮಿನಿಕ್ ಹಿನ್ನಲೆ ಸಂಗೀತ, ಭಜರಂಗ್ ಕೊನಧಮ್, ಸಂದೀಪ್ ಅಲುರಿ ಛಾಯಾಗ್ರಹಣ ಹಾಗೂ ಹೇಮಂತ್ ಕುಮಾರ್ ಸಂಕಲನವಿರುವ ಈ ಚಿತ್ರಕ್ಕೆ ಸುಕೇಶ್ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ.


 • ಹೊಸಬರ 'ಲವ್ ಯು 2'

  ಪವನ್ ಕುಮಾರ್ ಅವರು ನಿರ್ಮಿಸಿರುವ 'ಲವ್ ಯು 2' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜಸ್ಟ್ ಬಿ ಕೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗಂಧರ್ವ ಸಂಗೀತ ನೀಡಿದ್ದಾರೆ. ಜಯಪ್ರಕಾಶ್ ಛಾಯಾಗ್ರಹಣ, ಅರುಣ್ ಥಾಮಸ್ ಸಂಕಲನ, ನಾಗಚೈತನ್ಯ ಸಾಹಸ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪವನ್ ಕುಮಾರ್, ಕೀರ್ತಿಲಕ್ಷ್ಮೀ, ರಘು ಭಟ್, ಮಿಮಿಕ್ರಿ ಗೋಪಿ, ಕೆಂಪೇಗೌಡ, ರಾಮಸ್ವಾಮಿ ಮುಂತಾದವರಿದ್ದಾರೆ.
ಬಹುಶಃ ಜುಲೈ ತಿಂಗಳು ಸಿನಿಮಾ ಸುಗ್ಗಿ ಎನಿಸುತ್ತಿದೆ. ಕಳೆದ ವಾರ ಆರು ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನು ಆ ಸಿನಿಮಾಗಳನ್ನೇ ಪ್ರೇಕ್ಷಕರು ನೋಡಿರಲ್ಲ. ಒಂದು ವಾರದ ಅಂತರದಲ್ಲೇ ಮತ್ತೆ ಏಳು ಸಿನಿಮಾಗಳು ಥಿಯೇಟರ್ ಗೆ ಲಗ್ಗೆಯಿಡ್ತಿದೆ.

ಯಾವ ಚಿತ್ರವನ್ನ ನೋಡ್ಬೇಕೋ ಯಾವ ಚಿತ್ರವನ್ನ ಬಿಡ್ಬೇಕೋ ಎನ್ನೋದು ಸ್ವತಃ ಚಿತ್ರಪ್ರೇಮಿಗಳಿಗೆ ಗೊಂದಲವಾಗಿದೆ.

ಅಂದ್ಹಾಗೆ, ಈ ವಾರ ರಿಲೀಸ್ ಆಗುತ್ತಿರುವ ಏಳು ಚಿತ್ರಗಳಲ್ಲಿ ಈಗಾಗಲೇ ಮೂರು ಸಿನಿಮಾಗಳು ಪ್ರೀಮಿಯರ್ ಶೋ ಆಗಿದೆ. 'ಕರಾಳ ರಾತ್ರಿ', 'ಹಸಿರು ರಿಬ್ಬನ್', ಹಾಗೂ 'ಟ್ರಂಕ್' ಸಿನಿಮಾ ಶೋ ಆಗಿದೆ. ಇನ್ನುಳಿದಂತೆ ಯಾವ ಚಿತ್ರಗಳು ಹಾಗೂ ಆ ಚಿತ್ರಗಳ ವಿಶೇಷತೆ ಏನು.? ಮುಂದೆ ಓದಿ.....

   
 
ಹೆಲ್ತ್