Back
Home » ಇತ್ತೀಚಿನ
'ಮೊಬೈಲ್ ಬ್ಯಾಟರಿ' ಕುರಿತು ನೀವು ನಂಬಿರುವ ಹಸಿ ಸುಳ್ಳುಗಳಿವು!!
Gizbot | 17th Jul, 2018 09:01 AM
 • ಮಿಥ್ಯ: ಚಾರ್ಜಿಂಗ್ ಮಾಡುವಾಗ ಮೊಬೈಲ್‌ ಬಳಕೆ ಮಾಡಬಾರದು?

  ಅತ್ಯ : ಚಾರ್ಜಿಂಗ್ ಮಾಡುವಾಗ ಮೊಬೈಲ್‌ ಬಳಕೆ ಮಾಡಿದರೆ ಮೊಬೈಲ್ ಬ್ಲಾಸ್ಟ್ ಆಗುವುದಿಲ್ಲ. ಮೊಬೈಲ್ ಬ್ಯಾಟರಿ ಹಾರ್ಡ್‌ವೇರ್‌ ಅಥವಾ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆ ಎದುರಾಗಿದ್ದರೆ ಯಾವ ಸಮಯದಲ್ಲಿಯಾದರೂ ಮೊಬೈಲ್‌ ಬ್ಲಾಸ್ಟ್ ಆಗಬಹುದು.


 • ಮಿಥ್ಯ : ಬ್ಯಾಟರಿ ಪೂರ್ತಿಯಾಗಿ ಖಾಲಿಯಾದ ನಂತರವಷ್ಟೇ ಚಾರ್ಜ್‌ ಮಾಡಬೇಕು.

  ಸತ್ಯ :ಬ್ಯಾಟರಿ 0% ಆದ ಮೇಲೆ ನೀವು ಚಾರ್ಜ್‌ ಮಾಡಿದರೆ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ. ಹಾಗಾಗಿ, ಬ್ಯಾಟರಿ ಖಾಲಿಯಾಗುವ ಮುನ್ನವೇ ಮೊಬೈಲ್ ಚಾರ್ಜ್ ಮಾಡಿದರೆ ಒಳ್ಳೆಯದು.


 • ಮಿಥ್ಯ : ಬ್ಯಾಟರಿಯನ್ನು ಐಸ್‌ನೊಳಗೆ ಇಟ್ಟರೆ ಅದರ ಲೈಫ್ ಹೆಚ್ಚಾಗುತ್ತದೆ.

  ಸತ್ಯ :Li-Ion ಬ್ಯಾಟರಿಗಳು ಚಳಿ ಮತ್ತು ಬಿಸಿಯಿಂದ ಬೇಗನೆ ಹಾಳಾಗುತ್ತದೆ. ಬ್ಯಾಟರಿಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ಹಾಳಾಗುತ್ತದೆ. ಬ್ಯಾಟರಿಗೆ ಬೆಸ್ಟ್‌ ಟೆಂಪ್ರೇಚರ್ ಎಂದರೆ ರೂಮ್‌ ಟೆಂಪ್ರೇಚರ್‌ ಆಗಿದೆ.


 • ಮಿಥ್ಯ : ಮೊಬೈಲ್ ಅನ್ನು ಪದೇ ಪದೇ ಸ್ವಿಚ್‌ ಆಫ್‌ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.

  ಸತ್ಯ : ಮೊಬೈಲ್ ಅನ್ನು ಒಮ್ಮೊಮ್ಮೆ ಸ್ವಿಚ್‌ ಆಫ್‌ ಮಾಡುವುದರಿಂದ ಯಾವುದೇ ಬ್ಯಾಟರಿ ಹಾಳಾಗುವುದಿಲ್ಲ. ಆದರೆ, ಪದೇ ಪದೇ ಸ್ವಿಚ್‌ ಆಫ್‌ ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.


 • ಮಿಥ್ಯ: ಮತ್ತೆ ಮತ್ತೆ ಚಾರ್ಜ್‌ಮಾಡುವುದರಿಂದ ಬ್ಯಾಟರಿ ಹಾಳಾಗುತ್ತದೆ.

  ಮತ್ತೆ ಮತ್ತೆ ಚಾರ್ಜ್‌ಮಾಡುವುದರಿಂದ ಬ್ಯಾಟರಿ ಹಾಳಾಗುವುದಿಲ್ಲ. ಆದರೆ, ಬ್ಯಾಟರಿ ಸಾಕೆಟ್‌ಗಳನ್ನು ಇದು ಹಾಳುಮಾಡಬಹುದು.


 • ಮಿಥ್ಯ : ಥರ್ಡ್‌ ಪಾರ್ಟಿ ಆಪ್‌ ಬ್ಯಾಟರಿ ಲೈಫ್ ಹೆಚ್ಚಿಸಲು ನೆರವಾಗುತ್ತದೆ.

  ಸತ್ಯ :ಯಾವುದೇ ಥರ್ಡ್‌ ಪಾರ್ಟಿ ಆಪ್‌ಗಳಿಂದ ಬ್ಯಾಟರಿ ಲೈಫ್ ಹೆಚ್ಚಾಗಲು ಸಾಧ್ಯವೇ ಇಲ್ಲ. ಬದಲಾಗಿ, ಅವುಗಳು ಸಹ ನಿಮ್ಮ ಮೊಬೈಲ್ ಬ್ಯಾಟರಿಯನ್ನು ತಿನ್ನುತ್ತವೆ.


 • ಮಿಥ್ಯ : ಫೋನ್‌ ಮೊದಲ ಬಾರಿ ಬಳಕೆ ಮಾಡುವ ಮೊದಲು ಫುಲ್‌ ಚಾರ್ಜ್‌ ಮಾಡಿ.

  ಸತ್ಯ : ಇದು ಸುಳ್ಳು. ಎಲ್ಲಾ ಗ್ರಾಹಕರು ತೆಗೆದುಕೊಳ್ಳುವ ಫೋನ್‌ನಲ್ಲಿ ಚಾರ್ಜ್‌ ಮೊದಲೇ ಇರುತ್ತದೆ. ಇದನ್ನು ಸ್ವಿಚ್ ಆಗುವವರೆಗೂ ಬಳಕೆ ಮಾಡಬಾರದು ಎಂದು ಹಾಗೆ ಹೇಳುತ್ತಾರೆ.
ನಮಗೆ ನಮ್ಮ ಮೊಬೈಲ್ ಬ್ಯಾಟರಿ ಬಗ್ಗೆ ಇರುವಷ್ಟು ಗೊಂದಲ ಬೇರೆ ಯಾವ ಗ್ಯಾಜೆಟ್ ಮೇಲೂ ಸಹ ಇಲ್ಲ ಎನ್ನಬಹುದು. ಏಕೆಂದರೆ, ಬ್ಯಾಟರಿ ಸುರಕ್ಷತೆಯ ಬಗ್ಗೆ ನಾವು ಎಷ್ಟೇ ಜಾಗರೂಕರಾಗಿದ್ದರೂ ಸಹ ಅದು ಕಡಿಮೆಯೇ. ಎಷ್ಟೇ ಜಾಗೃತವಾಗಿದ್ದರೂ ನನ್ನ ಸ್ಮಾರ್ಟ್‌ಪೊನ್ ಬ್ಯಾಟರಿ ಹಾಳಾಗುತ್ತದೆ ಎಂಬ ಅನುಭವ ಎಲ್ಲರಿಗೂ ಬರುವುದು ಇದಕ್ಕೆ ಕಾರಣ.

ಸಾವಿರಾರು ರೂ. ಹಣತೆತ್ತು ಖರೀದಿಸಿದ ಸ್ಮಾರ್ಟ್‌ಫೋನ್ ಬ್ಯಾಟರಿ ಬಹುಬೇಗ ಹಾಳಾದರೆ ಎಂಬ ಭಯ ಎಲ್ಲರಿಗೂ ಕಾಡುತ್ತದೆ. ಹಾಗಾಗಿಯೇ, ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿ ಇಡಲು ಹಲವು ಸಲಹೆಗಳನ್ನು ಮೊಬೈಲ್ ಬಳಕೆದಾರರು ಕೇಳಿ ತಿಳಿದುಕೊಳ್ಳುತ್ತಾರೆ. ಆದರೆ, ಅವರು ಹೀಗೆ ತಿಳಿದ ಸಲಹೆಗಳಲ್ಲಿ ಹಲವು ಸುಳ್ಳು ಎಂಬುದೇ ಅವರಿಗೆ ತಿಳಿದಿಲ್ಲ.!

ಹೌದು, ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿಡುವುದು ಹೇಗೆ? ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳು ಇವೆ. ಆದರೆ, ಮೊಬೈಲ್‌ ಫೋನ್‌ ಬ್ಯಾಟರಿ ಬಗ್ಗೆ ವಿಶ್ವದೆಲ್ಲೆಡೆ ಹಲವಾರು ಸುಳ್ಳುಗಳು ಹರಿದಾಡುತ್ತಲೇ ಇವೆ. ಹಾಗಾಗಿ, ಇಂದಿನ ಲೇಖನದಲ್ಲಿ ಬ್ಯಾಟರಿ' ಕುರಿತು ನೀವು ನಂಬಿರುವ ಸುಳ್ಳುಗಳ ಬಗ್ಗೆ ತಿಳಿಯೋಣ.

   
 
ಹೆಲ್ತ್