Back
Home » ಇತ್ತೀಚಿನ
ಕಳ್ಳ ಕದ್ದ ಮೊಬೈಲ್ ಅನ್ನು ಸ್ಮಾರ್ಟ್‌ ಆಗಿ ಹುಡುಕಿದ ವಿದ್ಯಾರ್ಥಿನಿ!..ಪೊಲೀಸರಿಂದಲೇ ಶ್ಲಾಘನೆ!!
Gizbot | 10th Aug, 2018 02:06 PM
 • ‘ಟ್ರೇಸ್ ಮೈ ಮೊಬೈಲ್’ ಆಯ್ಕೆ!

  ಮೊಬೈಲ್ ಕಳೆದುಕೊಂಡಿದ್ದ ಜೀನತ್ ಬಾನು ಹಕ್ ಗೂಗಲ್ ಖಾತೆಯಲ್ಲಿನ 'ಟ್ರೇಸ್ ಮೈ ಮೊಬೈಲ್' ಆಯ್ಕೆಯ ಬಗ್ಗೆ ತಿಳಿದಿದ್ದಳು. ಹಾಗಾಗಿ, ತನ್ನ ಸ್ನೇಹಿತರ ಮೊಬೈಲ್ ಮೂಲಕ ತಾನು ಕಳೆದುಕೊಂಡಿದ್ದ ಮೊಬೈಲ್‌ನಲ್ಲಿ ಬಳಸುತ್ತಿದ್ದ ಗೂಗಲ್ ಖಾತೆಗೆ ಸೈನ್-ಇನ್ ಆಗಿ 'ಟ್ರೇಸ್ ಮೈ ಮೊಬೈಲ್' ಆಯ್ಕೆ ಬಳಸಿ ಮೊಬೈಲ್ ಎಲ್ಲಿದೆ ಎಂದು ಹುಡುಕಿದಳು.


 • 'ಮೈ ಆಕ್ಟಿವಿಟಿ’!

  ಗೂಗಲ್ ಖಾತೆಯಲ್ಲಿನ 'ಟ್ರೇಸ್ ಮೈ ಮೊಬೈಲ್' ಆಯ್ಕೆಯಲ್ಲು 'ಮೈ ಆಕ್ಟಿವಿಟಿ' ಮೂಲಕ ತನ್ನ ಗೂಗಲ್ ಖಾತೆ ಎಲ್ಲ ಬಳಕೆಯಾಗುತ್ತಿದೆ ಮತ್ತು ಯಾವ ಫೋನಿನಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ತಿಳಿಯಬಹುದು. ಹೀಗೆ ತನ್ನ ಮೊಬೈಲ್​ನಲ್ಲಿ ಯಾವ ಆಪ್ ಬಳಕೆಯಾಗುತ್ತಿದೆ? ಯಾವ್ಯಾವ ಚಟುವಟಿಕೆ ನಡೆದಿದೆ? ಎನ್ನುವುದನ್ನು ಜೀನತ್ ಬಾನು ಹಕ್ ಹುಡುಕಿದಳು.


 • ಕಳ್ಳನ ಚಟುವಟಿಕೆ ಜಾಡು ಹಿಡಿದಳು!

  ಕದ್ದ ತನ್ನ ಮೊಬೈಲ್‌ನಲ್ಲಿ ಕಳ್ಳ ಏನೆನೆಲ್ಲಾ ಹುಡುಕಿದ್ದ ಎಂಬುದನ್ನು ಜೀನತ್ ಬಾನು ನೋಡಿದಳು. ತನ್ನ ಫೋನಿನಲ್ಲಿ ಶೇರ್‌ಇಟ್ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದ ಕಳ್ಳ ವಾಟ್ಸ್ಆಪ್ ಅನ್ನು ಅಪ್‌ಡೇಟ್ ಮಾಡಿಕೊಂಡಿದ್ದ. ಹಾಗೆಯೇ, ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಲು ಆಪ್ ಅನ್ನು ಸಹ ಡೌನ್‌ಲೋಡ್ ಮಾಡಿದ್ದನ್ನು ಕಂಡುಕೊಂಡಳು.


 • ರೇಲ್ವೆ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ!

  ಇದಾದ ನಂತರ ಮೊಬೈಲ್ ಬಳಸಿ ವ್ಯಕ್ತಿಯೋರ್ವ ದಾದರ್-ತಿರುವಣ್ಣಮಲೈಗೆ ರೇಲ್ವೆ ಟಿಕೆಟ್ ಬುಕ್ ಮಾಡಿರುವುದು ಕಂಡುಬಂತು. ತಕ್ಷಣವೇ ಎಚ್ಚೆತ್ತ ಯುವತಿ ಗೂಗಲ್ ಫೋಟೋಸ್ ಮೂಲಕ ಟಿಕೆಟ್, ರೇಲ್ವೆ ವಿವರ ಪಡೆದುಕೊಂಡಳು. 9.30ಕ್ಕೆ ರೈಲು ನಿರ್ಗಮಿಸುವುದನ್ನು ಖಾತ್ರಿ ಮಾಡಿಕೊಂಡು ಮೊಬೈಲ್ ಕದ್ದಿದ್ದ ಸೆಲ್ವರಾಜ್ ಶೆಟ್ಟಿ ಎಂಬುವನನ್ನು ಕಂಡುಹಿಡಿದು ಪೊಲೀಸರಿಗೆ ಒಪ್ಪಿಸಿದಳು


 • ಮೊಬೈಲ್ ಕಳುವಾದಾಗ ಏನು ಮಾಡಬಹುದು?

  ಇಂದಿನ ಮೊಬೈಲ್ ಕಳೆದುಕೊಂಡರೆ ಐಎಂಇಐ ಮೂಲಕ ಪೊಲೀಸರು ಆ ಮೊಬೈಲ್ ಅನ್ನು ಟ್ರೇಸ್ ಮಾಡಬಹುದು. ಆದರೆ, ಜನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ.! ಒಂದು ವೇಳೆ ಕಳ್ಳನು ಮೊಬೈಲ್ ಬಳಕೆ ಬಗ್ಗೆ ಹೆಚ್ಚು ತಿಳಿಯದೇ ಇದ್ದರೆ, ನೀವು ಮೊಬೈಲ್ ಕಳೆದುಕೊಂಡರೆ ಏನು ಮಾಡಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.


 • ಮೈ ಆಕ್ಟಿವಿಟಿ ಆಯ್ಕೆ

  ನಿಮ್ಮ ಸ್ಮಾರ್ಟ್​ಫೋನಲ್ಲಿ ಲಾಗ್​ಇನ್ ಆಗಿರುವ ಗೂಗಲ್ ಖಾತೆಗೆ ಕಂಪ್ಯೂಟರ್ ಅಥವಾ ಮತ್ತೊಂದು ಮೊಬೈಲ್‌ನಿಂದ ಲಾಗ್ ಇನ್ ಆಗಿ. ನಂತರ ಅಲ್ಲಿ ಅಕೌಂಟ್ ಕ್ಲಿಕ್ ಮಾಡಿ, ಟ್ರೇಸ್ ಮೈ ಮೊಬೈಲ್ ಹಾಗೂ ಮೈ ಆಕ್ಟಿವಿಟಿ ಆಯ್ಕೆ ಮೂಲಕ ಕಳುವಾದ ಮೊಬೈಲ್​ನಲ್ಲಿ ಏನೇನು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆಯಬಹುದು.


 • ಲಾಕ್ ಯುವರ್ ಫೋನ್

  ಟ್ರೇಸ್ ಮೈ ಮೊಬೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರಲಾಕ್ ಯುವರ್ ಫೋನ್ ಅವಕಾಶದ ಮೂಲಕ 4 ಅಂಕೆಯ ಪಾಸ್​ವರ್ಡ್ ಹಾಗೂ ಪರಿಚಿತರ ದೂರವಾಣಿ ಸಂಖ್ಯೆ ಹಾಕಿ ಮೊಬೈಲ್ ಅನ್ನು ಲಾಕ್ ಮಾಡಬಹುದು.ಕಾಲಿಂಗ್ ಯುವರ್ ಫೋನ್ ಅವಕಾಶದ ಮೂಲಕ ಸೈಲೆಂಟ್ ಮೋಡ್​ನಲ್ಲಿದ್ದರೂ ನಿಮ್ಮ ಮೊಬೈಲ್ ರಿಂಗ್ ಮಾಡಬಹುದು.


 • ಔಟ್ ಆನ್ ಯುವರ್ ಫೋನ್

  ಮೊಬೈಲ್ ಸಿಗದಿದ್ದರೂ ಪರವಾಗಿಲ್ಲ ಆದರೆ ನನ್ನೆಲ್ಲಾ ಗೂಗಲ್ ಮಾಹಿತಿಗಳು ಸುರಕ್ಷಿತವಾಗಿರಲು ನೀವು ನಿಮ್ಮ ಮೊಬೈಲ್ ಖಾತೆಗಳನ್ನು ಸೈನ್ ಔಟ್ ಮಾಡಬಹುದು. ಗೂಗಲ್ ಅಕೌಂಟ್ಸ್‌ನಲ್ಲಿ ಸೈನ್ ಔಟ್ ಆನ್ ಯುವರ್ ಫೋನ್ ಆಯ್ಕೆ ಮೂಲಕ ಮೊಬೈಲ್​ನಲ್ಲಿನ ಎಲ್ಲ ಖಾತೆಗಳನ್ನು ಸೈನ್ ಔಟ್ ಮಾಡಬಹುದಾಗಿದೆ.


 • ಲಾಕ್‌ಔಟ್ ಅಪ್ಲಿಕೇಷನ್

  ಲಾಕ್‌ಔಟ್ ಅಪ್ಲಿಕೇಷನ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಒಳ್ಳೆಯದು. ಇದು, ಫೋನ್ ಬುಕ್, ಫೋಟೋ ಮತ್ತು ಕಾಲ್ ಹಿಸ್ಟರಿಯ ಬ್ಯಾಕ್ ಅಪ್ ಪಡೆಯುವುದ್ಕಕೆ ಸಹಾಯ ಮಾಡುವುದರ ಜತೆಗೆ ನಿಮ್ಮ ಫೋನ್ ಎಲ್ಲಿದೆ ಎಂದು ಹುಡುಕಲು ಅಥವಾ ಇನ್ಯಾರೂ ಉಪಯೋಗ ಮಾಡಬಲ್ಲುದು. ಇದರಿಂದ ನಿಮ್ಮ ಮಾಹಿತಿ ಸೇಫ್ ಆಗಿರುತ್ತದೆ.


 • ಸಿಮ್ ಲಾಕ್ ಮಾಡಿಸಿ.

  ನೀವು ಬಳಸುವ ನೆಟ್ವರ್ಕ್ ಕಂಪನಿಯನ್ನು ಸಂಪರ್ಕಿಸಿ ಮತ್ತು ಫೋನ್ ಕಾಣೆಯಾಗಿದೆ ಎಂದು ಎಚ್ಚರಿಸುವುದು ಎಲ್ಲಕ್ಕಿಂತ ಮೊದಲ ಹಂತ.ನಿಮ್ಮ ಫೋನ್ ಇನ್ನೊಬ್ಬರ ಕೈಯಲ್ಲಿದ್ದರೆ, ಸೇವೆಯನ್ನು ನಿಲ್ಲಿಸಲು ಕಸ್ಟಮರ ಕೇರ್ ಗೆ ಕರೆ ಮಾಡಿ. ಬ್ಯಾಂಕ್‌ಗಳನ್ನು ಸಂಪರ್ಕಿಸಿ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿಸಿ.


 • ಪೊಲೀಸ್ ಠಾಣೆಗೆ ದೂರು ನೀಡಿ.

  ಮೊಬೈಲ್ ಕಳೆದ ತಕ್ಷಣವವೇ ಪೊಲೀಸರಿಗೆ ದೂರು ನೀಡಿತಕ್ಷಣ ಆಗಬಹುದಾದ ಅನಾಹುತಗಳಿದ ತಪ್ಪಿಸಿಕೊಳ್ಳಬಹುದು. ರೀಚ್ ಔಟ್ ಯುವರ್ ಕ್ಯಾರಿಯರ್ ಮೂಲಕ ಸಿಮ್ ಬ್ಲಾಕ್ ಮಾಡಬಹುದು ಇನ್ನು ಕಳ್ಳ ಚಾಲಾಕಿಯಾಗಿದ್ದರೆ ಫೋನ್ ಅನ್ನು ನಾವು ಹುಡುಕುವುದು ಕಷ್ಟವೇ ಸರಿ. ಆದರೆ, ಪೊಲೀಸರಿಗೆ ಇದು ಕಷ್ಟದ ಕೆಲಸವಲ್ಲ.!
ಮೊಬೈಲ್ ಕಳ್ಳತನ ಮಾಡುವ ಜಾಲವೇ ಬೀಡುಬಿಟ್ಟಿರುವ ಸಮಯದಲ್ಲಿ ಕಳ್ಳರು ಕದ್ದ ಮೊಬೈಲ್ ಅನ್ನು ವಾಪಸ್ ಮರಳಿ ಪಡೆಯುವುದು ಕಷ್ಟವೇ ಸರಿ. ಆದರೆ, ಕಳೆದುಕೊಂಡ ಸ್ಮಾರ್ಟ್​ಫೋನನ್ನು ತನ್ನ ಸ್ನೇಹಿತರ ಮೊಬೈಲ್ ಸಹಾಯದಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸ್ಮಾರ್ಟ್‌ ಆಗಿ ಹುಡುಕಿದ್ದಾಳೆ. ಇದನ್ನು ಪೊಲೀಸರೇ ಶ್ಲಾಘಿಸಿದ್ದಾರೆ.

ಸ್ಯಾಮ್‌ಸಂಗ್-ಆಪಲ್‌ಗೆ ಸಮಾಧಿ: ಫಾಗ್‌ಶಿಪ್ ಕಿಲ್ಲರ್ ಹೆಸರು ಉಳಿಸಿಕೊಂಡ ಒನ್‌ಪ್ಲಸ್..!

ಹೌದು, 19 ವರ್ಷದ ಜೀನತ್ ಬಾನು ಹಕ್ ಯುವತಿಯು ತನಗೆ ತಿಳಿದಿದ್ದ ಸ್ವಲ್ಪ ಮಾಹಿತಿಯಿಂದ ಮೊಬೈಲ್ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತನ್ನ ಮೊಬೈಲ್ ಅನ್ನು ವಾಪಸ್ ಪಡೆಯಲು ಯಶಸ್ವಿಯಾಗಿರುವುದಲ್ಲದೆ, ಮೊಬೈಲ್ ಅನ್ನು ಕದ್ದವನನ್ನು ಕೂಡ ಪೊಲೀಸರಿಗೆ ಖುಷಿಯಲ್ಲಿರುವ ಜೀನತ್ ಬಾನು ಹಕ್ ತಂತ್ರಜ್ಞಾನದ ಸಹಾಯವನ್ನು ಸಹ ಹೊಗಳಿದ್ದಾರೆ.

ಓದಿರಿ: ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

ನಾನು ಪ್ರವಾಸ ಮುಗಿಸಿ ಮನೆಗೆ ವಾಪಸಾದಾಗ ಮೊಬೈಲ್ ನಾಪತ್ತೆಯಾಗಿರುವುದು ಗಮನಕ್ಕೆ ಬಂತು. ಎಲ್ಲರೂ ಮೊಬೈಲ್ ಸಿಗುವುದಿಲ್ಲ ಎಂಬ ಮಾತುಗಳನ್ನೇ ಆಡಿದರು. ಆದರೆ, 'ಸ್ಮಾರ್ಟ್' ಆಗಿ ಫೋನ್ ಹುಡುಕುವ ಯತ್ನ ನನ್ನನ್ನು ಬಿಡಲಿಲ್ಲ ಎಂದು ಈ ಯುವತಿ ಹೇಳಿದ್ದು, ಹಾಗಾದರೆ, ಆಕೆ ಸ್ಮಾರ್ಟ್‌ಆಗಿ ಮೊಬೈಲ್ ಕಳ್ಳನನ್ನು ಹುಡುಕಿದ್ದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಓದಿರಿ: DTH ಮಾರುಕಟ್ಟೆ ಅಲ್ಲಾಡಿಸಲು ಬರುತ್ತಿರುವ ಜಿಯೋ 'ಗಿಗಾ TV': ಲೈಫ್‌ಟೈಮ್ ಉಚಿತ HD ಚಾನಲ್‌ಗಳು..!

ಓದಿರಿ: ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

   
 
ಹೆಲ್ತ್