Back
Home » ಇತ್ತೀಚಿನ
ನೋಕಿಯಾ 5.1 ಪ್ಲಸ್: ಬಜೆಟ್ ಬೆಲೆಯಲ್ಲಿ ದೊರೆಯುವ ಆಂಡ್ರಾಯ್ಡ್ 'ಐಫೋನ್ ‍‍X'
Gizbot | 17th Jul, 2018 03:02 PM
 • ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್:

  ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಹೊಸ ಮಾದರಿಯ ಸಾಧ್ಯತೆಯನ್ನು ತೋರಿಸಿಕೊಡಲಿದೆ. 5.6 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, ಐಪೋನ್ X ಮಾದರಿಯ ಡಿಸ್ ಪ್ಲೇ ನೋಚ್ ಅನ್ನು 19:9 ಅನುಪಾತದಿಂದ ಕೂಡಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಬಹುದಾಗಿದೆ. ಫುಲ್ ಸ್ಕ್ರಿನ್ ಡಿಸ್ ಪ್ಲೇ ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೆಚ್ಚಿನ ಸಹಾಯ ಮಾಡಲಿದೆ.


 • ಮೂರು ಆವೃತ್ತಿಯಲ್ಲಿ ಲಭ್ಯ:

  ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಒಟ್ಟು ಮೂರು RAM ಆವೃತ್ತಿಯಲ್ಲಿ ಲಭ್ಯವಿದೆ. 3GB, 4GB ಮತ್ತು 6GB RAM ಆವೃತ್ತಿಯೊಂದಿಗೆ ದೊರೆಯುತ್ತಿದೆ. ಇದಲ್ಲದೇ 32GB ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದೆ. ಇದಲ್ಲದೇ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.


 • ಮೀಡಿಯಾಟೆಕ್ ಪ್ರೋಸೆಸರ್:

  ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ ಪ್ರೋಸೆಸರ್ ಬದಲಾಗಿ ಮೀಡಿಯಾ ಟೆಕ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದು ಆಕ್ಟಾ ಕೋರ್ ಪ್ರೋಸೆಸರ್ ಆಗಿದ್ದು, ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.


 • ಕ್ಯಾಮೆರಾ:

  ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಉತ್ತಮ ಕ್ಯಾಮೆರಾವನ್ನು ಕಾಣಬಹುದಾಗಿದೆ. 13 MP ಕ್ಯಾಮೆರಾವನ್ನು ಅಳಡಿಸಲಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ.


 • ಬ್ಯಾಟರಿ:

  ನೋಕಿಯಾ 5.1 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಉತ್ತಮವಾದ ಬ್ಯಾಟರಿಯನ್ನು ನೀಡಲಾಗಿದೆ. ಇದಲ್ಲಾಗಿ 3000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದು ಹೆಚ್ಚಿನ ಪ್ರಮಾಣದ ಬ್ಯಾಕಪ್ ಅನ್ನು ಅಳವಡಿಸಲಾಗಿದೆ. ಇದು ಒಂದು ದಿನ ಪೂರ್ಣ ಚಾರ್ಜ್ ನೀಡುವ ಸಾಧ್ಯತೆ ಬಗ್ಗೆ ನೋಕಿಯಾ ವರದಿ ಮಾಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ನೋಕಿಯಾ ರಾರಾಜಿಸುವ ಕಾಲ ಮತ್ತೆ ಬಂದಿದೆ ಎನ್ನಲಾಗಿದೆ. ಈಗಾಗಲೇ ನೋಕಿಯಾ X6 ಅಥಾವ ನೋಕಿಯಾ 6.1 ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಮತ್ತೊಂದು ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಮುಂದಾಗಿದ್ದು, ಇದು ನೋಕಿಯಾ X5 ಇಲ್ಲವೇ ನೋಕಿಯಾ 5.1 ಪ್ಲಸ್ ಎಂದು ನಾಮಕರಣ ಮಾಡಲಾಗಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಇದೇ ಜುಲೈ 11 ರಂದು ಈ ನೋಕಿಯಾ X5 ಅಥಾವ ನೋಕಿಯಾ 5.1 ಪ್ಲಸ್ ಸ್ಮಾರ್ಟ್ ಫೋನ್ ಚೀನಾದಲ್ಲಿ ಲಾಂಚ್ ಆಗಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಲಾಂಚ್ ಕಾರ್ಯಕ್ರಮವೂ ಮುಂದೂಡಲಾಗಿದ್ದು, ಶೀಘ್ರವೇ ಲಾಂಚ್ ಆಗಲಿದೆ ಎನ್ನಲಾಗಿದೆ. ಒಟ್ಟಿಗೆ ಜಾಗತಿಕವಾಗಿ ಸ್ಮಾರ್ಟ್ ಫೋನ್ ಅನ್ನು ಒಂದೇ ಬಾರಿಗೆ ಲಾಂಚ್ ಮಾಡುವ ಪ್ಲಾನ್ ಅನ್ನು ಮಾಡುತ್ತಿದೆ ಎನ್ನಲಾಗಿದೆ.

   
 
ಹೆಲ್ತ್