Back
Home » ಆರೋಗ್ಯ
ಮದ್ಯಪಾನದ ಬಗ್ಗೆ ನೀವು ತಿಳಿದಿರದ ಆಸಕ್ತಿಕರ ಸಂಗತಿಗಳು, ಕೇಳಿದರೆ ಶಾಕ್ ಆಗುವಿರಿ!
Boldsky | 15th Jul, 2018 09:02 AM
 • ಲಘುವಾಗಿ ಕುಡಿಯುವುದು ಆರೋಗ್ಯಕರವೇ?

  ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ತನಕ ಮದ್ಯಪಾನ ಮಾಡುವವರು ಅಂದರೆ ವಾರದಲ್ಲಿ ಒಂದರಿಂದ ಮೂರು ಡ್ರಿಂಕ್ಸ್ ಮಾಡುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆಯು ತುಂಬಾ ಕಡಿಮೆಅದಾಗ್ಯೂ, ಯೂನಿವರ್ಸಿಟಿ ಆಫ್ ವಿಸ್ಕಾನ್ಸಿನ್ ಕಾರ್ಬನ್ ಕ್ಯಾನ್ಸರ್ ಸೆಂಟರ್ ನ ಆನ್ಕೊಲಾಜಿಸ್ಟ್ ಎಂಡಿ ನೋಯೆಲ್ ಲೋಕಾಂಟೆ ಪ್ರಕಾರ, ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದರೆ ಇದು ಶೂನ್ಯ ಅಪಾಯವೆಂದಲ್ಲ ಎಂದಿದ್ದಾರೆ.


 • ಅಧ್ಯಯನದ ಪ್ರಕಾರ

  ಇವರ ಅಧ್ಯಯನದ ಪ್ರಕಾರ ಕುಡಿತವನ್ನು ಇದು ಪ್ರಚಾರ ಮಾಡುವುದಿಲ್ಲ. ಸ್ವಲ್ಪ ಕೂಡ ಮದ್ಯಪಾನ ಮಾಡಬಾರದು. ಸಣ್ಣ ಪ್ರಮಾಣದ ಮದ್ಯಪಾನವು ನಿಮ್ಮ ಹೃದಯಕ್ಕೆ ನೆರವಾದರೂ ಇದು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಸಣ್ಣ ಪ್ರಮಾಣದಲ್ಲಿ ಹೆಚ್ಚಿಸುವುದು. ಅತಿಯಾಗಿ ಮದ್ಯಪಾನ ಸೇವನೆ ಮಾಡಿದವರಿಗೆ ಹೋಲಿಸಿದರೆ ಇದು ಕಡಿಮೆಯಾಗಿರಬಹುದು ಎಂದು ಲೋಕಾಂಟೆ ಹೇಳುತ್ತಾರೆ.

  ಈ ಟಿಪ್ಸ್ ಮದ್ಯ ಬೇಡ ಅನ್ನುವವರಿಗೆ ಮಾತ್ರ!


 • ಆಲ್ಕೋಹಾಲ್ ನ ಲಾಭಗಳು

  ಮದ್ಯಪಾನ ಮಾಡದೆ ಇರುವವರಿಗೆ ಹೋಲಿಸಿದರೆ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ತನಕ ಮದ್ಯಪಾನ ಮಾಡುವಂತಹ ಜನರು ಬಲವಾದ ಮೂಳೆಗಳು, ಪ್ರತಿರೋಧಕ ಶಕ್ತಿ ಬಲಗೊಳ್ಳುವುದು ಮತ್ತು ಮಧುಮೇಹ ಬರುವ ಸಾಧ್ಯತೆ ಕಡಿಮೆ(ಮಹಿಳೆಯರಿಗೆ) ಇರುವುದು. ಇದು ನಿಮ್ಮ ಹೃದಯವನ್ನು ಕಾಪಾಡುವುದು. 2015ರಲ್ಲಿ ನಡೆಸಿರುವ ಅಧ್ಯಯನವೊಂದರ ಪ್ರಕಾರ ಲಘು ಮದ್ಯಪಾನವು ಪರಿಧಮನಿ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುವುದು.


 • ಆಲ್ಕೋಹಾಲ್ ಸೇವನೆಯಿಂದ ಆರೋಗ್ಯ ಹೇಗೆ?

  ನೀವು ಆರೋಗ್ಯಕರವಾಗಿ ಮದ್ಯಪಾನ ಮಾಡಲು ಹಾಗೂ ಆಲ್ಕೋಹಾಲ್ ಚಟಕ್ಕೆ ಬೀಳದೆ ಇರಬೇಕಾದರೆ ನೀವು ಪ್ರತಿನಿತ್ಯ ಹಾಗೂ ವಾರದಲ್ಲಿ ಹೇಳಿದಷ್ಟೇ ಪ್ರಮಾಣದಲ್ಲಿ ಮದ್ಯಪಾನ ಮಾಡಬೇಕು. ಅಮೆರಿಕಾದ ಆಹಾರ ಕ್ರಮದ ಪ್ರಕಾರ ಮಧ್ಯಮ ಪ್ರಮಾಣದ ಮದ್ಯಪಾನವೆಂದರೆ ಮಹಿಳೆಯರಿಗೆ ದಿನಕ್ಕೆ ಒಂದು ಡ್ರಿಂಕ್ ಮತ್ತು ಪುರುಷರಿಗೆ ದಿನಕ್ಕೆ ಎರಡು ಡ್ರಿಂಕ್. ಇದಕ್ಕಿಂತ ಹೆಚ್ಚು ಕುಡಿದರೆ ಅದು ನಿಮಗೆ ಚಟವಾಗುವುದು ಮತ್ತು ಪಾರ್ಶ್ವವಾಯು, ಯಕೃತ್ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆ ಇತ್ಯಾದಿಗಳು ಬರಬಹುದು.ಒಂದು ರಾತ್ರಿ ನೀವು ಅತಿಯಾಗಿ ಮದ್ಯಪಾನ ಮಾಡಿದರೆ ಆಗ ಹೊಟ್ಟೆಯ ಬ್ಯಾಕ್ಟೀರಿಯಾ ಸೋರಿಕೆಯಾಗಿ ದೇಹದಲ್ಲಿ ವಿಷವು ಹೆಚ್ಚಾಗುವುದು. ಇದು ಪ್ರತಿರೋಧಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು.


 • ಆಲ್ಕೋಹಾಲ್‌ನಿಂದ ಮಹಿಳೆಯರ ಆರೋಗ್ಯಕ್ಕೆ ಜಾಸ್ತಿ ಹಾನಿ

  ಆಲ್ಕೋಹಾಲ್ ಪ್ರಮಾಣ ಸೂಚಿಸಿರುವಂತೆ ಕೆಲವೊಂದು ಕಾರಣಗಳಿಂದಾಗಿ ಮಹಿಳೆಯರು ಪುರುಷರಿಗಿಂತ ಕಡಿಮೆ ಮದ್ಯಪಾನ ಮಾಡಬೇಕು. ಇದು ಇಬ್ಬರ ದೇಹರಚನೆ ಅವಲಂಬಿಸಿರುವುದು. ಒಂದೇ ವಯಸ್ಸಿನ ಮಹಿಳೆಯರಿಗಿಂತ ಪುರುಷರ ತೂಕ ಹೆಚ್ಚಾಗಿರುವುದು ಮತ್ತು ಪುರುಷರ ದೇಹದಲ್ಲಿ ನೀರು ಕಡಿಮೆ ಇರುವುದು.ಪುರುಷರ ದೇಹಕ್ಕೆ ಹೋಲಿಸಿದರೆ ಮಹಿಳೆಯರ ದೇಹವು ಆಲ್ಕೋಹಾಲ್ ನ್ನು ತುಂಬಾ ಕಡಿಮೆ ಸಾರಗೊಳ್ಳುವುದು. ಇದರಿಂದ ಆಲ್ಕೋಹಾಲ್ ನ ವಿಷಕ್ಕೆ ಮಹಿಳೆಯ ದೇಹವು ಹೆಚ್ಚು ಒಡ್ಡಿಕೊಳ್ಳುವುದು.


 • ಆರೋಗ್ಯಕರವಾಗಿ ಆಲ್ಕೋಹಾಲ್ ಸೇವನೆ ಮಾಡುವುದನ್ನು ಖಚಿತಪಡಿಸುವುದು ಹೇಗೆ?

  • ದಿನಕ್ಕೆ ಎರಡು ಅಥವಾ ಮೂರು ಡ್ರಿಂಕ್ಸ್ ಗಿಂತ ಹೆಚ್ಚು ಸೇವನೆ ಮಾಡಬೇಡಿ. ಇದಕ್ಕಿಂತ ಹೆಚ್ಚು ಸೇವನೆ ಮಾಡಿದರೆ ಕ್ಯಾನ್ಸರ್ ಮತ್ತು ಹೃದಯ ಸಮಸ್ಯೆ ಬರುವುದು.
  • ನೀವು ಸೇವಿಸುವ ಆಲ್ಕೋಹಾಲ್ ಮೇಲೆ ನಿಗಾವಿಡಿ. ಮಹಿಳೆಯರಿಗೆ ದಿನಕ್ಕೆ ಒಂದು ಡ್ರಿಂಕ್, ಪುರುಷರಿಗೆ ದಿನಕ್ಕೆ ಎರಡು ಡ್ರಿಂಕ್. ಇದಕ್ಕೆ ನೀವು ಕಟಿಬದ್ಧರಾಗಿರಬೇಕು. ಕಳೆದ ಎರಡು ಮೂರು ದಿನಗಳಿಂದ
  ನೀವು ಮದ್ಯಪಾನ ಮಾಡದೇ ಇದ್ದ ಕಾರಣ ಅದನ್ನು ಸರಿದೂಗಿಸಲು ಒಂದೇ ದಿನದಲ್ಲಿ ಹೆಚ್ಚು ಮದ್ಯಪಾನ ಮಾಡಬೇಡಿ.
  • ಒಂದು ಡ್ರಿಂಕ್ ನ ವಿವರಣೆ: 12 ಔನ್ಸ್ ಬಿಯರ್, 5 ಔನ್ಸ್ ವೈನ್ ಅಥವಾ 1.5 ಔನ್ಸ್ ಮದ್ಯ.
  ಕಳೆದ 25 ವರ್ಷಗಳಲ್ಲಿ ಸಾಮಾನ್ಯ ಗಾತ್ರ ವೈನ್ ಬಾಟಲಿಯು ಎರಡು ಪಟ್ಟು ದೊಡ್ಡದಾಗಿದೆ ಎಂದು ಬಿಎಂಜೆ ವರದಿಗಳು ಹೇಳಿವೆ.
  *ಬಿಯರ್ ಗೆ ಸಂಬಂಧಿಸಿ ಆಲ್ಕೋಹಾಲ್ ಪ್ರಮಾಣವನ್ನು ಅದರಲ್ಲಿ ಮುದ್ರಿಸಿರಲಾಗುತ್ತದೆ. ಆದರೆ ವೈಲ್ ಮತ್ತು ಮದ್ಯಕ್ಕೆ ಸಂಬಂಧಿಸಿದಂತೆ ನೀವು ಸರಿಯಾದ ಪ್ರಮಾಣ ನೋಡಿಕೊಳ್ಳಬೇಕು.


 • ಕಡಿಮೆ ಕುಡಿಯುವಂತೆ ಮಾಡುವುದು ಹೇಗೆ?

  ದೊಡ್ಡ ಗ್ಲಾಸ್ ಗಳ ಬದಲಿಗೆ ಸಣ್ಣ ಗ್ಲಾಸ್ ಗಳನ್ನು ಬಳಸಿ. ದೊಡ್ಡ ಗ್ಲಾಸ್ ಬಳಸಿದಷ್ಟು ಎರಡನೇ ಡ್ರಿಂಕ್ ತೆಗೆದುಕೊಳ್ಳುವುದು ಹೆಚ್ಚು ಎಂದು ಅಧ್ಯಯನವು ಹೇಳಿದೆ. ನಿಧಾನವಾಗಿ ಕುಡಿಯಿರಿ ಮತ್ತು ಇದನ್ನು ಪೂರ್ತಿಗೊಳಿಸಲು ಸಮಯ ನಿಗದಿ ಮಾಡಿ.


 • ಆರೋಗ್ಯಕರ ಕುಡಿತಕ್ಕೆ ಸಲಹೆಗಳು

  • ನೀವು ಕುಡಿಯುವ ಆಲ್ಕೋಹಾಲ್ ನ ಪ್ರಮಾಣವನ್ನು ಅಳತೆ ಮಾಡಿ. ಅದರಲ್ಲೂ ವೈನ್ ನಲ್ಲಿ.
  • ಸಣ್ಣ ಗ್ಲಾಸ್ ಗಳಿಗೆ ಇದನ್ನು ಸುರಿಯಿರಿ. ದೊಡ್ಡ ಗ್ಲಾಸ್ ಹೆಚ್ಚು ಕುಡಿಯುವಂತೆ ಮಾಡುವುದು.
  • ಡ್ರಿಂಕ್ ದೀರ್ಘ ಸಮಯ ಬರಲು ಶುದ್ಧ ನೀರನ್ನು ಇದಕ್ಕೆ ಸೇರಿಸಿ.
  ಸಾಂದರ್ಭಿಕವಾಗಿ ಮಧ್ಯಮ ಪ್ರಮಾಣದಲ್ಲಿ ಕುಡಿದರೆ ಅದು ಹಾನಿಕಾರಕವಲ್ಲ. ಮದ್ಯಪಾನದ ಚಟ ಹತ್ತಿಕೊಂಡು ಅತಿಯಾಗಿ ಕುಡಿದರೆ ಆಗ ರೋಗಗಳು ಮತ್ತು ಅನಾರೋಗ್ಯವು ನಿಮ್ಮನ್ನು ಕಾಡುವುದು.
  ಇಂತಹ ಸಿಂಪಲ್ ಟ್ರಿಕ್ಸ್ ಅನುಸರಿಸಿ-ಕುಡಿತದ ಚಟದಿಂದ ಹೊರಬನ್ನಿ
  *ಮದ್ಯದ ಪ್ರಮಾಣವನ್ನು ನೀರು ಅಥವಾ ಸೋಡಾ ಬೆರೆಸಿ ಕಡಿಮೆಗೊಳಿಸಬಹುದು. ಅಂದರೆ ಪ್ರಾರಂಭದಲ್ಲಿ ನಿಮ್ಮ ಆಯ್ಕೆಯ ಮದ್ಯವನ್ನು ಸೇವಿಸಿದ ಬಳಿಕ ಮುಂದಿನ ಸುತ್ತುಗಳಲ್ಲಿ ನೀರು ಮತ್ತು ಸೋಡಾ ಮಾತ್ರವನ್ನು ಸೇವಿಸುವ ಮೂಲಕ ಮೆದುಳಿಗೆ ಮದ್ಯ ಸೇವಿಸಿದಂತೆಯೇ ಅನ್ನಿಸಿ ಈ ವ್ಯಸನದಿಂದ ಹೊರಬರಲು ಮಾನಸಿಕವಾಗಿ ಸಾಧ್ಯವಾಗುತ್ತದೆ.
  *ಮದ್ಯ ಕುಡಿಯಬೇಕು ಎಂಬ ಬಯಕೆಯಾದಾಗ ನಿಮ್ಮ ಹೊಟ್ಟೆ ಖಾಲಿಯಾಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಖಾಲಿಹೊಟ್ಟೆಯಲ್ಲಿ ಸೇವಿಸಿದ ಮದ್ಯ ನೇರವಾಗಿ ತಕ್ಷಣವೇ ರಕ್ತಕ್ಕೆ ಹರಿಯುವ ಮೂಲಕ ಯಕೃತ್‌ ಗೆ ಅತಿ ಹೆಚ್ಚಿನ ತೊಂದರೆಯುಂಟಾಗುತ್ತದೆ. ಅಲ್ಲದೇ ಇದು ದೇಹದಿಂದ ಹೊರಹೋಗಲು ಅತಿ ಹೆಚ್ಚಿನ ಸಮಯ ತೆಗೆದುಕೊಳ್ಳುವ ಮೂಲಕ ಇದರ ಮತ್ತು ಸಹಾ ಹೆಚ್ಚಿನ ಸಮಯದವರೆಗೆ ಇದ್ದು ಇದರ ಪರೋಕ್ಷ ಪರಿಣಾಮಗಳನ್ನು ಊಹಿಸಲೂ ಸಾಧ್ಯವಿಲ್ಲ.
  *ಎಂದಿಗೂ ಮದ್ಯಪಾನವಾಗಲೀ ಧೂಮಪಾನವಾಗಲೀ ಒಮ್ಮೆಲೇ ಬಿಡಬಾರದು. ನಿಧಾನವಾಗಿ ಇದರ ಪ್ರಮಾಣವನ್ನು ಕಡಿಮೆಗೊಳಿಸುತ್ತಾ ಬರಬೇಕು. ನಿಮ್ಮ ವೈದ್ಯರು ಈ ಬಗ್ಗೆ ಸರಿಯಾದ ವೇಳಾಪಟ್ಟಿಯನ್ನು ಸೂಚಿಸಬಲ್ಲರು.
ಮದ್ಯಪಾನ ಎನ್ನುವುದು ಇಂದಿನ ದಿನಗಳಲ್ಲಿ ಪ್ರತಿಷ್ಠೆಯ ವಿಷಯವಾಗಿಬಿಟ್ಟಿದೆ. ಮದ್ಯಪಾನ ಮಾಡದೆ ಇರುವವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ. ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಹೆಚ್ಚಿನವರು ಮದ್ಯಪಾನ ಮಾಡುವರು. ಹದಿಹರೆಯದವರು ಪಾರ್ಟಿಗಳಿಗೆ ಹೋಗಿ ಮದ್ಯಪಾನ ಮಾಡುವರು. ಇನ್ನು ಕೆಲವರಿಗೆ ಇದು ಅಭ್ಯಾಸವಾಗಿಬಿಟ್ಟಿರುವುದು. ಇದಕ್ಕಾಗಿ ಅವರು ಪ್ರತಿನಿತ್ಯ ಇದನ್ನು ಸೇವಿಸುವರು. ಆದರೆ ಅತಿಯಾಗಿ ಮದ್ಯಪಾನ ಮಾಡಿದರೆ ಅದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯು ಹೆಚ್ಚಾಗಿರುವುದು ಎಂದು ನಿಮಗೆ ತಿಳಿದಿದೆಯಾ?

ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ವಿಷಕಾರಿ ರಾಸಾಯನಿಕಗಳಿಂದ ದೂರವಿರುವ ಜನರಿಗೆ ಮದ್ಯಪಾನದಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಪ್ಲೊಸ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದರ ಪ್ರಕಾರ ಸುಮಾರು 9 ವರ್ಷಗಳ ಕಾಲ ಮದ್ಯಪಾನದ ಅಭ್ಯಾಸವಿರುವ ಒಟ್ಟು 99000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದ ವೇಳೆ ದಿನದಲ್ಲಿ ಎರಡರಿಂದ ಮೂರು ಲೋಟ ಆಲ್ಕೋಹಾಲ್ ಸೇವನೆ ಮಾಡಿದವರಲ್ಲಿ ಕ್ಯಾನ್ಸರ್ ಸಾಧ್ಯತೆಯು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಹೊಸ ಅಧ್ಯಯನ ವರದಿಯ ಪ್ರಕಾರ ಶೇ. 5-6ರಷ್ಟು ಕ್ಯಾನ್ಸರ್ ಆಲ್ಕೋಹಾಲ್ ಸೇವನೆಗೆ ಸಂಬಂಧಿಸಿದ್ದಾಗಿದೆ. ವಾರದಲ್ಲಿ ಮೂರು ಡ್ರಿಂಕ್ಸ್ ಮಾಡುವುದು ಆರೋಗ್ಯಕರ. ಅದಕ್ಕಿಂತ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಪ್ಲೊಸ್ ಮೆಡಿಸಿನ್ ವರದಿ ಹೇಳಿದೆ....

   
 
ಹೆಲ್ತ್