Back
Home » ಆರೋಗ್ಯ
ಅನಾನಸ್ ಹಣ್ಣು ನಿಯಮಿತವಾಗಿ ತಿನ್ನಿ, ಅತಿಯಾದರೆ ಆರೋಗ್ಯಕ್ಕೆ ಅಪಾಯ!
Boldsky | 13th Jul, 2018 03:31 PM
 • ಅನಾನಸಿನ ಆರೋಗ್ಯ ಲಾಭಗಳು

  ಎಫ್ ಡಿಎ ಪ್ರಕಾರ ಅನಾನಸು ಪ್ರತಿರೋಧಕ ವ್ಯವಸ್ಥ ಬಲಪಡಿಸುವುದು. ಅನಾನಸಿನಲ್ಲಿ ದಿನಕ್ಕೆ ಬೇಕಾಗಿರುವ ವಿಟಮಿನ್ ಸಿ ಲಭ್ಯವಿದೆ. ಈ ವಿಟಮಿನ್ ನೀರಿನಲ್ಲಿ ಕರಗುವ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಕೋಶಗಳಿಗೆ ಹಾನಿ. ಗಂಟು ನೋವು ಮತ್ತು ಹೃದಯದ ಕಾಯಿಲೆ ವಿರುದ್ಧ ಹೋರಾಡುವುದು. ವಿಟಮಿನ್ ಸಿ ಪ್ರತಿರೋಧಕ ವ್ಯವಸ್ಥೆ ಬಲಪಡಿಸಿ, ಹಲವಾರು ರೀತಿಯ ಕಾಯಿಲೆಗಳು ಮತ್ತು ಸೋಂಕಿನ ವಿರುದ್ಧ ಹೋರಾಡುವುದು.


 • ಜೀರ್ಣಕ್ರಿಯೆಗೆ ಒಳ್ಳೆಯದು

  ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಅನಾನಸು ಕರುಳಿನ ಆರೋಗ್ಯ ಕಾಪಾಡುವುದು ಮತ್ತು ಕರುಳಿನ ಕ್ರಿಯೆ ಸರಾಗವಾಗಲು ನೆರವಾಗುವುದು. ಇದರಲ್ಲಿ ಇರುವಂತಹ ಬ್ರೊಮೆಲೈನ್ ಎನ್ನುವ ಕಿಣ್ವವು ಪ್ರೋಟೀನ್ ನ್ನು ವಿಘಟಿಸುವುದು. ಇದರಿಂದ ಜೀರ್ಣಕ್ರಿಯೆ ಸುಲಭವಾಗುವುದು ಎಂದು ಅಮೆರಿಕಾದ ಕ್ಯಾನ್ಸರ್ ಸೊಸೈಟಿ ಹೇಳಿದೆ.


 • ಮೂಳೆಗಳು ಬಲಗೊಳ್ಳುವುದು

  ಅನಾನಸಿನಲ್ಲಿ ದಿನದ ಅಗತ್ಯಕ್ಕೆ ಬೇಕಾಗುವ ಶೇ. 75ರಷ್ಟು ಮ್ಯಾಂಗನೀಸ್ ಅಂಶವಿದೆ. ಇದು ಮೂಳೆಗಳು ಬಲಗೊಳ್ಳಲು ಮತ್ತು ಕೋಶಗಳು ಸಂಪರ್ಕಕ್ಕೆ ಅತೀ ಅಗತ್ಯವಾಗಿದೆ. ಋತುಬಂಧವಾಗುವಂತಹ ಮಹಿಳೆಯರಲ್ಲಿ ಅಸ್ಥಿರಂಧ್ರತೆಯ ಸಮಸ್ಯೆಯನ್ನು ಮ್ಯಾಂಗನೀಸ್ ಮತ್ತು ಇತರ ಕೆಲವು ಖನಿಜಾಂಶಗಳು ತಡೆಯುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.


 • ನಿಯಮಿತವಾಗಿ ಅನಾನಸ್ ಹಣ್ಣು ಸೇವಿಸಿದರೆ ಹೊಟ್ಟೆಗೆ ಒಳ್ಳೆಯದು

  ಅನಾನಸ್ ಹಣ್ಣಿನಲ್ಲಿರುವ ಐಯೋಡಿನ್ ಹಾಗೂ bromelain ಕಿಣ್ವವು ನಾನಾತೆರನಾದ ಜೀವಾಣುಗಳಿ೦ದ ಉ೦ಟಾಗಬಹುದಾದ ರೋಗನಿರೋಧಕ ಶಕ್ತಿಯ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಬಹು ಪರಿಣಾಮಕಾರಿ ಯಾಗಿವೆ. ಹಾಗಾಗಿ ಈ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದುರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಲಕ್ಷಣಗಳು ಉಪಶಮನಗೊಳ್ಳುತ್ತವೆ.


 • ಕ್ಯಾನ್ಸರ್ ರೋಗದಿ೦ದ ರಕ್ಷಿಸುತ್ತದೆ

  ಪ್ಲಾ೦ಟಾ ಮೆಡಿಕಾ ಎ೦ಬ ನಿಯತಕಾಲಿಕೆಯಲ್ಲಿ ಪ್ರಕಟಗೊ೦ಡಿರುವ ಸ೦ಶೋಧನೆಯೊ೦ದರ ಪ್ರಕಾರ, ಕ್ಯಾನ್ಸರ್ ರೋಗವನ್ನು ನಿವಾರಿಸುವಲ್ಲಿ ಕಿಮೋಥೆರಪಿ ಔಷಧಿ 5-fluorauracil ಯ ಚಿಕಿತ್ಸೆಗಿ೦ತಲೂ bromelain ಕಿಣ್ವವು ಸಾಕಷ್ಟು ಉತ್ತಮವಾಗಿದೆ ಎ೦ದು ಪ್ರಾಣಿಗಳ ಮೇಲೆ ಕೈಗೊಳ್ಳಲಾದ ಅಧ್ಯಯನದ ಆಧಾರದಿ೦ದ ಖಚಿತಪಡಿಸಲಾಗಿದೆ.


 • ತೂಕ ಇಳಿಸಿಕೊಳ್ಳುವವರಿಗೆ ಅನಾನಸ್‌ ಒಳ್ಳೆಯ ಹಣ್ಣು

  ಅನಾನಸ್‌ನಲ್ಲಿ ನಾರಿನ೦ಶವು ಅಧಿಕ ಪ್ರಮಾಣದಲ್ಲಿರುವುದರಿ೦ದ ಇದು ಪಚನಗೊಳ್ಳಲು ಬಹಳ ಸಮಯ ಬೇಕಾಗುತ್ತದೆ.ಹೀಗಾಗಿ ಅನಾನಸ್ ಹಣ್ಣನ್ನು ಸೇವಿಸಿದರೆ ದೀರ್ಘಾವಧಿಯವರೆಗೆ ಹೊಟ್ಟೆ ತು೦ಬಿರುವುದರ ಅನುಭವವಾಗುತ್ತದೆ. ಅನಾನಸ್ ಹಣ್ಣಿನ ರಸವನ್ನು ಪ್ರತಿದಿನ ಮು೦ಜಾನೆ ಸೇವಿಸುವುದರ ಮೂಲಕ ನೀವು ಸಕ್ಕರೆ ಹಾಗೂ ಕೊಬ್ಬಿನ ಆಹಾರ ಪದಾರ್ಥಗಳ ಕುರಿತ೦ತೆ ನಿಮಗಿರುವ ಹಪಾಹಪಿಯನ್ನು ಹತ್ತಿಕ್ಕಲು ನಿಮಗೆ ಸಾಧ್ಯ ವಾಗುತ್ತದೆ. ನಿಮ್ಮ ಶರೀರದ ಶರ್ಕರ ಪಿಷ್ಟಗಳನ್ನು ಶಕ್ತಿಗೆ ಪರಿವರ್ತಿಸುವುದರ ಮೂಲಕ, ಥೈಯಾಮಿನ್ ನಿಮ್ಮ ದೇಹದ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸಬಲ್ಲದು.


 • ಅನಾನಸಿನ ಅಡ್ಡಪರಿಣಾಮಗಳು?

  ಅತಿಯಾಗಿ ಅನಾನಸನ್ನು ತಿಂದರೆ ಅದರಿಂದ ಅತಿಸಾರ, ವಾಂತಿ, ಎದೆಯುರಿ ಅಥವಾ ಹೊಟ್ಟೆ ನೋವು ಕಾಣಿಸಬಹುದು. ಬ್ರೊಮೆಲೈನ್ ಅತಿಯಾದರೆ ಚರ್ಮದಲ್ಲಿ ಬೊಕ್ಕೆ, ಅತಿಸಾರ, ವಾಂತಿ ಮತ್ತು ಋತುಚಕ್ರದ ವೇಳೆ ಅತಿಯಾಗಿ ರಕ್ತಸ್ರಾವವಾಗುವ ಸಮಸ್ಯೆ ಬರಬಹುದು. ಇತರ ಸಿಟ್ರಸ್ ಹಣ್ಣುಗಳಂತೆ ಅನಾನಸು ಕೂಡ ಸ್ವಭಾವದಲ್ಲಿ ಅಸಿಡಿಟಿ ಗುಣ ಹೊಂದಿದೆ. ಇದರಿಂದ ಎದೆಯುರಿ ಹೆಚ್ಚಾಗಬಹುದು. ಜಠರಕರುಳಿನ ಸಮಸ್ಯೆ ಇರುವ ವ್ಯಕ್ತಿಗಳಲ್ಲಿ ಆಮ್ಲೀಯ ಹಿಮ್ಮುಖ ಹರಿವು ಕಾಣಿಸಬಹುದು.


 • ಗರ್ಭಪಾತವಾಗ ಬಹುದು!

  ಸಾಮಾನ್ಯವಾಗಿ ಮಹಿಳೆಯರಲ್ಲಿ ಅನಾನಸ್ ಹಣ್ಣು ತಿಂದರೆ ಗರ್ಭಪಾತವಾಗುವುದೆಂಬ ಭಯವಿದೆ. ಆದ್ದರಿಂದ ಗರ್ಭಿಣಿಯರಿಗೆ ಈ ಹಣ್ಣನ್ನು ತಿನ್ನಬಾರದೆಂದು ಸಲಹೆ ನೀಡಲಾಗುತ್ತದೆ. ಆದರೆ ಮಹಿಳೆಯರು ಗರ್ಭಧಾರಣೆಯ ನಂತರದ ಹಂತಗಳಲ್ಲಿ ಈ ಹಣ್ಣನ್ನು ಸೇವಿಸಬಹುದಾಗಿದೆ.


 • ಗರ್ಭಿಣಿಯರು ಈ ಹಣ್ಣನ್ನು ಸೇವಿಸಲೇಬಾರದು

  ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಮಲಬದ್ಧತೆ ಮತ್ತು ನಿದ್ರಾಹೀನತೆಯನ್ನು ನಿವಾರಿಸುತ್ತದೆಯಾದರೂ ಗರ್ಭಿಣಿಯರಿಗೆ ಇದು ಅಪಾಯಕಾರಿ. ಗರ್ಭಾಶಯವನ್ನು ಕುಗ್ಗಿಸುವುದಲ್ಲದೆ ಮಗುವಿನ ಉಳಿವಿಗೆ ಕಂಠಕವನ್ನು ತರುತ್ತದೆ. ಸಂಶೋಧನೆಯ ಪ್ರಕಾರ ಅನಾನಸ್ ಹಣ್ಣು ಬ್ರೋಮೆಲಿಯನ್ ಅಂಶವನ್ನು ಒಳಗೊಂಡಿರುವುದರಿಂದ ಗರ್ಭಕಂಠದ ಅತಿಸಾರ ಅಥವಾ ಗರ್ಭಪಾತ ಎನ್ನುವ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಈ ಹಣ್ಣಿನಿಂದ ದೂರ ಉಳಿಯುವುದು ಉತ್ತಮ. ಗರ್ಭಿಣಿಯರಿಗೆ ಇದೊಂದು ಮಾರಣಾಂತಿಕ ಹಣ್ಣಾಗಿ ಪರಿಣಾಮ ಬೀರುವುದರಿಂದ ಆದಷ್ಟು ದೂರ ಇರುವುದು ಸೂಕ್ತ. ಕೆಲವು ಗರ್ಭಿಣಿಯರ ಆರೋಗ್ಯದ ತಪಾಸಣೆಯ ನಂತರ ವೈದ್ಯರು ಅನಾನಸ್ ತಿನ್ನಬೇಕೆನ್ನುವ ಸಲಹೆ ನೀಡುವುದು ಉಂಟು. ಹಾಗಾಗಿ ಗರ್ಭಿಣಿಯರು ಈ ಹಣ್ಣನ್ನು ತಿನ್ನಬಹುದೇ ಅಥವಾ ಬೇಡವೇ ಎನ್ನುವುದರ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆದುಕೊಳ್ಳಲೇ ಬೇಕು.


 • ಮಧುಮೇಹಿಗಳಿಗೆ ಒಳ್ಳೆಯದಲ್ಲ!

  ಅನಾನಸ್, ಸಾಕಷ್ಟು ಹೆಚ್ಚು ನೈಸರ್ಗಿಕ ಸಕ್ಕರೆ ಪ್ರಮಾಣವನ್ನು ಹೊಂದಿರುವ ಹಣ್ಣು. ಇದು ಮೂಲತಃ ಸುಕ್ರೋಸ್ ಮತ್ತು ಫ್ರಕ್ಟೋಸ್ ರೋಪದಲ್ಲಿದ್ದು, ಮಧುಮೇಹಿಗಳಿಗೆ ಅಷ್ಟಾಗಿ ಹಿತಕರವಲ್ಲ. ಇದು ರಕ್ತದ ಇನ್ಸುಲಿನ್ ಮಟ್ಟವನ್ನು ವೃದ್ಧಿಸಬಹುದಾಗಿದೆ. ಆದರೂ ನೀವು ಎಷ್ಟು ಗಾತ್ರದ ಹಣ್ಣು ತಿನ್ನುತ್ತೀರಿ ಹಾಗು ಎಷ್ಟು ಅವಧಿಗೊಮ್ಮೆ ತಿನ್ನುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಆದ್ದರಿಂದ ರಕ್ತದ ಸಕ್ಕರೆ ಏರಿಕೆ ತಪ್ಪಿಸಲು ದಿನಕ್ಕೆ 2 ತುಂಡುಗಳನ್ನು ಮಾತ್ರ ತಿನ್ನುವುದು ಒಳಿತು.
ತನ್ನ ಅನನ್ಯ ಬಣ್ಣ , ಆಕಾರ ಮತ್ತು ಮುಳ್ಳಿನ ಎಲೆಗಳಿಂದಾಗಿ ಅನೇಕ ವಿಧದ ಫಲಗಳ ನಡುವೆಯೂ ಗುರುತಿಸಿ ಕೊಳ್ಳುವಂತಹ ಹಣ್ಣು ಅನಾನಸ್. ರೋಮಾಂಚಕ ಹಳದಿ ವರ್ಣ ಮತ್ತು ಮಧುರವಾದ ಪರಿಮಳದಿಂದಾಗಿ ಇದು ಸಾಕಷ್ಟು ಆಕರ್ಷಣೀಯವಾಗಿದೆ. ಹುಳಿ ಮಿಶ್ರಿತ ಸಿಹಿ ಇರುವ ಈ ಹಣ್ಣಿನಿಂದ ಜೂಸ್, ಸಲಾಡ್ ಮತ್ತು ಇತರ ತಿನಿಸುಗಳನ್ನು ತಯಾರಿಸುವರು. ಇದು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಕೆಲವು ವೈದ್ಯಕೀಯ ಚಿಕಿತ್ಸೆಗಳಿಗಾಗಿಯೂ ಅನಾನಸನ್ನು ಬಳಸಲಾಗುತ್ತದೆ.

ಅನಾನಸ್ ಸಿಹಿ ಮತ್ತು ರುಚಿಕಟ್ಟಾದ ಹಣ್ಣಾಗಿದ್ದು, ಹಲವಾರು ಔಷಧೀಯ ಉದ್ದೇಶಗಳಿಗಾಗಿ ಇದನ್ನು ಬಳಸಲಾದರೂ ಈ ಹಣ್ಣಿನಿಂದ ಅನೇಕ ಅಡ್ಡ ಪರಿಣಾಮಗಳೂ ಉಂಟಾಗುತ್ತವೆ ಎಂಬುವುದು ವಿಪರ್ಯಾಸ. ಆದರೆ ಈ ಅಡ್ಡ ಪರಿಣಾಮಗಳು ಅಷ್ಟೇನೂ ತೀವ್ರ ತೊಂದರೆಗಳನ್ನುಂಟುಮಾಡುವುದಿಲ್ಲ ಎಂಬುವುದೇ ಸಮಾಧಾನಕರ ವಿಷಯ. ಮಿತವಾಗಿ ಮತ್ತು ಎಚ್ಚರಿಕೆಯಿಂದ ಬಳಸಿದಲ್ಲಿ, ಅನಾನಸ್‌ನ ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು

ಅನಾನಸಿನ ಬಗ್ಗೆ ಇರುವ ಕೆಲವು ಸತ್ಯಗಳು

• ಒಂದು ಕಪ್ ಅನಾನಸಿನಲ್ಲಿ 70-80 ಕ್ಯಾಲರಿ ಇದೆ ಮತ್ತು ಇದು ದಿನಕ್ಕೆ ಬೇಕಾಗಿರುವ ಶೇ.131ರಷ್ಟು ವಿಟಮಿನ್ ಸಿ ಒದಗಿಸುವುದು.

• ಮಧುಮೇಹ ಮತ್ತು ಅಸ್ತಮಾ ಸಹಿತ ಹಲವಾರು ಕಾಯಿಲೆ ನಿವಾರಣೆ.

• ಹಣ್ಣಾಗಿರುವ ಅನಾನಸು ತಿನ್ನಬೇಕು.

• ಹಲವಾರು ಹೂಗಳು ಒಂದುಗೂಡಿದ ಪರಿಣಾಮವಾಗಿ ಅನಾನಸು ರಚನೆಯಾಗುವುದು.

• ಇದು ವೈವಿಧ್ಯಮ ಹಣ್ಣಾಗಿದ್ದು, ಇದನ್ನು ಸ್ಮೂಥಿ, ಕಬಾಬ್ ಮತ್ತು ಸಲಾಡ್ ಗಳಲ್ಲಿ ಬಳಸಬಹುದು.

• ಅನಾನಸನ್ನು ತಿನ್ನುವ ಮೊದಲು ಒಂದೆರಡು ದಿನ ಹಾಗೆ ಕೋಣೆಯಲ್ಲಿ ಇಟ್ಟುಬಿಡಿ...

   
 
ಹೆಲ್ತ್