ಪುರುಷರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಕಡಿಮೆ. ಅವರ ಆರೋಗ್ಯದ ಬಗ್ಗೆ ಬೇರೆ ಯಾರಾದರೂ ಗಮನಹರಿಸಬೇಕಾಗುತ್ತದೆ. ಇದು ತಾಯಿ, ಪತ್ನಿ ಅಥವಾ ಸೋದರಿಯಾಗಿರಬಹುದು. ಕೆಲವು ಪುರುಷರು ಜಿಮ್ ಗೆ ಹೋದರೆ ಮಾತ್ರ ಆರೋಗ್ಯ ಎಂದು ಭಾವಿಸಿದಂತಿದೆ. ಇದರಿಂದ ಪ್ರತನಿತ್ಯ ಜಿಮ್ ಹೋಗುವರು. ಆದರೆ ಬೇರೆ ಕೆಲವೊಂದು ವಿಧಾನಗಳಿಂದಲೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೆಚ್ಚಿನ ಪುರುಷರಿಗೆ ತಿಳಿದಿಲ್ಲ.
ಅದರಲ್ಲೂ ಕೆಲವೊಂದು ನೈಸರ್ಗಿಕ ವಿಧಾನಗಳ ಮೂಲಕ ಆರೋಗ್ಯ ಕಾಪಾಡಬಹುದು. ಇದರಲ್ಲಿ ಪ್ರಮುಖವಾಗಿ ನಮ್ಮ ಸುತ್ತಮುತ್ತಲು ಸಿಗುವಂತಹ ಹಣ್ಣು ಹಾಗೂ ತರಕಾರಿಗಳಿಂದ. ಕುಂಬಳಕಾಯಿ ಪ್ರತಿಯೊಬ್ಬರಿಗೂ ಪರಿಚಯವಿರುವ ತರಕಾರಿ. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಕೇವಲ ಕಾಯಿ ಮಾತ್ರವಲ್ಲದೆ ಇದರ ಬೀಜದಿಂದಲೂ ಪುರುಷರು ತಮ್ಮ ಆರೋಗ್ಯ ಕಾಪಾಡಬಹುದು. ಹೌದು, ಕುಂಬಳಕಾಯಿಯಿಂದ ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ಈ ಲೇಖನ ಮೂಲಕ ನೀವು ತಿಳಿಯಿರಿ.
ಕುಂಬಳಕಾಯಿ ಬೀಜದಲ್ಲಿರುವ ಪೋಷಕಾಂಶಗಳು
ಕುಂಬಳಕಾಯಿ ಬೀಜವು ಪೋಷಕಾಂಶಗಳ ಆಗರವಾಗಿದ್ದು, ಸತು, ಮೆಗ್ನಿಶಿಯಂ, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಸೆಲೆನಿಯಂ, ಕ್ಯಾಲ್ಸಿಯಂ ಮತ್ತು ಫೋಸ್ಪರಸ್ ಇದರಲ್ಲಿದೆ. ಇಷ್ಟು ಮಾತ್ರವಲ್ಲದೆ ಉನ್ನತ ಮಟ್ಟದ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಬಿ, ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಇದೆ.
ಸಿಪ್ಪೆ ಇಲ್ಲದೆ ಇರುವಂತಹ 28 ಗ್ರಾಂ ಕುಂಬಳಕಾಯಿಯಲ್ಲಿ ಕೊಬ್ಬು ಹಾಗೂ ಪ್ರೋಟೀನ್ ಸಹಿತ 151 ಕ್ಯಾಲರಿಯಿದೆ. ಇದರಲ್ಲಿ 1.7 ಗ್ರಾಂ ನಾರಿನಾಂಶ ಮತ್ತು 5 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ.
ಕುಂಬಳಕಾಯಿಯಲ್ಲಿ ಇರುವಂತಹ ಮೆಗ್ನಿಶಿಯಂ ಹೃದಯಾಘಾತದ ಅಪಾಯ ಕಡಿಮೆ ಮಾಡುವುದು, ರಕ್ತದೊತ್ತಡ ನಿಭಾಯಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಡುವುದು, ನಿದ್ರೆಯ ಗುಣಮಟ್ಟ ಹೆಚ್ಚಿಸುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು.
ಈ ಕುಂಬಳದ ಬೀಜಗಳು ನೋಡಲು ಚಿಕ್ಕದಾದರೂ, ಕಾರುಬಾರು ಮಾತ್ರ ದೊಡ್ಡದು!!
ಒಮೆಗಾ-3 ಕೊಬ್ಬಿನಾಮ್ಲದಿಂದಾಗಿ ಇದು ಹಾರ್ಮೋನುಗಳನ್ನು ಸಮತೋಲನದಲ್ಲಿಡುವುದು ಮತ್ತು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಇಡುವುದು. ಇತರ ವಿಟಮಿನ್ ಗಳು ಮತ್ತು ಖನಿಜಾಂಶಗಳು ಮೂಳೆಗಳನ್ನು ಬಲಗೊಳಿಸುವುದು, ಕೆಂಪುರಕ್ತ ಕಣ ಉತ್ಪಾದಿಸುವುದು ಮತ್ತು ಉರಿಯೂತ ಕಡಿಮೆ ಮಾಡುವುದು. ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜಗಳು ಹೇಗೆ ಸಹಕಾರಿ?