Back
Home » Car News
ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ
DriveSpark | 12th Jul, 2018 05:19 PM
 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಎಸ್‌ಪಿ ಕಾನ್ಸೆಪ್ಟ್ ಜೊತೆ ಜೊತೆಗೆ ಕಳೆದ ತಿಂಗಳ ಹಿಂದಷ್ಟೇ ಸೆರಾಟೊ ಸೆಡಾನ್ ಮಾದರಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿದ್ದ ಕಿಯಾ ಸಂಸ್ಥೆಯು ಇದೀಗ ಮತ್ತೊಂದು ಮಧ್ಯಮ ಗಾತ್ರದ ಸೆಡಾನ್ ಆವೃತ್ತಿಯಾದ ಆಪ್ಟಿಮಾ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಆಪ್ಟಿಮಾ ಕಾರುಗಳು ವಿನ್ಯಾಸದಲ್ಲೂ ಆಕರ್ಷಣಿಯವಾಗಿದ್ದು, ಸ್ಕೋಡಾ ಒಕ್ಟಿವಿಯಾ, ಬರಲಿರುವ ಹೋಂಡಾ ಸಿವಿಕ್ ಮತ್ತು ಟೊಯೊಟಾ ಕರೊಲ್ಲಾ ಸೆಡಾನ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ವಿಸ್ತರಿತ ಬ್ಯಾನೆಟ್, ಸ್ಪೋರ್ಟಿ ಲುಕ್, ಎಲ್ಇಡಿ ಹೆಡ್‌ಲ್ಯಾಂಪ್, ಕ್ಲಸ್ಟರ್ ಟೈಲ್‌ಗೇಟ್, ಸ್ಪೋಟಿ ಎಕ್ಸಾಸ್ಟ್‌ಗಳು ಕಾರಿನ ಬಲಿಷ್ಠತೆಯನ್ನು ಹೆಚ್ಚಿಸಿದ್ದು, ಆಪ್ಟಿಮಾ ಕಾರುಗಳು ಈಗಾಗಲೇ ಲ್ಯಾಟಿನ್ ಅಮೆರಿಕ ಪ್ರಮುಖ ರಾಷ್ಟ್ರಗಳಲ್ಲಿ ಮತ್ತು ದಕ್ಷಿಣ ಕೊರಿಯಾದಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದೆ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಹೀಗಾಗಿ ಭಾರತದಲ್ಲೂ ಆಪ್ಟಿಮಾ ಸೆಡಾನ್ ಕಾರುಗಳನ್ನು ಬಿಡುಗಡೆಗೊಳಿಸುವ ಸಂಬಂಧ ಉತ್ಪಾದನಾ ಮಾದರಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಕಿಯಾ ಸಂಸ್ಥೆಯು ಹೊಸ ಕಾರುಗಳನ್ನು ಭಾರತೀಯ ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಬಿಡುಗಡೆ ಮಾಡಲಿದೆ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಎಂಜಿನ್ ಸಾಮರ್ಥ್ಯ
  ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಆಪ್ಟಿಮಾ ಕಾರುಗಳು 2.4-ಲೀಟರ್, 1.6-ಲೀಟರ್ ಮತ್ತು 2.0-ಲೀಟರ್ ಪೆಟ್ರೋಲ್ ಮಾದರಿಗಳನ್ನು ಹೊಂದಿದ್ದು, ಡಿಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಮತ್ತು 1.6-ಲೀಟರ್ ಎಂಜಿನ್ ಆಯ್ಕೆ ಪಡೆದಿವೆ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಆಪ್ಟಿಮಾ ಕಾರುಗಳು 2.0-ಲೀಟರ್ ಪೆಟ್ರೋಲ್ ಮತ್ತು 2.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿವೆ ಎನ್ನಲಾಗಿದೆ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಇದರೊಂದಿಗೆ ಹೊಸ ಕಾರಿನ ಬೆಲೆಯು ರೂ. 18ರಿಂದ 22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಡಿ ಸ್ಮೆಗೆಂಟ್‌ನಲ್ಲಿ ಬರುವ ಸ್ಕೋಡಾ ಒಕ್ಟಿವಿಯಾ, ಹೋಂಡಾ ಸಿವಿಕ್, ಟಯೊಟಾ ಕರೊಲ್ಲಾ ಸೇರಿದಂತೆ ಕೆಲ ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್‌ಗಳಿಗೆ ತ್ರೀವ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಆದ್ರೆ ಆಪ್ಟಿಮಾ ಕಾರುಗಳ ಬಿಡುಗಡೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಆಪ್ಟಿಮಾ ಕಾರುಗಳಿಗೆ ಉತ್ತಮ ಪ್ರಕ್ರಿಯೆ ಸಿಗುವ ಸಾಧ್ಯತೆಗಳಿದ್ದು, ಕಾರು ಬಿಡುಗಡೆಯ ಕುರಿತಾಗಿ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಇದಲ್ಲದೇ ಕೆಳದ ತಿಂಗಳು ಬೆಂಗಳೂರಿನ ಕೊರಮಂಗಲದ ಬಳಿ ಕಂಡುಬಂದಿದ್ದ ಕಿಯಾ ಸೆರಾಟೊ ಸೆಡಾನ್ ಕಾರುಗಳು ಸಹ ಸೆಡಾನ್ ಪ್ರಿಯರನ್ನು ಆಕರ್ಷಣೆ ಮಾಡಿದ್ದಲ್ಲದೇ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್ ಕಾರುಗಳೊಂದಿಗೆ ಪೈಪೋಟಿ ನೀಡುವ ಸುಳಿವು ನೀಡಿದೆ.

 • ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

  ಕಿಯಾ ಸೆರಾಟೊ ಕಾರುಗಳು 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಇಲ್ಲವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದಿರಲಿವೆ.
ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದರಲ್ಲಿ ಮೊದಲ ಹಂತವಾಗಿ ಬಹುನೀರಿಕ್ಷಿತ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿ ಬಿಡುಗಡೆಯೊಂದಿಗೆ ಇನ್ನು ಹಲವು ಮಾದರಿ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಹೆಲ್ತ್