Back
Home » ಇತ್ತೀಚಿನ
ಹಾನರ್ 9ಐ, ಹಾನರ್ 9ಎಕ್ಸ್‌ ಸ್ಮಾರ್ಟ್‌ಫೋನ್ ಬಿಡುಗಡೆಗೆ ಜುಲೈ 24 ಫಿಕ್ಸ್‌..!
Gizbot | 17th Jul, 2018 07:00 AM
 • ಕಳೆದ ಆವೃತ್ತಿ ಮತ್ತು ಹೊಸ ಆವೃತ್ತಿಗೆ ಇರುವ ವ್ಯತ್ಯಾಸ

  ಹಾನರ್ 9ಐ(2017) ಮತ್ತು ಹಾನರ್ 9ಐ (2018) ಗೆ ಇರುವ ಪ್ರಮುಖ ವ್ಯತ್ಯಾಸವೆಂದರೆ ಡಿಸೈನ್. ಹಾನರ್ 9ಐ 2017 ಸಂಪೂರ್ಣ ಮೆಟಲ್ ಯುನಿಬಾಡಿ ಡಿಸೈನ್ ಹೊಂದಿದ್ದು ಡಿಸ್ಪ್ಲೇ ಅನುಪಾತ 18:9 ಆಗಿತ್ತು ಆದರೆ ಹಾನರ್ 9ಐ (2018) ಪ್ರೀಮಿಯಂ ಗ್ಲಾಸ್ ಹಿಂಭಾಗ ಹೊಂದಿದ್ದು ಮೇಲ್ಬಾಗದಲ್ಲಿ ನಾಚ್ ಡಿಸ್ಪ್ಲೇ ಹೊಂದಿದೆ. ಗಾಸಿಪ್ ನ ಪ್ರಕಾರ ಹಾನರ್ ಸಂಸ್ಥೆ ಈ ಬಾರಿ ಬಿಡುಗಡೆಗೊಳಿಸುವ ಪೋನ್ ಅನ್ನು ಹಾನರ್ 9ಐ(2018) ಹೇಳುವ ಬದಲು ಹಾನ್ 9ಎಕ್ಸ್ ಎಂದು ಹೆಸರಿಸಿದೆ ಎನ್ನಲಾಗುತ್ತಿದೆ. ಅದರ ಅರ್ಥ (ಎಕ್ಸ್ = ಐಫೋನ್ ಎಕ್ಸ್ = ನಾಚ್ ) .


 • 5.84 ಇಂಚ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ

  ಹಾನರ್ 9ಐ ಅಥವಾ ಹಾನರ್ 9ಎಕ್ಸ್ 5.84-ಇಂಚಿ ಐಪಿಎಸ್ ಎಲ್ ಸಿಡಿ ಡಿಸ್ಪ್ಲೇ ಜೊತೆಗೆ ನಾಚ್ ನ್ನು ಮೇಲ್ಬಾಗದಲ್ಲಿ ಹೊಂದಿದೆ ಮತ್ತು ಇದರ ಡಿಸ್ಪ್ಲೇ ಅನುಪಾತ 19:9 ಆಗಿದೆ. ಇದನ್ನು 2.5D ಬಾಗಿದ ಟೆಂಪರ್ಡ್ ಗ್ಲಾಸ್ ನಿಂದ ರಕ್ಷಣೆ ನೀಡಲಾಗಿದೆ. ಸ್ಮಾರ್ಟ್ ಫೋನ್ ಹೈಸಿಲಿಕಾನ್ ಕಿರನ್ 659 ಆಕ್ಟಾ-ಕೋರ್- ಚಿಪ್ ಸೆಟ್ ನಿಂದ ಪವರ್ ಆಗಿದ್ದು 4 ಜಿಬಿ LPDDR3 ಮೆಮೊರಿ ಮತ್ತು 64 ಜಿಬಿ ಅಥವಾ 128 ಜಿಬಿ ಸ್ಟೋರೇಜ್ ಹೊಂದಿದೆ. ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ ಇದನ್ನು 256 ಜಿಬಿ ವರೆಗೂ ಹಿಗ್ಗಿಸಿಕೊಳ್ಳಲು ಅವಕಾಶವಿದೆ.


 • ಡ್ಯುಯಲ್ ಕ್ಯಾಮೆರಾ

  ಕ್ಯಾಮರಾಗಳ ವಿಚಾರವನ್ನು ನಿಮಗೆ ತಿಳಿಸುವುದಾದರೆ ಡುಯಲ್ ಆಪ್ಟಿಕ್ ಸೆಟ್ ಅಪ್ ಇದರಲ್ಲಿ ಇದ್ದು 13ಎಂಪಿ ಪ್ರೈಮರಿ ಕ್ಯಾಮರಾ ಮತ್ತು 2ಎಂಪಿ ಆಳದ ಸೆನ್ಸರ್ ನ್ನು ಇದು ಹೊಂದಿದೆ.ಹಾನರ್ 9 ನಲ್ಲಿರುವಂತಹದ್ದೇ ಕ್ಯಾಮರಾವನ್ನು ನೀವು ಇದರಲ್ಲೂ ಕೂಡ ಕಾಣಬಹುದು. ಇನ್ನೊಂದೆಡೆ ಸ್ಮಾರ್ಟ್ ಫೋನ್ ನಲ್ಲಿ 16ಎಂಪಿ ಮುಂಭಾಗದ ಕ್ಯಾಮರಾ ಇದ್ದು ಸೆಲ್ಫೀ ತೆಗೆಯಲು ಅನುಕೂಲಕರವಾಗಿದೆ ಮತ್ತು ಇದು ಫೇಸ್ ಅನ್ ಲಾಕ್ ವೈಶಿಷ್ಟ್ಯತೆಗೂ ಕೂಡ ಸಹಕಾರ ನೀಡುತ್ತದೆ. ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಬೆರಳಚ್ಚು ತಂತ್ರಜ್ಞಾನವೂ ಇದ್ದು ಸ್ಮಾರ್ಟ್ ಫೋನನ್ನು ಅನ್ ಲಾಕ್ ಮಾಡಲು ಇದು ಅನುಕೂಲಕರವಾಗಿದೆ.


 • 3000 mAh ಬ್ಯಾಟರಿ

  ಈ ಮೊಬೈಲ್ ನಲ್ಲಿ 3000 mAh Li-ion ಬ್ಯಾಟರಿ ಸೌಲಭ್ಯವಿದ್ದು ಮೈಕ್ರೋ ಯುಎಸ್ ಬಿ ಪೋರ್ಟ್ ಮುಖಾಂತರ ಚಾರ್ಜಿಂಗ್ ಮತ್ತು ಡಾಟಾ ಸಿನ್ಕ್ರನೈಸೇಷನ್ ಮಾಡಬಹುದು. ಈ ಡಿವೈಸ್ ನಲ್ಲಿ 3.5ಎಂಎಂ ನ ಹೆಡ್ ಫೋನ್ ಜಾಕ್ ಇದೆ. ಸ್ಮಾರ್ಟ್ ಫೋನ್ ರನ್ ಆಗುವುದು ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರವಾಗಿದ್ದು ಕಸ್ಟಮ್ EMUI ಮೊಬೈಲ್ ಮೇಲ್ಬಾಗದಲ್ಲಿ ಇದೆ.


 • 15,000 ರೂ.ಗೆ ಸಿಗುವ ಸಾಧ್ಯತೆ

  ಹಾನರ್ 9ಐ ಅಥವಾ ಹಾನರ್ 9ಎಕ್ಸ್ ಕರೆಯಲಾಗುವ ಈ ಫೋನಿನ ವೈಶಿಷ್ಟ್ಯತೆಗಳನ್ನು ಗಮನಿಸಿದಾಗ 4ಜಿಬಿ ಮೆಮೊರಿ ಮತ್ತು 64 ಜಿಬಿ ವೇರಿಯಂಟ್ ನ ಸ್ಮಾರ್ಟ್ ಫೋನ್ ಅಂದಾಜು 15,000 ರುಪಾಯಿ ಬೆಲೆಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಆದರೆ ನಮಗೆಲ್ಲರಿಗೂ ತಿಳಿದಿರುವಂತೆ ಹಾನರ್ ಸಂಸ್ಥೆ ಬೆಲೆಯ ವಿಚಾರದಲ್ಲಿ ಯಾವಾಗಲೂ ಒಂದು ಕುತೂಹಲವನ್ನು ಕಾಯ್ದಿರಿಸಿ ಇರುತ್ತದೆ. ನೋಡೋಣ ಇನ್ನು ಕೆಲವೇ ದಿನಗಳು ಬಾಕಿ ಇರುವುದು. ಯಾವ ಬೆಲೆಯಲ್ಲಿ ಗ್ರಾಹಕರ ಕೈ ತಲುಪಲಿದೆ ಹಾನರ್ 9ಐ ಎಂಬುದು ತಿಳಿದುಬರುತ್ತದೆ.
ಹಾನರ್ ಸಂಸ್ಥೆಯ ಮತ್ತೊಂದು ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಿದ್ಧವಾಗಿದೆ. ಯಾವಾಗಲೂ ಕೂತೂಹಲಕಾರಿ ಬೆಲೆಯೊಂದಿಗೆ ಬಿಡುಗಡೆಗೊಳ್ಳುವ ಹಾನರ್ ಕಂಪೆನಿಯ ಮೊಬೈಲಿನ ಮತ್ತೊಂದು ಅವತರಿಣಿಕೆ ಹೊರಬಂದು ಗ್ರಾಹಕನ ಕೈ ಸೇರಲು ಕ್ಷಣಗಣನೆ ಆರಂಭವಾಗಿದೆ. ಅದು ಕೂಡ ಬಜೆಟ್ ಸ್ಮಾರ್ಟ್ ಫೋನ್ ಇದಾಗಿದ್ದು, ಮಧ್ಯಮ ವರ್ಗದವರ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ನಿರೀಕ್ಷೆ ಇದೆ. ಹಾಗಾದ್ರೆ ಅದು ಯಾವ ಫೋನ್? ಅದರ ಹೆಸರೇನು ಅಂತ ಕೇಳ್ತಾ ಇದ್ದೀರಾ..?

ಎಸ್,ಅದುವೇ ಹಾನರ್ 9ಐ ಅಥವಾ ಹಾನರ್ 9ಎಕ್ಸ್. 2018 ರ ಇದೇ ತಿಂಗಳ ಅಂದರೆ ಜುಲೈ 24 ಕ್ಕೆ ಈ ಫೋನ್ ಮಾರುಕಟ್ಟೆಯ ದರ್ಶನ ಭಾಗ್ಯ ಪಡೆಯಲಿದೆ. ಇದು ಫಸ್ಟ್ ಜನರೇಷನ್ನಿನ ಹಾನರ್ 9ಐ ನ ಯಶಸ್ಸಿನ ಮುಂದುವರಿದ ವರ್ಷನ್ ಆಗಿದೆ. ಇದು ಕೈಗೆಟುಕುವ ಬೆಲೆಯ ಪ್ರೀಮಿಯಂ ಆಲ್-ಮೆಟಲ್ ಯುನಿಬಾಡಿ ಡಿಸೈನ್ ಇರುವ ಮತ್ತು ಕ್ವಾಡ್-ಕ್ಯಾಮರಾ ಸೆಟ್ ಇರುವ ಫೋನ್ ಆಗಿದೆ.

   
 
ಹೆಲ್ತ್