Back
Home » ಇತ್ತೀಚಿನ
ಬಿಡುಗಡೆಗೂ ಮುನ್ನವೇ 'ನೋಟ್ 9' ಜೊತೆ ಕಾಣಿಸಿಕೊಂಡರು ಸ್ಯಾಮ್‌ಸಂಗ್ ಸಿಇಒ!!
Gizbot | 18th Jul, 2018 09:01 AM
 • ಎಲ್ಲೆಲ್ಲಿ ಲಾಂಚ್ ಆಗಲಿದೆ?

  ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಪೋನ್‌ ಮೊದಲಿಗೆ ದಕ್ಷಿಣ ಕೊರಿಯಾ ಅಥವಾ ಚೀನಾದಲ್ಲಿ ಮೊದಲು ಬಿಡುಗಡೆಗೊಳ್ಳುತ್ತಿದೆ. ನಂತರ ವಿಶ್ವದ ಎಲ್ಲಾ ಕಡೆ ಸಿಗುವ ಸಾಧ್ಯತೆಯಿದೆ.ಅಂದಾಜಿನ ಪ್ರಕಾರ, ಭಾರತೀಯ ಮಾರುಕಟ್ಟೆಗೂ ಈ ಸ್ಮಾರ್ಟ್‌ಫೋನ್ ಶೀಘ್ರವೇ ಪರಿಚಯವಾಗಲಿದೆ.


 • 6.4 ಇಂಚು QHD+ ಡಿಸ್‌ಪ್ಲೇ

  ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ದೊಡ್ಡ್ ಡಿಸ್‌ಪ್ಲೇ ಹೊಂದಿರಲಿದೆ. 6.4 ಇಂಚು QHD+ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು, 18.5:9 ಆಸ್ಪೆಕ್ಟ್‌ ರೇಷಿಯೋ ಹೊಂದಿರುವ ಸಾಧ್ಯತೆ ಇದೆ. ಅದಲ್ಲದೇ ಗ್ಯಾಲೆಕ್ಸಿ ನೋಟ್‌ 8ನಂತೆ ಇನ್ಫಿನಿಟಿ ಡಿಸ್‌ಪ್ಲೇ ಹೊಂದಿರಲಿದೆ ಎಂಬುದು ಸ್ಮಾರ್ಟ್‌ಪೋನ್ ತಜ್ಞರ ಅಭಿಪ್ರಾಯವಾಗಿದೆ.


 • ಪ್ರೊಸೆಸರ್ ಯಾವುದು?

  ಹೊಸ ಗ್ಯಾಲೆಕ್ಸಿ ನೋಟ್‌ 9 ಸ್ಮಾರ್ಟ್‌ಪೋನ್‌ನಲ್ಲಿ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845 ಪ್ರೊಸೆಸರ್ ಅಥವಾ ತನ್ನದೇ ಆದ ಎಕ್ಸಿನೋಸ್ 9810 SoC ಹೊಂದಿರುವ ಸಾಧ್ಯತೆ ಇದೆ. ಎರಡು ಪ್ರೊಸೆಸರ್‌ಗಳು ಉನ್ನತ ಕಾರ್ಯಮಟ್ಟ ಹೊಂದಿರುವುದರಿಂದ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಉತ್ತಮವಾಗಿರುತ್ತದೆ.


 • 512GB ಮೆಮೊರಿ

  ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಪೋನ್‌ 6GB ಮತ್ತು 8GB RAM ಹೊಂದಿರಲಿದ್ದು, 512GB ಆಂತರಿಕ ಸ್ಟೋರೆಜ್ ಹೊಂದಿರುವುದರ ಬಗ್ಗೆ ಸ್ಮಾರ್ಟ್‌ಪೋನ್ ತಜ್ಞರು ಖಾತರಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 256 GB ಆವೃತ್ತಿಯನ್ನು ಲಾಂಚ್ ಮಾಡಿತ್ತು. ಈಗ ಹೊಸದಾಗಿ ದೊಡ್ಡ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ.


 • ಕ್ಯಾಮೆರಾ ಹೇಗಿದೆ?

  ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಪೋನ್‌ ಹಿಂಭಾಗದಲ್ಲಿ ಉನ್ನತ ಫೀಚರ್ಸ್ ಹೊಂದಿದ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿರಲಿದ್ದು, 8 MP ಫ್ರಂಟ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಸಾಧ್ಯತೆಯಿದೆ.


 • ಇತರೆ ಫೀಚರ್ಸ್?

  ಗ್ಯಾಲೆಕ್ಸಿ ನೋಟ್‌ 9 ಸ್ಮಾರ್ಟ್‌ಪೋನ್‌ 4,000 mAh ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ. ಫೇಸ್‌ ಅನ್‌ಲಾಕ್ ಮತ್ತು ಆಂಡ್ರಾಯ್ಡ್ 8.1 ಓರಿಯೋ ಒಎಸ್ ಸ್ಮಾರ್ಟ್‌ಫೋನಿನಲ್ಲಿ ಇರಬಹುದು ಎಂಬುದನ್ನು ನಿರೀಕ್ಷಿಸಬಹುದಾಗಿದೆ.


 • ಎಫ್‌ಸಿಸಿ ಪ್ರಮಾಣೀಕೃತ ಪತ್ರ

  ಇತ್ತೀಚೆಗೆ ತಾನೇ ಯುಎಸ್‌ನ ಎಫ್‌ಸಿಸಿ ಪ್ರಮಾಣೀಕೃತ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಥಾನ ಪಡೆದಿದೆ. ಇದರ ಜೊತೆ ಗೆಲಾಕ್ಷಿ ಟ್ಯಾಬ್ ಎಸ್‌4 ಸಹ ಎಫ್‌ಸಿಸಿಯಿಂದ ಪ್ರಮಾಣಿಕಕರಿಸಿದ್ದು, ಆಗಸ್ಟ್‌ ತಿಂಗಳ 9ನೇ ತಾರೀಖಿನಂದೇ ಈ ಸ್ಮಾರ್ಟ್‌ಫೋನ್ ಸಹ ಬಿಡುಗಡೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸ್ಯಾಮ್ ಸಂಗ್ ಕಂಪೆನಿಯ ನಿರೀಕ್ಷಿತ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಇದೇ ಆಗಸ್ಟ್‌ ತಿಂಗಳ 9ನೇ ತಾರೀಖಿನಂದು ಬಿಡುಗಡೆಯಾಗುವುದು ಪಕ್ಕಾ ಆಗಿದೆ.ಆದರೆ, ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಸ್ಯಾಮ್‌ಸಂಗ್ ಕಂಪೆನಿ ಸಿಇಒ ಗ್ಯಾಲೆಕ್ಸಿ ನೋಟ್ 9 ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡುವ ಸಾಧ್ಯತೆ ಇದ್ದು, ಇದರೊಂದಿಗೆ 6.4 ಇಂಚಿನ QHD+ ಗುಣಮಟ್ಟದ ಡಿಸ್ ಪ್ಲೇಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ನೂತನ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9, 512GB ಆವೃತ್ತಿಯ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಕಂಪೆನಿ ಈಗಾಗಲೇ ಸ್ಪಷ್ಟಪಡಿಸಿದೆ.

ಆಪಲ್ ಮತ್ತು ಒನ್‌ಪ್ಲಸ್‌ನಂತಹ ಫ್ಲಾಗ್‌ಶಿಫ್ ಸ್ಮಾರ್ಟ್‌ಪೋನ್‌ ತಯಾರಕರೊಂದಿಗೆ ಸ್ಪರ್ಧೆಯಲ್ಲಿರುವ ಸ್ಯಾಮ್‌ಸಂಗ್ ಇದೀಗ ಮತ್ತೊಂದು ಹೈ ಎಂಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದ್ದು, ಹಾಗಾದರೆ, ಅನೇಕ ವಿಶೇಷ ಫೀಚರ್ಸ್‌ಗಳನ್ನು ನಿರೀಕ್ಷೆ ಮಾಡಲಾಗಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಫೀಚರ್ಸ್ ಏನಿರಬಹುದು ಎಂಬುದನ್ನು ಮುಂದೆ ತಿಳಿಯಿರಿ.

   
 
ಹೆಲ್ತ್