Back
Home » ಇತ್ತೀಚಿನ
ನೀವು ಶಿಯೋಮಿ ಫೋನ್‌ಗಳನ್ನು ಖರೀದಿಸಲೇಬಾರದು ಎನ್ನಲು 15 ಶಾಕಿಂಗ್ ಕಾರಣಗಳು!!
Gizbot | 17th Jul, 2018 01:46 PM
  • ವಾಟರ್‌ಪ್ರೂಫ್ ಅಲ್ಲ!

    ನಿಮಗೆ ಗೊತ್ತಾ?. ಶಿಯೋಮಿ ಉತ್ಪಾದಿಸುವ ಯಾವುದೇ ಒಂದು ಸ್ಮಾರ್ಟ್‌ಫೋನ್ ಕೂಡ ವಾಟರ್‌ಪ್ರೂಫ್ ತಂತ್ರಜ್ಞಾನವನ್ನ ಹೊಂದಿಲ್ಲ. ಶಿಯೋಮಿ ಸ್ಮಾರ್ಟ್‌ಪೋನ್‌ಗಳು ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುವ ಫೀಚರ್ಸ್ ಹೊಂದಿದ್ದರೂ, ಸುರಕ್ಷತೆ ದೃಷ್ಟಿಯಲ್ಲಿ ವಾಟರ್‌ಪ್ರೂಫ್ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸಮ ಎಂದು ಹೇಳಲು ಸಾಧ್ಯವೇ ಇಲ್ಲ.


  • ಡಿಸ್‌ಪ್ಲೇ ಗುಣಮಟ್ಟ?

    ಸ್ಯಾಮ್‌ಸಂಗ್ ಮತ್ತು ಶಿಯೋಮಿ ಕಂಪೆನಿ ಫೋನ್‌ಗಳನ್ನು ಬಳಸಿ ನೋಡಿ. ಶಿಯೋಮಿ ಸ್ಮಾರ್ಟ್‌ಪೋನ್‌ಗಳ ಡಿಸ್‌ಪ್ಲೇ ಗುಣಮಟ್ಟ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್‌ಗಳಿಗೆ ಶೇ. 30 ರಷ್ಟು ಸಮನಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್‌ ಡಿಸ್‌ಪ್ಲೇ ಬಳಕೆ ಅನುಭವ ಮತ್ತು ಗಟ್ಟಿತನವನ್ನು ನಾವು ಶಿಯೋಮಿ ಫೋನ್‌ಗಳಲ್ಲಿ ನೋಡಲು ಸಾಧ್ಯವಿಲ್ಲ.


  • ಶಿಯೋಮಿ ರಿಪೇರಿ?

    ಆನ್‌ಲೈನಿನಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತಿರುವ ಶಿಯೋಮಿ ಸ್ಮಾರ್ಟ್‌ಪೋನ್‌ಗಳು ಸ್ವಲ್ಪ ಹಾಳಾದರೆ ಅದನ್ನು ರಿಪೇರಿ ಮಾಡಿಸುವುದು ಬಹಳ ಕಷ್ಟ ಎಂಬುದು ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರ ಆಂಬೋಣ. ಶಿಯೋಮಿ ಸರ್ವಿಸ್ ಸೆಂಟರ್‌ಗಳನ್ನು ಮಹಾನಗರಗಳಲ್ಲಿ ಇದ್ದರೂ ಅವುಗಳ ಕಾರ್ಯನಿರ್ವಹಣೆ ಬಗ್ಗೆ ಅಷ್ಟೇನು ಹೇಳಿಕೊಳ್ಳುವಂತಿಲ್ಲ.


  • ಮೊಬೈಲ್ ಬ್ಲಾಸ್ಟ್ ಆರೋಪ!

    ಶಿಯೋಮಿ ಸ್ಮಾರ್ಟ್‌ಪೋನ್‌ಗಳು ಹೆಚ್ಚು ಸ್ಪೋಟವಾಗುವ ಸುದ್ದಿಗಳನ್ನು ನೀವು ಕೇಳಿಯೇ ಇರುತ್ತಿರಾ. ಆದರೆ, ಶಿಯೋಮಿ ಇದಕ್ಕೆ ಬಳಕೆದಾರರ ತಪ್ಪುಗಲೇ ಕಾರಣ ಎಂದು ಹೇಳುತ್ತದೆ. ಹಾಗಾಗಿ, ಈ ಬಗ್ಗೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲದಿರುವುದರಿಂದ, ಶಿಯೋಮಿ ಸ್ಮಾರ್ಟ್‌ಪೋನ್‌ಗಳ ಸ್ಪೋಟದ ವಿಷಯದಲ್ಲಿ ನಾವು ಏನನ್ನೂ ಹೇಳುವಂತಿಲ್ಲ.


  • ಮಾರುಕಟ್ಟೆ ತಂತ್ರ!

    ಶಿಯೋಮಿ ಕಂಪೆನಿ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡುವ ಸಲುವಾಗಿ, 'ನಾವು ಜಾಹಿರಾತುಗಳಿಗೆ ಹಣ ಖರ್ಚು ಮಾಡುತ್ತಿಲ್ಲ. ಹಾಗಾಗಿ, ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದ್ದೆವೆ' ಎಂಬ ಭಾವನೆಯನ್ನು ಮೂಡಿಸಿದೆ. ಆದರೆ, ಶಿಯೋಮಿ ಗುಣಮಟ್ಟದ ಸ್ಮಾರ್ಟ್‌ಪೋನ್‌ಗಳ ಬೆಲೆ ಅದರ ಗುಣಮಟ್ಟಕ್ಕೆ ಮಾತ್ರ ಸರಿಹೊಂದುತ್ತದೆ ಎಂಬುದು ನನ್ನ ಅಭಿಪ್ರಾಯ.!


  • ಶಿಯೋಮಿ ನಿಮ್ಮ ಮೂಲಭೂತವಾದ ವಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತೆ.

    ಗೌಪ್ಯತೆ ನೀತಿಯ ಅನುಸಾರ, ಶಿಯೋಮಿ ನಿಮ್ಮ ಮೂಲಭೂತ ವಯಕ್ತಿಯ ಮಾಹಿತಿಗಳಾದ ಹೆಸರು, ಹುಟ್ಟಿದ ದಿನಾಂಕ, ಲಿಂಗ ಇಂತಹ ಮಾಹಿತಿಗಳನ್ನು ಕಲೆ ಹಾಕುತ್ತೆ. ಶಿಯೋಮಿ ಹೇಳುವಂತೆ ಇದರಲ್ಲಿ ವಯಕ್ತಿಕ ಮಾಹಿತಿಗಳಿರಬಹುದು ಆದರೆ ಅದಕ್ಕೆ ಯಾವುದೇ ಮಿತಿ ಇಲ್ಲ. ಅವರ ಸರ್ವರ್ ಗೆ ನೀವು ನೀಡುವ ಎಲ್ಲಾ ಮಾಹಿತಿಗಳು ಅಪ್ ಲೋಡ್ ಆಗುತ್ತಂತೆ.


  • ನಿಮ್ಮ ಸಂಪರ್ಕ ಸಂಖ್ಯೆಯ ಮಾಹಿತಿಯನ್ನು ಕಲೆ ಹಾಕಲಾಗುತ್ತೆ.

    ಶಿಯೋಮಿ ಸರ್ವೀಸ್ ಮುಖಾಂತರ ನೀವು ಯಾವುದೇ ಮೊಬೈಲ್ ನಂಬರ್ ಬಳಸಿದರೂ ಅದು ಅದರ ನಂಬರ್ ಮತ್ತು ಇ-ಮೇಲ್ ಅಡ್ರೆಸ್ ಮತ್ತು ಎಲ್ಲಾ ರೀತಿಯ ಸಂಪರ್ಕಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕುತ್ತೆ.


  • ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಮತ್ತು ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಸೇವ್ ಆಗಿರಲಿದೆ

    ಗೌಪ್ಯತೆ ನೀತಿಯ ಸ್ಪಷ್ಟವಾಗಿ ಹೇಳುತ್ತಿರುವುದೇನೆಂದರೆ ಶಿಯೋಮಿಯು ನಿಮ್ಮ ಹಣಕಾಸು ವ್ಯವಹಾರದ ಮಾಹಿಗಳನ್ನುಒಳಗೊಂಡಿರುತ್ತೆ. Mi.com ನಲ್ಲಿ ಮತ್ತು ಶಿಯೋಮಿ ಫ್ಲಾಟ್ ಫಾರ್ಮ್ ನಲ್ಲಿ ಖರೀದಿಸಿದ ವಸ್ತುಗಳ ಮಾಹಿತಿಯನ್ನು ಹೊಂದಿರುತ್ತದೆ. ಅಂದರೆ ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಅಕೌಂಟ್ ಹೋಲ್ಡರ್ ಹೆಸರು, ಕ್ರೆಡಿಟ್ ಕಾರ್ಡ್ ಮಾಹಿತಿ ಇತ್ಯಾದಿಗಳು ಅದರಲ್ಲಿ ಇರುತ್ತೆ.


  • ನಿಮ್ಮ ಕೆಲಸದ ಮಾಹಿತಿ ಮತ್ತು ನೀವೆಲ್ಲ ಕೆಲಸ ಮಾಡುತ್ತಿದ್ದೀರಿ ಎಂಬ ವಿಚಾರ

    ಶಿಯೋಮಿ ನಿಮ್ಮ ಸಾಮಾಜಿಕ ಮಾಹಿತಿಗಳನ್ನು ಕಲೆ ಹಾಕಿರುತ್ತೆ. ಸಾಮಾಜಿಕ ಆಕ್ಟಿವಿಟಿಗಳಾದ ನಿಮ್ಮ ಸದ್ಯದ ಎಂಪ್ಲಾಯ್ ಯಾರು, ನಿಮ್ಮ ಜಾಬ್ ಟೈಟಲ್, ವಿದ್ಯಾಭ್ಯಾಸದ ಹಿನ್ನೆಲೆ, ಪ್ರೊಫೆಷನಲ್ ತರಬೇತಿ ವಿಚಾರಗಳು ಇತ್ಯಾದಿ.


  • ನಿಮ್ಮ ಮನೆ ವಿಳಾಸ ಸ್ಟೋರ್ ಆಗಿರುತ್ತೆ

    ಶಿಯೋಮಿ ನಿಮ್ಮ ಮನೆಯ ವಿಳಾಸವನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೆ. Mi.com ನಲ್ಲಿ ನೀವು ಪರ್ಸೇಚ್ ಮಾಡಿದ ವಸ್ತುಗಳು ಎಲ್ಲಿಗೆ ಡೆಲಿವರಿಯಾಗಬೇಕು ಎಂಬುದು ಅವರಿಗೆ ತಿಳಿಯುತ್ತೆ.


  • ಸರ್ಕಾರಿ ಐಡಿ ಕಾರ್ಡ್ಗಳು ಸೇವ್ ಆಗುತ್ತದೆ

    ಕುತೂಹಲಕಾರಿಯಾಗಿರುವ ವಿಚಾರ ಏನೆಂದರೆ, ಶಿಯೋಮಿಯ ಗೌಪ್ಯತೆ ನೀತಿಯ ಅನುಸಾರ, ನಿಮ್ಮ ಸರ್ಕಾರಿ ಮಾಹಿತಿಗಳು ಅರ್ಥಾತ್ ಐಡಿಗಳು ಉದಾಹರಣೆಗೆ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ ಮತ್ತು ಇತ್ಯಾದಿಗಳನ್ನು ನೀವು ಒದಗಿಸಿದಾಗ ಅವುಗಳನ್ನೂ ಕೂಡ ಸೇವ್ ಮಾಡಿ ಇಟ್ಟುಕೊಂಡಿರುತ್ತದೆಯಂತೆ.


  • ಫೋಟೋಗಳು ಮತ್ತು ಎಂಐ ಕ್ಲೌಡ್ ಗಳನ್ನು ಕಲೆ ಹಾಕುತ್ತೆ

    ಶಿಯೋಮಿ ಬಳಕೆದಾರರಿಂದ ಎಂಐ ಕ್ಲೌಡ್ ಅಥವಾ ಇತರೆ ಆಪ್ ಗಳಾದ ಫೋಟೋಸ್, ಕಾಂಟ್ಯಾಕ್ಟ್ ಲಿಸ್ಟ್ ಮತ್ತು ಇತರೆ ಮಾಹಿತಿ ಸಂಬಂಧಿತ ಆಕ್ಟಿವಿಟಿಸ್ ಗಳನ್ನು ನೀವು ಶಿಯೋಮಿ ಪ್ಲಾಟ್ ಫಾರ್ಮ್ ನಲ್ಲಿ ನಡೆಸಿದ್ದರೆ ಅವುಗಳನ್ನು ಪಡೆಯುತ್ತೆ.


  • ಡಿವೈಸ್ ಮತ್ತು ಸಿಮ್ ಗೆ ಸಂಬಂಧಿಸಿದ ಮಾಹಿತಿಗಳನ್ನು ಸ್ಟೋರ್ ಮಾಡುತ್ತೆ

    ಶಿಯೋಮಿ ಮಾಹಿತಿ ನೀಡಿರುವಂತೆ ಬಳಕೆದಾರನ ಡಿವೈಸ್ ಗೆ ಸಂಬಂಧಿಸಿದ ಮಾಹಿತಿ ಮತ್ತು ಸಿಮ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುತ್ತೆ. IMEI ನಂಬರ್ , IMSI ನಂಬರ್, MAC ಅಡ್ರೆಸ್, ಸೀರಿಯಲ್ ನಂಬರ್, MIUI ವರ್ಷನ್ ಇತ್ಯಾದಿಗಳನ್ನು ಸ್ಟೋರ್ ಮಾಡುತ್ತೆ.


  • ನಿಮ್ಮ ಜಾಗದ ಮಾಹಿತಿಯನ್ನು ಆಕ್ಸಿಸ್ ಮಾಡಿರುತ್ತೆ.

    ಕೆಲವು ಸರ್ವೀಸ್ ಗಳನ್ನು ನೀಡುವ ಉದ್ದೇಶದಿಂದಾಗಿ ಶಿಯೋಮಿ ನಿಮ್ಮ ಲೋಕೇಷನ್ ಮಾಹಿತಿಯನ್ನು ಇಟ್ಟುಕೊಂಡಿರುತ್ತೆ. ಕಂಟ್ರೀ ಕೋಡ್, ಸಿಟಿ ಕೋಡ್, ಮೊಬೈಲ್ ನೆಟ್ ವರ್ಕ್ ಕೋಡ್, ಮೊಬೈಲ್ ಕಂಟ್ರಿ ಕೋಡ್, ಸೆಲ್ ನ ಐಡೆಂಟಿಟಿ, ಸಮಯದ ಮಾಹಿತಿ ಇತ್ಯಾದಿಗಳನ್ನು ಪಡೆಯುತ್ತೆ. ಭಾಷೆಯ ಸೆಟ್ಟಿಂಗ್ ನ ಮಾಹಿತಿಯನ್ನು ಪಡೆಯಲಾಗಿರುತ್ತೆ.


  • ನೀವು ನಿಮ್ಮ ಮಾಹಿತಿ ಶೇರ್ ಆಗುವುದನ್ನು ಶಿಯೋಮಿಯಲ್ಲಿ ತಡೆಯಬಹುದು ಆದರೆ ಅಲ್ಲಿ catche ಇದ್ದೇ ಇರುತ್ತೆ.

    ಈ ಡಾಟಾ ನೀತಿಯನ್ನು ಪಾರದರ್ಶಕವಾಗಿಡಲು ಶಿಯೋಮಿ ತನ್ನ ಬಳಕೆದಾರರಿಗೆ ಈ ರೀತಿ ಮಾಹಿತಿ ಕಲೆ ಹಾಕುವುದನ್ನು ನಿಯಂತ್ರಿಸುವ ಅಥವಾ ತಡೆಯುವ ಆಯ್ಕೆಯನ್ನೂ ನೀಡಿದೆ. ಆದರೆ ಹೀಗೆ ಮಾಡುವುದರ ಪರಿಣಾಮ ವಾಗಿ ಇದು ಶಿಯೋಮಿಯ ಪ್ರಾಡೆಕ್ಟ್ ಮತ್ತು ಸರ್ವೀಸ್ ಗಳನ್ನು ಬಳಕೆದಾರ ಎಂಜಾಯ್ ಮಾಡಲು ಸಾಧ್ಯವಿಲ್ಲ.


  • ಮಧ್ಯಮ ವರ್ಗದ ಸ್ಮಾರ್ಟ್‌ಪೋನ್ ಬ್ರ್ಯಾಂಡ್!

    ಶಿಯೋಮಿ ಇತ್ತ ಕಳಪೆಯೂ ಅಲ್ಲದ, ಅತ್ತ ಅತ್ಯುತ್ತಮವಾಗಿಯೂ ಇಲ್ಲದಂತಹ ಒಂದು ಸ್ಮಾರ್ಟ್‌ಫೋನ್ ಆಗಿದೆ. ಹಾಗಾಗಿ, ಇದನ್ನು ಮಧ್ಯಮ ವರ್ಗ ಗುಣಮಟ್ಟದಲ್ಲಿನ ಒಂದು ಸ್ಮಾರ್ಟ್‌ಪೋನ್ ಎಂದು ಕರೆಯಬಹುದು. ಭಾರತೀಯರು ಅಪೇಕ್ಷೆಸುವ ರೀತಿಯಲ್ಲಿ ಫೀಚರ್ಸ್ ಮತ್ತು ಬೆಲೆಯಲ್ಲಿ ಈ ಸ್ಮಾರ್ಟ್‌ಪೋನ್ ಭಾರತಿಯರ ಗಮನವನ್ನು ಸೆಳೆಯುತ್ತದೆ ಅಷ್ಟೆ.




ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿರುವ ಶಿಯೋಮಿ ಮೊಬೈಲ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಶಿಯೋಮಿ ಕಂಪೆನಿ ಕಳೆದ ಕೆಲವು ಸಮಯದಿಂದ ತನ್ನದೇ ಆದ ಛಾಪನ್ನು ಮೂಡಿಸಿ ಗಮನ ಸೆಳೆಯುತ್ತಿದೆ.

ಪ್ರಸ್ತುತ ಸ್ಯಾಮ್‌ಸಂಗ್, ಆಪಲ್ ಕಂಪೆನಿಗಳಿಗೂ ಸೆಡ್ಡು ಹೊಡೆಯುವಷ್ಟು ಬೆಳೆದು ನಿಂತಿರುವ 'ಶಿಯೋಮಿ' ಈಗ ಭಾರತೀಯರ ಮನಗೆಲ್ಲುವಲ್ಲಿಯೂ ಸಫಲವಾಗಿದೆ. ಆದರೆ, ಭಾರತಿಯರಿಗೆ ಮಾತ್ರ ಶಿಯೋಮಿಯ ಬಗ್ಗೆ ಈ ವರೆಗೂ ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಿಲ್ಲ. ಏಕೆಂದರೆ, ಶಿಯೋಮಿಯ ಅಬ್ಬರದ ಭರಾಟೆಯಲ್ಲಿ ಶಿಯೋಮಿ ತನ್ನ ಕೊರತೆಗಳನ್ನು ಮರೆ ಮಾಚಿಕೊಂಡಿದೆ.!

ಹಾಗಾಗಿ, ನಾವು ನಿಮಗಿಂದು ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಕುಂದುಕೊರತೆಗಳ ಬಗ್ಗೆ ಮಾಹಿತಿಯನ್ನು ನಿಡುತ್ತಿದ್ದೇವೆ. ಶಿಯೋಮಿ ಫೋನ್‌ಗಳ ಕುಂದುಕೊರತೆಗಳು ಸೇರಿದಂತೆ, ಶಿಯೋಮಿ ಹೊಂದಿರುವ ಭದ್ರತಾ ನಿಯಮ ಅಥವಾ ಗೌಪ್ಯತಾ ನೀತಿಗಳು ಶಿಯೋಮಿ ಫೋನ್ ಖರೀದಿಸುವ ಮುನ್ನ ತಿಳಿದುಕೊಳ್ಳಲೇಬೇಕಾದ 15 ವಿಷಯಗಳು ಇವಾಗಿವೆ.

   
 
ಹೆಲ್ತ್