Back
Home » ಸಿನಿ ಸಮಾಚಾರ
ರಜೆಯ ಮಜಾದಲ್ಲಿ ಹರಿಪ್ರಿಯಾ ಫ್ಯಾಮಿಲಿ ಫೋಟೋಶೂಟ್
Oneindia | 12th Jul, 2018 05:08 PM

ನಟಿ ಹರಿಪ್ರಿಯಾ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಬ್ಯುಸಿ ಆಗಿರುವ ನಟಿ. ಸಾಕಷ್ಟು ಸಿನಿಮಾಗಳನ್ನು ಕೈನಲ್ಲಿಟ್ಟುಕೊಂಡಿರುವ ಸ್ಯಾಂಡಲ್ ವುಡ್ ಬ್ಯೂಟಿ ಚಿತ್ರೀಕರಣಕ್ಕೆ ಸಣ್ಣದೊಂದು ಬ್ರೇಕ್ ಕೊಟ್ಟು ಫ್ಯಾಮಿಲಿಗೆ ಸಮಯ ಕೊಟ್ಟಿದ್ದಾರೆ.

ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗಿರುವ ಹರಿಪ್ರಿಯಾ ಇದೇ ಒಳ್ಳೆ ಸಮಯ ಎಂದು ತಮ್ಮ ಕುಟುಂಬದ ಫೋಟೋ ಶೂಟ್ ಮಾಡಿಸಿದ್ದಾರೆ. ಹರಿಪ್ರಿಯಾ ಫ್ಯಾಮಿಲಿಯಲ್ಲಿ ಯಾರೆಲ್ಲಾ ಇದ್ದಾರೆ ಅಂತೀರಾ? ಈ ಫೋಟೋದಲ್ಲೇ ಇದ್ದಾರೆ ನೋಡಿ.

ಹರಿಪ್ರಿಯಾ ಹಾಗೂ ಅವರ ಸಹೋದರ ಮತ್ತು ತಾಯಿ ಇದು ಚಿಕ್ಕ ಮತ್ತು ಚೊಕ್ಕವಾದ ಫ್ಯಾಮಿಲಿ. ಇವರ ಜೊತೆಯಲ್ಲಿ ಇಬ್ಬರು ಮಕ್ಕಳು ಇದ್ದಾರೆ. ಹೌದು ಹರಿಪ್ರಿಯಾ ಪ್ರೀತಿಯಿಂದ ಎರಡು ಶ್ವಾನಗಳನ್ನ ಸಾಕಿದ್ದಾರೆ ಅವರ ಪಾಲಿಗೆ ಅವುಗಳು ಮಕ್ಕಳಂತೆ.

ರಜೆಯ ಪ್ರವಾಸದಲ್ಲಿ ಎರಡು ಶ್ವಾನಗಳು ಭಾಗಿ ಆಗಿರುವುದು ವಿಶೇಷ. ತಾವು ಹೋದ ಕಡೆಯಲೆಲ್ಲಾ ಅವುಗಳನ್ನು ಕರೆದುಕೊಂಡು ಹೋಗುವ ಅಭ್ಯಾಸವನ್ನು ಹರಿಪ್ರಿಯಾ ರೂಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವುಗಳ ಜೊತೆ ಫೋಟೋ ತೆಗಿಸಿಕೊಂಡು ಟ್ವಿಟ್ಟರ್ ನಲ್ಲಿ ನಮ್ಮ ಫ್ಯಾಮಿಲಿ ಅಂತ ಅಪ್ಡೇಟ್ ಮಾಡಿದ್ದಾರೆ.

   
 
ಹೆಲ್ತ್