Back
Home » ಆರೋಗ್ಯ
ಪ್ರತಿಯೊಬ್ಬ ಪುರುಷನು ಜನನೇಂದ್ರೀಯ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಬೇಕೆ?
Boldsky | 19th Jul, 2018 11:13 AM

ಕ್ಯಾನ್ಸರ್ ಅನ್ನುವುದು ಎಷ್ಟು ಮಾರಕ ಕಾಯಿಲೆಯೆಂದರೆ ಅದು ಒಬ್ಬ ವ್ಯಕ್ತಿಯನ್ನು ಮಾತ್ರ ಕಾಡುವುದಲ್ಲದೆ, ಸಂಪೂರ್ಣ ಕುಟುಂಬದ ಮೇಲೆ ಅದರ ಪರಿಣಾಮ ಬೀರುವುದು. ವ್ಯಕ್ತಿಯೊಬ್ಬ ಎಷ್ಟೇ ಪ್ರಬಲ ಆತ್ಮಸ್ಥೈರ್ಯ ಹೊಂದಿದ್ದರೂ ಕ್ಯಾನ್ಸರ್ ಎನ್ನುವ ಪದ ಕೇಳಿ ಆತ ನಲುಗಿ ಹೋಗುವುದು ಖಚಿತ. ಆತನ ಜೀವನದ ಸಂತೋಷಗಳೆಲ್ಲವೂ ಮಾಯವಾಗಿ, ಪ್ರತಿಯೊಂದು ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು.

ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡದೇ ಇದ್ದರೆ ಆಗ ಅದು ಮಾರಣಾಂತಿಕವಾಗುವುದು. ಕ್ಯಾನ್ಸರ್ ಭಾದಿತ ವ್ಯಕ್ತಿಯ ಕುಟುಂಬ ಹಾಗೂ ಆತನ ಅವಲಂಬಿತರ ಮೇಲೆ ಇದು ಪರಿಣಾಮ ಬೀರುವುದು. ಕ್ಯಾನ್ಸರ್ ತನ್ನ ಪರಿಣಾಮ ತೋರಿಸಲು ಆರಂಭಿಸಿದಾಗ ವ್ಯಕ್ತಿಯು ತುಂಬಾ ದುರ್ಬಲನಾಗುವನು ಮತ್ತು ಆತನನ್ನು ನೋಡಿಕೊಳ್ಳುವವರಿಗೂ ಇದು ತುಂಬಾ ನೋವಿನ ವಿಚಾರ. ಕ್ಯಾನ್ಸರ್ ಎನ್ನುವ ಮಹಾಮಾರಿಯು ಸಂಪೂರ್ಣ ಕುಟುಂಬವನ್ನೇ ಹಿಂಡಿ ಹಿಪ್ಪೆ ಮಾಡಿಬಿಡುವುದು.

ಕ್ಯಾನ್ಸರ್ ವಯಸ್ಸು, ಲಿಂಗ ಭೇದವಿಲ್ಲದೆ ಯಾರಿಗೂ ಬರಬಹುದು. ಇದನ್ನು ತಡೆಯಲು ಸಾಧ್ಯವಿಲ್ಲ. ಆರೋಗ್ಯಕರ ಜೀವನಶೈಲಿಯಿಂದ ಇದನ್ನು ಬರದಂತೆ ಸ್ವಲ್ಪ ಮಟ್ಟಿಗೆ ತಡೆಯಲು ಸಾಧ್ಯ. ಕ್ಯಾನ್ಸರ್ ನಲ್ಲಿ ಸ್ತನದ ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್), ಜನನೇಂದ್ರೀಯ ಗ್ರಂಥಿ(ಪ್ರಾಸ್ಟೇಟ್ ಕ್ಯಾನ್ಸರ್), ಮೆದುಳಿನ ಗಡ್ಡೆ, ರಕ್ತದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಇತ್ಯಾದಿಗಳಿವೆ. ಇದರಲ್ಲಿ ಕೆಲವೊಂದು ವಿಧದ ಕ್ಯಾನ್ಸರ್ ಗಳು ಕೇವಲ ಪುರುಷರು ಅಥವಾ ಮಹಿಳೆಯರಿಗೆ ಮಾತ್ರ ಬರುವುದು.

ವಿಶೇಷವಾಗಿ ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಬಂದರೆ, ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಪುರುಷರಿಗೆ ಮಾತ್ರ ಬರುವುದು. ಇದರಿಂದ ಪ್ರತಿಯೊಬ್ಬರು ತಮ್ಮ ದೇಹವನ್ನು ಆಗಾಗ ಪರೀಕ್ಷೆ ಮಾಡಿಕೊಂಡು, ಯಾವುದೇ ರೀತಿಯ ಕ್ಯಾನ್ಸರ್ ಅಂತಿಮ ಹಂತಕ್ಕೆ ಹೋಗುವ ಮೊದಲು ಕಂಡುಹಿಡಿದು ಚಿಕಿತ್ಸೆ ಮಾಡಿಕೊಳ್ಳಬಹುದು. ಜನನೇಂದ್ರೀಯ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯವಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬ ಪುರುಷನು ಜನನೇಂದ್ರೀಯ ಕ್ಯಾನ್ಸರ್ ಪರೀಕ್ಷೆ ಮಾಡಿಕೊಳ್ಳಬೇಕು.

ಜನನೇಂದ್ರೀಯ ಗ್ರಂಥಿ(ಪ್ರಾಸ್ಟೇಟ್) ಕ್ಯಾನ್ಸರ್ ಎಂದರೇನು?

ಪ್ರಾಸ್ಟೇಟ್ ಕ್ಯಾನ್ಸರ್ ಎಂದರೆ ಪುರುಷನ ಜನನೇಂದ್ರೀಯ ಗ್ರಂಥಿ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್. ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯು ಮೂತ್ರನಾಳದ ಪ್ರದೇಶದಲ್ಲಿರುವುದು. ಇದು ಲೈಂಗಿಕ ಕ್ರಿಯೆ ವೇಳೆ ಶಿಶ್ನದಿಂದ ಬರುವಂತಹ ಸೆಮಿನಲ್ ದ್ರವವನ್ನು ಉತ್ಪತ್ತಿ ಮಾಡುವುದು. ಪ್ರಾಸ್ಟೇಟ್ ಗ್ರಂಥಿಯಲ್ಲಿ ಉತ್ಪತ್ತಿಗೊಂಡಿರುವ ಸೆಮಿನಲ್ ದ್ರವವು ಸಂತಾನೋತ್ಪತ್ತಿಗೆ ಕಾರಣವಾಗಿದ್ದು, ಇದರಲ್ಲಿ ವೀರ್ಯಾಣುಗಳಿವೆ. ಪ್ರಾಸ್ಟೇಟ್ ಗ್ರಂಥಿಯಲ್ಲಿ ಕ್ಯಾನ್ಸರ್ ಕೋಶಗಳು ಅಸಾಮಾನ್ಯ ರೀತಿಯಲ್ಲಿ ದ್ವಿಗುಣಗೊಂಡಾಗ ಪ್ರಾಸ್ಟೇಟ್ ಕ್ಯಾನ್ಸರ್ ಬರುವುದು ಮತ್ತು ಇದು ಪುರುಷರಲ್ಲಿ ಸಾಮಾನ್ಯವಾಗಿರುವುದು. ಅದರಲ್ಲೂ 50ರ ಗಡಿದಾಟಿದವರಿಗೆ ಇದು ಹೆಚ್ಚು. ಕೇವಲ ಭಾರತದಲ್ಲೇ ಒಂದು ವರ್ಷಕ್ಕೆ ಸುಮಾರು ಹತ್ತು ಲಕ್ಷದಷ್ಟು ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಆಹಾರಗಳು

ಪ್ರಾಸ್ಟೇಟ್ ಕ್ಯಾನ್ಸರ್‪ನ ಲಕ್ಷಣಗಳು

ಮೂತ್ರ ವಿಸರ್ಜನೆ ವೇಳೆ ಕಷ್ಟಪಡುವುದು, ಶ್ರೋಣಿಯ ಮೂಳೆಗಳಲ್ಲಿ ನೋವು, ಮೂತ್ರ ಸರಾಗವಾಗಿ ಹರಿಯಲು ಅಥವಾ ಬರಲು ಕಷ್ಟಪಡುವುದು, ಪದೇ ಪದೇ ಮೂತ್ರವಿಸರ್ಜನೆ(ರಾತ್ರಿ ವೇಳೆ), ಮೂತ್ರರೋಧ, ಮೂತ್ರಕೋಶ ಸೋರಿಕೆ, ಜನನೇಂದ್ರೀಯದಲ್ಲಿ ನೋವು, ಲೈಂಗಿಕ ಕ್ರಿಯೆ ವೇಳೆ ನೋವು, ಮೂತ್ರದಲ್ಲಿ ರಕ್ತ ಇತ್ಯಾದಿಗಳು ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು. ಪ್ರಾಸ್ಟೇಟ್ ಕ್ಯಾನ್ಸರ್ ಅಂತಿಮ ಹಂತ ತಲುಪುವ ತನಕ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.

ಪ್ರತಿಯೊಬ್ಬ ಪುರುಷನು ಪರೀಕ್ಷಿಸಿಕೊಳ್ಳಬೇಕು...

ಕ್ಯಾನ್ಸರ್ ಎನ್ನುವುದು ಯಾವುದೇ ಸಮಯ ಅಥವಾ ವ್ಯಕ್ತಿಗೆ ಕಾಡಬಹುದು. ಜೀವನಶೈಲಿಯು ಆರೋಗ್ಯಕರವಾಗಿದ್ದರೂ ಇದು ಬರುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಇದರಿಂದ ಯಾವುದೇ ಬದಲಾವಣೆಯಾದರೆ ಆಗ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಆಗಾಗ ಆರೋಗ್ಯ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಲಕ್ಷಣಗಳು ಕಾಣಿಸಿಕೊಂಡರೂ, ಕಾಣಿಸಿಕೊಳ್ಳದೇ ಇದ್ದರೂ ನೀವು ವರ್ಷದಲ್ಲಿ ಕೆಲವು ಸಲ ಪರೀಕ್ಷಿಸಿ. 16ರ ಹರೆಯದ ಮೇಲ್ಪಟ್ಟ ಪ್ರತಿಯೊಬ್ಬ ಪುರುಷನು ಪ್ರಾಸ್ಟೇಟ್ ಕ್ಯಾನ್ಸರ್ ಮಾಡಿಸಿಕೊಳ್ಳುವುದು ಅತೀ ಅಗತ್ಯ. ಅದರಲ್ಲೂ ನಿಮ್ಮ ವಯಸ್ಸು 50 ದಾಟಿದ್ದರೆ ಆಗ ಮುಖ್ಯವಾಗಿ ಈ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಪ್ರಾಸ್ಟೇಟ್ ಗ್ರಂಥಿ ಇರುವ ಸುತ್ತಮುತ್ತ ವೈದ್ಯರು ಕೈಯಾರೆ ಪರೀಕ್ಷೆ ಮಾಡುವರು. ಇದು ತುಂಬಾ ಸರಳ ವಿಧಾನ. ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ ಮಾಡಲು ಆಧುನಿಕ ವಿಧಾನಗಳು ಇವೆ. ವೈದ್ಯರಿಗೆ ಇದನ್ನು ಪತ್ತೆ ಮಾಡಲು ಸಾಧ್ಯವಾಗದೆ ಇದ್ದರೆ ಆಧುನಿಕ ಪರೀಕ್ಷೆ ಮಾಡಿಸಿ.

ಚರ್ಮದ ಬಣ್ಣದಲ್ಲಿ ಬದಲಾವಣೆ

ಸುಮಾರು ಐವತ್ತು ವರ್ಷ ದಾಟಿದ ಪುರುಷರು ಚರ್ಮದ ಕ್ಯಾನ್ಸರ್‌ಗೆ ಹೆಚ್ಚು ತುತ್ತಾಗುತ್ತಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಒಂದು ವೇಳೆ ನಿಮ್ಮ ದೇಹದ ಯಾವುದೇ ಭಾಗದಲ್ಲಿ ಚರ್ಮ ತನ್ನ ಸಹಜ ವರ್ಣವನ್ನು ಕಳೆದುಕೊಂಡಿರುವುದು ಅಥವಾ ಬದಲಾವಣೆಗೊಂಡಿರುವುದು ಕಂಡುಬಂದರೆ ತುರ್ತಾಗಿ ಚರ್ಮವೈದ್ಯರನ್ನು ಕಾಣುವುದು ಅಗತ್ಯ.

ಮೂತ್ರ ಮಾಡುವಾಗ ಉರಿಯುತ್ತಿದ್ದರೆ

ಒಂದು ವೇಳೆ ಮೂತ್ರವಿಸರ್ಜಿಸುವಾಗ ತೀವ್ರತರದ ಉರಿ ಅಥವಾ ಬಿಸಿಯಾಗುತ್ತಿರುವಂತೆ ಅನ್ನಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಆವರಿಸುತ್ತಿರುವ ಸೂಚನೆಯಾಗಿರಬಹುದು. ಕೇವಲ ಎಳನೀರು ಕುಡಿದರೆ ಉರಿಮೂತ್ರ ಕಡಿಮೆಯಾದರೂ ವೈದ್ಯರಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಅಂತೆಯೇ ವೀರ್ಯದಲ್ಲಿ ರಕ್ತ ಮಿಶ್ರಣವಾಗಿರುವುದು ಕೂಡ ಪ್ರಾಸ್ಟೇಟ್ ಕ್ಯಾನ್ಸರ್‌ನ ಲಕ್ಷಣವಾಗಿದೆ.

ಬಾಯಿಯಲ್ಲಿ ಹುಣ್ಣುಗಳಾದರೆ

ಮಾಗದಿರುವುದು ಬಾಯಿಯ ಮತ್ತು ಕೆನ್ನೆ, ತುಟಿಗಳ ಒಳಭಾಗದಲ್ಲಿ ಚಿಕ್ಕ ಚಿಕ್ಕ ಹುಣ್ಣುಗಳಾಗಿದ್ದು ಒಣಗಲು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಲ್ಲಿ ಅದು ಚಿಂತೆಯ ವಿಷಯವಾಗಿದೆ. ಒಳಭಾಗದ ಹುಣ್ಣುಗಳನ್ನು ಅಗಲಿಸಿ ವಿವರವಾಗಿ ನೋಡಿದಾಗ ಅಲ್ಲಿ ಬಿಳಿಯ, ಕೆಂಪು ಅಥವಾ ನೀಲಿ ಬಣ್ಣ ತೇಪೆ ಹಚ್ಚಿದಂತೆ ಕಾಣಿಸುತ್ತದೆಯೇ ಎಂದು ಗಮನಿಸಿ. ಇದರಲ್ಲಿ ಒಂದಕ್ಕಾದರೂ ಹೌದು ಎಂಬ ಉತ್ತರ ಬಂದರೆ ವೈದ್ಯರನ್ನು ಕಾಣುವುದು ಅನಿವಾರ್ಯವಾಗಿದೆ.

ಮಲದಲ್ಲಿ ರಕ್ತ ಕಾಣಿಸಿಕೊಳ್ಳುತ್ತಿದ್ದರೆ

ಒಂದು ವೇಳೆ ಮಲವಿಸರ್ಜನೆಯ ಹೊತ್ತಿನಲ್ಲಿ ನೋವಾಗದೇ ಇದ್ದರೂ ರಕ್ತದಿಂದ ಆವರಿಸಿಕೊಂಡಿರುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಕಾಣಿ. ಇದು ಪೈಲ್ಸ್ ಅಥವಾ ಮೊಳೆರೋಗದ ಲಕ್ಷಣವಾಗಿದ್ದರೆ ಅದರಲ್ಲಿ ನೋವು ಇರುತ್ತಿತ್ತು. ಯಾವುದಕ್ಕೂ ವೈದ್ಯರಿಂದ ತಪಾಸಣೆಗೊಳಪಡುವುದು ಅವಶ್ಯವಾಗಿದೆ.

   
 
ಹೆಲ್ತ್