Back
Home » ಇತ್ತೀಚಿನ
ಪೇಟಿಎಂ ಮಾಲ್‌ನಲ್ಲಿ ಫ್ರೀಡಂ ಕ್ಯಾಷ್ ಬ್ಯಾಕ್ ಸೇಲ್..!
Gizbot | 10th Aug, 2018 08:01 AM
  • ಆಸೂಸ್ ವಿವೋಬುಕ್ X507UA-EJ180T : 4,500 ರುಪಾಯಿ ಕ್ಯಾಷ್ ಬ್ಯಾಕ್ 

    ಆಸೂಸ್ ವಿವೋಬುಕ್ X507UA-EJ180T ಈ ಸೇಲ್ ನಲ್ಲಿ 27,990 ರೂಪಾಯಿ ಬೆಲೆಗೆ ಲಭ್ಯವಿದೆ. ಇದರ ಜೊತೆಗೆ 4,500 ರುಪಾಯಿಯ ಕ್ಯಾಷ್ ಬ್ಯಾಕ್ ಕೂಡ ಲಭ್ಯವಾಗಲಿದ್ದು, ನೀವು 23,490 ರುಪಾಯಿಗೆ ಇದನ್ನು ಖರೀದಿಸುವ ಅವಕಾಶವಿದೆ.


  • ಲೆನೊವಾ ಐಡಿಯಾಪ್ಯಾಡ್ 320 : 4,500 ರುಪಾಯಿ ಕ್ಯಾಷ್ ಬ್ಯಾಕ್ 

    ಲೆನೊವಾ ಐಡಿಯಾಪ್ಯಾಡ್ 320 ಸದ್ಯ ಇದರ ಮಾರಾಟದ ಬೆಲೆ 26,790 ರುಪಾಯಿಗಳು . ಆದರೆ ಪೇಟಿಎಂನ ಈ ಸೇಲ್ ನಲ್ಲಿ 4,500 ರುಪಾಯಿಯ ಕ್ಯಾಷ್ ಬ್ಯಾಕ್ ಬೆಲೆಯಲ್ಲಿ ನೀವು ಖರೀದಿಸಲು ಅವಕಾಶವಿದ್ದು ಕೇವಲ 22,490 ರುಪಾಯಿಗೆ ಲೆನೊವಾ ಐಡಿಯಾ ಪ್ಯಾಡ್ 320 ನಿಮ್ಮ ಕೈಸೇರಲಿದೆ.


  • ಡೆಲ್ Vostro 3578 : 6,000 ರುಪಾಯಿ ಕ್ಯಾಷ್ ಬ್ಯಾಕ್ 

    ಡೆಲ್ ವೆಸ್ಟ್ರೋ 3578 ಲ್ಯಾಪ್ ಟಾಪ್ ನ್ನು 6000 ರುಪಾಯಿ ಕ್ಯಾಷ್ ಬ್ಯಾಕ್ ಪಡೆದು 39,490 ರುಪಾಯಿಗೆ ಖರೀದಿಸಬಹುದಾದ ಅವಕಾಶ ಈ ಸೇಲ್ ನಲ್ಲಿದೆ. ಈ ಲ್ಯಾಪ್ ಟಾಪ್ ಇಂಟೆಲ್ ಕೋರ್ i5 ಪ್ರೊಸೆಸರ್ ಮತ್ತು 8ಜಿಬಿ ಮೆಮೊರಿ, 1ಟಿಬಿ ಸ್ಟೋರೇಜ್ ವ್ಯವಸ್ಥೆ ಹೊಂದಿದ್ದು 2ಜಿಬಿ ಹೆಚ್ಚುವರಿ ಗ್ರಾಫಿಕ್ ಕಾರ್ಡ್ ಬಳಕೆ ಮಾಡಬಹುದು.


  • Acer Aspire E 15 : 4,000 ರುಪಾಯಿ ಕ್ಯಾಷ್ ಬ್ಯಾಕ್

    Acer Aspire E 15 21,990 ರುಪಾಯಿಗೆ ಲಭ್ಯವಿದೆ.ಪೇಟಿಎಂ ಮಾಲ್ ನಲ್ಲಿ 4000 ರುಪಾಯಿಯ ಕ್ಯಾಷ್ ಬ್ಯಾಕ್ ಲಭ್ಯವಿದ್ದು ಇದರ ನಿಜವಾದ ಮಾರಾಟದ ಬೆಲೆ 25,990 ರುಪಾಯಿಗಳಾಗಿದೆ.


  • ಆಸೂಸ್ ವಿವೋಬುಕ್ S406UA-BM204T : 6,000 ರುಪಾಯಿ ಕ್ಯಾಷ್ ಬ್ಯಾಕ್ 

    ಆಸೂಸ್ ವಿವೋಬುಕ್ S406 6000 ರುಪಾಯಿ ಕ್ಯಾಷ್ ಬ್ಯಾಕ್ ಮೂಲಕ 49,990 ರುಪಾಯಿಗೆ ಖರೀದಿಸುವ ಅವಕಾಶ ಈ ಸೇಲ್ ನಲ್ಲಿದೆ. ಆಸೂಸ್ ನ್ಯೂ ಆಲ್ಟ್ರಾ ಥಿನ್ S406 ಕೋರ್ ಇಂಟೆಲ್ ಐ5 ಪ್ರೊಸೆಸರ್ ನ್ನು ಹೊಂದಿದೆ ಮತ್ತು 256GB SSD, 8GB ಮೆಮೊರಿ ಒಳಗೊಂಡಿದೆ.


  • ಲೆನೊವಾ ನೋಟ್ ಬುಕ್ ಐಪಿ 330-15IKB : 5,500 ರುಪಾಯಿ ಕ್ಯಾಷ್ ಬ್ಯಾಕ್ 

    ಲೆನೊವಾ ನೋಟ್ ಬುಕ್ ಐಪಿ 330-15IKB ಯನ್ನು 32,990 ರುಪಾಯಿಗೆ ಖರೀದಿಸಬಹುದು. ಪೇಟಿಎಂ ನಲ್ಲಿ 5,500 ರುಪಾಯಿಯ ಕ್ಯಾಷ್ ಬ್ಯಾಕ್ ಲಭ್ಯವಿದೆ.


  • MSI GL63 8RE-455IN : 20,000 ರುಪಾಯಿ ಕ್ಯಾಷ್ ಬ್ಯಾಕ್ 

    MSI GL63 8RE-455IN ಗೇಮಿಂಗ್ ಲ್ಯಾಪ್ ಟಾಪ್ ನ್ನು ಪೇಟಿಎಂ ಸೇಲ್ ನಲ್ಲಿ 1,04,990 ಗೆ ಖರೀದಿಸಬಹುದು. ಇದಕ್ಕೆ 20,000 ರುಪಾಯಿಯ ಕ್ಯಾಷ್ ಬ್ಯಾಕ್ ಲಭ್ಯವಿದೆ.


  • MSI GL63 8RD-062IN : 15,000 ರುಪಾಯಿ ಕ್ಯಾಷ್ ಬ್ಯಾಕ್ 

    ಮತ್ತೊಂದು ಗೇಮಿಂಗ್ ಲ್ಯಾಪ್ ಟಾಪ್ ಆಗಿರುವ MSI GL63 8RD-062IN ಕೂಡ 79,990 ರುಪಾಯಿಗೆ ಖರೀದಿಸಬಹುದಾಗಿದ್ದು ಇದಕ್ಕೆ 15,000 ರುಪಾಯಿ ಕ್ಯಾಷ್ ಬ್ಯಾಕ್ ಸಿಗುತ್ತದೆ. ಸದ್ಯ ಪೇಟಿಎಂನಲ್ಲಿ ಇದರ ಮಾರಾಟದ ನಿಜವಾದ ಬೆಲೆ 94,990 ಆಗಿದೆ.


  • ಆಪಲ್ ಮ್ಯಾಕ್ ಬುಕ್ ಏರ್ MQD42HN/A : 11,000 ರುಪಾಯಿ ಕ್ಯಾಷ್ ಬ್ಯಾಕ್

    ಆಪಲ್ ಮ್ಯಾಕ್ ಬುಕ್ ಏರ್ MQD42HN/A ನ್ನು 69,150 ರುಪಾಯಿಗೆ ಖರೀದಿಸಬಹುದಾದ ಅವಕಾಶ ಗ್ರಾಹಕರಿಗಿದೆ. ಸುಮಾರು 13 ಶೇಕಡಾ ರಿಯಾಯಿತಿ ಬೆಲೆ ಜೊತೆಗೆ 11,000 ರುಪಾಯಿ ಕ್ಯಾಷ್ ಬ್ಯಾಕ್ ಈ ಲ್ಯಾಪ್ ಟಾಪ್ ಗಿದೆ.


  • ಮೈಕ್ರೋಸಾಫ್ಟ್ ಸರ್ಫೇಸ್ ಪ್ರೋ ಕೋರ್ ಐ5 : Rs 10,000 ಕ್ಯಾಷ್ ಬ್ಯಾಕ್ 

    ಮೈಕ್ರೋಸಾಫ್ಟ್ ಸರ್ಫೇಸ್ ಪ್ರೋ ಕೋರ್ ಐ5 ರಿಯಾಯಿತಿ ಬೆಲೆಯ ಮೂಲಕ 72,990 ರುಪಾಯಿಗೆ ಸಿಗುತ್ತದೆ ಅಂದರೆ ನಿಮಗೆ 13 ಶೇಕಡಾ ರಿಯಾಯಿತಿ ಈ ಮಾರಾಟದಲ್ಲಿ ಲಭ್ಯವಿದೆ. ಇದರ ಜೊತೆಗೆ 10,000 ರುಪಾಯಿಯ ಕ್ಯಾಷ್ ಬ್ಯಾಕ್ ಸೌಲಭ್ಯವೂ ಕೂಡ ಲಭ್ಯವಿದ್ದು ಕೇವಲ 62,990 ರುಪಾಯಿಗೆ ಈ ಲ್ಯಾಪ್ ಟಾಪ್ ಖರೀದಿಸುವ ಅವಕಾಶ ಪೇಟಿಎಂ ಸೇಲ್ ನಲ್ಲಿ ಸಿಗುತ್ತದೆ.


  • ಹೆಚ್ ಪಿ ಪೆವಿಲಿಯನ್ ಎಕ್ಸ್360 ಕನ್ವರ್ಟಿಬಲ್ 14 ಸಿಡಿ ಸಿರೀಸ್ 2018 : 4,000 ರುಪಾಯಿ ಕ್ಯಾಷ್ ಬ್ಯಾಕ್ 

    ಹೆಚ್ ಪಿ ಪೆವಿಲಿಯನ್ ಎಕ್ಸ್360 ಕನ್ವರ್ಟಿಬಲ್ 14 ಸಿಡಿ ಸಿರೀಸ್ 2018 ನ ಬೆಲೆ 45,490 ರುಪಾಯಿಗಳಾಗಿದ್ದು, 4,000 ರುಪಾಯಿಯ ಕ್ಯಾಷ್ ಬ್ಯಾಕ್ ಇದಕ್ಕೆ ಲಭ್ಯವಿದೆ.




ಪೇಟಿಎಂ ಪಾಲ್ ನಲ್ಲಿ 8 ದಿನಗಳ ಫ್ರೀಡಂ ಕ್ಯಾಷ್ ಬ್ಯಾಕ್ ಸೇಲ್ ಪ್ರಾರಂಭವಾಗಿದೆ. ಅಗಸ್ಟ್ 8 ನೇ ತಾರೀಕಿನಿಂದ ಅಗಸ್ಟ್ 15 ರ ವರೆಗೆ ಈ ಸೇಲ್ ನಡೆಯಲಿದೆ. ಈ ಪೇಟಿಎಂ ಸೇಲ್ ನ ಪ್ರಮುಖ ಹೈಲೆಟ್ ಏನೆಂದರೆ ' 99 ರುಪಾಯಿ ಸ್ಟೋರ್', 'ರೂಪಾಯಿ 1 ಸ್ಟೋರ್', 'ಮಿಡ್ ನೈಟ್ ಸೂಪರ್ ಡೀಲ್' (10PM ನಿಂದ 10AMವರೆಗೆ) ಮತ್ತು 'ಫ್ಲ್ಯಾಶ್ ಸೇಲ್' ಪ್ರತಿ ಎರಡು ಗಂಟೆಗಳಿಗೆ ನಡೆಯಲಿದೆ.

ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡುವುದರಿಂದಾಗಿ ಬಳಕೆದಾರರು ಹೆಚ್ಚುವರಿ ಶೇಕಡಾ 5 ರಷ್ಟು ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ಪಡೆಯಬಹುದಾಗಿದೆ. ಈ ಸೇಲ್ ನ ಒಂದು ಭಾಗವಾಗಿ ಪೇಟಿಎಂ ಮಾಲ್ ನಲ್ಲಿ ಲ್ಯಾಪ್ ಟಾಪ್ ಗಳ ಮೇಲೆ 20,000ವರೆಗಿನ ರಿಯಾಯಿತಿಯನ್ನೂ ಕೂಡ ನೀಡುತ್ತಿದೆ. ಒಂದು ವೇಳೆ ನೀವು ಲ್ಯಾಪ್ ಟಾಪ್ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ನಿಮ್ಮ ಮಾಹಿತಿಗಾಗಿ ನಾವು ಈ ಮಾರಾಟದಲ್ಲಿ ಲಭ್ಯವಿರುವ ಬೆಸ್ಟ್ ಡೀಲ್ ಗಳ ಬಗೆಗಿನ ವಿವರವನ್ನು ಈ ಕೆಳಗೆ ನೀಡಿದ್ದೇವೆ.

   
 
ಹೆಲ್ತ್