Back
Home » ಇತ್ತೀಚಿನ
ಡೇಟಾ ಖಾಲಿ ಮಾಡಕ್ಕೆ ಆಗಲ್ಲ: ವೊಡಾದಿಂದ ದಿನಕ್ಕೆ 4.5GB ಡೇಟಾ...!
Gizbot | 10th Aug, 2018 04:00 PM
 • ರೂ.549 ಪ್ಲಾನ್:

  ಬಳಕೆದಾರರಿಗೆ 28 ದಿನಗಳ ಅವಧಿಗೆ ನಿತ್ಯ 3.5 GB ಡೇಟಾವನ್ನು ಬಳಕೆ ನೀಡುವ ಪ್ಲಾನ್ ಇದಾಗಿದೆ. ಇದರಲ್ಲಿ ಬಳಕೆದಾರರು ಒಟ್ಟು 98 GB ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಉಚಿತವಾಗಿ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವು ದೊರೆಯಲಿದೆ. ಜೊತೆಗೆ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.


 • ರೂ.799 ಪ್ಲಾನ್:

  ಬಳಕೆದಾರರಿಗೆ ವೊಡಾಫೋನ್ ರೂ.799 ಪ್ಲಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 4.5 GB ಡೇಟಾ ಬಳಕೆಗೆ ದೊರೆಯಲಿದೆ. ಒಟ್ಟು 126 GB ಡೇಟಾ 28 ದಿನಗಳ ಅವಧಿಗೆ ಲಭ್ಯವಾಗಲಿದೆ. ಇದಲ್ಲದೇ ಉಚಿತವಾಗಿ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಇದರಲ್ಲಿದೆ. ಜೊತೆಗೆ ಉಚಿತ SMS ಅನ್ನು ಕಳುಹಿಸಬಹುದಾಗಿದೆ.


 • ಉಚಿತ ಸೇವೆ:

  ಇದಲ್ಲದೇ ನಿತ್ಯ 3.5 GB ಮತ್ತು 4.5 GB ಡೇಟಾ ವನ್ನು ನೀಡುವ ಪ್ಲಾನ್ ನೊಂದಿಗೆ ಬಳಕೆದಾರರಿಗೆ ವೊಡಾಫೋನ್ ಇನ್ನು ಹಲವು ಉಚಿತ ಸೇವೆಗಳನ್ನು ನೀಡಲಿದೆ. ಇದರಲ್ಲಿ ಲೈವ್ ಟಿವಿ, ಮೂವಿಸ್ ಮತ್ತು ವೊಡಾಫೋನ್ ಪ್ಲೇ ಆಪ್‌ ನಲ್ಲಿರುವ ವಿಡಿಯೋ ಕಂಟೆಂಟ್ ಗಳನ್ನು ಉಚಿತವಾಗಿ ನೋಡುವ ಅವಕಾಶವನ್ನು ಮಾಡಿಕೊಡಲಿದೆ.


 • ಜಿಯೋಗೆ ಸೆಡ್ಡು:

  ಮಾರುಕಟ್ಟೆಯಲ್ಲಿ ಈ ಎರಡು ಹೊಸ ಪ್ಲಾನ್‌ಗಳು ಜಿಯೋಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿದೆ. ಜಿಯೋ ಈಗಾಗಲೇ 4 GB ಮತ್ತು 5 GB ನೀಡುವ ಆಫರ್ ಗಳನ್ನು ಲಾಂಚ್ ಮಾಡಿದೆ. ಇದಕ್ಕೆ ಎದುರಾಗಿ ಹೆಚ್ಚಿನ ಡೇಟಾವನ್ನು ನೀಡುವ ಆಫರ್ ಗಳನ್ನು ವೊಡಾಫೋನ್ ನೀಡಿದೆ.
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ವೊಡಾಫೋನ್ ದೊಡ್ಡದೊಂದು ಮಾದರಿಯ ಆಫರ್ ಒಂದನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಒಮ್ಮೆಗೆ ಎರಡು ಆಫರ್ ಗಳನ್ನು ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಬಳಕೆದಾರರಿಗೆ ಡೇಟಾವನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ನಿತ್ಯ 3.5 GB ಮತ್ತು 4.5 GB ಡೇಟಾ ಆಫರ್ ಅನ್ನು ನೀಡುವ ಪ್ಲಾನ್ ಗಳನ್ನು ಲಾಂಚ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ನಿತ್ಯ ಸಾಕು ಎನ್ನುವಷ್ಟು ದೊಡ್ಡ ಪ್ರಮಾಣದಲ್ಲಿ ಡೇಟಾ ಲಭ್ಯವಾಗಲಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಕಡಿಮೆ ಎನ್ನುವ ಮಾತೆ ಇರುವುದಿಲ್ಲ. ಬೆಳಿಗ್ಗೆಯಿಂದ ರಾತ್ರವರೆಗೂ ಬಳಸಿದರೂ ಇನ್ನಷ್ಟು ಡೇಟಾ ಉಳಿದಿರಲಿದೆ.

   
 
ಹೆಲ್ತ್