Back
Home » ಇತ್ತೀಚಿನ
ಗೂಗಲ್‌ ರಿಜೆಕ್ಟ್‌ ಮಾಡಿದ್ದಕ್ಕೆ ಹುಟ್ಟಿಕೊಂಡಿತು ಫ್ಲಿಪ್‌ಕಾರ್ಟ್‌..!
Gizbot | 10th Aug, 2018 12:31 PM
 • ಎರಡು ಬಾರಿ ತಿರಸ್ಕರಿಸಿದ್ದ ಗೂಗಲ್

  ಫ್ಲಿಪ್‌ಕಾರ್ಟ್‌ ಬಂದಿದ್ದು ಹೇಗೆ ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಬಿನ್ನಿ ಬನ್ಸಾಲ್ ಗೂಗಲ್ ನನ್ನನ್ನು ತಿರಸ್ಕರಿಸಿತು ಆದ್ದರಿಂದ ಫ್ಲಿಪ್‌ಕಾರ್ಟ್ ಹುಟ್ಟಿಕೊಂಡಿತು ಎಂದು ಹೇಳಿದರು. ಫ್ಲಿಪ್‌ಕಾರ್ಟ್‌ ಸ್ಥಾಪನೆಗೂ ಮುಂಚೆ ಬಿನ್ನಿ ಬನ್ಸಾಲ್ ಗೂಗಲ್‌ನ ಸಾಫ್ಟ್‌ವೇರ್‌ ವಿಭಾಗದಲ್ಲಿ ಉದ್ಯೋಗಕ್ಕಾಗಿ 2005 ಮತ್ತು 2006ರಲ್ಲಿ ಎರಡೆರಡು ಸಲ ಅರ್ಜಿ ಸಲ್ಲಿಸಿದ್ದರು. ಆದರೆ, ಗೂಗಲ್ ಎರಡು ಬಾರಿಯು ಬಿನ್ನಿ ಅರ್ಜಿಯನ್ನು ತಿರಸ್ಕರಿಸಿತ್ತು.


 • ಗೂಗಲ್‌ನಲ್ಲಿ ಆಸಕ್ತಿ ಹೊಂದಿದ್ದ ಬಿನ್ನಿ

  ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್‌ ದೆಹಲಿಯಲ್ಲಿ ಐಐಟಿ ವ್ಯಾಸಂಗ ಮುಗಿಸಿದ ನಂತರ ಸ್ಯಾರ್‌ನಾಫ್‌ ಕಾರ್ಪ್‌ ಕಂಪನಿಯ ಸಂಶೋಧನೆ ಮತ್ತು ವಿನ್ಯಾಸ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ, ಬಿನ್ನಿ ಬನ್ಸಾಲ್‌ಗೆ ತಮ್ಮ ತಂತ್ರಜ್ಞಾನದ ಆಸಕ್ತಿಗೆ ಅನುಗುಣವಾಗಿ ಗೂಗಲ್‌ನ ಸಾಫ್ಟವೇರ್ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರು. ಗೂಗಲ್ ತಿರಸ್ಕಾರದ ನಂತರ ಅಮೆಜಾನ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರಿಕೊಂಡರು.


 • ಬಿನ್ನಿ ಮನೆಗೆ ಬರುತ್ತೆ ಬಿಗ್‌ಬಾಸ್ಕೆಟ್‌ನಿಂದ ತರಕಾರಿ

  ಬಿನ್ನಿ ಬನ್ಸಾಲ್ ಫ್ಲಿಪ್‌ಕಾರ್ಟ್‌ ಸಹ ಸಂಸ್ಥಾಪಕನಾಗಿದ್ದರು ಅವರ ಮನೆಗೆ ಬಿಗ್‌ ಬಾಸ್ಕೆಟ್‌ನಿಂದ ತರಕಾರಿ ತರಿಸುತ್ತಾರೆ. ಹೌದು, ಬಿನ್ನಿ ಪತ್ನಿ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಬಿಗ್ ಬಾಸ್ಕೆಟ್‌ನಲ್ಲಿ ತರಿಸುತ್ತಾರಂತೆ. ಬಿನ್ನಿ ತನ್ನ ಪತ್ನಿಗೆ ತಮ್ಮ ಸೈಟ್‌ನಿಂದಲೇ ತರಕಾರಿ ತೆಗೆದುಕೊಳ್ಳುವಂತೆ ಹೇಳಿದರು ಪತ್ನಿಗೆ ಮನವರಿಕೆ ಮಾಡಲು ಆಗಿಲ್ಲ ಎಂಬ ಸವಾಲನ್ನು ಹಂಚಿಕೊಂಡರು.


 • ಅಮೆಜಾನ್‌ಗೆ ರೆಫರ್ ಮಾಡಿದ್ದು ಸಚಿನ್

  ತಮ್ಮ ಮತ್ತು ಸಚಿನ್ ಬನ್ಸಾಲ್ ಬಾಂಡಿಂಗ್‌ ಬಗ್ಗೆ ಮಾತನಾಡಿದ ಬಿನ್ನಿ ಬನ್ಸಾಲ್, ಅಮೆಜಾನ್‌ಗೆ ನನ್ನನ್ನು ರೆಫರ್ ಮಾಡಿದ್ದೇ ಸಚಿನ್ ಬನ್ಸಾಲ್ ಎಂದರೂ. ಆದ್ದರಿಂದ ನನಗೆ ದೊಡ್ಡ ಆಫರ್ ಸಿಕ್ಕಿತು ಎಂದಿದ್ದಾರೆ. ಇವರಿಬ್ಬರೂ ಐಐಟಿ ದೆಹಲಿಯಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು.


 • ಅಮೆಜಾನ್‌ನಲ್ಲಿ ದಂಡ ಕಟ್ಟಿದ್ದ ಸಚಿನ್

  ಸಚಿನ್‌ ಬನ್ಸಾಲ್‌ ಅಮೆಜಾನ್‌ ಬಿಟ್ಟು ಫ್ಲಿಪ್‌ಕಾರ್ಟ್‌ ಸ್ಥಾಪನೆಗೆ ಮುಂದಾದಾಗ ಅಮೆಜಾನ್‌ಗೆ ದಂಡ ಕಟ್ಟಿದ್ದರು. ಹೌದು, ಅವಧಿಗೂ ಮುಂಚೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರಿಂದ ಈ ದಂಡವನ್ನೂ ಸಚಿನ್ ಕಟ್ಟಬೇಕಾಯಿತು. ಆದ್ದರಿಂದ ನಾನು ಎಂಟು ತಿಂಗಳ ನಂತರ ಅಮೆಜಾನ್‌ನಿಂದ ಹೊರಬಂದೆ ಎಂದು ಬಿನ್ನಿ ತಮ್ಮ ಹಿಂದಿನ ಕಥೆಯನ್ನು ಹಂಚಿಕೊಂಡರು.


 • ಗ್ರಾಹಕನೇ ಕಿಂಗ್ ಎಂದ ಬಿನ್ನಿ

  ಬಿಗ್‌ ಬಿಲಿಯನ್ ಡೇ ಸೇಲ್ ನಡೆಯುತ್ತಿರುವಾಗ ಕೆಲವು ಅನಿರಿಕ್ಷಿತ ಘಟನೆಗಳ ಕುರಿತು ಅವರು ಹಂಚಿಕೊಂಡರು. ಡೋರ್ ಟು ಡೋರ್ ಡೆಲಿವರಿ ಕೊಟ್ಟು ಗ್ರಾಹಕರನ್ನು ಅರ್ಥ ಮಾಡಿಕೊಳ್ಳುಬೇಕೆಂದು ಬಯಸಿದ್ದೇವು. ಆಗ ಕೆಲವು ಗ್ರಾಹಕರು ನಮ್ಮನ್ನು ಗುರುತಿಸಲಿಲ್ಲ ಹಾಗೂ ಸಂಭಾಷಣೆಯು ಸಾಮಾನ್ಯವಾಗಿತ್ತು. ಕೆಲವರು ಫೋಟೋ ತೆಗೆದುಕೊಂಡರು. ಒಬ್ಬ ಗ್ರಾಹಕ ನಮ್ಮನ್ನ ಹೋಗಲು ಬೀಡದೆ ತನ್ನ ಕುಟುಂಬದೊಂದಿಗೆ ಟೀ ಮತ್ತು ಮಿಠಾಯಿ ಸೇವಿಸಿ ನಮ್ಮ ಸಂಭ್ರಮವನ್ನು ಹೆಚ್ಚಿಸಿದರು. ಗ್ರಾಹಕ ನಮಗೆಲ್ಲ ರಾಜನಾಗಿರುವುದರಿಂದ ಯಾವುದನ್ನು ನಿರಾಕರಿಸುವಂತಿದ್ದಿಲ್ಲ ಎಂದು ಹೇಳಿದರು.


 • ಸ್ಟಡಿಗೆ ಚಕ್ಕರ್ ಆಟಕ್ಕೆ ಜೈ

  ಬಿನ್ನಿ ಬನ್ಸಾಲ್‌ ತಮ್ಮ ಬಾಲ್ಯದ ದಿನಗಳಲ್ಲಿ ಅಥವಾ ವ್ಯಾಸಂಗ ಸಮಯದಲ್ಲಿ ವಿದ್ಯಾಭ್ಯಾಸದ ಕಡೆ ಅಷ್ಟಕ್ಕಷ್ಟೇ ಆದರೆ, ಆಟದ ಕಡೆ ಹೆಚ್ಚು ಆಸಕ್ತಿ ಹೊಂದಿದ್ದರು. ದೆಹಲಿಯ ಐಐಟಿ ಸೇರಿದ ನಂತರ ಮುಂದಿನ ವರ್ಷಗಳು ನನಗೆ ಉತ್ತಮವಾಗಿದ್ದವು ಎಂದು ಬಿನ್ನಿ ಹೇಳಿದರು.


 • ಹಾಸ್ಟೆಲ್ ಜೀವನದ ಮೆಲುಕು

  ಐಐಟಿ ದೆಹಲಿಯ ಬಗ್ಗೆ ಮಾತು ಮುಂದುವರೆಸಿದ ಬಿನ್ನಿ ಬನ್ಸಾಲ್ ಅಲ್ಲಿನ ಹಾಸ್ಟೆಲ್ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ಅಲ್ಲಿನ ಹಾಸ್ಟೆಲ್ ಸಂಸ್ಕೃತಿ ವಿಶಿಷ್ಟವಾಗಿತ್ತು, ನಿಮ್ಮ ವಿಭಾಗ, ಕೋರ್ಸ್, ಕ್ಲಾಸ್‌ಮೇಟ್‌ಗಳಿಗಿಂತ ಹೆಚ್ಚಿನ ವಿಧೇಯತೆಯನ್ನು ಹಾಸ್ಟೆಲ್ ಮೇಲೆ ಹೊಂದಿರಬೇಕಾಗಿತ್ತು. ಬೇರೆ ಬೇರೆ ಹಾಸ್ಟೆಲ್‌ಗಳ ಮಧ್ಯೆ ತೀವ್ರ ಸ್ಪರ್ಧೆ ಇರುತ್ತಿತ್ತು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮಧ್ಯೆ ಸ್ಪರ್ಧೆ ಇದ್ದರು, ಮತ್ತೊಂದು ರೀತಿಯ ಸ್ಪರ್ಧೆಯು ಇರುತ್ತೆ. ನಾನು ಶಿವಾಲಿಕ್ ಹಾಸ್ಟೆಲ್‌ನಲ್ಲಿ ಇದ್ದೆ ಎಂದು ತಮ್ಮ ಹಾಸ್ಟೆಲ್ ಜೀವನದ ಮೆಲುಕು ಹಾಕಿದರು.
ಎಷ್ಟೋ ಯಶಸ್ಸಿನ ಕಥೆಗಳ ಹಿಂದೆ ಅನೇಕ ಅವಮಾನದ ಕಥೆಗಳಿರುತ್ತವೆ. ಸ್ವಾಭಿಮಾನ ಮತ್ತು ಆತ್ಮಾಭಿಮಾನವು ಯಶಸ್ಸಾಗಿ ಪರಿಣಮಿಸುತ್ತದೆ. ಈ ಕಥೆ ಸಾಮಾನ್ಯ ಮನುಷ್ಯನಿಂದಿಡಿದು ಪ್ರಭಲ ಐಟಿ ಕಂಪನಿಗಳವರೆಗೂ ಮುಂದುವರೆಯುತ್ತದೆ. ಹೌದು, ಅಂತಹದ್ದೇ ಸ್ವಾಭಿಮಾನದ ಯಶಸ್ಸಿನ ಕಥೆ ಇಲ್ಲಿದೆ. ಕೆಲಸಕ್ಕೆ ತೆಗೆದುಕೊಳ್ಳದ ಕಂಪನಿಯೇ ಇಂದು ಅವರನ್ನು ತನ್ನ ಹುಡುಕಾಟದಲ್ಲಿ ಮೆರೆಸುತ್ತಿದೆ.

ಹೌದು, ಸ್ವಾಭಿಮಾನ, ಸಾಧಿಸುವ ಛಲ ಮತ್ತು ತಾಳ್ಮೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಭಾರತದ ಪ್ರಖ್ಯಾತ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ತೋರಿಸಿಕೊಟ್ಟಿದೆ. ಹೌದು ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕರಾಗಿರುವ ಬಿನ್ನಿ ಬನ್ಸಾಲ್ ಹಿಂದೆ ಸ್ವಾಭಿಮಾನದ ರೋಚಕ ಕಥೆ ಇದೆ. ಗುರುವಾರ ಬೆಂಗಳೂರಿನ ಸ್ಯಾಪ್‌ಲ್ಯಾಬ್ಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ್ಲಿಪ್‌ಕಾರ್ಟ್‌ನ್ನು ಕಟ್ಟಿದ ಬಗೆಯನ್ನು ಸ್ವತಃ ಬಿನ್ನಿ ಬನ್ಸಾಲ್ ಹಂಚಿಕೊಂಡರು. ಅವರ ಮಾತುಕತೆಯಲ್ಲಿ ಏನೇನಿತ್ತು ಮುಂದೆ ನೋಡಿ.

   
 
ಹೆಲ್ತ್