Back
Home » ಸುದ್ದಿ
ಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕ
Oneindia | 13th Jul, 2018 10:01 AM
 • ಓಲಾ ಕ್ಯಾಬ್ ಚಾಲಕನಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

  ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವಾಗ ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಈಚೆಗೆ ನಡೆದಿದೆ. ದೂರು ದಾಖಲಾದ ಮೂರು ಗಂಟೆ ಅವಧಿಯೊಳಗೆ ಚಾಲಕನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಪ್ಪತ್ತಾರು ವರ್ಷದ ಮಹಿಳೆ, ವೃತ್ತಿಯಿಂದ ಆರ್ಕಿಟೆಕ್ಟ್ ಜೂನ್ ಒಂದರಂದು ಮಧ್ಯರಾತ್ರಿ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೋಗಬೇಕಾದ್ದರಿಂದ ಓಲಾ ಕ್ಯಾಬ್ ನಲ್ಲಿ ಹತ್ತಿದ್ದಾರೆ. ಟೋಲ್ ಗೇಟ್ ಗೂ ಮುನ್ನ, ಇಲ್ಲೇ ಹತ್ತಿರದ ದಾರಿ ಇನ್ನೊಂದಿದೆ ಎಂದು ನಂಬಿಸಿದ ಆತ ಬೇರೆ ಕಡೆ ಕರೆದುಕೊಂಡು ಹೋಗಿದ್ದಾನೆ.ನಿರ್ಜನವಾದ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆಯೂ ನಡೆದಿತ್ತು.


 • ನಿಲ್ಲದ ಟ್ಯಾಕ್ಸಿ ಚಾಲಕರ ಆಟಾಟೋಪ

  ಮಹಿಳಾ ಟೆಕ್ಕಿಯ ಜೊತೆಗೆ ಊಬರ್‌ ಚಾಲಕ ಅನುಚಿತವಾಗಿ ವರ್ತಿಸಿದ ಘಟನೆ ಮಂಗಳವಾರ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ಬಳಿ ನಡೆದಿದೆ. ಮಹಿಳೆಯು ಬೆಳ್ಳಂದೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಕಚೇರಿಗೆ ತೆರಳಲು ಊಬರ್‌ ಬುಕ್‌ ಮಾಡಿದ್ದಾರೆ, ಎಚ್‌ಆರ್‌ಲೇಟ್‌ನಿಂದ ಕಂಪನಿಗೆ ಹೋಗುವ ವೇಳೆ ಚಾಲಕ ಮಾರ್ಗ ಬದಲಾಯಿಸಿದ್ದಾನೆ, ಯಾಕೆ ಮಾರ್ಗ ಬದಲಾಯಿಸಿದ್ದು ಎಂದು ಕೇಳಿದಾಕ್ಷಣ ಆಕೆಯ ಜತೆಗೆ ಅನುಚಿತವಾಗಿ ವರ್ತಿಸಿದ್ದಾನೆ.
  ಈಗಲೇ ಟ್ರಿಪ್‌ ಕ್ಯಾನ್ಸಲ್‌ ಮಾಡುತ್ತೇನೆ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾಲಕ ಹೇಳಿದ್ದಾನೆ, ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ಆಕೆಯನ್ನು ನಿಂತಿದಿಸಿದ್ದಾನೆ, ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ, ಮಹಿಳಾ ಟೆಕ್ಕಿ ಕ್ಯಾಬ್‌ ಕೆಎ 42, ಎ 4692 ಇಟಿಯೋಸ್‌ನಲ್ಲಿ ಕಂಪನಿಗೆ ತೆರಳುತ್ತಿದ್ದರು. ಟೆಕ್ಕಿ ಟ್ವಿಟ್ಟರ್‌ ಮೂಲಕ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.


 • ನೀನು ಇರೋ ಜಾಗ ನಂಗೆ ಗೊತ್ತಿದೆ ಹುಷಾರ್‌ ಎಂದಿದ್ದ ಓಲಾ ಡ್ರೈವರ್‌

  ನಿನ್ನ ಮನೆ ಎಲ್ಲಿದೆ ಎಂದು ನನಗೆ ಗೊತ್ತು' ಎಂದು ಓಲಾ ಡ್ರೈವರ್‌ ಆವಾಜ್‌ ಹಾಕಿದ್ದ ಎಂದು ಓಲಾದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಘಟನೆ ವಿವರ ನೀಡಿದ್ದಾಳೆ. ಬೆಂಗಳೂರು ಏರ್‌ಪೋರ್ಟ್‌ ಬಳಿ ಓಲಾ ಕ್ಯಾಬ್‌ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ್ದಲ್ಲದೇ ಅವಳ ಅಪಹರಣಕ್ಕೂ ಮುಂದಾಗಿರುವ ಘಟನೆ ವರದಿಯಾಗಿತ್ತು.
  ಈ ಕುರಿತು ಯುವತಿ ಮಾಹಿತಿ ಹಂಚಿಕೊಂಡಿದ್ದು ನಾನು ಕಾರಿನಿಂದ ಬೇರೆಯವರ ಸಹಾಯ ಕೇಳಲು ಯತ್ನಿಸಿದಾಗ ನಿಮ್ಮ ಮನೆಯ ವಿಳಾಸ ನನಗೆ ಗೊತ್ತಿದೆ, ನನ್ನ ಮನೆಯಿಂದ ನಿಮ್ಮ ಮನೆಗೆ ಕೆಲವೇ ನಿಮಿಷಗಳ ದಾರಿ ಎಂದು ಹೇಳಿ ಬೆದರಿಸಿದ್ದ ಎಂದು ಹೇಳಲಾಗಿದೆ.


 • ಯುವತಿಗೆ ಚಪ್ಪಲಿಯಲ್ಲಿ ಹೊಡೆಯಲು ಮುಂದಾದ ಚಾಲಕ ಜೈಲಿನಲ್ಲಿ

  ಯುವತಿಯೋರ್ವಳ ಜತೆಗೆ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಕ್ಯಾಬ್‌ ಚಾಲಕನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಜು.13: ಓಲಾ ಚಾಲಕನೊಬ್ಬ ಮಹಿಳೆಗೆ ಕಿರುಕುಳ ನೀಡಿದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ್ದು ಯುವತಿ ಪ್ರಕರಣ ದಾಖಲಿಸಿದ್ದಾಳೆ.

ಕೆಜಿ ರಸ್ತೆ ಮೈಸೂರ್‌ ಬ್ಯಾಂಕ್‌ ವೃತ್ತದಿಂದ ಯುವತಿ ತನ್ನ ತಾಯಿ ಜೊತೆಗೆ ಮಲ್ಲೇಶ್ವರಕ್ಕೆ ತೆರಳಲು ಓಲಾ ಕ್ಯಾಬ್‌ ಬುಕ್‌ ಮಾಡಿದ್ದರು. ಕ್ಯಾಬ್‌ ಚಾಲಕ ಮಹದೇವಸ್ವಾಮಿ ಎಂಬಾತನಿಗೆ ಕರೆ ಮಾಡಿದಾಗ ಸಿಗ್ನಲ್‌ನಲ್ಲಿ ಇದ್ದೇನೆ ಬರುತ್ತೇನೆ ಎಂದಿದ್ದಾನೆ, ಆದರೆ ಪಿಕ್‌ಅಪ್‌ ಸ್ಥಳಕ್ಕೆ ಬರುವ ಮೊದಲೇ ವೇಟಿಂಗ್‌ ಚಾರ್ಜ್ ಹಾಕಲು ಆರಂಭಿಸಿದ್ದ, ಇದನ್ನು ಗಮನಿಸಿದ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರುವ ಮೊದಲೇ ವೇಟಿಂಗ್‌ ಶುಲ್ಕವನ್ನು ಆರಂಭಿಸುವುದು ಏಕೆ ಎಂದು ಯುವತಿ ಪ್ರಶ್ನಿಸಿದ್ದಾಳೆ.

ನೀನು ಇರೋ ಜಾಗ ನಂಗೆ ಗೊತ್ತಿದೆ ಹುಷಾರ್‌ ಎಂದಿದ್ದ ಓಲಾ ಡ್ರೈವರ್‌

ಇದರಿಂದ ಕೆರಳಿದ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ಯಾಬ್‌ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದಾನೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಾರ್ವಜನಿಕರ ಎದುರೇ ಅನುಚಿತವಾಗಿ ವರ್ತಿಸಿದ್ದು ಹಲ್ಲೆ ನಡೆಸಲು ಮುಂದಾಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ ಈ ಕುರಿತು ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ.

   
 
ಹೆಲ್ತ್