Back
Home » ಆರೋಗ್ಯ
ಒಂಟೆಯ ಹಾಲಿನ ಏಳು ಅದ್ಭುತ ಆರೋಗ್ಯಕರ ಪ್ರಯೋಜನಗಳು
Boldsky | 16th Jul, 2018 10:29 AM
 • 1. ರಕ್ತಹೀನತೆಗೆ ಉತ್ತಮ

  ಒಂಟೆಯ ಹಾಲಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ ಹಾಗೂ ಇದೇ ರಕ್ತಹೀನತೆಯನ್ನು ತಡೆಗಟ್ಟಲು ಆದರ್ಶಪ್ರಾಯವಾದ ಆಹಾರವಾಗಿದೆ. ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳು ಆಮ್ಲಜನಕವನ್ನು ದೇಹದ ಎಲ್ಲಾ ಅಂಗಗಳು, ಅಂಗಾಂಶಗಳಿಗೆ ಪೂರೈಸಬೇಕಾದರೆ ಕಬ್ಬಿಣದ ಅಣುಗಳು ಬೇಕೇ ಬೇಕು. ವಿಶೇಷವಾಗಿ ಹೆರಿಗೆಯ ಬಳಿಕ ಬಾಣಂತಿಯ ದೇಹ ಹೆಚ್ಚಿನ ರಕ್ತವನ್ನು ಕಳೆದುಕೊಂಡಿದ್ದು ಇದನ್ನು ಮರುದುಂಬಿಸಲು ಹೆಚ್ಚಿನ ಕಬ್ಬಿಣ ಇರುವ ಆಹಾರದ ಅಗತ್ಯವಿದೆ. ಒಂಟೆಯ ಹಾಲು ಈ ಅಗತ್ಯತೆಯನ್ನು ಅತ್ಯುತ್ತಮವಾಗಿ ಪೂರೈಸುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂಟೆಯ ಹಾಲು ಉತ್ತಮ ಆಹಾರವಾಗಿದ್ದು ನಿತ್ಯವೂ ಸೇವಿಸಲು ಯೋಗ್ಯವಾಗಿದೆ.


 • 2. ಮಧುಮೇಹವನ್ನು ಗುಣಪಡಿಸುತ್ತದೆ

  ಒಂಟೆಯ ಹಾಲಿನಲ್ಲಿರುವ ಹಲವಾರು ಆರೋಗ್ಯಕರ ಪ್ರಯೋಜನಗಳಲ್ಲಿ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರಿಸುವುದೂ ಒಂದಾಗಿದೆ. ಇದು ಮಧುಮೇಹಿಗಳಿಗೆ ಅತ್ಯಂತ ಸೂಕ್ತವಾದ ಗುಣವಾಗಿದ್ದು ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಒಂಟೆಯ ಹಾಲಿನ ಸೇವನೆಯಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸುತ್ತದೆ ಹಾಗೂ ಈಗಿರುವ ಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳದಂತೆ ತಡೆಯುತ್ತದೆ.


 • 3. ಆಟಿಸಂ ತೊಂದರೆಯಿಂದ ರಕ್ಷಿಸುತ್ತದೆ

  ಬೆಳೆಯುತ್ತಿರುವ ಮಕ್ಕಳಲ್ಲಿ ಕಲಿಕಾ ಸಾಮರ್ಥಕ್ಕೆ ಸಂಬಂಧಿಸಿದ ತೊಂದರೆಯನ್ನು ಆಟಿಸಂ ಎಂದು ಕರೆಯಲಾಗುತ್ತದೆ. ಒಂಟೆಯ ಹಾಲಿನಲ್ಲಿರುವ ಕೆಲವು ಸಂಯುಕ್ತಗಳು ಮೆದುಳಿನ ನರವ್ಯವಸ್ಥೆ ಹಾಗೂ ದೇಹದ ಸ್ವಯಂರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ಗುಣ ಹೊಂದಿವೆ. ಈ ಬಗ್ಗೆ ನಡೆಸಿದ ಹಲವಾರು ಸಂಶೋಧನೆಗಳ ಮೂಲಕ ಮಕ್ಕಳಿಗೆ ನಿಯಮಿತವಾಗಿ ಒಂಟೆಯ ಹಾಲನ್ನು ಕುಡಿಸುವ ಮೂಲಕ ಮಕ್ಕಳಿಗೆ ಎದುರಾಗುವ ಆಟಿಸಂ ತೊಂದರೆಯನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಬಹುದು ಎಂದು ಕಂಡುಕೊಳ್ಳಲಾಗಿದೆ.


 • 7. ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

  ಒಂಟೆಯ ಹಾಲಿನಲ್ಲಿ ಸಮೃದ್ದವಾಗಿರುವ ಪ್ರೋಟೀನ್ ಮತ್ತು ಇತರ ಸಾವಯವ ಸಂಯುಕ್ತಗಳು ಇದನ್ನೊಂದು ಪ್ರಬಲ ಸೂಕ್ಷ್ಮಜೀವಿ ನಿವಾರಕ ಗುಣ ಹೊಂದಲು ಕಾರಣವಾಗಿವೆ. ಈ ಮೂಲಕ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚು ಬಲಗೊಳ್ಳುತ್ತದೆ ಹಾಗೂ ಹಲವಾರು ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ.


 • 5. ವೃದ್ಧಾಪ್ಯವನ್ನು ದೂರಾಗಿಸುತ್ತದೆ

  ಒಂಟೆಯ ಹಾಲಿನಲ್ಲಿ ಆಲ್ಫಾ ಹೈಡ್ರಾಕ್ಸಿಲ್ ಆಮ್ಲ ಎಂಬ ಸಂಯುಕ್ತವಿದೆ. ಇದು ಚರ್ಮದ ಸೆಳೆತವನ್ನು ಹೆಚ್ಚಿಸಿ ಸೂಕ್ಷ್ಮ ನೆರಿಗೆಗಳನ್ನು ನಿವಾರಿಸುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ತನ್ಮೂಲಕ ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸಿ ತಾರುಣ್ಯವನ್ನು ಬಹುಕಾಲ ಕಾಪಾಡುತ್ತದೆ.


 • 6. ತೂಕ ಇಳಿಸುವವರಿಗೂ ತಕ್ಕುದು

  ಒಂಟೆಯ ಹಾಲಿನಲ್ಲಿ ಕಡಿಮೆ ಕೊಬ್ಬು ಇದೆ. ಈ ಮೂಲಕ ದೇಹಕ್ಕೆ ಅನಗತ್ಯವಾಗಿ ಕೊಬ್ಬು ಅಲಭ್ಯವಾಗಿ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ದೊರಕುತ್ತದೆ. ಅಲ್ಲದೇ ಒಂಟೆಯ ಹಾಲಿನಲ್ಲಿ ಹೆಚ್ಚಿನ ವಿಟಮಿನ್ನುಗಳು ಮತ್ತು ಖನಿಜಗಳಿದ್ದು ದೇಹದಿಂದ ಅನಗತ್ಯ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಈ ಮೂಲಕವೂ ದೇಹದ ತೂಕ ಇಳಿಯಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ತೂಕ ಇಳಿಸುವ ಯತ್ನಗಳು ಹೆಚ್ಚು ಫಲಕಾರಿಯಾಗಿಲ್ಲದಿದ್ದರೆ ನಿಮ್ಮ ನಿತ್ಯದ ಹಾಲನ್ನು ಒಂಟೆಯ ಹಾಲಿಗೆ ಬದಲಿಸಿ ನೋಡಿ.


 • 7. ಒಂಟೆಯ ಹಾಲಿನಲ್ಲಿರುವ ಪೋಷಕಾಂಶಗಳ ವಿವರ

  ಹಸುವಿನ ಹಾಲಿಗೆ ಹೋಲಿಸಿದರೆ, ಒಂಟೆಯ ಹಾಲಿನಲ್ಲಿ ಕಡಿಮೆ ಕ್ಯಾಲೋರಿಗಳೂ, ಕಡಿಮೆ ಸಂತೃಪ್ತ ಕೊಬ್ಬುಗಳೂ ಇವೆ. ಒಂದು ಲೋಟ ಒಂಟೆಯ ಹಾಲಿನಲ್ಲಿ ಕೇವಲ 110 ಕ್ಯಾಲೋರಿಗಳು ಮತ್ತು 4.5 ಗ್ರಾಂ ನಷ್ಟು ಕೊಬ್ಬು ಇದೆ. ಇದೇ ಪ್ರಮಾಣದ ಹಸುವಿನ ಹಾಲಿನಲ್ಲಿ 150 ಕ್ಯಾಲೋರಿ ಮತ್ತು 8 ಗ್ರಾಂ ಕೊಬ್ಬು ಇದೆ. ಒಂಟೆಯ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ೩, ವಿಟಮಿನ್ ಸಿ, ಕಬ್ಬಿಣ ಹಸುವಿನ ಹಾಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲದೇ ಹಾಲಿನಲ್ಲಿರುವ ಲ್ಯಾಕ್ಟೋಸ್ ಕಡಿಮೆ ಪ್ರಮಾಣದಲ್ಲಿರುವ ಕಾರಣ ಹಾಲನ್ನು ಜೀರ್ಣೀಸಿಕೊಳ್ಳಲು ಸಾಧ್ಯವಿಲ್ಲದಿರುವ ತೊಂದರೆ (lactose intolerance) ಇರುವ ವ್ಯಕ್ತಿಗಳಿಗೆ ಒಂಟೆಯ ಹಾಲು ಹೆಚ್ಚು ಉಪಯುಕ್ತವಾಗಿದೆ. ಅಲ್ಲದೇ ಒಂಟೆಯ ಹಾಲಿನಲ್ಲಿ ಖನಿಜಗಳಾದ ಪೊಟ್ಯಾಶಿಯಂ, ತಾಮ್ರ, ಮೆಗ್ನೇಶಿಯಂ ಹಾಗೂ ಸತು ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲದೇ ಕೊಲೆಸ್ಟ್ರಾಲ್ ಮತ್ತು ಕೊಬ್ಬು ಅತಿ ಕಡಿಮೆ ಪ್ರಮಾಣದಲ್ಲಿದ್ದು ಪ್ರೋಟೀನ್ ಮತ್ತು ಆಂಟಿ ಆಕ್ಸಿಡೆಂಟ್ ಗುಣದಿಂದ ಸಮೃದ್ದವಾಗಿದೆ.


 • ಒಂಟೆಯ ಹಾಲಿನ ಸೇವನೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು

  ಒಂಟೆಯ ಹಾಲನ್ನೆಂದೂ ಹಸಿಯಾಗಿ ಸೇವಿಸಬಾರದು, ಏಕೆಂದರೆ ಈ ಹಾಲಿನಲ್ಲಿ ಪ್ರಾಣಿಜನ್ಯ-ರೋಗಕಾರಕಗಳಿವೆ. ಮರಳುಗಾಡಿನ ಹಡಗಿಗೆ ಅಲ್ಲಿನ ಹವಾಮಾನ ವೈಪರೀತ್ಯಗಳಿಗೆ ಬದುಕುಳಿಯಲು ಅಗತ್ಯವಾಗಿದ್ದರೂ, ಹಸಿಯಾಗಿ ಸೇವಿಸಿದ ಮನುಷ್ಯರಿಗೆ ಇದು ಅನಗತ್ಯ ತೊಂದರೆಯನ್ನು ಉಂಟುಮಾಡಬಹುದು. ಹಾಗಾಗಿ ಒಂಟೆಯ ಹಾಲನ್ನು ಕೇವಲ ಪ್ಯಾಶ್ಚರೀಕರಿಸಿದ ಬಳಿಕವೇ ಸೇವಿಸಬೇಕು. ಈ ಲೇಖನ ನಿಮಗೆ ಇಷ್ಟವಾಯಿತೇ, ಹಾಗಾದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಈ ಲೇಖನದ ಕೊಂಡಿಯನ್ನು ಹಂಚಿಕೊಳ್ಳಿ.
ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಲಿಸಲ್ಪಡುತ್ತಿರುವ ಚಿತ್ರವಿಚಿತ್ರ ಉತ್ಪನ್ನಗಳಲ್ಲಿ ಅನ್ಯಮೂಲ ಹಾಲುಗಳೂ ಒಂದು. ಉದಾಹರಣೆಗೆ ಜಿರಳೆಯ ಹಾಲು, ಸಸ್ಯಜನ್ಯ ಹಾಲು (ಪಾಚಿಯಿಂದ ವಿಂಗಡಿಸಲ್ಪಟ್ಟ ಹಾಲು), ಮೇಕೆ ಹಾಲು ಇತ್ಯಾದಿ. ಇತ್ತೀಚೆಗೆ ವಿಶ್ವಕ್ಕೆ ಅದ್ಭುತ ಹಾಲು ಎಂದು ಪರಿಚಯಿಸಲ್ಪಡುತ್ತಿರುವ ಒಂಟೆಯ ಹಾಲು ಇದುವರೆಗೆ ಕೇವಲ ಮರಳುಗಾಡಿನ ದೇಶದಲ್ಲಿ ಮಾತ್ರವೇ ಬಳಕೆಯಾಗುತ್ತಿದ್ದು ಈಗ ಹಾಲು ಮತ್ತು ಇತರ ಉತ್ಪನ್ನಗಳ ರೂಪದಲ್ಲಿ ವಿಶ್ವದಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

ಅಮೇರಿಕಾ ಈ ಹಾಲಿನ ಮಹತ್ವವನ್ನು ಅರಿತು ಹೆಚ್ಚಾಗಿ ಒಲವು ತೋರುತ್ತಿರುವ ದೇಶವಾಗಿದ್ದು ಇಂದು ಅತಿ ಹೆಚ್ಚಿನ ಬೇಡಿಕೆಯನ್ನು ಸಲ್ಲಿಸುತ್ತಿದೆ. ಒಂಟೆಯ ಹಾಲು ಹಸುವಿನ ಹಾಲಿಗಿಂತ ದುಬಾರಿಯಾಗಿದ್ದರೂ ಇದರ ಔಷಧೀಯ ಮತ್ತು ಆರೋಗ್ಯ ಗುಣಗಳನ್ನು ಪರಿಗಣಿಸಿದರೆ ಇದು ಹಸುವಿನ ಹಾಲಿಗಿಂತಲೂ ಒಳ್ಳೆಯದು ಎಂಬ ಅಭಿಪ್ರಾಯ ಪಡೆದಿರುವ ಕಾರಣ ಹೆಚ್ಚಿನ ಬೇಡಿಕೆ ಪಡೆದಿದೆ. ಈ ಬೇಡಿಕೆ ನಮ್ಮ ರಾಜಸ್ಥಾನದ ಒಂಟೆಗಳ ಮಾಲಿಕರ ಮೊಗದಲ್ಲಿ ಹರ್ಷ ಮೂಡಿಸಿದೆ.

ಒಂಟೆಯ ಹಾಲಿನ ಅದ್ಭುತ ಆರೋಗ್ಯಕರ ಪ್ರಯೋಜನಗಳು

ಒಂಟೆಯ ಹಾಲಿನ ಬಗ್ಗೆ ನಡೆಸಿದ ಸಂಶೋಧನೆಗಳಲ್ಲಿ ಕಂಡುಕೊಂಡ ಅಂಶವೆಂದರೆ ಒಂಟೆಯ ಹಾಲು ಟೈಪ್ ೧ ಮಧುಮೇಹಿ, ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವ, ಆಟಿಸಮ್, ಹೆಪಟೈಟಿಸ್ ಬಿ ಮತ್ತು ಇತರ ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಕಾಯಿಲೆ ಇರುವ ವ್ಯಕ್ತಿಗಳಿಗೆ ಉತ್ತಮವಾಗಿದೆ ಎಂದು ಕಂಡುಕೊಳ್ಳಲಾಗಿದೆ. ಅಲ್ಲದೇ ವಿಶೇಷವಾಗಿ ಆಟಸಂ ಮತ್ತು ಟೈಪ್ 1 ಮಧುಮೇಹಿಗಳ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಸಾಬೀತುಗೊಂಡಿದೆ. ಬನ್ನಿ, ಒಂಟೆಯ ಹಾಲಿನ ಸೇವನೆಯಿಂದ ಯಾವ ಬಗೆಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

   
 
ಹೆಲ್ತ್