Back
Home » ಇತ್ತೀಚಿನ
ಮಹಿಳೆಯರ ಸುರಕ್ಷತೆಗೆ ಬಂತು ಹೊಸ ತಂತ್ರಜ್ಞಾನ
Gizbot | 12th Jul, 2018 06:15 PM
 • ಲೀಫ್ ವಿಯರೇಬಲ್ಸ್

  ನವದೆಹಲಿ ಮೂಲದ ಲೀಫ್ ವಿಯರೇಬಲ್ಸ್(Leaf Wearables)ಸಂಸ್ಥೆಯು 2015 ರಲ್ಲಿ 5 ಜನ ಇಂಜಿನಿಯರ್ ಗಳು ಹುಟ್ಟುಹಾಕಿರುವ ಒಂದು ಸಂಸ್ಥೆಯಾಗಿದ್ದು, ಇವರು ಈಗ "ಸೇಫರ್ ಫ್ರೋ" ಎಂಬ ಕಂಪ್ಯೂಟರ್ ಚಿಪ್ ಒಂದನ್ನು ಸಂಶೋಧಿಸಿದ್ದಾರೆ. ಇದು ನಿಮ್ಮ ಮೊಬೈಲ್ ಫೋನಿನ ಸೇವೆಯು ಇಲ್ಲದೇ ಇದ್ದರೂ ಕೂಡ ನಿಮ್ಮ ತುರ್ತು ಸಂಪರ್ಕಗಳಿಗೆ ಸಂದೇಶ ರವಾನಿಸುವ ಕೆಲಸವನ್ನು ಮಾಡಲಿದೆ.


 • ಸುರಕ್ಷತೆಯ ಕನಸು

  ಇದನ್ನು ಒಮ್ಮೆ ಆಕ್ಟಿವೇಟ್ ಮಾಡಿಕೊಂಡರೆ, ನೀವಿರುವ ಸ್ಥಳದ ವಿವರವನ್ನು 90 ಸೆಕೆಂಡುಗಳ ಒಳಗೆ ತಲುಪಿಸಬೇಕಾಗಿರುವವರಿಗೆ ಸಂದೇಶದ ಮೂಲಕ ಕಳುಹಿಸುತ್ತದೆ ಮತ್ತು ಆಡಿಯೋ ರೆಕಾರ್ಡಿಂಗ್ ಕೂಡ ಮಾಡುತ್ತದೆ. ನಾವು ಸುರಕ್ಷತೆಯ ಕನಸು ಕಂಡಿದ್ದೆವು ಮತ್ತು ಭವಿಷ್ಯದಲ್ಲಿ ಜನರು ಹಿಂದೊಮ್ಮೆ ಮಹಿಳೆಯರು ಅಸುರಕ್ಷಿತರಾಗಿದ್ದರು ಎಂದು ನೆನಸಿಕೊಳ್ಳುವಂತ ವಾತಾವರಣವು ನಿರ್ಮಾಣವಾಗಬೇಕಿದೆ ಎಂದು ಅಭಿಪ್ರಾಯ ಪಡುತ್ತಾರೆ ಸಂಸ್ಥೆಯ ಸಹಸಂಸ್ಥಾಪಕರಲ್ಲಿ ಒಬ್ಬರಾದ ಅವಿನಾಶ್ ಬನ್ಸಾಲ್. ನಾವು ವರ್ತಮಾನಕ್ಕಿಂತ ಇತಿಹಾಸ ನಿರ್ಮಾಣ ಮಾಡಲು ಹೆಚ್ಚು ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಅವರು. ಜೂನ್ ನಲ್ಲಿ ಥಾಮ್ಸನ್ ರಾಯಿಟರ್ಸ್ ಫೌಂಡೇಷನ್ ನಡೆಸಿದ ಸರ್ವೇಯೊಂದರ ಪ್ರಕಾರ ಭಾರತವು ಮಹಿಳೆಯರು ವಾಸಿಸಲು ಅತ್ಯಂತ ಅಪಾಯಕಾರಿಯಾಗಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಪರಿಗಣಿಸಲಾಗಿದೆ.


 • ಮಹಿಳಾ ದೌರ್ಜನ್ಯ ಶೇ. 80ರಷ್ಟು ಹೆಚ್ಚು

  2007 ರಿಂದ 2016 ರ ವರೆಗೆ ಮಹಿಳೆಯ ಮೇಲೆ ನಡೆದ ಅಪರಾಧಗಳ ಸಂಖ್ಯೆ ಶೇಕಡಾ 80 ರಷ್ಟು ಹೆಚ್ಚಾಗಿವೆ.ಸರ್ಕಾರದ ಅಂಕಿಅಂಶಗಳ ಪ್ರಕಾರ ಪ್ರತಿ ಘಂಟೆಗೆ ನಾಲ್ಕರಂತೆ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಗಳು ಪೋಲೀಸ್ ಠಾಣೆಯ ಮೆಟ್ಟಿಲೇರುತ್ತಿವೆ. ನೂರು ಪ್ರಕರಣಗಳು ದಾಖಲಾಗಿದ್ದಾಗ ಕೇವಲ 90 ಪ್ರಕರಣಗಳನ್ನು ಪರಿಹರಿಸಲು ಪ್ರಯತ್ನಿಸಲು ಇಚ್ಛಿಸುತ್ತೇವೆ. ಆದರೆ ನೂರಕ್ಕೆ ನೂರು ಪ್ರಕರಣಗಳನ್ನು ಪರಿಹರಿಸಲು ಸಾಧ್ಯವಿದೆ.
  2012 ರಲ್ಲಿ ನವದೆಹಲಿಯಲ್ಲಿ ಬಸ್ಸಿನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣವು ಇಡೀ ದೇಶ ಸೇರಿದಂತೆ ವಿಶ್ವದಾದ್ಯಂತ ಆಕ್ರೋಷಕ್ಕೆ ಕಾರಣವಾಗಿತ್ತು ಮತ್ತು ಹೊಸ ಆವಿಷ್ಕಾರದ ಸೃಷ್ಟಿಗೂ ಕೂಡ ಸ್ಪೂರ್ತಿ ನೀಡಿತು. ಆಗಲೇ ನಿರ್ಧಾರ ಮಾಡಿದ್ದು ಮಹಿಳಾ ಸುರಕ್ಷತೆಗೆ ಏನಾದರೂ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸುತ್ತಾರೆ ಥಾಮಸ್ ರಾಯಿಟರ್ಸ್ ಫೌಂಡೇಷನ್ ನ ಸಹಸಂಸ್ಥಾಪಕರಾಗಿರುವ ಮಾನಿಕ್ ಮೆಹ್ತಾ . ಅಷ್ಟೇ ಅಲ್ಲ, ಜಾಗತಿಕವಾಗಿರುವ ಈ ಸಮಸ್ಯೆಗೆ ಕೇವಲ ಭಾರತಕ್ಕೆ ಸೀಮಿತವಾಗಿರುವ ಪರಿಹಾರ ಮಾತ್ರವಲ್ಲ ವಿಶ್ವಕ್ಕೆ ನೀಡಬಹುದಾದ ಪರಿಹಾರವನ್ನು ಒದಗಿಸಬೇಕು ಎಂದು ಚಿಂತನೆ ನಡೆಸಿರುವ ಬಗ್ಗೆ ಮೆಹ್ತಾ ಹೇಳಿಕೆ ನೀಡಿದ್ದಾರೆ.


 • ಬಹುಮಾನ ಪಡೆದ ತಂತ್ರಜ್ಞಾನ:

  ಜೂನ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಮಹಿಳಾ ಸುರಕ್ಷತೆ ಮತ್ತು ಹೆಣ್ಣುಮಕ್ಕಳ ರಕ್ಷಣೆಗೆ ತಯಾರಾದ ತಂತ್ರಜ್ಞಾನಗಳ ಸ್ಪರ್ಧೆಯಲ್ಲಿ ಈ ಕಂಪ್ಯೂಟರ್ ಚಿಪ್ ನ ತಂತ್ರಜ್ಞಾನವು ಒಂದು ಮಿಲಿಯನ್ ಬಹುಮಾನವನ್ನು ಗೆದ್ದುಕೊಂಡು ಜಾಗತಿಕ ಮಟ್ಟದಲ್ಲಿದ್ದ ಎಲ್ಲಾ ತಂತ್ರಜ್ಞಾನಗಳ ಎದುರು ಅತ್ಯುತ್ತಮ ಎಂದೆನಿಸಿಕೊಂಡಿದೆ. ಇದು ಕೇವಲ ಒಂದು ಫಿಟ್ ನೆಸ್ ಬ್ಯಾಂಡ್ ನಂತೆ ಕಾಣುತ್ತದೆ. ಉತ್ಪನ್ನದ ಸಂಪೂರ್ಣ ಪರೀಕ್ಷೆಯ ನಂತರ, "ಸೇಫರ್ ಪ್ರೋ" ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ ಮತ್ತು ಇದರಲ್ಲಿ ಕೆಂಪು ಎಚ್ಚರಿಕೆಯ ಬಟನ್ ಒಂದು ಇರಲಿದೆ ಎಂದು ಕಂಪೆನಿ ತಿಳಿಸಿದ್ದು, ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.


 • ಬೆಲೆ ಎಷ್ಟಿರಬಹುದು?

  ಲೀಫ್ ವಿಯರೇಬಲ್ಸ್ ಇದಕ್ಕೆ 35 ಡಾಲರ್ ಅಂದರೆ ಸುಮಾರು 2402 ರುಪಾಯಿ ಬೆಲೆಯನ್ನು ನಿಗದಿಗೊಳಿಸುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರವು ಇದಕ್ಕೆ ಸಬ್ಸಿಡಿ ನೀಡುವುದು ಅಥವಾ ಇದರ ಮೇಲಿನ ಟ್ಯಾಕ್ಸ್ ಕಡಿತಗೊಳಿಸಿದರೆ ಬೆಲೆಯಲ್ಲಿ ಇನ್ನೂ ಇಳಿಕೆಯಾಗುವ ನಿರೀಕ್ಷೆ ಇದೆ.


 • ಎಲ್ಲಿ ಖರೀದಿಸಬಹುದು?

  ಪ್ರಾಥಮಿಕ ಹಂತದಲ್ಲಿ ಸೇಫರ್ ಪ್ರೋವನ್ನು ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ವೆಬ್ ಸೈಟ್ ಗಳಲ್ಲಿ ಮಾರಾಟ ಮಾಡುವ ಚಿಂತನೆ ಇದೆ. ನಂತರ ಸ್ಟೋರ್ ಗಳಲ್ಲೂ ಲಭ್ಯವಿರುವಂತೆ ಮಾಡುವ ಆಲೋಚನೆಯನ್ನು ಕಂಪೆನಿ ಮಾಡಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಮಹಿಳಾ ಸುರಕ್ಷತೆಗೆ ಮೊದಲು ಸ್ಥಳೀಯವಾಗಿ ಆದ್ಯತೆ ನೀಡುತ್ತೇವೆ, ಆದರೆ ಇತರ ರಾಜ್ಯಗಳಲ್ಲೂ ಕೂಡ ನಮ್ಮ ಪ್ರೊಡಕ್ಟ್ ಬಗ್ಗೆ ಆಸಕ್ತಿ ಇದೆ. ಹಾಗಾಗಿ ಎಲ್ಲಾ ಕಡೆಗೂ ಗಮನ ಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತದೆ ಎಂದು ಕಂಪೆನಿ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.


 • ಆರೋಗ್ಯಕಾರಿ ಬೆಳವಣಿಗೆ

  ನಾವು ಅಂದುಕೊಂಡಷ್ಟು ಸುರಕ್ಷಿತವಾಗಿ ನಾವಿಲ್ಲ. ಹಾಗಾಗಿ ಸುರಕ್ಷತೆಗೆ ಆದ್ಯತೆ ನೀಡುವ ಇಂತಹ ವಸ್ತುಗಳು ಭಾರತದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗೆ ಕಾರಣವಾಗಬಹುದೇನೋ ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ ತಂತ್ರಜ್ಞಾನ ಕೂಡ ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದು ಖಂಡಿತ ಆರೋಗ್ಯಕಾರಿ ಬೆಳವಣಿಗೆ ಆಗಿದೆ.
ದಿನದಿಂದ ದಿನಕ್ಕೆ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇದೆ. ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬಳು ಏಕಾಂಗಿಯಾಗಿ ಯಾವುದೇ ಭಯವಿಲ್ಲದೆ ಓಡಾಡುವಂತಾದರೆ ಅದುವೇ ಸ್ವಾತಂತ್ರ್ಯ ಎಂದು ನುಡಿದ ಗಾಂಧೀಜಿಯ ಮಾತು ಇಂದಿಗೂ ಕೇವಲ ಕನಸಿನ ಮಾತಾಗಿಯೇ ಉಳಿದಿದೆಯೇ ಹೊರತು ನನಸಾಗಿಲ್ಲ.

ಆದರೆ ಮಹಿಳೆಯರ ಸುರಕ್ಷತೆಯ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿದೆ. ಇತ್ತೀಚೆಗೆ ವಿಶ್ವದಲ್ಲಿ ಮಹಿಳೆಯರಿಗೆ ಅಪಾಯಕಾರಿಯಾಗಿರುವ ರಾಷ್ಟ್ರವೆಂಬ ಅಪಖ್ಯಾತಿಗೆ ದೇಶವನ್ನು ತಜ್ಞರು ಗುರಿಪಡಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿಗಳು ಹೆಚ್ಚಾಗಿವೆ. ಅದೇ ಕಾರಣದಿಂದ ಹುಟ್ಟಿಕೊಂಡಿರುವುದು ಈ ಸ್ಟಾರ್ಟ್ ಅಪ್ ತಂತ್ರಜ್ಞಾನ.

   
 
ಹೆಲ್ತ್