Back
Home » ಆರೋಗ್ಯ
ಮಳೆಗಾಲದಲ್ಲಿ ಆಹಾರಕ್ರಮ ಹೀಗಿರಲಿ- ಯಾವ ಕಾಯಿಲೆಯೂ ಬರಲ್ಲ
Boldsky | 13th Jul, 2018 11:29 AM
 • ಬಿಸಿ ಸೂಪ್

  ಮಳೆಗಾಲದಲ್ಲಿ ನೀವು ಸೇವಿಸಬಹುದಾದ ಆಹಾರಗಳಲ್ಲಿ ಬಿಸಿಬಿಸಿ ಸೂಪ್ ಮೊದಲ ಸ್ಥಾನದಲ್ಲಿದೆ. ಯಾಕೆಂದರೆ ಇದು ಅಜೀರ್ಣ ಮತ್ತು ಹೊಟ್ಟೆಯ ಸೋಂಕು ತಡೆಯುವುದು. ಸ್ವಲ್ಪ ಬೆಳ್ಳುಳ್ಳಿ, ಕರಿಮೆಣಸು ಮತ್ತು ಬೆಣ್ಣೆ ಹಾಕಿಕೊಂಡು ತರಕಾರಿ ಸೂಪ್ ಮಾಡಿ. ಇದು ಶಕ್ತಿ ನೀಡುವುದು ಮಾತ್ರವಲ್ಲದೆ ಶೀತ, ಕೆಮ್ಮು ಮತ್ತು ಕಫದಿಂದ ಮುಕ್ತಿ ನೀಡುವುದು. ಗಂಟಲಿನ ಅಲರ್ಜಿಗೂ ಈ ಸೂಪ್ ರಾಮಬಾಣ.


 • ಮಸಾಲ ಚಹಾ

  ಒಂದು ಕಪ್ ಬಿಸಿಬಿಸಿಯಾದ ಚಹಾ ಮಳೆಗಾಲದಲ್ಲಿ ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸುವುದು ಮಾತ್ರವಲ್ಲದೆ ದೇಹವನ್ನು ಬಿಸಿಯಾಗಿಡುವುದು. ಏಲಕ್ಕಿ, ದಾಲ್ಚಿನಿ ಅಥವಾ ಶುಂಠಿ ಮತ್ತು ತುಳಸಿ ಎಲೆಗಳನ್ನು ಹಾಕಿಕೊಂಡು ಚಹಾ ಮಾಡಿದರೆ ಅದರಿಂದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ದೇಹಕ್ಕೆ ದಾಳಿ ಮಾಡುವಂತಹ ಸೋಂಕುಗಳನ್ನು ತಡೆಯುವುದು. ಮಸಾಲ ಚಹಾ ಶೀತ ಮತ್ತು ಗಂಟಲಿನ ಸೋಂಕು ನಿವಾರಿಸುವುದು.


 • ಸೋರೆಕಾಯಿ

  ಮಳೆಗಾಲದಲ್ಲಿ ತುಮಬಾ ಆರೋಗ್ಯಕರ ಹಾಗೂ ಉತ್ತಮ ಆಹಾರವೆಂದರೆ ಅದು ಸೋರೆಕಾಯಿ ಎಂದು ಹೇಳಲಾಗುತ್ತದೆ. ಹೀರಿಕೊಳ್ಳುವ ನಾರಿನಾಂಶ ಮತ್ತು ಹೀರಕೊಳ್ಳದ ನಾರಿನಾಂಶ ಹೀಗೆ ಎರಡನ್ನು ಹೊಂದಿರುವ ಸೋರೆಕಾಯಿಯು ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯಕಾರಿಯಾಗಿರುವಂತೆ ಮಾಡುವುದು. ಸೋರೆಕಾಯಿಯಲ್ಲಿ ಕಬ್ಬಿಣಾಂಶ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.


 • ಕೋಸುಗಡ್ಡೆ(ಟಿಂಡಾ)

  ಕೋಸುಗಡ್ಡೆಯು ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ತರಕಾರಿಯಾಗಿದ್ದು, ಇದರಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಹಾಗೂ ಉರಿಯೂತ ಶಮನಕಾರಿ ಗುಣಗಳಿವೆ. ಇದರಿಂದ ಹೊಟ್ಟೆ ಉಬ್ಬರ, ಎದೆಯುರಿ ಮತ್ತು ಆಸಿಡಿಟಿ ನಿಯಂತ್ರಿಸಬಹುದು. ಇದರಲ್ಲಿರುವ ನಾರಿನಾಂಶವು ಅಜೀರ್ಣವನ್ನು ದೂರವಿಟ್ಟು ಕರುಳಿನ ಕ್ರಿಯೆಗಳು ಸರಾಗವಾಗಿ ಆಗುವಂತೆ ಮಾಡುವುದು.


 • ಹಾಗಲಕಾಯಿ

  ಹಾಗಲಕಾಯಿಯು ಬಾಯಿಗೆ ರುಚಿಯಲ್ಲದಿದ್ದರೂ ಇದರಿಂದ ಹಲವಾರು ಆರೋಗ್ಯ ಲಾಭಗಳು ಇವೆ. ಹಾಗಲಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ವೈರಲ್ ವಿರೋಧಿ ಗುಣಗಳು ನೀವು ಮಳೆಗಾಲದಲ್ಲಿ ಫಿಟ್ ಹಾಗೂ ಆರೋಗ್ಯಕರವಾಗಿರುವಂತೆ ಮಾಡುವುದು.
  ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ
  ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ. ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ. ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ.
  *ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ.
  *ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ. ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ. ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.


 • ಚೂಪುಸೋರೆ ಎನ್ನುವ ಹಸಿರು ತರಕಾರಿ

  ಮಳೆಗಾಲದಲ್ಲಿ ಚೂಪುಸೋರೆ ಎನ್ನುವ ಹಸಿರು ತರಕಾರಿ ಹಸಿರು ತರಕಾರಿಗಳು ತುಂಬಾ ಪರಿಣಾಮಕಾರಿ. ಇದು ತಲೆನೋವು, ಶೀತ ಮತ್ತು ಕಫ ಬರದಂತೆ ತಡೆಯುವುದು. ಚೂಪು ಸೋರೆಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಸಿ ಮತ್ತು ವಿಟಮಿನ್ ಎ ಲಭ್ಯವಿದ್ದು, ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಗಳು


 • ಶಿಲೀಂಧ್ರ ಕಾಯಿಲೆಗಳು

  ಮಳೆಗಾಲದಲ್ಲಿ ಶಿಲೀಂಧ್ರದಿಂದ ಬರುವ ಸೋಂಕುಗಳ ಸಾಧ್ಯತೆಯು ಹೆಚ್ಚಾಗಿರುವುದು. ಇದರಿಂದ ನೀವು ಯಾವಾಗಲೂ ನೀರಿನಲ್ಲಿ ಇರಬಾರದು. ಅದರಲ್ಲೂ ಕಾಲಿನ ಬೆರಳುಗಳ ಮಧ್ಯೆ, ಮೊಣಕಾಲು ಮತ್ತು ಮೊಣಕೈ ಒಣಗಿರುವಂತೆ ನೋಡಿಕೊಳ್ಳಬೇಕು. ನೀವು ಟಾಲ್ಕಂ ಪೌಡರ್ ಬಳಸಿಕೊಂಡು ಬೆವರು ಒಣಗುವಂತೆ ಮಾಡಬಹುದು.


 • ಕಾಲರಾ

  ಮಳೆಗಾಲದಲ್ಲಿ ಹೆಚ್ಚಿನವರನ್ನು ಭಾದಿಸುವ ರೋಗವು ಇದಾಗಿದೆ. ಕಾಲರಾ ಕಲ್ಮಷಗೊಂಡ ಆಹಾರ ಮತ್ತು ನೀರಿನಿಂದ ಬರುವುದು. ನೀವು ಶುದ್ಧವಾಗಿರದೆ ಇರುವ ಆಹಾರ ಮತ್ತು ನೀರು ಸೇವಿಸಿದರೆ ಆಗ ಕಾಲರಾ ಬರುವ ಸಾಧ್ಯತೆಯು ಹೆಚ್ಚಾಗಿರುವುದು. ಶುದ್ಧ ನೀರು ಮತ್ತು ಬಿಸಿ ನೀರು ಕುಡಿಯಿರಿ.


 • ಡೆಂಗ್ಯೂ

  ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳಲ್ಲಿ ಡೆಂಗ್ಯೂ ಕೂಡ ಒಂದಾಗಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದೆ. ಮೈಕೈನೋವು, ಬೊಕ್ಕೆಗಳು, ಗಂಟುನೋವು ಮತ್ತು ಜ್ವರವು ಡೆಂಗ್ಯೂವಿನ ಪ್ರಮುಖ ಲಕ್ಷಣಗಳು. ಸೊಳ್ಳೆಗಳಿಂದ ಪಾರಾಗಲು ಸೊಳ್ಳೆ ಪರದೆಗಳನ್ನು ಬಲಸಿ ಮತ್ತು ಸಂಪೂರ್ಣ ದೇಹ ಮುಚ್ಚಿಕೊಳ್ಳುವ ಬಟ್ಟೆ ಬಳಸಿ.

  ಡೆಂಗ್ಯೂ ಜ್ವರ ಬಂದಿದ್ದರೆ, ನಿಮ್ಮ ಆಹಾರ ಪಥ್ಯ ಹೀಗಿರಲಿ


 • ಕಾಮಾಲೆ

  ಕಲ್ಮಶಗೊಂಡಿರುವ ನೀರು ಮತ್ತು ಆಹಾರದಿಂದ ಕಾಮಾಲೆ ರೋಗವು ಬರುವುದು. ಕಾಮಾಲೆ ಬಂದರೆ ನಿಮಗೆ ನಿಶ್ಯಕ್ತಿ ಕಾಡುವುದು ಮತ್ತು ಮೂತ್ರದ ಬಣ್ಣ, ಕಣ್ಣುಗಳು, ಉಗುರು ಹಳದಿಯಾಗುವುದು.ಯಕೃತ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಕಾರಣ ವಾಂತಿ ಬರುವುದು ಇದೆ. ಈ ಕಾಯಿಲೆ ತಡೆಯಲು ಬಿಸಿ ನೀರು ಕುಡಿಯಿರಿ ಮತ್ತು ಬೀದಿ ಬದಿಯ ಆಹಾರದಿಂದ ದೂರವಿರಿ.


 • ಟೈಫಾಯಿಡ್

  ಕಲುಷಿತ ನೀರು ಕುಡಿದರೆ ಟೈಫಾಯ್ಡ್ ಬರುವುದು. ಸ್ವಚ್ಛತೆ ಸರಿಯಾಗಿಲ್ಲದೆ ಇದ್ದರೂ ಟೈಫಾಯ್ಡ್ ಬರುವುದು. ಜ್ವರ, ತಲೆನೋವು, ಗಂಟಲಿನ ಊತ, ನಿಶ್ಯಕ್ತಿ ಮತ್ತು ನೋವು ಟೈಫಾಯ್ಡ್ ನ ಕೆಲವು ಲಕ್ಷಣಗಳು. ಯಾವುದೇ ಆಹಾರ ತಿನ್ನುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ ಮತ್ತು ಹೊರಗಡೆ ಸಿಗುವ ಆಹಾರ ಮತ್ತು ಪಾನೀಯ ಸೇವಿಸಬೇಡಿ.


 • ಮಲೇರಿಯಾ

  ಮಳೆಗಾಲದಲ್ಲಿ ಮಲೇರಿಯಾ ಬರುವುದು ಸಾಮಾನ್ಯ ವಿಚಾರವಾಗಿದೆ. ನೀರು ನಿಲ್ಲುವುದರಿಂದ ಅದರಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಿ ಮಲೇರಿಯಾ ಹರಡುವುದು.

  ಮಲೇರಿಯಾ ರೋಗ ಗುಣಪಡಿಸುವ ಪವರ್‌ಫುಲ್ ಮನೆಮದ್ದು


 • ಅತಿಸಾರ

  ಮಳೆಗಾಲದಲ್ಲಿ ನೀರಿನಿಂದ ಬರುವ ಕಾಯಿಲೆಗಳು ಹೆಚ್ಚಾಗುವುದರಿಂದ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ತಿನ್ನುವ ಆಹಾರದ ಬಗ್ಗೆ ನೀವು ಸರಿಯಾದ ಎಚ್ಚರಿಕೆ ವಹಿಸಬೇಕು ಮತ್ತು ಬೀದಿಬದಿ ಆಹಾರವನ್ನು ಸಂಪೂರ್ಣವಾಗಿ ಕಡೆಗಣಿಸಬೇಕು. ಇದರಿಂದ ಅತಿಸಾರದ ಸಾಧ್ಯತೆ ಹೆಚ್ಚಾಗಿರುವುದು.
ಮಳೆಗಾಲ ಬಂತೆಂದರೆ ಸಾಕು ಹಲವಾರು ರೀತಿಯ ಕ್ರಿಮಿಕೀಟಗಳು, ಬ್ಯಾಕ್ಟೀರಿಯಾಗಳು, ಸೂಕ್ಷ್ಮಾಣು ಜೀವಿಗಳು ಜೀವ ಪಡೆದುಕೊಳ್ಳುವುದು. ಇವುಗಳಿಂದಾಗಿ ಹಲವಾರು ರೀತಿಯ ಕಾಯಿಲೆಗಳು ದೇಹವನ್ನು ಭಾದಿಸುವುದು ಇದೆ. ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವಂತಹ ಹಲವಾರು ರೀತಿಯ ಆಹಾರಗಳನ್ನು ಬಳಸಿಕೊಂಡು ಮಳೆಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು.

ಆದರೆ ಇದು ಫಾಸ್ಟ್ ಫುಡ್ ಜಮಾನ ಆಗಿರುವ ಕಾರಣ ಪ್ರಕೃತಿಯಲ್ಲಿ ಸಿಗುವಂತಹ ಆಹಾರಗಳ ಬಗ್ಗೆ ನಿರ್ಲಕ್ಷ್ಯದ ಭಾವನೆ ಸಹಜವಾಗಿದೆ. ಮಳೆಗಾಲದಲ್ಲಿ ಯಾವ ಆಹಾರಗಳನ್ನು ತಿಂದರೆ ಸೋಂಕು ತಡೆಗಟ್ಟಿ ಕಾಯಿಲೆಗಳು ಬರದಂತೆ ದೇಹವನ್ನು ಕಾಪಾಡಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮಳೆಗಾಲದಲ್ಲಿ ಬರುವಂತಹ ಡೆಂಗ್ಯೂ, ಮಲೇರಿಯಾ ಮುಂತಾದ ಜ್ವರಗಳಿಂದ ಈ ಆಹಾರಗಳು ನಿಮ್ಮನ್ನು ಕಾಪಾಡುವುದು. ಇದು ಯಾವುದು ಎಂದು ನೀವು ಓದುತ್ತಾ ತಿಳಿಯಿರಿ ಹಾಗೂ ಮಳೆಗಾಲದಲ್ಲಿ ಆರೋಗ್ಯ ಕಾಪಾಡಿ..

   
 
ಹೆಲ್ತ್