Back
Home » ಇತ್ತೀಚಿನ
ನಿಮ್ಮ ಪೋಟೋವನ್ನು ಇನ್ನಷ್ಟು ಚಂದಗಾಣಿಸಲು ಇಲ್ಲಿವೇ ಬೆಸ್ಟ್‌ ಆಪ್ಸ್‌..!
Gizbot | 13th Jul, 2018 08:00 AM
 • 1. ಅಡೋಬ್‌ ಪೋಟೋ ಎಡಿಟರ್ ಆಪ್‌ಗಳು Adobe Photo Editor apps

  ಕಳೆದ ಎರಡು ವರ್ಷಗಳಿಂದ ಅಡೋಬ್ ಹೆಚ್ಚಿನ ಎಡಿಟಿಂಗ್ ಆಪ್‌ಗಳನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ಲಭ್ಯವಿರುವ ಉತ್ತಮ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳಲ್ಲಿ ಅಡೋಬ್ ಫೋಟೋಶಾಪ್ ಎಕ್ಸ್‌ಪ್ರೆಸ್, ಅಡೋಬ್ ಫೋಟೋಶಾಪ್ ಮಿಕ್ಸ್‌ ಮತ್ತು ಅಡೋಬ್ ಲೈಟ್‌ರೂಮ್ ಉತ್ತಮ ಆಯ್ಕೆಗಳಾಗಿವೆ. ಪ್ರತಿ ಆಪ್‌ಗಳು ಉತ್ತಮ ಫೀಚರ್‌ಗಳನ್ನು ಹೊಂದಿವೆ. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಡಿಎಸ್ಎಲ್ಆರ್ ಕ್ಯಾಮರಾ ತೆಗೆದ ರಾ ಫೈಲ್‌ಗಳನ್ನು ಎಡಿಟ್‌ ಮಾಡಲು, ರೆಡ್‌ ಐ ರಿಮೂವಲ್‌ನಂತಹ ಫೀಚರ್‌ಗಳನ್ನು ಹೊಂದಿವೆ. ಅಡೋಬ್ ಲೈಟ್ ರೂಮ್ ಹೊಸ ವೈಶಿಷ್ಟ್ಯಗಳೊಂದಿಗೆ ಕಾಲ ಕಾಲಕ್ಕೆ ನವೀಕರಣಗೊಳ್ಳುತ್ತದೆ. ಎಲ್ಲಾ ಫೀಚರ್‌ಗಳನ್ನು ಬಳಸಲು ಅಡೋಬ್ ಕ್ರಿಯೇಟಿವ್ ಕ್ಲೌಡ್‌ನಲ್ಲಿ ಸಬ್‌ಸ್ಕ್ರೈಬರ್ ಆಗಬೇಕು.


 • 2.ಅವೈರಿ Aviary

  ಅವೈರಿ ಪೋಟೋ ಎಡಿಟಿಂಗ್ ಆಪ್ ವೈಶಿಷ್ಟ್ಯಗಳು ಹಾಗೂ ವಿಶ್ವಾಸಾರ್ಹತೆಯ ಉತ್ತಮ ಸಂಯೋಜನೆಯೊಂದಿಗೆ ದೀರ್ಘಕಾಲದಿಂದ ಜನಪ್ರಿಯ ಫೋಟೋ ಎಡಿಟಿಂಗ್ ಆಪ್‌ ಆಗಿದೆ. ಒನ್‌ಟಚ್‌ ಎನ್ಯಾನ್ಸ್‌ ಮೋಡ್‌ ಇದೆ. ಆದಲ್ಲದೇ ಬಣ್ಣ, ಹೊಳಪು, ಉಷ್ಣತೆ, ಕಾಂಟ್ರಾಸ್ಟ್‌, ಸ್ಯಾಚುರೇಷನ್‌ ನಿಯಂತ್ರಿಸುವಂತಹ ಅನೇಕ ಫೀಚರ್‌ಗಳನ್ನು ಹೊಂದಿದೆ. ಇದು ಸ್ಟಿಕರ್‌ಗಳು, ಫಿಲ್ಟರ್‌ಗಳು, ರೆಡ್ ಐ ಫಿಕ್ಸಿಂಗ್, ಬ್ಲೇಮಿಷ್ ರಿಮೂವರ್ ಮತ್ತು ಹಲ್ಲು ಬಿಳಳುಪಿನಂತಹ ಸೌಂಧರ್ಯವರ್ಧಕ ಫೀಚರ್‌ಗಳನ್ನು ಹೊಂದಿದೆ.


 • 3.ಏರ್‌ಬ್ರಷ್‌ Airbrush

  ನೀವು ಸೆಲ್ಫಿ ಕ್ರೇಜ್ ಹೊಂದಿದ್ದರೆ ನಿಮಗೆ ಸರಿ ಹೊಂದುವಂತಹ ಪೋಟೋ ಎಡಿಟಿಂಗ್ ಆಪ್ ಎಂದರೆ ಏರ್‌ಬ್ರಷ್. ಮುಖದಲ್ಲಿನ ಕಲೆಗಳು, ಬ್ಲೇಮಿಷ್ ರಿಮೂವರ್, ಹಲ್ಲು ಬಿಳುಪುಗೊಳಿಸುವಿಕೆ, ಕಣ್ಣುಗಳನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡಬಹುದು. ಪಿಝಾಝ್ಝ್ಗಳನ್ನು ಸೇರ್ಪಡೆಗೊಳಿಸಲು ಅನೇಕ ಫಿಲ್ಟರ್‌ಗಳು ಲಭ್ಯವಿವೆ. ಆದರೆ, ಗೂಗಲ್ ಪ್ಲೇ ರೇಟಿಂಗ್ ಸೂಚಿಸುವಂತೆ ಇದು ಉತ್ತಮವಲ್ಲವಂತೆ, ಆದರೆ, ಇದು ಸುಲಭವಾಗಿದ್ದು, ಎಲ್ಲ ಫೀಚರ್‌ಗಳನ್ನು ಒನ್‌ಕ್ಲಿಕ್‌ನಲ್ಲಿ ಬಳಸಬಹುದಾಗಿದೆ. ಬೇರೆ ಆಪ್‌ಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದೆ.


 • 4. ಬೋನ್‌ಫೈರ್‌‌ BonFire

  ಬೋನ್‌ಪೈರ್‌ ಫೋಟೋ ಎಡಿಟರ್ ಜನಪ್ರಿಯ ಫೋಟೋ ಎಡಿಟಿಂಗ್ ಆಪ್‌ಗಳಲ್ಲಿ ಒಂದಾಗಿದೆ. ಈ ಆಪ್ ಫಿಲ್ಟರ್‌ಗಳೊಂದಿಗೆ ಮೂಲ ಎಡಿಟಿಂಗ್ ಟೂಲ್‌ಗಳನ್ನು ಹೊಂದಿದೆ. ಬೋನ್‌ಫೈರ್‌ ಮನರಂಜನಾತ್ಮಕವಾಗಿದ್ದು, ಇದಕ್ಕೆ ಬೆಂಬಲಿಸುವುದಕ್ಕಂತಾನೆ ಅನೇಕ ಫಿಲ್ಟರ್‌ಗಳು ಲಭ್ಯವಿವೆ. ಈ ಆಪ್‌ನಲ್ಲಿ ಕಪ್ಪು ಮತ್ತು ಬಿಳಿ, HDR, ಇತ್ಯಾದಿಗಳಂತಹ ಫಿಲ್ಟರ್‌ಗಳಿದ್ದು, ಫ್ಯಾನ್ಸಿ ಫಿಲ್ಟರ್‌ಗಳು ಇವೆ. ನಿಮ್ಮ ಫೋಟೋಗಳನ್ನು ಜಲವರ್ಣಕ್ಕೆ ತಿರುಗಿಸುವ ಫಿಲ್ಟರ್‌ಗಳಂತಹ ಕೆಲವು ವಿಶಿಷ್ಟ ಟೂಲ್‌ಗಳನ್ನು ಹೊಂದಿದೆ. ಸ್ಕಿನ್‌ ಸ್ಮೂತಿಂಗ್‌, ಬ್ಲೇಮಿಷ್ ರಿಮೂವಲ್‌ನಂತಹ ಮೂಲಭೂತ ಎಡಟಿಂಗ್ ಅಂಶಗಳನ್ನು ಹೊಂದಿದೆ.


 • 5.ಕಪ್‌ಸ್ಲೈಸ್ CupSlice

  ಕಪ್‌ಸ್ಲೈಸ್ ಮತ್ತೊಂದು ಫೋಟೋ ಎಡಿಟಿಂಗ್ ಆಪ್‌ ಆಗಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಫಿಲ್ಟರ್‌ಗಳನ್ನು ಅವಲಭಿಸಿದೆ. ಫಿಲ್ಟರ್‌ಗಳ ಜತೆಯಲ್ಲಿ ಬಹಳಷ್ಟು ಸ್ಟಿಕರ್‌ಗಳು ಲಭ್ಯವಿವೆ. ಈ ಸ್ಟಿಕರ್‌ಗಳನ್ನು ಅಪ್‌ಟುಡೇಟ್‌ ಆಗಿಡಲು ಆಪ್‌ ಡೆವಲಪರ್‌ಗಳು ಬಹಳಷ್ಟು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಇಲದಲಿ ಸಿಗುವ ಸ್ಟಿಕರ್‌ಗಳು ನವೀಕೃತವಾಗಿರುತ್ತವೆ. ನೀವು ಬಯಸಿದಂತೆ ಫಿಲ್ಟರ್‌ನ್ನು ಕಸ್ಟಮೈಸ್ ಮಾಡಬಹುದು. ಫ್ರೇಮ್‌, ಕ್ರಾಪ್‌, ಹ್ಯೂ ಮತ್ತು ಸ್ಯಾಚುರೇಷನ್ ಹೊಂದಾನಿಕೆ ಕಪ್ಪು ಮತ್ತು ಬಿಳಿ, ಕೋಲ್ಯಾಜ್, ಹೊಳಪು, ಕಾಂಟ್ರಾಸ್ಟ್ ಸೆಟ್ಟಿಂಗ್‌ಗಳಂತಹ ಕೆಲವು ಮೂಲಭೂತ ಫೋಟೋ ಎಡಿಟಿಂಗ್ ಟೂಲ್‌ಗಳು ಈ ಆಪ್‌ನಲ್ಲಿ ಇವೆ. ಈ ಆಪ್‌ ಹೆಚ್ಚು ಸಂಕೀರ್ಣವಾಗಿಲ್ಲ, ಮತ್ತು ಬಳಕೆಗೆ ಉಚಿತವಾಗಿಯೇ ಎಲ್ಲಾ ಫೀಚರ್‌ಗಳು ಸಿಗುತ್ತವೆ.


 • 6. ಫಾಟರ್ Fotor

  ಫಾಟರ್ ಪೋಟೋ ಎಡಿಟಿಂಗ್‌ ಆಪ್‌ಗಳಲ್ಲಿ ದೀರ್ಘಕಾಲದ ಸದಸ್ಯ ಆಗಿದೆ. ಈ ಆಪ್‌ ಅನೇಕ ನೈಜ ಎಡಿಟಿಂಗ್ ಟೂಲ್‌ಗಳನ್ನು ಹೊಂದಿದೆ. ನಿಮಗಾಗಿ ಒಂದೇ ಟ್ಯಾಪ್‌ನಿಂದ ಪೋಟೋ ಏನ್ಯಾನ್ಸ್‌ ಮಾಡುವ ಆಯ್ಕೆ ನೀಡಲಾಗಿದೆ. ಕ್ರಾಪ್, ರೋಟೆಟ್, ಹೊಳಪು, ಕಾಂಟ್ರಾಸ್ಟ್, ಸ್ಯಾಚುರೇಶನ್, ಎಕ್ಸ್ಪೋಸರ್, ವಿಗ್ನೆಟಿಂಗ್, ನೆರಳು,ಹೈಲೈಟ್ಸ್‌, ತಾಪಮಾನ, ಟಿಂಟ್, RGBಯಂತಹ ಅನೇಕ ಟೂಲ್‌ಗಳಿವೆ. ನಿಮಗೆ ಇಲ್ಲಿ 100 ಫಿಲ್ಟರ್‌ಗಳಿದ್ದು,ಪೋಟೋವನ್ನು ಚಂದಗಾಣಿಸಬಹುದಾಗಿದೆ.


 • 7. ಪೋಟೋ ಡೈರೆಕ್ಟರ್ Photo Director

  ಪೋಟೋ ಡೈರೆಕ್ಟರ್ ಆಂಡ್ರಾಯ್ಡ್ ಫೋಟೋ ಎಡಿಟಿಂಗ್ ಆಪ್‌ಗಳಲ್ಲಿ ಹೊಸ ಆಪ್ ಆಗಿದೆ. ಫಾಟರ್‌ನಂತೆಯೇ ಇದು ಸಹ ಮ್ಯಾನ್ಯುವಲ್ ಆಯ್ಕೆಗಳನ್ನು ಹೆಚ್ಚು ಕೇಂದ್ರಿಕರಿಸುತ್ತದೆ. ಫಿಲ್ಟರ್‌ಗಳಿಗಿಂತ ನಿಮ್ಮ ಫೋಟೋಗಳನ್ನು ಸರಿಯಾಗಿ ಎಡಿಟ್ ಮಾಡಲು ನೀವು ಎಚ್ಎಸ್ಎಲ್ ಸ್ಲೈಡರ್‌ಗಳನ್ನು, ಆರ್‌ಜಿಬಿ ಕಲರ್ ಚಾನಲ್ಸ್‌,ಬಿಳಿ ಸಮತೋಲನದಂತಹ ಅನೇಕ ಫೀಚರ್‌ಗಳನ್ನು ಹೊಂದಿದೆ. ಟೋನ್,ಕಾಂಟ್ರಾಸ್ಟ್, ಸ್ಯಾಚುರೇಶನ್, ಎಕ್ಸ್ಪೋಸರ್ನಂತಹ ಆಯ್ಕೆಗಳನ್ನು ಹೊಂದಿದೆ. ಫಿಲ್ಟರ್‌ ಪರ್ಯಾಯ ನೋಡುವವರಿಗೆ ಈ ಆಪ್ ಉತ್ತಮ ಆಯ್ಕೆ.
ಸ್ಮಾರ್ಟ್‌ಫೋನ್‌ ಲೋಕದಲ್ಲಿ ಎಲ್ಲರಿಗೂ ನಾವು ಫೋಟೋಗ್ರಾಫಿ ಮಾಡಬೇಕೆಂಬ ಹಂಬಲವಿರುತ್ತೆ. ಈಗಂತೂ ನಿಮ್ಮ ಸ್ಮಾರ್ಟ್‌ಫೋನ್‌ ನಿಮ್ಮ ಸೃಜನಾತ್ಮಕತೆ ಬೆಳೆಸುವ ಕಾರ್ಯ ಮಾಡುತ್ತದೆ. ಆದರೆ, ಎಲ್ಲರ ಮೊಬೈಲಲ್ಲೂ ಕ್ಯಾಮೆರಾ ಉತ್ತಮ ಕ್ವಾಲಿಟಿ ಇರಬೇಕಲ್ಲ. ಉತ್ತಮ ಕ್ವಾಲಿಟಿ ಕ್ಯಾಮೆರಾ ಇದ್ದರೂ, ಪೋಟೋ ಸೆರೆಹಿಡಿದಾಗ ಛಾಯಾಚಿತ್ರಕ್ಕೆ ತಕ್ಕಂತೆ ವಾತಾವರಣ ಇರಬೇಕಲ್ಲ.

ಒಳ್ಳೆ ಪೋಟೋ ಏನೋ ಬಂದಿರುತ್ತೆ. ಆದರೆ, ಅದರಲ್ಲಿ ಬೇಡದೆ ಇರುವ ಅನೇಕ ಅಂಶಗಳು ಆ ಪೋಟೋದಲ್ಲಿ ಬಂದು ಸೇರಿರುತ್ತವೆ. ಬೆಳಕು ಸರಿಯಾಗಿ ಇರಲ್ಲ ಅಥವಾ ಕಲರ್‌ಶೇಡ್ ಆಗಿರುತ್ತೆ, ಸ್ವಲ್ಪ ಬ್ಲರ್‌ ಆಗಿರುತ್ತೆ ಇವೆಲ್ಲವುಗಳನ್ನೂ ತೆರವುಗೊಳಿಸಿ ಉತ್ತಮ ಪೋಟೋವನ್ನು ನಿಮಗೆ ಕೊಡಲು ಆಂಡ್ರಾಯ್ಡ್‌ ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಹಳಷ್ಟು ಆಪ್‌ಗಳಿವೆ. ಅಂತಹ ಆಪ್‌ಗಳಲ್ಲಿ ಉತ್ತಮ ಆಪ್‌ಗಳನ್ನು ಪಟ್ಟಿ ಮಾಡಿದ್ದೇವೆ. ಒಂದ್ಸಲ ಬಳಸಿ ನೋಡಿ.

   
 
ಹೆಲ್ತ್